- + 8ಬಣ್ಣಗಳು
- + 24ಚಿತ್ರಗಳು
- ವೀಡಿಯೋಸ್
ಜೀಪ್ ಮೆರಿಡಿಯನ್
ಜೀಪ್ ಮೆರಿಡಿಯನ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1956 cc |
ಪವರ್ | 168 ಬಿಹೆಚ್ ಪಿ |
torque | 350 Nm |
ಆಸನ ಸಾಮರ್ಥ್ಯ | 7 |
ಡ್ರೈವ್ ಟೈಪ್ | ಫ್ರಂಟ್ ವೀಲ್ / 4ಡಬ್ಲ್ಯುಡಿ |
mileage | 12 ಕೆಎಂಪಿಎಲ್ |
- powered ಮುಂಭಾಗ ಸೀಟುಗಳು
- ವೆಂಟಿಲೇಟೆಡ್ ಸೀಟ್‌ಗಳು
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ ರೈವರ್ ಸೀಟ್
- ಕ್ರುಯಸ್ ಕಂಟ್ರೋಲ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- 360 degree camera
- ಸನ್ರೂಫ್
- adas
- key ವಿಶೇಷಣಗಳು
- top ವೈಶಿಷ್ಟ್ಯಗಳು

ಮೆರಿಡಿಯನ್ ಇತ್ತೀಚಿನ ಅಪ್ಡೇಟ್
ಜೀಪ್ ಮೆರಿಡಿಯನ್ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ನಾವು 12 ರಿಯಲ್ ಟೈಮ್ ಚಿತ್ರಗಳಲ್ಲಿ ಜೀಪ್ ಮೆರಿಡಿಯನ್‌ನ ಹೊಸ ಎಂಟ್ರಿ-ಲೆವೆಲ್ ವೇರಿಯೆಂಟ್ ಆದ ಲಾಂಗಿಟ್ಯೂಡ್ ಅನ್ನು ವಿವರಿಸಿದ್ದೇವೆ. ಆಪ್‌ಡೇಟ್ ಮಾಡಲಾದ ಜೀಪ್ ಮೆರಿಡಿಯನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್-ಶೋ ರೂಂ ಬೆಲೆಗಳು 24.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ.
ಮೆರಿಡಿಯನ್‌ನ ಬೆಲೆ ಎಷ್ಟು?
ಭಾರತದಾದ್ಯಂತ ಜೀಪ್ ಮೆರಿಡಿಯನ್‌ನ ಪರಿಚಯಾತ್ಮಕ ಎಕ್ಸ್-ಶೋ ರೂಂ ಬೆಲೆಗಳು 24.99 ಲಕ್ಷ ರೂ.ನಿಂದ 36.49 ಲಕ್ಷ ರೂ.ವರೆಗೆ ಇದೆ.
ಜೀಪ್ ಮೆರಿಡಿಯನ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಜೀಪ್ ಮೆರಿಡಿಯನ್ ಅನ್ನು ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ:
-
ಲಾಂಗಿಟ್ಯೂಡ್
-
ಲಾಂಗಿಟ್ಯೂಡ್ ಪ್ಲಸ್
-
ಲಿಮಿಟೆಡ್ (ಒಪ್ಶನಲ್)
-
ಓವರ್‌ಲ್ಯಾಂಡ್
ನಾವು ಇದು ಪಡೆಯುವ ವೇರಿಯೆಂಟ್-ವಾರು ಫೀಚರ್‌ಗಳನ್ನು ಸಹ ವಿವರಿಸಿದ್ದೇವೆ, ಅದನ್ನು ನೀವು ಇಲ್ಲಿ ಓದಬಹುದು.
ಜೀಪ್ ಮೆರಿಡಿಯನ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಜೀಪ್ ಮೆರಿಡಿಯನ್‌ನ ಎಲ್ಲಾ ವೇರಿಯೆಂಟ್‌ಗಳು ಫೀಚರ್‌ಗಳಿಂದ ಲೋಡ್ ಆಗಿದೆ. ಹೈಲೈಟ್‌ಗಳು 10.25-ಇಂಚಿನ ಸಂಪೂರ್ಣ ಡಿಜಿಟಲ್ ಆಗಿರುವ ಡ್ರೈವರ್ ಡಿಸ್‌ಪ್ಲೇ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.1-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಒಳಗೊಂಡಿವೆ. ಪೂರ್ಣ-ಗಾತ್ರದ ಎಸ್‌ಯುವಿಯು 8-ರೀತಿಯಲ್ಲಿ ಪವರ್ ಆಡ್ಜಸ್ಟ್ ಮಾಡಬಹುದಾದ ಚಾಲಕ ಮತ್ತು ಪ್ರಯಾಣಿಕರ ಸೀಟ್‌ಗಳು, ಪನರೋಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಸಹ ಒಳಗೊಂಡಿದೆ. ಇದು ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಲ್ಪೈನ್-ಟ್ಯೂನ್ಡ್ 9-ಸ್ಪೀಕರ್ ಆಡಿಯೊ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ.
