• English
  • Login / Register

Facelifted Rolls-Royce Cullinan ಅನಾವರಣ, ಭಾರತದಲ್ಲಿ 2024ರ ಕೊನೆಗೆ ಬಿಡುಗಡೆಯಾಗುವ ಸಾಧ್ಯತೆ

ರೋಲ್ಸ್-ರಾಯಸ್ ಕುಲ್ಲಿನನ್ 2018-2024 ಗಾಗಿ rohit ಮೂಲಕ ಮೇ 09, 2024 08:59 pm ರಂದು ಪ್ರಕಟಿಸಲಾಗಿದೆ

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ರೋಲ್ಸ್‌-ರಾಯ್ಸ್ SUV‌ ಯು 2018ರಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾದ ನಂತರ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಪರಿಷ್ಕರಣೆಗೆ ಒಳಗಾಗಿದ್ದು, ಈ ಹಿಂದಿಗಿಂತಲೂ ಹೆಚ್ಚಿನ ಸೊಬಗು ಮತ್ತು ಐಷಾರಾಮದೊಂದಿಗೆ ಹೊರಬರುತ್ತಿದೆ

Rolls-Royce Cullinan Series II

  • ರೋಲ್ಸ್-ರಾಯ್ಸ್‌ ಸಂಸ್ಥೆಯು ಕಲಿನನ್‌ SUVಯನ್ನು 2018ರಲ್ಲಿ ಬಿಡುಗಡೆ ಮಾಡಿತ್ತು.
  • ಹೊಸದಾಗಿ ಬಿಡುಗಡೆಗೊಂಡ ಪರಿಷ್ಕೃತ SUV ಯನ್ನು ‘ಕಲಿನನ್‌ ಸೀರೀಸ್‌ II’ ಎಂದು ಸಹ ಕರೆಯಲಾಗುತ್ತದೆ.
  • ಹೊರಾಂಗಣದ ಪರಿಷ್ಕರಣೆಯಲ್ಲಿ ನುಣುಪಾದ LED DRLಗಳು, ಐಚ್ಛಿಕ 23 ಇಂಚಿನ ಅಲೋಯ್‌ ವೀಲ್‌ ಗಳು ಮತ್ತು ಪರಿಷ್ಕೃತ ಎಕ್ಸಾಸ್ಟ್‌ ಔಟ್ಲೆಟ್‌ಗಳು ಸೇರಿವೆ.
  • ಕ್ಯಾಬಿನ್‌ ಈಗ ನೈಸರ್ಗಿಕ ಮೂಲದ ಸಾಮಗ್ರಿಗಳನ್ನು ಹೊಂದಿದ್ದು, ಡ್ಯಾಶ್‌ ಬೋರ್ಡ್‌ ವಿನ್ಯಾಸದಲ್ಲಿ ವಿಶೇಷ ಬದಲಾವಣೆ ಉಂಟಾಗಿಲ್ಲ.
  • ನಿವೃತ್ತಿಯ ಹೊಸ್ತಿಲಲ್ಲಿ ಇರುವ ಮಾದರಿಯಲ್ಲಿ ಇರುವಂತೆಯೇ  6.75-ಲೀಟರ್ V12 ಪೆಟ್ರೋಲ್‌ ಎಂಜಿನ್‌ ನಿಂದ ಇದನ್ನು ಚಲಾಯಿಸಲಾಗುತ್ತದೆ.
  • ಭಾರತದಲ್ಲಿ 2024ರ ಸುಮಾರಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

