ಕಿಯಾ ಸೆಲ್ಟೋಸ್ ಆಲ್ ವೀಲ್ ಡ್ರೈವ್ ಜೊತೆ ಮತ್ತು ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಇದೆ ಟೊಯೋಟಾ ಫಾರ್ಚುನರ್ ಗಿಂತಲೂ
ಕಿಯಾ ಸೆಲ್ಟೋಸ್ 2019-2023 ಗಾಗಿ sonny ಮೂಲಕ ನವೆಂಬರ್ 28, 2019 03:07 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ರಾಲಿ ಗೆ ಅನುಗುಣವಾಗಿರುವ ಎತ್ತರದ ಶೈಲಿಯ ಕಿಯಾ ಸೆಲ್ಟೋಸ್ ಬಿಡುಗಡೆ ಮಾಡಲಾಗಿದೆ
- ಸೆಲ್ಟೋಸ್ ಅಮೇರಿಕಾದಲ್ಲಿ ಅನಾವರಗೊಂಡಿದೆ ಎರೆಡು ಕಠಿಣ ಶೈಲಿಯ ಪರಿಕಲ್ಪನೆಗಳೊಂದಿಗೆ
- ಈ ಕಾನ್ಸೆಪ್ಟ್ ಗಳನ್ನು ಸೆಲ್ಟೋಸ್ X-ಲೈನ್ ಟ್ರಯಲ್ ಅಟ್ಯಾಕ್ ಮತ್ತು X-ಲೈನ್ ಅರ್ಬನ್ ಎನ್ನಲಾಗುತ್ತಿದೆ
- ಎರೆಡರಲ್ಲೂ ಕಸ್ಟಮ್ ಫ್ಯಾಬ್ರಿಕೇಟ್ ಆಗಿರುವ ರೂಫ್ ರಾಕ್ ಕೊಡಲಾಗಿದೆ, ರಾಲಿ ಲೈಟ್ ಮತ್ತು ಕಠಿಣ ಬಾಹ್ಯ ಗಳನ್ನು ಕೊಡಲಾಗಿದೆ
- ಎರೆಡರಲ್ಲೂ 1.6- ಲೀಟರ್ ಟರ್ಬೋ - ಪೆಟ್ರೋಲ್ ಎಂಜಿನ್ ಜೊತೆಗೆ 7- ಸ್ಪೀಡ್ DCT ಮತ್ತು AWD ಕೊಡಲಾಗಿದೆ
- ಸೆಲ್ಟೋಸ್ X-ಲೈನ್ ಟ್ರಯಲ್ ಅಟ್ಯಾಕ್ ನಲ್ಲಿ ಕಸ್ಟಮ್ ಫ್ರಂಟ್ ಬಂಪರ್ ಜೊತೆಗೆ ರಾಲಿ ಲೈಟ್ ಮತ್ತು ವಿಂಚ್ ಕೊಡಲಾಗಿದೆ
ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ SUV ಒಂದು ಬಹಳ ಯಶಸ್ಸು ಕಂಡ ಬ್ರಾಂಡ್ ಆಗಿದೆ ಭಾರತದಲ್ಲಿ, ಈ ವಿಭಾಗದ ತಿಂಗಳ ಮಾರಾಟದ ಚಾರ್ಟ್ ಗಳಲ್ಲಿ ಅಗ್ರ ಕ್ರಮಾಂಕ ಪಡೆದಿದೆ. ಭಾರತದಲ್ಲಿ ಇದನ್ನು ಕಿಯಾ ಗ್ಲೋಬಲ್ ಉತ್ಪನ್ನವಾಗಿ ಬಿಡುಗಡೆ ಮಾಡಲಾಗಿದೆ. US ಮಾರುಕಟ್ಟೆಗೆ, ಕಿಯಾ ಸೆಲ್ಟೋಸ್ SUV ಯನ್ನು 2021 ಮಾಡೆಲ್ ಹೆಚ್ಚು ಕಠಿಣ ಬಾಹ್ಯ ಮತ್ತು ವಿಭಿನ್ನವಾದ ಡ್ಯಾಶ್ ಬೋರ್ಡ್ ಒಂದಿಗೆ ಬಿಡುಗಡೆ ಮಾಡಿದೆ.ಕಾರ್ ಮೇಕರ್ ಎರಡು ಸೆಲ್ಟೋಸ್ X-ಪರಿಕಲ್ಪನೆಯನ್ನು ಹೆಚ್ಚು ಆಕರ್ಷಕ ನಿಲುವಿನೊಂದಿಗೆ ಮತ್ತು ಹೆಚ್ಚಿನ ಆಫ್ ರೋಡ್ ದೃಢತೆಯೊಂದಿಗೆ ಬಿಡುಗಡೆ ಮಾಡಿದೆ.
