2025ರ ಏಪ್ರಿಲ್‌ನಿಂದ Hyundai ಕಾರುಗಳ ಬೆಲೆಯಲ್ಲಿ ಏರಿಕೆ!
ಹುಂಡೈ ಕ್ರೇಟಾ ಎನ್ ಲೈನ್ ಗಾಗಿ kartik ಮೂಲಕ ಮಾರ್ಚ್ 21, 2025 11:48 am ರಂದು ಪ್ರಕಟಿಸಲಾಗಿದೆ
- 11 Views
- ಕಾಮೆಂಟ್ ಅನ್ನು ಬರೆಯಿರಿ
ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಕಾರ್ಯಾಚರಣೆಯ ವೆಚ್ಚ ಹೆಚ್ಚಳವೇ ಈ ಏರಿಕೆಗೆ ಕಾರಣ ಎಂದು ಹುಂಡೈ ಹೇಳಿದೆ
2025ರ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಬೆಲೆ ಏರಿಕೆ ಘೋಷಿಸಿರುವ ಕಾರು ತಯಾರಕರ ಪಟ್ಟಿಗೆ ಇದೀಗ ಮತ್ತೊಂದು ಲೀಡಿಂಗ್ ಕಾರು ತಯಾರಕ ಕಂಪೆನಿಯಾದ ಹ್ಯುಂಡೈ ಕೂಡ ಸೇರಿಕೊಂಡಿದೆ. ಕೊರಿಯಾ ಮೂಲದ ಈ ಕಾರು ತಯಾರಕ ಕಂಪನಿಯು ಇತ್ತೀಚೆಗೆ ಬಿಡುಗಡೆಯಾದ ಕ್ರೆಟಾ ಎಲೆಕ್ಟ್ರಿಕ್ ಸೇರಿದಂತೆ ತನ್ನ ಸಂಪೂರ್ಣ ಕಾರುಗಳ ಶೇಕಡಾ 3 ರಷ್ಟು ಬೆಲೆಯನ್ನು ಏರಿಕೆ ಮಾಡುವುದಾಗಿ ಹೇಳಿದೆ. ಈ ವರ್ಷ ಹುಂಡೈ ಕಂಪನಿಯು ಬೆಲೆ ಏರಿಕೆ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದ್ದು, ಮೊದಲ ಬಾರಿಗೆ 2025 ರ ಜನವರಿಯಲ್ಲಿ ಬೆಲೆ ಏರಿಕೆ ಮಾಡಲಾಗಿತ್ತು. ಈ ಹೆಚ್ಚಳಕ್ಕೆ ಕಾರು ತಯಾರಕರು ಎರಡು ಕಾರಣಗಳನ್ನು ಹೇಳಿದ್ದಾರೆ, ಅವುಗಳು ಈ ಕೆಳಗಿನಂತಿವೆ:
ಬೆಲೆ ಏರಿಕೆಗೆ ಕಾರಣ
ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಕಾರು ತಯಾರಕ ಕಂಪನಿಯು ಈ ಹೆಚ್ಚಳಕ್ಕೆ ನೀಡಿರುವ ಕಾರಣವೆಂದರೆ ಇನ್‌ಪುಟ್ ವೆಚ್ಚಗಳು ಹೆಚ್ಚಾಗುವುದು, ಕಚ್ಚಾ ವಸ್ತುಗಳ ವೆಚ್ಚದಲ್ಲಿ ಹೆಚ್ಚಳ ಮತ್ತು ಕಾರ್ಯಾಚರಣೆಯ ವೆಚ್ಚದಲ್ಲಿ ಹೆಚ್ಚಳ. ಕಿಯಾ ಮತ್ತು ಮಾರುತಿಯಂತಹ ಇತರ ಕಾರು ತಯಾರಕರು ಸಹ ಇದೇ ರೀತಿಯ ಬೆಲೆ ಏರಿಕೆಯನ್ನು ಮಾಡಿದ್ದು, ಅದಕ್ಕೂ ಇದೇ ರೀತಿಯ ಕಾರಣವನ್ನು ಹೇಳಿದ್ದಾರೆ.