ಮೆರಿಡಿಯನ್ ಎಷ್ಟು ವಿಶಾಲವಾಗಿದೆ?
ಜೀಪ್ ಮೆರಿಡಿಯನ್, 2024 ರ ಆಪ್‌ಡೇಟ್‌ನೊಂದಿಗೆ 5- ಮತ್ತು 7-ಸೀಟರ್‌ಗಳ ಆಯ್ಕೆಗಳೊಂದಿಗೆ ಬರುತ್ತದೆ. 5-ಸೀಟರ್ ವೇರಿಯೆಂಟ್ ವಿಶಾಲವಾಗಿವೆ, ಆದರೆ 7-ಸೀಟರ್ ಆವೃತ್ತಿಗಳಲ್ಲಿ ಕ್ಯಾಬಿನ್ ಸ್ಥಳವು ಕಿರಿದಾಗಿರುತ್ತದೆ ಮತ್ತು ಈ ಬೆಲೆಯಲ್ಲಿ ನೀವು ಕಾರಿನಿಂದ ನಿರೀಕ್ಷಿಸುವ ಜಾಗವನ್ನು ನೀವು ಪಡೆಯುವುದಿಲ್ಲ. ಹಾಗೆಯೇ, ಮೊದಲ ಮತ್ತು ಎರಡನೇ ಸಾಲಿನ ಸೀಟ್‌ಗಳು ದೃಢವಾದರೂ ಆರಾಮದಾಯಕವಾಗಿದೆ, ಮೂರನೇ ಸಾಲಿನ ಸೀಟ್‌ಗಳು ಸಾಕುಪ್ರಾಣಿಗಳು ಮತ್ತು ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ.
ಮೆರಿಡಿಯನ್ 7-ಸೀಟರ್ 170 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ, ಮೂರನೇ ಸಾಲನ್ನು ಉರುಳಿಸಿದ ನಂತರ ಅದನ್ನು 481 ಲೀಟರ್‌ಗೆ ಹೆಚ್ಚಿಸಬಹುದು ಮತ್ತು ಎರಡನೇ ಮತ್ತು ಮೂರನೇ ಸಾಲುಗಳನ್ನು ಮಡಚಿದರೆ 824 ಲೀಟರ್‌ಗೆ ಹೆಚ್ಚಿಸಬಹುದು.
ಮೆರಿಡಿಯನ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಜೀಪ್ ಮೆರಿಡಿಯನ್ 2-ಲೀಟರ್ ಡೀಸೆಲ್ ಎಂಜಿನ್‌ಅನ್ನು(170 ಪಿಎಸ್/350 ಎನ್‌ಎಮ್) ಹೊಂದಿದ್ದು, ಇದು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿದೆ. ಇದು ಫ್ರಂಟ್-ವೀಲ್-ಡ್ರೈವ್ (FWD) ಅಥವಾ ಆಲ್-ವೀಲ್-ಡ್ರೈವ್ (AWD) ಕಾನ್ಫಿಗರೇಶನ್‌ನ ಆಯ್ಕೆಯೊಂದಿಗೆ ಲಭ್ಯವಿದೆ.
ಜೀಪ್ ಮೆರಿಡಿಯನ್ ಎಷ್ಟು ಸುರಕ್ಷಿತವಾಗಿದೆ?
ಜೀಪ್ ಮೆರಿಡಿಯನ್ ಅನ್ನು ಇನ್ನೂ ಗ್ಲೋಬಲ್ ಎನ್‌ಸಿಎಪಿ ಅಥವಾ ಭಾರತ್ ಎನ್‌ಸಿಎಪಿ ಪರೀಕ್ಷಿಸಿಲ್ಲ. ಆದರೆ, ಹಿಂದಿನ-ಜನರೇಶನ್‌ನ ಜೀಪ್ ಕಂಪಾಸ್ ಅನ್ನು 2017 ರಲ್ಲಿ ಯುರೋ ಎನ್‌ಸಿಎಪಿ ಪರೀಕ್ಷಿಸಿತು, ಅಲ್ಲಿ ಅದು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿತು.
ಸುರಕ್ಷತಾ ಫೀಚರ್‌ಗಳ ವಿಷಯದಲ್ಲಿ, ಮೆರಿಡಿಯನ್ ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ವೇರಿಯೆಂಟ್‌ಗಳಲ್ಲಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ನೀವು ಜೀಪ್ ಮೆರಿಡಿಯನ್ ಅನ್ನು ಖರೀದಿಸಬೇಕೇ?
