ಜೀಪ್ ನ ಭಾರತದಲ್ಲಿ ಬಿಡುಗಡೆ ಮಾಡುವ 7-ಸೀಟೆರ್ SUV ನಲ್ಲಿ ಅದರದೇ ಆದ ಶೈಲಿಯ ಡಿಸೈನ್ ಪಡೆಯಬಹುದು.
ಇದನ್ನು ಬ್ರೆಜಿಲ್ ನಲ್ಲಿ 2021 ವೇಳೆಗೆ ಪರಿಚಯಿಸಲಾಗಬಹುದು, ಈ 7-ಸೆಟರ್ SUV ಭಾರತದಲ್ಲೂ ಬಿಡುಗಡೆ ಆಗಬಹುದು.
- ಜೀಪ್ ನ ಹಿಂದಿನ ವರ್ಷ ಅನಾವರಣಗೊಂಡ ಹೊಸ ತಂತ್ರ ದ ಪ್ರಕಾರ, ಇದರಲ್ಲಿ ‘ಕಡಿಮೆ ಎತ್ತರದ -D 3-ಸಾಲು' SUV ಇರುವುದು ಭಾರತದಲ್ಲಿ
- ಇದನ್ನು ಚೀನಾ ದಲ್ಲಿ ಮಾರಾಟ ಮಾಡಲಾಗುತ್ತಿರುವ ಜೀಪ್ ಕಮಾಂಡರ್ ನಿಂದ ಪ್ರೇರಣೆ ಪಡೆದಿದೆ ಎಂದು ನಿರೀಕ್ಷಿಸಲಗಿದೆ.
- ಜೀಪ್ ನ ಡಿಸೈನರ್ ಮಾರ್ಕ್ ಅಲೆನ್ ಹೇಳಿರುವಂತೆ ಹೊಸ 7-ಸೀಟೆರ್ ಗು ಚೀನಾ ಸ್ಪೆಕ್ ಮಾಡೆಲ್ ಗು ಯಾವುದೇ ಸಂಬಂಧವಿರುವುದಿಲ್ಲ
- ಬ್ರೆಜಿಲ್ ಗಾಗಿ ಡಿಸೈನ್ ಮಾಡಲ್ಪಟ್ಟ ಭಾರತಕ್ಕೆ ಬರಬಹುದಾದ 7-ಸೀಟೆರ್ SUV, ಕಂಪಾಸ್ ನಂತೆ ಇರುವ ಸಾಧ್ಯತೆ ಹೆಚ್ಚು ಇದೆ.
- ಭಾರತದಲ್ಲಿ 2022 ವೇಳೆಗೆ ಬರುವ ಸಾಧ್ಯತೆ ಇದೆ. ಇದರ ಪ್ರತಿಸ್ಪರ್ಧೆ ಟೊಯೋಟಾ ಫಾರ್ಚುನರ್, ಫೋರ್ಡ್ ಎಂಡೀವೊರ್ ಮತ್ತು ಮಹಿಂದ್ರಾ ಅಲ್ತುರಸ್ G4 ಜೊತೆಗ್ ಇರುತ್ತದೆ.
ಜೀಪ್ ನವರು ಹೊಸ ಏಳು ಸೀಟೆರ್ SUV ಯನ್ನು ಭಾರತ ಹಾಗು ಬ್ರೆಜಿಲ್ ನಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ. ಜೀಪ್ ನ ಐದು ವರ್ಷದ ವ್ಯವಹಾರ ತಂತ್ರಗಾರಿಕೆಯಡಿಯಲ್ಲಿ , ಹಿಂದಿನ ವರ್ಷ ಅನಾವರಣ ಗೊಳಿಸಿದಂತೆ, ಭಾರತ ಸ್ಪೆಕ್ SUV ಯನ್ನು ‘low-D 3-row SUV' ಎಂದು ಪಟ್ಟಿ ಮಾಡಲಾಯಿತು. ಅದು ಕಂಪಾಸ್ ಗಿಂತಲೂ ದೊಡ್ಡದಾಗಿರುತ್ತದೆ ಆದರೆ ಗ್ರಾಂಡ್ ಚೆರೋಕೇ ಗಿಂತಲೂ ಚಿಕ್ಕದಾಗಿರುತ್ತದೆ ಈಗ ನಮಗೆ ಅದು ಒಂದು ಹೊಸ ಮಾಡೆಲ್ ಆಗಿರುತ್ತದೆ ಮತ್ತು ಅದು ಚೀನಾ ಮಾರುಕಟ್ಟೆಗೆ ಸೀಮಿತವಾಗಿರುವ ಜೀಪ್ ಕಮಾಂಡರ್ ನ ಭಾರತ ಸ್ಪೆಕ್ ಆವೃತ್ತಿ ಆಗಿರುವುದಿಲ್ಲ ಎಂದು ನಂಬಲು ಸಾಧ್ಯವಾಗುತ್ತದೆ.