ಸೆಲ್ಟೋಸ್ X-ಲೈನ್ ಟ್ರಯಲ್ ಅಟ್ಟ್ಯಾಕ್ ಪರಿಕಲ್ಪನೆ ಹೆಚ್ಚು ದೃಢವಾದ ಮಾಡೆಲ್ ಆಗಿದೆ ಎರೆಡು ಟೋನ್ ಡೆಸರ್ಟ್ ಪೈಂಟ್ ವಿನ್ಯಾಸದೊಂದಿಗೆ. ಇದರಲ್ಲಿ ಎಂಟು ರಾಲಿ ಲೈಟ್ ಗಳನ್ನು --ನಾಲ್ಕು ಮುಂಬದಿ ಬಂಪರ್ ನಲ್ಲಿ ಮೌಂಟ್ ಮಾಡಲಾಗಿದೆ ಮತ್ತು ನಾಲ್ಕು ಕಸ್ಟಮ್ ಬಿಲ್ಟ್ ರೂಫ್ ರಾಕ್ ಗೆ ಅಳವಡಿಸಲಾಗಿದೆ. ಅದರಲ್ಲಿ ಲಿಫ್ಟ್ ಕಿಟ್ ಕೊಡಲಾಗಿದ್ದು ಅದು ಗ್ರೌಂಡ್ ಕ್ಲಿಯರೆನ್ಸ್ ಅನ್ನು 234mm ಗೆ ಹೆಚ್ಚಿಸಲಾಗಿದೆ ಮತ್ತು ಆಫ್ ರೋಡ್ ಟೈರ್ ಗಳನ್ನೂ ಕಸ್ಟಮ್ 17-ಇಂಚು ಅಲಾಯ್ ಗೆ ಅಳವಡಿಸಲಾಗಿದೆ. ಟ್ರಯಲ್ ಅಟ್ಯಾಕ್ ಪರಿಕಲ್ಪನೆ ಹೆಚ್ಚು ಕಠಿಣವಾದ ಫ್ರಂಟ್ ಬಂಪರ್ ಮತ್ತು ಮುಂಬದಿಗೆ ಅಳವಡಿಸಲಾದ ವಿಂಚ್ ಪಡೆಯುತ್ತದೆ.
ಕಿಯಾ ಇತರ ಪರಿಕಲ್ಪನೆ ಮಾಡೆಲ್ ಅನ್ನು ಸೆಲ್ಟೋಸ್ X-ಲೈನ್ ಅರ್ಬನ್ ಜೊತೆಗೆ ಸೇರಿಸಿದೆ. ಅದು ನಗರದಲ್ಲಿನ ಉಪಯೋಗಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ಹೇಳಲಾಗಿದೆ. ಅದರಲ್ಲಿ ಗ್ರೇ ಬಣ್ಣ ಸಂಯೋಜನೆ ಜೊತೆಗೆ ಕಪ್ಪು ರೂಫ್ ಕೊಡಲಾಗಿದೆ ಜೊತೆಗೆ ರಾಲಿ ಲೈಟ್ ಗಳು ಸಹ, ಹಾಗು ಇದರಲ್ಲಿ 2-ಇಂಚು ಲಿಫ್ಟ್ ಕಿಟ್ ಅನ್ನು ಪಾಟ್ ಹೋಲ್ ನಿಭಾಯಿಸಲು ಹಾಗು ಎತ್ತರದ ಡ್ರೈವಿಂಗ್ ಸ್ಥಾನಕ್ಕಾಗಿ ಕೊಡಲಾಗಿದೆ. ಈ ಕಾನ್ಸೆಪ್ಟ್ ನಲ್ಲಿ ರೂಫ್ ರ್ಯಾಕ್ ಜೊತೆಗೆ ರಾಲಿ ಲೈಟ್ ಕೊಡಲಾಗಿದೆ ಆದರೆ ಅದನ್ನು ಕಸ್ಟಮ್ ಬಾನೆಟ್ ಮೇಲೆ ಏರ್ ಇಂಟಕ್ ನಿಂದ ವಿಭಿನ್ನವಾಗಿರಿಸಲಾಗಿದೆ.