ಜೀಪ್ ಮೆರಿಡಿಯನ್, ದೊಡ್ಡ ಕಾರು ಆಗಿದ್ದರೂ, ಅತ್ಯಂತ ವಿಶಾಲವಾಗಿಲ್ಲ ಮತ್ತು ಸಾಮಾನ್ಯವಾಗಿ ಕ್ಯಾಬಿನ್ ಈ ಬೆಲೆಯಲ್ಲಿ ನೀವು ನಿರೀಕ್ಷಿಸುವ ದೊಡ್ಡ ಎಸ್‌ಯುವಿ ಭಾವನೆಯನ್ನು ಹೊಂದಿರುವುದಿಲ್ಲ. ಮಧ್ಯಮ ಅಥವಾ ಹೆಚ್ಚಿನ ಎಂಜಿನ್ ವೇಗದಲ್ಲಿ ಡೀಸೆಲ್ ಎಂಜಿನ್ ಕೂಡ ಗದ್ದಲವನ್ನು ಸೃಷ್ಟಿಸುತ್ತದೆ.
ಆದರೆ, ಇಂಟಿರಿಯರ್‌ನ ಗುಣಮಟ್ಟವು ಉತ್ತಮವಾಗಿದೆ ಮತ್ತು ಆಫರ್‌ನಲ್ಲಿ ಸಾಕಷ್ಟು ಫೀಚರ್‌ಗಳಿವೆ. ಇದಲ್ಲದೆ, ಇದು AWD ತಂತ್ರಜ್ಞಾನದೊಂದಿಗೆ ಸಾಲಿಡ್ ಆದ ಆಫ್-ರೋಡ್ ಸಾಮರ್ಥ್ಯವನ್ನು ಪಡೆಯುತ್ತದೆ ಮತ್ತು ರೈಡ್ ಗುಣಮಟ್ಟವು ಸಹ ಶ್ಲಾಘನೀಯವಾಗಿದೆ. ಆದ್ದರಿಂದ, ನೀವು ಒರಟಾದ ಅಂಡರ್‌ಪಿನ್ನಿಂಗ್‌ಗಳನ್ನು ಹೊಂದಿರುವ ಆರಾಮದಾಯಕ ಎಸ್‌ಯುವಿ ಬಯಸಿದರೆ, ನೀವು ಜೀಪ್ ಮೆರಿಡಿಯನ್ ಅನ್ನು ಆಯ್ಕೆ ಮಾಡಬಹುದು.
ಮೆರಿಡಿಯನ್‌ಗೆ ಪರ್ಯಾಯಗಳು ಯಾವುವು?
ಜೀಪ್ ಮೆರಿಡಿಯನ್ ಟೊಯೊಟಾ ಫಾರ್ಚುನರ್, ಎಂಜಿ ಗ್ಲೋಸ್ಟರ್ ಮತ್ತು ಸ್ಕೋಡಾ ಕೊಡಿಯಾಕ್ ವಿರುದ್ಧ ಸ್ಪರ್ಧಿಸುತ್ತದೆ.
ಮೆರಿಡಿಯನ್ longitude 4x2(ಬೇಸ್ ಮಾಡೆಲ್)1956 cc, ಮ್ಯಾನುಯಲ್, ಡೀಸಲ್, 12 ಕೆಎಂಪಿಎಲ್1 ತಿ ಂಗಳು ಕಾಯುತ್ತಿದೆ | Rs.24.99 ಲಕ್ಷ* | ||
ಮೆರಿಡಿಯನ್ longitude ಪ್ಲಸ್ 4x21956 cc, ಮ್ಯಾನುಯಲ್, ಡೀಸಲ್, 12 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.27.80 ಲಕ್ಷ* | ||
ಅಗ್ರ ಮಾರಾಟ ಮೆರಿಡಿಯನ್ longitude 4x2 ಎಟಿ1956 cc, ಆಟೋಮ್ಯಾಟಿಕ್, ಡೀಸಲ್, 8.2 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.28.79 ಲಕ್ಷ* | ||
ಮೆರಿಡಿಯನ್ longitude ಪ್ಲಸ್ 4x2 ಎಟಿ1956 cc, ಆಟೋಮ್ಯಾಟಿಕ್, ಡೀಸಲ್, 8.2 ಕೆ ಎಂಪಿಎಲ್1 ತಿಂಗಳು ಕಾಯುತ್ತಿದೆ | Rs.30.79 ಲಕ್ಷ* | ||
ಮೆರಿಡಿಯನ್ ಲಿಮಿಟೆಡ್ ಒಪ್ಶನಲ್ 4x21956 cc, ಮ್ಯಾನುಯಲ್, ಡೀಸಲ್, 12 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.30.79 ಲಕ್ಷ* | ||
ಮೆರಿಡಿಯನ್ ಲಿಮಿಟೆಡ್ ಒಪ್ಶನಲ್ 4x2 ಎಟಿ1956 cc, ಆಟೋಮ್ಯಾಟಿಕ್, ಡೀಸಲ್, 8.2 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.34.79 ಲಕ್ಷ* | ||