ಜೀಪ್ ವ್ರ್ಯಾಂಗ್ಲರ್ ಕಾರಿನ ಬೆಲೆಯಲ್ಲಿ 2023ರಲ್ಲಿ ಮತ್ತೊಮ್ಮೆ ಹೆಚ್ಚಳ, ಅಕ್ಟೋಬರ್ ನಲ್ಲಿ ರೂ. 2 ಲಕ್ಷದಷ್ಟು ಬೆಲೆ ಏರಿಕೆ
ಜೀಪ್ ರಂಗ್ಲರ್ 2023-2024 ಗಾಗಿ shreyash ಮೂಲಕ ಅಕ್ಟೋಬರ್ 25, 2023 03:19 pm ರಂದು ಪ್ರಕಟಿಸಲಾಗಿದೆ
- 56 Views
- ಕಾಮೆಂಟ್ ಅನ್ನು ಬರೆಯಿರಿ
ಜೀಪ್ ವ್ರ್ಯಾಂಗ್ಲರ್ ನ ಎರಡೂ ವೇರಿಯಂಟ್ ನಲ್ಲಿ ಏಕಪ್ರಕಾರದ ಬೆಲೆಯೇರಿಕೆ ಮಾಡಲಾಗಿದೆ
- ಜೀಪ್ ವ್ರ್ಯಾಂಗ್ಲರ್ ಕಾರನ್ನು ಎರಡು ವೇರಿಯಂಟ್ ಗಳಲ್ಲಿ ಮಾರಲಾಗುತ್ತದೆ: ಅನ್ ಲಿಮಿಟೆಡ್ ಮತ್ತು ರುಬಿಕಾನ್
- ಇದು 268PS ಮತ್ತು 400Nm ಜೊತೆಗೆ 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತಿದ್ದು, ಇದನ್ನು 8 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾಗಿದೆ.
- ವ್ರ್ಯಾಂಗ್ಲರ್ ಕಾರು ಈಗ ರೂ. 62.65 ರಿಂದ ರೂ. 66.65 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ಪಾನ್ ಇಂಡಿಯಾ).
ಈ ಹಬ್ಬದ ಋತುವಿನಲ್ಲಿ ಜೀಪ್ ವ್ರ್ಯಾಂಗ್ಲರ್ ವಾಹನವು ರೂ. 2 ಲಕ್ಷದಷ್ಟು ಬೆಲೆಯೇರಿಕೆಯನ್ನು ಕಂಡಿದೆ. ಈ ಮೂಲಕ ಈ ಆಫ್ ರೋಡ್ ಲೈಫ್ ಸ್ಟೈಲ್ SUV ಯು 2023ರಲ್ಲಿ ಎರಡನೇ ಬಾರಿಗೆ ಬೆಲೆಯೇರಿಕೆಯನ್ನು ಕಂಡಿದ್ದು, ಇದರ ಎರಡೂ ವೇರಿಯಂಟ್ ಗಳಿಗೆ ಈ ಏರಿಕೆಯು ಅನ್ವಯವಾಗಲಿದೆ: ಅವೆಂದರೆ ಅನ್ ಲಿಮಿಟೆಡ್ ಮತ್ತು ರುಬಿಕಾನ್.
ವ್ರ್ಯಾಂಗ್ಲರ್ ಕಾರಿನ ವೇರಿಯಂಟ್ ಗಳಲ್ಲಿ ಎಷ್ಟು ಬೆಲೆಯೇರಿಕೆ ಉಂಟಾಗಿದೆ ಎಂಬುದನ್ನು ಕೆಳಗಿನ ಕೋಷ್ಠಕದಲ್ಲಿ ನೋಡೋಣ.
ಬೆಲೆಯ ಕೋಷ್ಠಕ
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಅನ್ ಲಿಮಿಟೆಡ್ |
ರೂ 60.65 ಲಕ್ಷ |
ರೂ 62.65 ಲಕ್ಷ |
+ ರೂ 2 ಲಕ್ಷ |
ರುಬಿಕಾನ್ |
ರೂ 64.65 ಲಕ್ಷ |
ರೂ 66.65 ಲಕ್ಷ |
+ ರೂ 2 ಲಕ್ಷ |
ವ್ರ್ಯಾಂಗ್ಲರ್ ಕಾರಿನ ಅನ್ ಲಿಮಿಡೆಡ್ ಮತ್ತು ರುಬಿಕಾನ್ ವೇರಿಯಂಟ್ ಗಳೆರಡಲ್ಲೂ ರೂ. 2 ಲಕ್ಷದಷ್ಟು ಹೆಚ್ಚಳ ಉಂಟಾಗಿದೆ. ಈ ಕಾರು ತಯಾರಕ ಸಂಸ್ಥೆಯು ಈ ಬೆಲೆಯೇರಿಕೆಯ ಹಿಂದಿನ ಕಾರಣವನ್ನು ಅಧಿಕೃತವಾಗಿ ಬಹಿರಂಗಗೊಳಿಸದೆ ಇದ್ದರೂ, ಇನ್ಪುಟ್ ವೆಚ್ಚದಲ್ಲಿನ ಹೆಚ್ಚಳವೇ ಇದಕ್ಕೆ ಕಾರಣವೆನಿಸಿದ್ದು, ಇದನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ. ಜೀಪ್ ವ್ರ್ಯಾಂಗ್ಲರ್ ಅನ್ನು ಸ್ಥಳೀಯವಾಗಿ ಜೋಡಿಸಲಾಗುತ್ತದೆ.
