ಕಿಯಾ ತನ್ನ ಮುಂಬರುವ ಹೊಸ ಎಸ್‌ಯುವಿಯ ಡಿಸೈನ್ ಸ್ಕೆಚ್‌ಗಳನ್ನು ಬಿಡುಗಡೆ ಮಾಡಿದೆ, ಏನಿದೆ ಇದರಲ್ಲಿ? ಬನ್ನಿ ನೋಡೋಣ.
ನವೆಂಬರ್ 07, 2024 05:43 pm ರಂದು dipan ಮೂಲಕ ಪ್ರಕಟಿಸಲಾಗಿದೆ
- 13 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಪ್ರಕಾರ, ಅದರ ಹೊಸ ಎಸ್‌ಯುವಿಯ ಡಿಸೈನ್ ಕಿಯಾ ಇವಿ 9 ಮತ್ತು ಕಿಯಾ ಕಾರ್ನಿವಲ್‌ನಿಂದ ಪ್ರೇರಿತವಾಗಿರುತ್ತದೆ.
ಕಿಯಾ ತನ್ನ ಮುಂಬರುವ ಎಸ್‌ಯುವಿಯ ಮೊದಲ ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಿದೆ, ಮತ್ತು ಇದು ಬ್ರ್ಯಾಂಡ್‌ನ ಹೊಸ "ಡಿಸೈನ್ 2.0" ವಿಧಾನವನ್ನು ಅನುಸರಿಸುವ ಡಿಸೈನ್ ಸ್ಕೆಚ್‌ಗಳನ್ನು ತೋರಿಸುತ್ತದೆ. ಹಲವಾರು ಆನ್‌ಲೈನ್ ವರದಿಗಳ ಪ್ರಕಾರ, ಈ ಹೊಸ ಎಸ್‌ಯುವಿಯನ್ನು ಕಿಯಾ ಸಿರೋಸ್ ಎಂದು ಹೆಸರಿಸಬಹುದು, ಏಕೆಂದರೆ ಈ ಹೆಸರನ್ನು ಕಿಯಾ ಇಂಡಿಯಾ ಈ ವರ್ಷ ಟ್ರೇಡ್‌ಮಾರ್ಕ್ ಮಾಡಿದೆ. ಈ ಹೆಸರು ಕಿಯಾ ತನ್ನ ಎಸ್‌ಯುವಿಗಳಿಗೆ 'S' ನಿಂದ ಪ್ರಾರಂಭವಾಗುವ ಹೆಸರುಗಳನ್ನು ಆಯ್ಕೆ ಮಾಡುವ ಅಭ್ಯಾಸಕ್ಕೆ ಪೂರಕವಾಗಿದೆ. ಸ್ಕೆಚ್‌ಗಳು ಎಸ್‌ಯುವಿಯ ಸೈಡ್ ವ್ಯೂ ಮತ್ತು ಹಿಂಭಾಗದ ಡಿಸೈನ್ ಅನ್ನು ತೋರಿಸುತ್ತವೆ, ಆ ಮೂಲಕ ಅದರ ಒಟ್ಟಾರೆ ಆಕಾರದ ಅಂದಾಜನ್ನು ನಮಗೆ ನೀಡುತ್ತದೆ. ಬನ್ನಿ, ಆದಷ್ಟು ಹತ್ತಿರದಿಂದ ನೋಡುವ ಮೂಲಕ ಈ ಚಿತ್ರಗಳಲ್ಲಿ ಇನ್ನೂ ಏನೆಲ್ಲಾ ಇದೆ ಎಂದು ನೋಡೋಣ.
ಏನೇನು ನೋಡಬಹುದು?
ಡಿಸೈನ್ ಸ್ಕೆಚ್‌ಗಳು ಎಸ್‌ಯುವಿ ಎತ್ತರವಾಗಿದ್ದು, ಬಾಕ್ಸ್ ಆಕಾರವನ್ನು ಹೊಂದಿದೆ ಎಂದು ತೋರಿಸುತ್ತದೆ, ಮತ್ತು ಇದು ಇತ್ತೀಚೆಗೆ ಬಿಡುಗಡೆಯಾದ ಕಿಯಾ EV9 ಎಲೆಕ್ಟ್ರಿಕ್ ಎಸ್‌ಯುವಿ ಮತ್ತು ಕಿಯಾ ಕಾರ್ನಿವಲ್‌ನಿಂದ ಪ್ರೇರಿತವಾಗಿದೆ. ಈ ಎರಡು ಮಾಡೆಲ್‌ಗಳು ಹೊಸ ಎಸ್‌ಯುವಿಗೆ ಸ್ಫೂರ್ತಿಯಾಗಿದೆ ಎಂದು ಕಿಯಾ ತಿಳಿಸಿದೆ.
ಎಸ್‌ಯುವಿಯು ಫ್ಲಾಟ್ ರೂಫ್ ಮತ್ತು ದೊಡ್ಡ ವಿಂಡೋಗಳನ್ನು ಹೊಂದಿದೆ, ಇದು ಒಳಭಾಗವನ್ನು ವಿಶಾಲವಾಗಿಸಿದೆ ಮತ್ತು ಗಾಳಿಯಾಡಲು ಸ್ಥಳವನ್ನು ನೀಡುತ್ತದೆ. ಹಿಂಭಾಗದ ಡೋರ್ ಗ್ಲಾಸ್ ಹಿಂಭಾಗದ ಕ್ವಾರ್ಟರ್ ಗ್ಲಾಸ್‌ನೊಂದಿಗೆ ಇಂಟಿಗ್ರೇಟ್ ಆದಂತೆ ಕಾಣುತ್ತದೆ, ಆದರೆ ವಿಂಡೋ ಬೆಲ್ಟ್‌ಲೈನ್ ಸಿ-ಪಿಲ್ಲರ್ ಕಡೆಗೆ ಕಿಂಕ್ ಅನ್ನು ಹೊಂದಿದೆ.
ಇದು ಬೋಲ್ಡ್ ಆಗಿರುವ ವೀಲ್ ಆರ್ಚ್‌ಗಳು ಮತ್ತು ಎದ್ದು ಕಾಣುವ ಶೋಲ್ಡರ್ ಲೈನ್ ಅನ್ನು ಪಡೆಯುವ ನಿರೀಕ್ಷೆಯಿದೆ, ಮತ್ತು ಇಲ್ಲಿ ಉದ್ದಕ್ಕೂ ಫ್ಲಶ್ ರೀತಿಯ ಡೋರ್ ಹ್ಯಾಂಡಲ್‌ಗಳನ್ನು ಇರಿಸಲಾಗುತ್ತದೆ. ಮುಂಭಾಗವು ಉದ್ದವಾದ LED DRL ಗಳನ್ನು ಹೊಂದಿದೆ ಮತ್ತು ಹೊರಗಿನ ರಿಯರ್‌ವ್ಯೂ ಮಿರರ್ (ORVM) ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ.
ಎರಡನೆಯ ಡಿಸೈನ್ ಸ್ಕೆಚ್ ಎಸ್‌ಯುವಿಯ ಹಿಂಭಾಗದ ಬಗ್ಗೆ ಹೆಚ್ಚಿನ ವಿವರಗಳನ್ನು ತೋರಿಸುತ್ತದೆ, ಇದರಲ್ಲಿ ಉದ್ದವಾದ ರೂಫ್ ರೈಲ್ಸ್ ಮತ್ತು L- ಆಕಾರದ ಟೈಲ್ ಲೈಟ್‌ಗಳು ಸೇರಿವೆ. ಟೈಲ್‌ಗೇಟ್ ಫ್ಲಾಟ್ ಆಗಿದ್ದು, ಇದು ಮುಂಬರುವ ಎಸ್‌ಯುವಿಯ ಬಾಕ್ಸಿ ಲುಕ್ ಅನ್ನು ಪೂರ್ಣಗೊಳಿಸುತ್ತದೆ.
ಇದನ್ನು ಕೂಡ ಓದಿ: ಕಿಯಾ ಟ್ಯಾಸ್ಮನ್ ಲಾಂಚ್: ಬ್ರ್ಯಾಂಡ್‌ನ ಮೊದಲ ಪಿಕಪ್ ಟ್ರಕ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು
ಮುಂಬರುವ ಎಸ್‌ಯುವಿಯ ಬಗ್ಗೆ ಇನ್ನಷ್ಟು ವಿವರಗಳು
ಕಿಯಾ ಸಿರೋಸ್ ಅನ್ನು ಕಿಯಾ ಸೋನೆಟ್ ಮತ್ತು ಕಿಯಾ ಸೆಲ್ಟೋಸ್ ಲೈನ್‌ಅಪ್‌ನ ನಡುವೆ ಕಿಯಾ ಇರಿಸಬಹುದು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಆದರೆ, ವರದಿಗಳನ್ನು ಖಚಿತಪಡಿಸಲು ಕಿಯಾದಿಂದ ಅಧಿಕೃತ ಹೇಳಿಕೆಗಾಗಿ ನಾವು ಕಾಯಬೇಕಾಗಿದೆ.
ಒಳಭಾಗದ ಬಗ್ಗೆ ಯಾವುದೇ ಅಧಿಕೃತ ವಿವರಗಳನ್ನು ಬಹಿರಂಗಪಡಿಸದಿದ್ದರೂ ಕೂಡ, ಇದು "ಅತಿ ವಿಶಾಲವಾದ ಮತ್ತು ಆರಾಮದಾಯಕ ಕ್ಯಾಬಿನ್" ಅನ್ನು ಹೊಂದಿರುತ್ತದೆ ಎಂದು ಕಿಯಾ ಹೇಳಿದೆ. ಇಂಟರ್ನೆಟ್‌ನಲ್ಲಿನ ಇರುವ ಸ್ಪೈ ಶಾಟ್‌ಗಳ ಆಧಾರದ ಮೇಲೆ, ಮುಂಬರುವ ಈ ಕಿಯಾ ಎಸ್‌ಯುವಿ ಕಿಯಾ ಸೋನೆಟ್ ಮತ್ತು ಕಿಯಾ ಸೆಲ್ಟೋಸ್‌ನಲ್ಲಿ ಇರುವಂತಹ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು ಹೊಂದಿರುತ್ತದೆ ಮತ್ತು ಪನರೋಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಸೀಟ್‌ಗಳಂತಹ ಪ್ರೀಮಿಯಂ ಫೀಚರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.
ಇದು ಮೂರು ಎಂಜಿನ್ ಆಯ್ಕೆಗಳನ್ನು ನೀಡುವ ಕಿಯಾ ಸೋನೆಟ್‌ನ ಅದೇ ಎಂಜಿನ್ ಆಯ್ಕೆಗಳನ್ನು ಬಳಸುವ ಸಾಧ್ಯತೆಯಿದೆ. ಮೊದಲ ಆಯ್ಕೆಯು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಗಿದ್ದು ಅದು 83 PS ಮತ್ತು 115 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇನ್ನೊಂದು, 1-ಲೀಟರ್ 3-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ (120 PS/172 Nm) ಇದನ್ನು 6-ಸ್ಪೀಡ್ ಕ್ಲಚ್-ಪೆಡಲ್ ಲೆಸ್ ಮಾನ್ಯುಯಲ್ (iMT) ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (DCT) ನೊಂದಿಗೆ ಜೋಡಿಸಲಾಗಿದೆ. ಸೋನೆಟ್ 1.5-ಲೀಟರ್ ಡೀಸೆಲ್ ಎಂಜಿನ್ (116 PS/250 Nm) ಅನ್ನು ಕೂಡ ಪಡೆಯುತ್ತದೆ, ಇದನ್ನು 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಕ್ಲಚ್ (ಪೆಡಲ್)-ಲೆಸ್ ಮ್ಯಾನ್ಯುವಲ್ (iMT) ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.
ಇದು 2025 ರ ಆರಂಭದಲ್ಲಿ ಭಾರತದಲ್ಲಿ ಮಾರುಕಟ್ಟೆಗೆ ಬರಲಿದ್ದು, ಇದರ ಬೆಲೆಯು ರೂ 9 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋ ರೂಂ).
ಕಿಯಾದ ಮುಂಬರುವ ಎಸ್‌ಯುವಿ ಕುರಿತು ನಿಮ್ಮ ಅಭಿಪ್ರಾಯವೇನು? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ!
ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
0 out of 0 found this helpful