 ರೋಲ್ಸ್-ರಾಯ್ಸ್‌ ಕಲಿನನ್ 2018ರಲ್ಲಿ ಬಿಡುಗಡೆಯಾದ ನಂತರ ಸಿರಿತನದ ವಿಚಾರದಲ್ಲಿ ಐಷಾರಾಮಿ SUVಗಳು ಹೊಸ ಮಾನದಂಡವನ್ನು ಪಡೆದವು. ಈಗ ಇದು ಕಲಿನನ್‌ ಸೀರೀಸ್ II‌ ಎಂದು ಅಧಿಕೃತವಾಗಿ ಕರೆಯಲ್ಪಡುವ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪರಿಷ್ಕರಣೆಗೆ ಒಳಗಾಗಿದೆ. ಈಗ ಇದು ಒಳಗೆ ಮತ್ತು ಹೊರಗೆ ಇನ್ನಷ್ಟು ಸೊಬಗನ್ನು ಮೈಗೂಡಿಸಿಕೊಂಡಿದ್ದು, ಗ್ರಾಹಕರು ಆಯ್ದುಕೊಳ್ಳುವ ಕಸ್ಟಮೈಸೇಷನ್‌ ಗಳ ವಿಸ್ತೃತ ಸಾಧ್ಯತೆಯನ್ನು ಉಳಿಸಿಕೊಂಡಿದೆ. ಹೊಸ ರೋಲ್ಸ್-ರಾಯ್ಸ್ SUVಯು ಹೊಂದಿರುವ ವಿಶೇಷತೆಗಳ ಎಲ್ಲಾ ವಿವರಗಳು ಇಲ್ಲಿವೆ:

 ವಿನ್ಯಾಸದಲ್ಲಿ ಸಣ್ಣದಾದರೂ ಪರಿಣಾಮಕಾರಿ ಪರಿಷ್ಕರಣೆಗಳು

 2024 ಕಲಿನನ್‌ ಸರಣಿಯು ಪರಿಷ್ಕರಣೆಗೆ ಮೊದಲ ಮಾದರಿಗೆ ಹೋಲಿಸಿದರೆ ಅನೇಕ ಸೂಕ್ಷ್ಮ ಬದಲಾವಣೆಗಳಿಗೆ ಒಳಗಾಗಿದೆ. ಈ SUV ಯು ಈಗ ನವಿರಾದ LED ಹೆಡ್‌ ಲೈಟ್‌ ಕ್ಲಸ್ಟರ್‌ ಗಳು, ನುಣುಪಾದ ಮತ್ತು ತಲೆ ಕೆಳಗಾದ L-ಆಕಾರದ LED DRLಗಳು ಮತ್ತು ಮುಂಭಾಗದ ಬಂಪರ್‌ ನಲ್ಲಿ ದೊಡ್ಡ ಗಾತ್ರದ ಏರ್‌ ಇನ್‌ ಟೇಕ್‌ ಗಳನ್ನು ಹೊಂದಿದೆ.

Rolls-Royce Cullinan Series II front

 ಮೊದಲ ಬಾರಿಗೆ ಕಲಿನನ್‌ ವಾಹನವು ಗ್ರಿಲ್‌ ನಲ್ಲಿ ಬೆಳಕಿನ ವ್ಯವಸ್ಥೆಯನ್ನು ಸಹ ಕಂಡಿದೆ. ಅಲ್ಲದೆ ಗ್ರಿಲ್‌ ಗೆ ಸಹ ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಫಾಂಟಮ್‌ ಸೀರೀಸ್‌ II ಅನ್ನು ಹೋಲುತ್ತದೆ. LED DRLಗಳ ಬುಡ ಭಾಗದಿಂದ ಗ್ರಿಲ್‌ ನ ಕೆಳಭಾಗದಲ್ಲಿರುವ, SUVಯ ಸೆಂಟರ್‌ ಪಾಯಿಂಟ್‌ ತನಕ ಲಘುವಾದ ‘V’ ಆಕಾರವನ್ನು ರೂಪಿಸುವ ಬಂಪರ್‌ ಲೈನ್‌ ಗಳು ವಿನ್ಯಾಸದಲ್ಲಿನ ಪ್ರಮುಖ ಬದಲಾವಣೆ ಎನಿಸಿವೆ. ರೋಲ್ಸ್-ರಾಯ್ಸ್‌ ಪ್ರಕಾರ ಇದು ಆಧುನಿಕ ಸ್ಪೋರ್ಟ್ಸ್‌ ಯಾಟ್‌ ಗಳ ಮೊನಚಾದ ಬೋ ಲೈನ್‌ ಗಳನ್ನು ಹೋಲುತ್ತವೆ.

