ಭಾರತದಲ್ಲಿ ನಿಂತೋಯ್ತು ಕಿಯಾ ಕಾರ್ನಿವಲ್ ಮಾರಾಟ!
ಕಿಯಾ ಕಾರ್ನಿವಲ್ 2020-2023 ಗಾಗಿ shreyash ಮೂಲಕ ಜೂನ್ 21, 2023 02:33 pm ರಂದು ಪ್ರಕಟಿಸಲಾಗಿದೆ
- 13 Views
- ಕಾಮೆಂಟ್ ಅನ್ನು ಬರೆಯಿರಿ
ಪ್ರಸ್ತುತ ಭಾರತದಲ್ಲಿ ಹೊಸ ತಲೆಮಾರಿನ ಕಾರ್ನಿವಲ್ MPV ಬಿಡುಗಡೆಯ ಬಗ್ಗೆ ಇನ್ನೂ ನಿರ್ಧರಿಸುತ್ತಿರುವ ಕಿಯಾ ಮೋಟಾರ್ಸ್
-
ಕಿಯಾ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಕಾರ್ನಿವಲ್ ಅನ್ನು ತೆಗೆದುಹಾಕಿದೆ.
-
ಇದನ್ನು ಕೊನೆಯದಾಗಿ 6- ಮತ್ತು 7- ಸೀಟುಗಳ ಕಾನ್ಫಿಗರೇಶನ್‌ಗಳಲ್ಲಿ ನೀಡಲಾಯಿತು.
-
ಕಾರ್ನಿವಲ್ 200PS 2.2-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಹೊಸ ರಿಯಲ್ ಡ್ರೈವಿಂಗ್ ಎಮಿಷನ್ (RDE) ಮಾನದಂಡಗಳನ್ನು ಪೂರೈಸಲು ಅದನ್ನು ಅಪ್‌ಡೇಟ್ ಮಾಡಲಾಗಿಲ್ಲ.
-
ಭಾರತದಲ್ಲಿ ಕಾರ್ನಿವಲ್ MPV ಯ ಆರಂಭಿಕ ಬೆಲೆಯನ್ನು 30.99 ಲಕ್ಷ ರೂ. (ಎಕ್ಸ್ ಶೋ ರೂಂ) ನಲ್ಲಿ ಇರಿಸಲಾಗಿತ್ತು.
ಭಾರತದಲ್ಲಿ ಕಿಯಾ ಕಾರ್ನಿವಲ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಕಂಪನಿಯು ಈ ಪ್ರೀಮಿಯಂ ಕಾರಿನ ಬುಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ ಮತ್ತು ಈ ವಾಹನವನ್ನು ಅಧಿಕೃತ ವೆಬ್‌ಸೈಟ್‌ನಿಂದಲೂ ತೆಗೆದುಹಾಕಲಾಗಿದೆ. 2020 ರಲ್ಲಿ ಬಿಡುಗಡೆಯಾದ ಕಾರ್ನಿವಲ್ ಕಾರು ತನ್ನ ಪ್ರೀಮಿಯಂ ಕ್ಯಾಬಿನ್‌ನೊಂದಿಗೆ ಬಹಳಷ್ಟು ಜನರನ್ನು ಆಕರ್ಷಿಸಿತ್ತು. ಅದು ಹೆಚ್ಚು ಬೆಲೆಬಾಳುವ ಐಷಾರಾಮಿ ವಿಭಾಗಕ್ಕೆ ಪ್ರವೇಶಿಸದೆಯೇ ಟೊಯೊಟಾ ಇನ್ನೋವಾ ಕ್ರಿಸ್ಟಾದಂತಹವುಗಳಿಗಿಂತ ಮೇಲಿನ ಸ್ಥಾನವನ್ನು ಅಲಂಕರಿಸಿತ್ತು.
ಇಲ್ಲಿ ಮಾರಾಟವಾದ ಕಾರ್ನಿವಲ್ ಈಗಾಗಲೇ ತಯಾರಕರಿಗೆ ಹಿಂದಿನ-ಪೀಳಿಗೆಯ ಮಾಡೆಲ್ ಆಗಿತ್ತು ಮತ್ತು ಇತ್ತೀಚಿನ BS6 ಫೇಸ್ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಅಪ್‌ಡೇಟ್ ಮಾಡದಿರಲು ಕಿಯಾ ನಿರ್ಧರಿಸಿತು. ಕಾರ್ನಿವಲ್ ಅನ್ನು 6- ಮತ್ತು 7-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ನೀಡಲಾಗುತ್ತಿತ್ತು ಮತ್ತು ಒಟ್ಟು ಮೂರು ವಿಶಾಲವಾದ ವೇರಿಯಂಟ್‌ಗಳಲ್ಲಿ ಲಭ್ಯವಿತ್ತು. ಬಿಡುಗಡೆಯ ಸಮಯದಲ್ಲಿ ಫೋರ್-ರೋ ವೇರಿಯಂಟ್ ಕೂಡ ಲಭ್ಯವಿತ್ತು ಆದರೆ ಸ್ವಲ್ಪ ಸಮಯದ ನಂತರ ಅದನ್ನು ಸ್ಥಗಿತಗೊಳಿಸಲಾಯಿತು. ಭಾರತದಲ್ಲಿ ಕಿಯಾ ಕಾರ್ನಿವಲ್ ಕಾರು 30.99 ಲಕ್ಷ ರೂ.ದಿಂದ 35.49 ಲಕ್ಷ ರೂ.ವರೆಗಿನ (ಎಕ್ಸ್ ಶೋರೂಂ ದೆಹಲಿ) ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿತ್ತು.