ಮೊಡೆಲ್ ಮತ್ತು ವೇರಿಯೆಂಟ್‌ಅನ್ನು ಆಧರಿಸಿ ಬೆಲೆ ಏರಿಕೆಯನ್ನು ನಿರ್ಧರಿಸಲಾಗುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಹಾಗೆಯೇ, ಭಾರತದಲ್ಲಿ ಪ್ರಸ್ತುತ ಹುಂಡೈ ಕಾರುಗಳ ಬೆಲೆಗಳನ್ನು ತಿಳಿಯೋಣ:
ಮೊಡೆಲ್ |
ಪ್ರಸ್ತುತ ಬೆಲೆ ರೇಂಜ್ |
ಗ್ರ್ಯಾಂಡ್ ಐ10 ನಿಯೋಸ್ |
5.98 ಲಕ್ಷ ರೂ.ಗಳಿಂದ 8.62 ಲಕ್ಷ ರೂ.ಗಳವರೆಗೆ |
ಎಕ್ಸ್‌ಟರ್ |
6 ಲಕ್ಷ ರೂ.ಗಳಿಂದ 10.51 ಲಕ್ಷ ರೂ.ಗಳವರೆಗೆ |
ಔರಾ |
6.54 ಲಕ್ಷ ರೂ.ಗಳಿಂದ 9.11 ಲಕ್ಷ ರೂ.ಗಳವರೆಗೆ |
ಐ20 |
7.04 ಲಕ್ಷ ರೂ.ಗಳಿಂದ 11.25 ಲಕ್ಷ ರೂ.ಗಳವರೆಗೆ |
ವೆನ್ಯೂ |
7.94 ಲಕ್ಷ ರೂ.ಗಳಿಂದ 13.52 ಲಕ್ಷ ರೂ.ಗಳವರೆಗೆ |
ಐ20 ಎನ್‌ಲೈನ್ |
10 ಲಕ್ಷ ರೂ.ಗಳಿಂದ 12.56 ಲಕ್ಷ ರೂ.ಗಳವರೆಗೆ |
ವೆರ್ನಾ |
11.07 ಲಕ್ಷ ರೂ.ಗಳಿಂದ 17.55 ಲಕ್ಷ ರೂ.ಗಳವರೆಗೆ |
ಕ್ರೆಟಾ |
11.11 ಲಕ್ಷ ರೂ.ಗಳಿಂದ 20.50 ಲಕ್ಷ ರೂ.ಗಳವರೆಗೆ |
ವೆನ್ಯೂ ಎನ್ ಲೈನ್ |
12.14 ಲಕ್ಷ ರೂ.ಗಳಿಂದ 13.97 ಲಕ್ಷ ರೂ.ಗಳವರೆಗೆ |
ಅಲ್ಕಾಜರ್ |
14.99 ಲಕ್ಷ ರೂ.ಗಳಿಂದ 21.70 ಲಕ್ಷ ರೂ.ಗಳವರೆಗೆ |
ಕ್ರೆಟಾ ಎನ್ ಲೈನ್ |
16.93 ಲಕ್ಷ ರೂ.ಗಳಿಂದ 20.64 ಲಕ್ಷ ರೂ.ಗಳವರೆಗೆ |
ಕ್ರೆಟಾ ಎಲೆಕ್ಟ್ರಿಕ್ |
17.99 ಲಕ್ಷ ರೂ.ಗಳಿಂದ 24.38 ಲಕ್ಷ ರೂ.ಗಳವರೆಗೆ |
ಟಕ್ಸನ್ |
29.27 ಲಕ್ಷ ರೂ.ಗಳಿಂದ 36.04 ಲಕ್ಷ ರೂ.ಗಳವರೆಗೆ |
ಐಯೋನಿಕ್ 5 |
ರೂ 46.30 ಲಕ್ಷ |
*ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಆಗಿದೆ.
ಇದನ್ನೂ ಸಹ ಓದಿ: ಬಿಡುಗಡೆಯಾದಾಗಿನಿಂದ ಒಟ್ಟು 2.5 ಲಕ್ಷ ಮಾರಾಟದ ದಾಖಲೆಯನ್ನು ಬರೆದ Mahindra XUV700
ಹ್ಯುಂಡೈಯ ಮುಂದಿನ ಯೋಜನೆಗಳು
ಹ್ಯುಂಡೈ 2025 ರಲ್ಲಿ ಭಾರತದಲ್ಲಿ ಖಚಿತವಾಗಿ ಬಿಡುಗಡೆಯಾಗುವ ಯಾವುದೇ ಮೊಡೆಲ್‌ಗಳನ್ನು ದೃಢಪಡಿಸಿಲ್ಲ, ಆದರೆ ಕಾರು ತಯಾರಕರು ಈ ವರ್ಷ ಫೇಸ್‌ಲಿಫ್ಟೆಡ್ ಟಕ್ಸನ್ ಅನ್ನು ಇಲ್ಲಿ ಪರಿಚಯಿಸುವ ನಿರೀಕ್ಷೆಯಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