Rolls-Royce Cullinan Series II side

ಅಲೋಯ್‌ ವೀಲ್‌ ಗಳ ಹೊಸ ಸೆಟ್‌ ಗಳನ್ನು ಹೊರತುಪಡಿಸಿದರೆ, ಪಕ್ಕದ ಭಾಗಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಅಲ್ಲದೆ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟ 23 ಇಂಚ್‌ ಯೂನಿಟ್‌ ಗಳನ್ನು ಅಳವಡಿಸುವ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ. ಹಿಂಭಾಗದಲ್ಲಿ ಕೆಲವೊಂದು ಸೂಕ್ಷ್ಮ ಬದಲಾವಣೆಗಳನ್ನು ಮಾತ್ರವೇ ಮಾಡಲಾಗಿದೆ. ಸೂಕ್ಷ್ಮವಾಗಿ ಹೊಂದಿಸಲಾದ ಎಕ್ಸಾಸ್ಟ್‌ ಔಟ್ಲೆಟ್‌ ಮತ್ತು ಬ್ರಶ್ಡ್‌ ಸಿಲ್ವರ್‌ ಫಿನಿಶ್‌ ಅನ್ನು ಹೊಂದಿರುವ ಪರಿಷ್ಕೃತ ಸ್ಕಿಡ್‌ ಪ್ಲೇಟ್‌ ಇತ್ಯಾದಿ ಬದಲಾವಣೆಗಳನ್ನಷ್ಟೇ ಇಲ್ಲಿ ಕಾಣಬಹುದು.

Rolls-Royce Cullinan Series II Black Badge

 ರೋಲ್ಸ್‌-ರಾಯ್ಸ್‌ ಸಂಸ್ಥೆಯು ಪರಿಷ್ಕೃತ ಕಲಿನನ್‌ ಕಾರಿಗೆ ಸಾಲಿಡ್‌ ಗ್ರೇ-ಬ್ರೌನ್‌ ಛಾಯೆಯ ಹೊಸ ಎಂಪೆರರ ಟ್ರಫಲ್‌ ಬಣ್ಣದ ಆಯ್ಕೆಯನ್ನು ಹೊರತಂದಿದೆ.  ಅಲ್ಲದೆ ಕಲಿನನ್‌ ಸೀರೀಸ್‌ II ಕಾರು ನಿಮಗೆ ತೀರಾ ಸರಳವಾಗಿ ಕಂಡರೆ, ಈ ಐಷಾರಾಮಿ ಕಾರು ಪರಿಷ್ಕೃತ SUVಯಲ್ಲಿ ಬ್ಲ್ಯಾಕ್‌ ಬ್ಯಾಜ್‌ ಆವೃತ್ತಿಯನ್ನು ಪರಿಚಯಿಸಿದ್ದು, ಭಿನ್ನವಾಗಿ ಕಾಣುವುದಕ್ಕಾಗಿ ಬ್ಲ್ಯಾಕ್ಡ್‌ ಔಟ್‌ ಅಂಶಗಳನ್ನು ಇದು ಹೊಂದಿದೆ.

 

