Login or Register ಅತ್ಯುತ್ತಮ CarDekho experience ಗೆ
Login

ಮುಂಬರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಮೋಟಾರ್ ಶೋದಿಂದ ನಾವು ನಿರೀಕ್ಷಿಸಬಹುದಾದ ಎಲ್ಲವೂ ಇಲ್ಲಿದೆ

ನವೆಂಬರ್ 08, 2024 05:17 pm ರಂದು shreyash ಮೂಲಕ ಪ್ರಕಟಿಸಲಾಗಿದೆ

2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋ ಆಟೋ ಎಕ್ಸ್‌ಪೋ, ಆಟೋ ಎಕ್ಸ್‌ಪೋ ಕಾಂಪೊನೆಂಟ್ಸ್ ಶೋ ಮತ್ತು ಬ್ಯಾಟರಿ ಶೋ ಸೇರಿದಂತೆ ಅನೇಕ ಪ್ರದರ್ಶನಗಳನ್ನು ಹೊಂದಿರುತ್ತದೆ

2024ರ ಮಾರ್ಚ್‌ನಲ್ಲಿಯೇ ನಾವು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದ ಮುಂದಿನ ಆವೃತ್ತಿಯ ದಿನಾಂಕಗಳನ್ನು ನಾವು ಸ್ವೀಕರಿಸಿದ್ದೇವೆ, ಎಕ್ಸ್‌ಪೋ 2025ರ ಜನವರಿ 17 ರಿಂದ 22ರವರೆಗೆ ನಡೆಯಲಿದೆ. ಹಾಗೆಯೇ, ಇದೀಗ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಮುಂಬರುವ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ನೀವು ನಿರೀಕ್ಷಿಸಬಹುದಾದ ಎಲ್ಲದರ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ನೀವು ಏನು ನೋಡಬಹುದು?

2025ರ ಆವೃತ್ತಿಯ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ಕಾರುಗಳು, ದ್ವಿಚಕ್ರ ವಾಹನಗಳು ಮತ್ತು ನಿರ್ಮಾಣ ಯಂತ್ರೋಪಕರಣಗಳು, ಹಾಗೆಯೇ ಆಟೋ ಭಾಗಗಳು, ಘಟಕಗಳು, ಟೈರ್‌ಗಳು, ಬ್ಯಾಟರಿಗಳು ಮತ್ತು ವಾಹನ ಸಾಫ್ಟ್‌ವೇರ್ ಸೇರಿದಂತೆ ವಿವಿಧ ಶ್ರೇಣಿಯ ಹೊಸ ವಾಹನಗಳನ್ನು ಒಂದೇ ಸೂರಿನಡಿ ನೋಡಬಹುದು. ಹೆಚ್ಚುವರಿಯಾಗಿ, ಎಕ್ಸ್‌ಪೋ 15 ಕ್ಕೂ ಹೆಚ್ಚು ಸಮ್ಮೇಳನಗಳನ್ನು ಆಯೋಜಿಸುತ್ತದೆ.

2025 ರ ಭಾರತ್ ಮೊಬಿಲಿಟಿ ಎಕ್ಸ್‌ಪೋ ಕೆಳಗಿನ ಪ್ರದರ್ಶನಗಳನ್ನು ಹೊಂದಿರುತ್ತದೆ: ಆಟೋ ಎಕ್ಸ್‌ಪೋ ಮೋಟಾರ್ ಶೋ (ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳು ಸೇರಿದಂತೆ), ಆಟೋ ಎಕ್ಸ್‌ಪೋ ಕಾಂಪೊನೆಂಟ್ಸ್ ಶೋ, ಮೊಬಿಲಿಟಿ ಟೆಕ್ ಪೆವಿಲಿಯನ್ (ಕನೆಕ್ಟೆಡ್‌ ಮತ್ತು ಸ್ವಾಯತ್ತ ತಂತ್ರಜ್ಞಾನಗಳು, ಮಾಹಿತಿ ಮನರಂಜನೆ, ಇತ್ಯಾದಿ), ನಗರ ಚಲನಶೀಲತೆ ಮತ್ತು ಮೂಲಸೌಕರ್ಯ ಪ್ರದರ್ಶನ (ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಗಳು - ಡ್ರೋನ್‌ಗಳು, ಸಾರ್ವಜನಿಕ ಸಾರಿಗೆ ಮತ್ತು ಮೂಲಸೌಕರ್ಯ, ಇತ್ಯಾದಿ), ಬ್ಯಾಟರಿ ಪ್ರದರ್ಶನ (ಬ್ಯಾಟರಿ ತಂತ್ರಜ್ಞಾನಗಳು ಮತ್ತು ಸ್ಟೋರೆಜ್‌ ಪರಿಹಾರಗಳು), ನಿರ್ಮಾಣ ಸಲಕರಣೆ ಎಕ್ಸ್‌ಪೋ, ಸ್ಟೀಲ್ ಪೆವಿಲಿಯನ್, ಟೈರ್ ಶೋ ಮತ್ತು ಮೀಸಲಾದ ಸೈಕಲ್ ಶೋ (ಹೊಸ ಮೊಡೆಲ್‌ಗಳು , ಬಿಡಿಭಾಗಗಳು, ನಾವೀನ್ಯತೆಗಳು), ಇತರ ವಿಶೇಷ ಘಟನೆಗಳು ಮತ್ತು ಎಕ್ಸ್‌ಪೋಗಳಲ್ಲಿ.