ಬ್ರೆಜಿಲ್ ನ ಪತ್ರಿಕೋದ್ಯಮದ ಜೊತೆಗಿನ ಇತ್ತೀಚಿನ ಮಾತುಕತೆಯಂತೆ, ಬ್ರಾಂಡ್ ನವರು ಮಾರ್ಕೆಟ್ ಗೆ ಮುಂಬರುವ 7-ಸೆಟರ್ SUV ಬಗ್ಗೆ ಸ್ವಲ್ಪ ವಿವರ ತಿಳಿಸಿದರು. ಬ್ರೆಜಿಲ್ ಮತ್ತು ಭಾರತ ಸ್ಪೆಕ್ SUV ಗಳು ಫಿಯಟ್ ಕ್ರಿಸ್ಲರ್ ಆಟೋಮೊಬೈಲ್ ಬಿಸಿನೆಸ್ ನಲ್ಲಿ ಪಟ್ಟಿಯಾಗಿರುವಂತೆ ‘low-D 3-row SUV' ಆಗಿರುತ್ತದೆ. FCA ನವರು ಅದೇ ತಂತ್ರಗಾರಿಕೆಯನ್ನು ಪುನರಾವರ್ತಿಸಬಹುದು ಕಂಪಾಸ್ ನಲ್ಲಿರುವಂತೆ ಹೊಸ ಏಳು ಸೀಟೆರ್ SUV ಯಲ್ಲಿ. ಕಂಪಾಸ್ ಅನ್ನು ಮೊದಲು ಬ್ರೆಜಿಲ್ ನಲ್ಲಿ ಬಿಡುಗಡೆ ಮಾಡಲಾಯಿತು ನಂತರ ಭಾರತದಲ್ಲಿ ಪರಿಚಯಿಸಲಾಯಿತು.
ಜೀಪ್ ನ ಮುಖ್ಯ ಡಿಸೈನರ್ ಮಾರ್ಕ್ ಅಲೆನ್ ಹೇಳುವಂತೆ " ಇದಕ್ಕೂ ಚೀನಾ ಡಾ ಗ್ರಾಂಡ್ ಕಮಾಂಡರ್ ಗು ಯಾವುದೇ ಸಂಬಂಧ ಇರುವುದಿಲ್ಲ". ಹೊರನೋಟಕ್ಕ್ಕೆ ಇದು ಕಂಪಾಸ್ ಅನ್ನು ಸಹ ಹೋಲುವುದಿಲ್ಲ , ಅದರ ಉದ್ದನೆಯ ಆವೃತ್ತಿಯ ವೇದಿಕೆ ಮೇಲೆ ನಿರ್ಮಾಣವಾಗಿದ್ದರು ಸಹ.
ಜೀಪ್ ನವರು ಹೊಸ ಏಳು ಸೀಟೆರ್ SUV ಯನ್ನು ಬ್ರೆಜಿಲ್ ನಲ್ಲಿ 2021 ವೇಳೆಗೆ ಪರಿಚಯಿಸಬಹುದು. ಕಂಪಾಸ್ ಭಾರತದಲ್ಲಿ ಬ್ರೆಜಿಲ್ ನಲ್ಲಿ ಬಿಡುಗಡೆಯಾದ ಒಂದು ವರ್ಷದ ನಂತರ ಬಂದಂತೆ. ಈ ಮೂರು ಸಾಲು ಜೀಪ್ SUV ಯು 2022 ವೇಳೆಗೆ ಬರುವ ಸಾಧ್ಯತೆ ಇದೆ, ಬ್ರಾಂಡ್ ನ ಭಾರತದ ವಿಭಾಗದವರು ಹೇಳಿಕೆ ನೀಡಿದಂತೆ.
ಇದರಲ್ಲಿ ಕಂಪಾಸ್ ನ 2.0-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗಬಹುದು. ಇದರಲ್ಲಿ ಹೊಸ ರಾಂಗ್ಲ್ಯಾರ್ ನಲ್ಲಿ ಬಿಡುಗಡೆಯಾದ ಅದೇ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಬಹುದು. ಈ ಎಂಜಿನ್ ಗಳನ್ನು 9-ಸ್ಪೀಡ್ ಆಟೋಮ್ಯಾಟಿಕ್ ಒಂದಿಗೆ ಅಳವಡಿಸಲಾಗುವುದು , ಡೀಸೆಲ್ ಜೊತೆಗೆ 6-ಸ್ಪೀಡ್ ಮಾನ್ಯುಯಲ್ ಸಕ ಕೊಡಲಾಗಬಹುದು.
ಭಾರತದಲ್ಲಿ, ಈ ಏಳು ಸೀಟೆರ್ ಜೀಪ್ SUV ಪ್ರತಿಸ್ಪರ್ಧೆ ಈಗಾಗಲೇ ಚೆನ್ನಾಗಿ ಬೇರೂರಿರುವ ಪ್ರತಿಸ್ಪರ್ದಿಗಳಾದ ಟೊಯೋಟಾ ಫಾರ್ಚುನರ್, ಫೋರ್ಡ್ ಎಂಡೀವೊರ್ ಮತ್ತು ಮಹಿಂದ್ರಾ ಅಲ್ತುರಸ್ G4 ಜೊತೆಗೆ ಇರುತ್ತದೆ. ಇದರ ಬೆಲೆ ವ್ಯಾಪ್ತಿ ರೂ 30 ಲಕ್ಷ ದಿಂದ ರೂ 35 ಲಕ್ಷ ವರೆಗೂ ಎಂದು ನಿರೀಕ್ಷಿಸಲಾಗಿದೆ.