ಪರಿಷ್ಕೃತ ಕ್ಯಾಬಿನ್

Rolls-Royce Cullinan Series II cabin

 ರೋಲ್ಸ್‌-ರಾಯ್ಸ್‌ SUV ಯ ಒಳಗಡೆಯಲ್ಲಿ ಹೊರಗಡೆಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿದೆ ಎಂದು ನೀವು ಭಾವಿಸುವುದಾದರೆ ನೀವು ಇನ್ನೊಮ್ಮೆ ಯೋಚಿಸಿ. ರೋಲ್ಸ್‌-ರಾಯ್ಸ್‌ ಕಾರು ತನ್ನ ಪಟ್ಟಿಯಲ್ಲಿ ಹೆಚ್ಚಿನ ಕಾರುಗಳನ್ನು ಹೊಂದಿಲ್ಲ. ಆದರೆ ಈ ಬೆಲೆಗಳಲ್ಲಿ ಬಹುತೇಕ ಪರಿಪೂರ್ಣತೆಯನ್ನು ನೀಡುವ ಯತ್ನವನ್ನು (ಕನಿಷ್ಠ ಕಾರ್ಯನಿರ್ವಹಣೆಯ ವಿಚಾರದಲ್ಲಿ) ಈ ಕಾರು ತಯಾರಕ ಸಂಸ್ಥೆಯು ಮಾಡುತ್ತಿದೆ. ಹೀಗಾಗಿ, ಪರಿಷ್ಕೃತ ಕಲಿನನ್‌ ಕಾರಿನ ಕ್ಯಾಬಿನ್‌ ನಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಿಲ್ಲ. ಈಗ ಇದು ಡ್ಯಾಶ್‌ ಬೋರ್ಡ್‌ ನ ಮೇಲ್ಭಾಗದಲ್ಲಿ ಸಂಪೂರ್ಣವಾಗಿ ಗಾಜಿನ ಪ್ಯಾನೆಲ್‌ ಅನ್ನು ಹೊಂದಿದೆ. ಇಲ್ಲಿ ನೀವು ಚಾಲಕನ ಡಿಜಿಟಲ್‌ ಡಿಸ್ಪ್ಲೇಯ ಜೊತೆಗೆ ರೋಲ್ಸ್‌-ರಾಯ್ಸ್‌ ನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಯೂನಿಟ್‌ ಅನ್ನು ಪಡೆಯಲಿದ್ದು, ಪ್ರಯಾಣಿಕರ ಪಕ್ಕದಲ್ಲಿ ವಿಶ್ವದ ಪ್ರಮುಖ ನಗರಗಳ ಗಗನಚುಂಬಿ ಕಟ್ಟಡಗಳ ರಾತ್ರಿಯ ಭಾವಚಿತ್ರಗಳನ್ನು ಪ್ರತಿನಿಧಿಸುವ ಗ್ರಾಫಿಕ್‌ ಗಳನ್ನು ನೀಡಲಾಗಿದೆ. ಗ್ಲಾಸ್‌ ಪ್ಯಾನೆಲ್‌ ಗಳ ಹಿಂದೆ ನಾಜೂಕಾಗಿ ಇರಿಸಲಾದ ಲೇಸರ್‌ ನಿಂದ ಮುದ್ರಿಸಿದ 7000 ಚುಕ್ಕೆಗಳಿಂದ ಈ ಗ್ರಾಫಿಕ್‌ ಗಳು ಮಿನುಗುವಂತೆ ಮಾಡಲಾಗಿದೆ.

Rolls-Royce Cullinan Series II miniature version of the 'Spirit of Ecstasy'

 ಪರಿಷ್ಕೃತ ಕಲಿನನ್‌ ನಲ್ಲಿರುವ ಹೊಸ ಡಿಸ್ಪ್ಲೇ ಘಟಕವು ಸಾಕಷ್ಟು ಆಕರ್ಷಣೆಗೆ ಒಳಗಾಗಿದ್ದು ಇದು ಅನಲಾಗ್‌ ಕ್ಲಾಕ್‌ ಹಾಗೂ ಅದರ ಕೆಳಗೆ ಇರಿಸಲಾಗಿರುವ, ಹಾಗೂ ಸಾಕಷ್ಟು ಎಚ್ಚರಿಕೆಯಿಂದ ಕೆತ್ತಲಾಗಿರುವ, ʻಸ್ಪಿರಿಟ್‌ ಆಫ್‌ ಎಕ್ಸ್ಟಸಿʼಯ ಮಿನಿಯೇಚರ್‌ ಆವೃತ್ತಿಯನ್ನು ಹೊಂದಿದೆ.