ಇದನ್ನೂ ಸಹ ಓದಿ: ಕಿಯಾ ತನ್ನ ಮುಂಬರುವ ಹೊಸ ಎಸ್‌ಯುವಿಯ ಡಿಸೈನ್ ಸ್ಕೆಚ್‌ಗಳನ್ನು ಬಿಡುಗಡೆ ಮಾಡಿದೆ, ಏನಿದೆ ಇದರಲ್ಲಿ? ಬನ್ನಿ ನೋಡೋಣ.

ಅನೇಕ ಸ್ಥಳಗಳು

ಮುಂದಿನ ವರ್ಷದ ಭಾರತ್ ಮೊಬಿಲಿಟಿ ಎಕ್ಸ್‌ಪೋವು ದೆಹಲಿ ಎನ್‌ಸಿಆರ್‌ನಾದ್ಯಂತ ಮೂರು ಸ್ಥಳಗಳಲ್ಲಿ ನಡೆಯಲಿದೆ, ಇದರಲ್ಲಿ ಭಾರತಮಂಡಪಂ (ಪ್ರಗತಿ ಮೈದಾನ), ಯಶೋಭೂಮಿ (ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್) ದ್ವಾರಕಾ, ಮತ್ತು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್ ಮಾರ್ಟ್ ಸೇರಿವೆ.

ನಿರೀಕ್ಷಿತ ಬ್ರ್ಯಾಂಡ್‌ಗಳು

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಕೇವಲ ಟಾಟಾ, ಮಾರುತಿ ಮತ್ತು ಮಹೀಂದ್ರಾ ಬ್ರಾಂಡ್‌ಗಳು ಮಾತ್ರವಲ್ಲದೆ ಟೊಯೊಟಾ, ಸ್ಕೋಡಾ, ಕಿಯಾ ಮತ್ತು ಐಷಾರಾಮಿ ಬ್ರಾಂಡ್‌ ಆದ ಮರ್ಸಿಡಿಸ್-ಬೆನ್ಜ್‌ನಂತಹುಗಳು ಭಾಗವಹಿಸುವುದನ್ನು ಕಾಣಬಹುದು. ಎಕ್ಸ್‌ಪೋದಲ್ಲಿನ ಪ್ರಮುಖ ಹೈಲೈಟ್ಸ್‌ಗಳು ಮಾರುತಿ ಇವಿಎಕ್ಸ್, ಹೊಸ ತಲೆಮಾರಿನ ಸ್ಕೋಡಾ ಸೂಪರ್ಬ್, ಹೊಸ ತಲೆಮಾರಿನ ಸ್ಕೋಡಾ ಕೊಡಿಯಾಕ್ ಮತ್ತು ಕಿಯಾದ ಮುಂಬರುವ ಎಸ್‌ಯುವಿಗಳನ್ನು ಒಳಗೊಂಡಿರುತ್ತದೆ.

2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪರಿಶೀಲಿಸಲು ನೀವು ಯಾವ ಬ್ರ್ಯಾಂಡ್‌ಗಳು ಮತ್ತು ಮೊಡೆಲ್‌ಗಳ ಬಗ್ಗೆ ಆಸಕ್ತಿ ಹೊಂದಿರುವಿರಿ? ಕಾಮೆಂಟ್‌ಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your ಕಾಮೆಂಟ್

Enable notifications to stay updated with exclusive offers, car news, and more from CarDekho!

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