ಈ ಪರಿಕಲ್ಪನೆಗಳು ಇಲೆಕ್ಟ್ರಾನಿಕ್ AWD ಪವರ್ ಟ್ರೈನ್ ಜೊತೆಗೆ 1.6-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 177PS ಪವರ್ ಹಾಗು 264Nm ಟಾರ್ಕ್ ಒಂದಿಗೆ 7-ಸ್ಪೀಡ್ DCT ಆಟೋಮ್ಯಾಟಿಕ್ ಒಂದಿಗೆ ಕೊಡಲಾಗಿದೆ. ಆಂತರಿಕಗಳು ಈಗಿರುವ ಹಾಗೆ ಬಿಡಲ್ಪಟ್ಟಿದೆ, ಅದು ಇಂಡಿಯಾ-ಸ್ಪೆಕ್ ಕಿಯಾ ಸೆಲ್ಟೋಸ್ ಗಿಂತಲೂ ಭಿನ್ನವಾಗಿದೆ. ಅದು 10.25-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಪಡೆಯುತ್ತದೆ ಆದರೆ ವಿಭಿನ್ನವಾದ ಡ್ಯಾಶ್ ಲೇಔಟ್ ಜೊತೆಗೆ ಬಹಳಷ್ಟು ಅನುಕೂಲಕರ ಫೀಚರ್ ಗಳು ಕೂಡ. ಇಂಡಿಯಾ ಸ್ಪೆಕ್ ಸೆಲ್ಟೋಸ್ ಈ ಎಂಜಿನ್ ಮತ್ತು ಪವರ್ ಟ್ರೈನ್ ಆಯ್ಕೆ ಪಡೆಯುವುದಿಲ್ಲ.
ಕಿಯಾ ಆಫ್ ರೋಡ್ AWD ವೇರಿಯೆಂಟ್ ಆಯ್ಕೆಯನ್ನು ಭಾರತದ ಸೆಲ್ಟೋಸ್ ನಲ್ಲಿ ಕೊಡುವುದಿಲ್ಲ. ಆದರೆ ಅದರಲ್ಲಿ ಬಹಳಷ್ಟು ಕೆಟಿನ ಬಾಹ್ಯ ಅಸ್ಸೇಸ್ಸೋರಿ ಗಳನ್ನು ಕೊಡಬಹುದು. ಇಲ್ಲಿ ಕೊಡಲಾಗುವ ಸೆಲ್ಟಸ್ ಎರೆಡು ಟ್ರಿಮ್ ಲೈನ್ ಹೊಂದಿರುತ್ತದೆ ಎಂಜಿನ್ ಆಯ್ಕೆ ಅನುಗುಣವಾಗಿ: HTಲೈನ್ ಮತ್ತು GT ಲೈನ್. HTಲೈನ್ ವೇರಿಯೆಂಟ್ ಜೋಡಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳನ್ನು ಹೊಂದುತ್ತದೆ. ಜೊತೆಗೆ GT ಲೈನ್ ನೋಡಲು ಸ್ಪರ್ಧಾತ್ಮಕವಾಗಿದೆ ಮತ್ತು ಅದನ್ನು ಹೆಚ್ಚು ಪವರ್ ಹೊಂದಿರುವ 1.4-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ ಕೊಡಲಾಗಿದೆ ಮತ್ತು 1.5-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಪವರ್ ಟ್ರೈನ್ ಸಹ ಲಭ್ಯವಿದೆ.
ಅದರ ಬೆಲೆ ರೂ 9.69 ಲಕ್ಷ ಇಂದ ರೂ 16.99 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ ). ಸೆಲ್ಟೋಸ್ ಪ್ರತಿಸ್ಪರ್ಧೆ ಹುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಟರ್, MG ಹೆಕ್ಟರ್ , ಮತ್ತು ಟಾಟಾ ಹ್ಯಾರಿಯೆರ್ ಜೊತೆಗೆ.
0 out of 0 found this helpful