ಈ SUVಯ ಒಳಾಂಗಣದ ವರ್ಣಫಲಕ ಅಥವಾ ಹೊರಾಂಗಣದ ಫಿನಿಶ್‌ ಗೆ ಸರಿಯಾಗಿ ಹೊಂದಿಕೆಯಾಗುವಂತೆ ಹೊಸ ಕಲಿನನ್‌ ಕಾರಿನ ಮಾಲೀಕರು ಇನ್ಸ್ಟ್ರುಮೆಂಟ್‌ ಡಯಲ್‌ ಗಳ ಬಣ್ಣವನ್ನು ಆರಿಸಿಕೊಳ್ಳಬಹುದು. ಇದರ ಕ್ಯಾಬಿನ್‌ ಇನ್ನಷ್ಟು ಪರಿಸರಸ್ನೇಹಿಯಾಗುವಂತಾಗಲು ರೋಲ್ಸ್‌-ರಾಯ್ಸ್‌ ಸಂಸ್ಥೆಯು ಇದರಲ್ಲಿ ಬಳಸುವ ಸಾಮಗ್ರಿಗಳ ಕುರಿತು ಸಾಕಷ್ಟು ಕಾಳಜಿ ವಹಿಸಿದೆ. ಫ್ಯಾಬ್ರಿಕ್‌ ಅನ್ನು ಬಿದಿರಿನಿಂದ ಮಾಡಿದ್ದರೆ, ಪ್ಯಾನೆಲ್‌ ಗಳನ್ನು ಓಪನ್‌ ಪೋರ್‌ ವುಡ್‌ ಮತ್ತು ಹ್ಯಾಂಡ್‌ ಸ್ಟೇನ್ಡ್‌ ವಿನೀರ್‌ ʻಎಲೆʼಗಳಿಂದ ಸಿದ್ಧಪಡಿಸಲಾಗಿದೆ. ಇದರಲ್ಲಿ ʻಡ್ಯುವಲಿಟಿ ಟ್ವಿಲ್‌ʼ ಎಂದು ಕರೆಯಲ್ಪಡುವ ಹೊಸ ಅಫೋಲ್ಸ್ಟರಿಯನ್ನು ಬಳಸಲಾಗಿದ್ದು, ಇದನ್ನು ತಯಾರಿಸಲು 20 ಗಂಟೆಗಳು ಬೇಕು. ಅಲ್ಲದೆ ಇದು 22 ಲಕ್ಷ ಹೊಲಿಗೆಗಳು ಹಾಗೂ 20 ಕಿ.ಮೀ ಉದ್ದದ ನೂಲನ್ನು ಹೊಂದಿದೆ. ಏಕರೂಪತೆ ಮತ್ತು ನಿಖರತೆಗಾಗಿ ವಿಶೇಷ ಲೇಸರ್‌ ಗಳನ್ನು ಬಳಸಿ ಇದನ್ನು ಸಿದ್ಧಪಡಿಸಲಾಗುತ್ತದೆ.

ಇದನ್ನು ಸಹ ಓದಿರಿ: ಭಾರತದಲ್ಲಿ ಮೊದಲ ಬಾರಿಗೆ 2024 ಪೋರ್ಶ್‌ ಪನಮೇರಾ ವಾಹನದ ಪ್ರದರ್ಶನ

 ಗಮನ ಸೆಳೆಯುವ ತಂತ್ರಜ್ಞಾನಗಳು

Rolls-Royce Cullinan Series II digital driver's display

 ಈ SUVಯಲ್ಲಿರುವ ಐಷಾರಾಮಿ ಒಳಾಂಗಣದ ಜೊತೆಗೆ ಸಾಕಷ್ಟು ತಾಂತ್ರಿಕತೆಯನ್ನು ಸಹ ನೀಡಲಾಗಿದೆ. ಡ್ಯುವಲ್‌ ಡಿಜಿಟಲ್‌ ಸ್ಕ್ರೀನ್‌ ಮತ್ತು ಫ್ಯಾನ್ಸಿ ಕ್ನರ್ಲ್ಡ್‌ ಸ್ವಿಚ್‌ ಗೇರ್‌ ಜೊತೆಗೆ ಮಲ್ಟಿ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌ ಜೊತೆಗೆ, ಕಲಿನನ್‌ ವಾಹನವು ರಿಯರ್‌ ಎಂಟರ್‌ ಟೇನ್ಮೆಂಟ್‌ ಡಿಸ್ಪ್ಲೇಗಳು, ಸೀಟುಗಳಲ್ಲಿ ಮಸಾಜ್‌, ಕೂಲಿಂಗ್‌ ಮತ್ತು ಹೀಟಿಂಗ್‌ ಫಂಕ್ಷನ್‌ ಗಳು, ಸಬ್‌ ವೂಫರ್‌ ಜೊತೆಗೆ 18 ಸ್ಪೀಕರ್‌ ಆಡಿಯೋ ಸಿಸ್ಟಂ, ಸಂಪರ್ಕಿತ ಕಾರ್‌ ಟೆಕ್‌, ಮತ್ತು ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂಗಳನ್ನು (ADAS) ಹೊಂದಿದೆ.