ಇದನ್ನು ಸಹ ನೋಡಿರಿ: 2023 ಟಾಟಾ ಸಫಾರಿ ಡಾರ್ಕ್ ಎಡಿಷನ್ ಕಾರು ಹಳೆಯ ಸಫಾರಿ ರೆಡ್ ಡಾರ್ಕ್ ಎಡಿಷನ್ ಗಿಂತ ಹೇಗೆ ಭಿನ್ನವಾಗಿದೆ ಎಂದು ನೋಡೋಣ
ಗುಣಲಕ್ಷಣಗಳು ಮತ್ತು ಸುರಕ್ಷತೆ
ಜೀಪ್ ವ್ರ್ಯಾಂಗ್ಲರ್ ಕಾರು, ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 8.4 ಇಂಚುಗಳ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ಸಂಪರ್ಕಿತ ಕಾರು ತಂತ್ರಜ್ಞಾನ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮತ್ತು ಡ್ಯುವಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಜೊತೆಗೆ ಬರುತ್ತದೆ.
ಇದರ ಸುರಕ್ಷತಾ ಪಟ್ಟಿಯು ಮುಂಭಾಗದ ಮತ್ತು ಪಕ್ಕದ ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ECS), ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹಿಲ್ ಡೆಸೆಂಟ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಕ್ಯಾಮರಾ, ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS) ಇತ್ಯಾದಿಗಳನ್ನು ಒಳಗೊಂಡಿದೆ.
ಪವರ್ ಟ್ರೇನ್ ಮತ್ತು ಡ್ರೈವ್ ಟ್ರೇನ್
ವ್ರ್ಯಾಂಗ್ಲರ್ ಕಾರು, 268PS ಮತ್ತು 400Nm ಟಾರ್ಕ್ ಉಂಟು ಮಾಡುವ 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ ಬರಲಿದ್ದು, ಇದನ್ನು 8 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾಗಿದೆ. ಇದು ಪ್ರಮಾಣಿತ ಫುಲ್ ಟೈಂ 4-ವೀಲ್ ಡ್ರೈವ್ (4WD) ಅನ್ನು ಹೊಂದಿದ್ದರೆ, ರುಬಿಕಾನ್ ವೇರಿಯಂಟ್ ನಲ್ಲಿ ಎಲೆಕ್ಟ್ರಾನಿಕ್ ಸ್ವೇ ಬಾರ್ ಡಿಸ್ಕನೆಕ್ಟ್ ಸಿಸ್ಟಂ ಜೊತೆಗೆ ಲಾಕಿಂಗ್ ಫ್ರಂಟ್ ಮತ್ತು ರಿಯರ್ ಡಿಫರೆನ್ಶಿಯಲ್ ಗಳನ್ನು ನೋಡಬಹುದು.
ಜೀಪ್ ಸಂಸ್ಥೆಯ ಇತರ ಮಾಹಿತಿಗಳು
ಇತ್ತೀಚೆಗೆ ಜೀಪ್ ಸಂಸ್ಥೆಯು ಕ್ರಮವಾಗಿ ಕಂಪಾಸ್ ಮತ್ತು ಮೆರಿಡಿಯನ್ ಮಾದರಿಗಳ ಬ್ಯ್ಲಾಕ್ ಶಾರ್ಕ್ ಮತ್ತು ಓವರ್ ಲ್ಯಾಂಡ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ SUV ಗಳು ಹಿಂದಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯ. ನೀವು ಇಲ್ಲಿ ಇನ್ನಷ್ಟು ವಿವರಗಳನ್ನು ಪಡೆಯಬಹುದು.
ಪ್ರತಿಸ್ಪರ್ಧಿಗಳು
ಜೀಪ್ ಸಂಸ್ಥೆಯ ಈ ಆಫ್ ರೋಡಿಂಗ್ SUV ಯು ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಜೊತೆ ಸ್ಪರ್ಧಿಸಲಿದ್ದರೂ, ವ್ರ್ಯಾಂಗ್ಲರ್ ಕಾರು ತೆಗೆಯಬಹುದಾದ ರೂಫ್ ಮತ್ತು ಡೋರ್ ಪ್ಯಾನೆಲ್ ಗಳೊಂದಿಗೆ 5 ಸೀಟರ್ ಆಗಿ ಮಾತ್ರವೇ ಲಭ್ಯ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ವ್ರ್ಯಾಂಗ್ಲರ್ ಅಟೋಮ್ಯಾಟಿಕ್