ಲಭ್ಯವಿದ್ದ ಫೀಚರ್‌ಗಳು
ಕಿಯಾ ಕಾರ್ನಿವಲ್‌ನ ಕ್ಯಾಬಿನ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಧ್ಯಮ-ಸಾಲಿನ ಪ್ರಯಾಣಿಕರಿಗೆ 10.1-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಡ್ಯುಯಲ್-ಪ್ಯಾನಲ್ ಸನ್‌ರೂಫ್ ಮತ್ತು ಥ್ರೀ-ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿತ್ತು. ಬಿಡುಗಡೆಯ ಸಮಯದಲ್ಲಿ, ಇದು ಭಾರತದಲ್ಲಿನ ಅತ್ಯುತ್ತಮ ಸುಸಜ್ಜಿತ ಐಷಾರಾಮಿ ಅಲ್ಲದ MPV ಗಳಲ್ಲಿ ಒಂದಾಗಿತ್ತು. ಈಗ ಮಾಸ್-ಮಾರುಕಟ್ಟೆ ಬ್ರಾಂಡ್‌ಗಳಿಂದ ಅನೇಕ ಥ್ರೀ-ರೋ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ, ಇವುಗಳು ತಂತ್ರಜ್ಞಾನದ ವಿಷಯದಲ್ಲಿ ಕಾರ್ನಿವಲ್‌ಗಿಂತ ಉತ್ತಮವಾಗಿವೆ.
ಸುರಕ್ಷತೆಗಾಗಿ, ಈ ಪ್ರೀಮಿಯಂ MPV ಕಾರು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ ಮತ್ತು ಹಿಲ್ ಅಸಿಸ್ಟ್‌ನಂತಹ ಫೀಚರ್‌ಗಳನ್ನು ಪಡೆದುಕೊಂಡಿತ್ತು.
ಇದನ್ನೂ ಓದಿ: ಜುಲೈ 4 ರಂದು ಭಾರತಕ್ಕೆ ಪಾದಾರ್ಪಣೆ ಮಾಡಲಿರುವ ನವೀಕೃತ ಕಿಯಾ ಸೆಲ್ಟೋಸ್
ಎಂಜಿನ್ & ಟ್ರಾನ್ಸ್‌ಮಿಷನ್
ಕಾರ್ನಿವಲ್ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿತ್ತು, ಇದು 200PS ಪವರ್ ಮತ್ತು 440Nm ಟಾರ್ಕ್ ಅನ್ನು ಉತ್ಪಾದಿಸುತ್ತಿತ್ತು. ಎಂಜಿನ್‌ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಲಭ್ಯವಿತ್ತು.
ಕಾರ್ನಿವಲ್ ಭಾರತಕ್ಕೆ ಮರಳುತ್ತದೆಯೇ?
ದೆಹಲಿಯಲ್ಲಿ ನಡೆದ 2023 ಆಟೋ ಎಕ್ಸ್‌ಪೋದಲ್ಲಿ ಕಿಯಾ ಮೋಟಾರ್ಸ್ ನಾಲ್ಕನೇ ಪೀಳಿಗೆಯ ಕಾರ್ನಿವಲ್ ಅನ್ನು ಪ್ರದರ್ಶಿಸಿತ್ತು. ಇದು ಪ್ರಸ್ತುತ ಲಭ್ಯವಿರುವ ಮಾಡೆಲ್‌ಗಿಂತ ಗಾತ್ರದಲ್ಲಿ ದೊಡ್ಡದಾಗಿದೆ ಮತ್ತು ದೊಡ್ಡ ಟಚ್‌ಸ್ಕ್ರೀನ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನಂತಹ ಫೀಚರ್‌ಗಳನ್ನು ಸಹ ಹೊಂದಿದೆ. ಕಿಯಾ ಇನ್ನೂ ಮಾರುಕಟ್ಟೆಯ ವಿಶ್ಲೇಷಣೆ ಮಾಡುತ್ತಿದೆ ಮತ್ತು ಎಲ್ಲವೂ ಸರಿಯಾಗಿ ನಡೆದರೆ, ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಹೊಸ ಕಿಯಾ ಕಾರ್ನಿವಲ್ ಅನ್ನು ಪ್ರಾರಂಭಿಸಬಹುದು ಎಂದು ಅಂದಾಜಿಸಲಾಗಿದೆ.
ಇನ್ನಷ್ಟು ಓದಿ: ಕಿಯಾ ಕಾರ್ನಿವಲ್ ಡೀಸೆಲ್