ಪವರ್‌ ಟ್ರೇನ್‌ ವಿವರಗಳು

ರೋಲ್ಸ್-ರಾಯ್ಸ್‌ ಸಂಸ್ಥೆಯು ಕಲಿನನ್‌ ಸೀರೀಸ್ II‌ ಮಾದರಿಯನ್ನು ಪರಿಷ್ಕರಣೆಗೆ ಮೊದಲಿನ SUVಯಲ್ಲಿದ್ದಂತೆಯೇ,  6.75-ಲೀಟರ್ V12‌ ಪೆಟ್ರೋಲ್‌ ಎಂಜಿನ್‌ ನಲ್ಲಿಯೇ ಹೊರತರಲಿದೆ. ಇನ್ನೊಂದೆಡೆ ಔಟ್ಪುಟ್‌ ಅನ್ನು ಇನ್ನೂ ಸಹ ಬಹಿರಂಗಪಡಿಸಲಾಗಿಲ್ಲ. ಆದರೆ ಪರಿಷ್ಕರಣೆಗೆ ಮೊದಲ ಮಾದರಿಯಲ್ಲಿ, ಇದೇ ಪವರ್‌ ಟ್ರೇನ್‌, 571 PS ಮತ್ತು 850 Nm ಅನ್ನು ಉಂಟು ಮಾಡುತ್ತದೆ. ಇದು ಆಲ್‌ ವೀಲ್‌ ಡ್ರೈವ್ (AWD)‌ ಮತ್ತು 8-ಸ್ಪೀಡ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಅನ್ನು ಹೊಂದಿರಲಿದೆ. ಆದರೆ ಕಲಿನನ್‌ ಸೀರೀಸ್‌ Iiರ ಸ್ಪೋರ್ಟಿಯರ್‌ ಬ್ಲ್ಯಾಕ್‌ ಬ್ಯಾಜ್‌ ಆವೃತ್ತಿಯು 600 PS ಮತ್ತು 900 Nm ನಷ್ಟು ಗರಿಷ್ಠ ಕಾರ್ಯಕ್ಷಮತೆಯನ್ನು ಹೊಂದಿರುವುದು ತಿಳಿದು ಬಂದಿದೆ.

ಆಸಕ್ತಿಯ ವಿಷಯವೆಂದರೆ, ಕಲಿನನ್‌ ಮಾದರಿಗಳ 10 ಶೇಕಡಾದಷ್ಟು ಮಾಲೀಕರು ಮಾತ್ರವೇ ಚಾಲಕರನ್ನು ಬಳಸುತ್ತಾರೆ ಎಂದು ರೋಲ್ಸ್-ರಾಯ್ಸ್‌ ಸಂಸ್ಥೆಯು ಹೇಳಿಕೊಂಡಿದೆ. ಹೀಗಾಗಿ ಈ ಐಷಾರಾಮಿ SUVಯ ಚಾಲನಾ ಅನುಭವವನ್ನು ಹಾಗೂ ಅತ್ಯಾಧುನಿಕ ಅಡಾಪ್ಟಿವ್‌ ಸಸ್ಪೆನ್ಶನ್‌ ಅನ್ನು ಹಿಂಭಾಗದ ಪ್ರಯಾಣಿಕರಿಗಾಗಿ ಮಾತ್ರವಲ್ಲದೆ ಚಾಲಕನ ಅಗತ್ಯತೆಗೆ ತಕ್ಕುದಾಗಿಯೂ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ನಿರೀಕ್ಷಿತ ಬಿಡುಗಡೆ ಮತ್ತು ಸ್ಪರ್ಧೆ

Rolls-Royce Cullinan Series II rear

 ಪರಿಷ್ಕೃತ ರಾಲ್ಸ್‌-ರಾಯ್ಸ್‌ ಕಲಿನನ್‌ ವಾಹನವು 2024ರ ಉತ್ತರಾರ್ಧದಲ್ಲಿ ಭಾರತದಲ್ಲಿ ದೊರೆಯಲಿದ್ದು, ಇದರ ಬೆಲೆಯು ಹೊರಹೋಗಲಿರುವ ಮಾದರಿಗಿಂತ ಹೆಚ್ಚಿರಲಿದೆ. ಇದು ಬೆಂಟ್ಲಿ ಬೆಂಟಯೇಗ ಮತ್ತು ಲ್ಯಾಂಡ್‌ ರೋವರ್‌ ರೇಂಜ್‌ ರೋವರ್ SV‌ ಜೊತೆಗೆ ಸ್ಪರ್ಧಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕಲಿನನ್‌ ಅಟೋಮ್ಯಾಟಿಕ್

was this article helpful ?

Write your Comment on Rolls-Royce ಕುಲ್ಲಿನನ್ 2018-2024

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience