• English
  • Login / Register

ಭಾರತದಲ್ಲಿ ಮತ್ತೆ ಕಿಯಾ EV6ನ 1,300 ಕ್ಕೂ ಹೆಚ್ಚು ಕಾರುಗಳ ಹಿಂಪಡೆತ

ಕಿಯಾ ಇವಿ6 ಗಾಗಿ kartik ಮೂಲಕ ಫೆಬ್ರವಾರಿ 24, 2025 12:59 pm ರಂದು ಪ್ರಕಟಿಸಲಾಗಿದೆ

  • 10 Views
  • ಕಾಮೆಂಟ್‌ ಅನ್ನು ಬರೆಯಿರಿ

ಹಿಂದಿನಂತೆಯೇ ಸಾಫ್ಟ್‌ವೇರ್ ಆಪ್‌ಡೇಟ್‌ಗಾಗಿ ಕಿಯಾ EV6 ಅನ್ನು ಹಿಂಪಡೆಯುತ್ತಿರುವುದು ಇದು ಎರಡನೇ ಬಾರಿ

Kia EV6 Recalled In India Again, Over 1,300 Units Affected

  • ಹಿಂಪಡೆಯುವ ಕಾರುಗಳನ್ನು 2022ರ ಮಾರ್ಚ್ 03 ರಿಂದ 2023ರ ಏಪ್ರಿಲ್ 14ರ ನಡುವೆ ತಯಾರಿಸಲಾಗಿತ್ತು.

  • ಸಹಾಯಕ ಬ್ಯಾಟರಿಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಐಸಿಸಿಯು ಸಾಫ್ಟ್‌ವೇರ್ ಅನ್ನು ಆಪ್‌ಡೇಟ್‌ ಮಾಡಲು ಕಿಯಾ ಕಾರುಗಳನ್ನು ಹಿಂಪಡೆಯಲಾಗಿದೆ.

  • ಇದರಿಂದಾಗಿ ಹಿಂಪಡೆಯುವ ಕಾರುಗಳ ಸಂಖ್ಯೆ 1,380.

  • ಸ್ವಯಂಪ್ರೇರಿತ ಹಿಂಪಡೆಯುವಿಕೆಯ ಬಗ್ಗೆ ತಿಳಿಸಲು ಕಾರು ತಯಾರಕರು EV6 ಮಾಲೀಕರನ್ನು ಸಂಪರ್ಕಿಸುತ್ತಾರೆ.

  • ಇದು 77.4 ಕಿ.ವ್ಯಾಟ್‌ ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು 708 ಕಿಮೀ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ.

  • ಇವಿ 6ನ ಬೆಲೆ ಕ್ರಮವಾಗಿ 60.79 ಲಕ್ಷ ರೂ.ನಿಂದ 65.97 ಲಕ್ಷ ರೂ.ವರೆಗೆ ಇದೆ. 

  • ಫೇಸ್‌ಲಿಫ್ಟೆಡ್ ಮೊಡೆಲ್‌ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕಿಯಾ ಕಂಪನಿಯು ಸಂಪೂರ್ಣ ಎಲೆಕ್ಟ್ರಿಕ್‌ ಆಗಿರುವ EV6 ಕಾರನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯಲು ಆದೇಶ ನೀಡಿದೆ. 2022ರ ಮಾರ್ಚ್ 3ರಿಂದ  ಮತ್ತು 2023ರ ಏಪ್ರಿಲ್ 14ರ ನಡುವೆ ತಯಾರಿಸಲಾದ ಮೊಡೆಲ್‌ಗಳನ್ನು ಹಿಂಪಡೆಯಲಾಗಿದೆ. ಒಟ್ಟು 1,380 ಕಾರುಗಳು ಈ ಹಿಂಪಡೆಯುವಿಕೆ ಪ್ರಕ್ರಿಯೆಗೆ ಒಳಪಡಲಿದೆ. ಈ ಲೇಖನದಲ್ಲಿ, ಹಿಂಪಡೆಯಲು ಕಾರಣವನ್ನು ನಾವು ವಿವರಿಸುತ್ತೇವೆ ಮತ್ತು ನೀವು ಈ ಹಿಂಪಡೆಯುವ ಪ್ರಕ್ರಿಯೆಗೆ ಒಳಪಡುವವರಾಗಿದ್ದರೆ ನೀವು ಏನು ಮಾಡಬಹುದು ಎಂಬುದನ್ನು ವಿವರಿಸುತ್ತೇವೆ.

ಕಿಯಾ ಇವಿ6: ಹಿಂಪಡೆಯಲು ಕಾರಣ

12V ಬ್ಯಾಟರಿಯ ಚಾರ್ಜಿಂಗ್ ದಕ್ಷತೆ ಮತ್ತು ಪರ್ಫಾರ್ಮೆನ್ಸ್‌ ಅನ್ನು ಸುಧಾರಿಸಲು ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯೂನಿಟ್ (ICCU) ಗೆ ಸಾಫ್ಟ್‌ವೇರ್ ಆಪ್‌ಡೇಟ್‌ನ ಅಗತ್ಯವಿದೆ ಎಂದು ಕಿಯಾ ಹೇಳಿದೆ. ಈ ಬ್ಯಾಟರಿಯು ಕಡಿಮೆ-ವೋಲ್ಟೇಜ್ ಆಕ್ಸಸ್ಸರಿಗಳು ಮತ್ತು ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಎಲೆಕ್ಟ್ರಾನಿಕ್ಸ್‌ಗಳಿಗೆ ಶಕ್ತಿ ನೀಡುತ್ತದೆ. ಇದು EV6 ಗಾಗಿ ಮೊದಲ ಹಿಂಪಡೆಯುವಿಕೆ ಅಲ್ಲ, ಏಕೆಂದರೆ ಕಳೆದ ವರ್ಷ ICCU ನಲ್ಲಿನ ಇದೇ ಸಮಸ್ಯೆಗಾಗಿ ಕಿಯಾ ಅದನ್ನು ಹಿಂಪಡೆದಿತ್ತು. 

ಕಿಯಾ EV6: ಮಾಲೀಕರು ಏನು ಮಾಡಬಹುದು?

ಕಿಯಾ ಕಂಪನಿಯು ಮಾರ್ಚ್ 3, 2023 ರಿಂದ ಏಪ್ರಿಲ್ 14, 2023 ರ ನಡುವೆ ತಯಾರಿಸಲಾದ EV6 ಕಾರಿನ ಮಾಲೀಕರನ್ನು ಸಂಪರ್ಕಿಸಿ, ತ್ವರಿತ ಸಾಫ್ಟ್‌ವೇರ್ ಆಪ್‌ಡೇಟ್‌ಗಾಗಿ ಮನವಿ ಮಾಡಲಿದೆ. ಬಾಧಿತ ಮಾಲೀಕರು ಕಿಯಾದ ಸ್ಥಳೀಯ ಡೀಲರ್‌ಗಳೊಂದಿಗೆ ಅಪಾಯಿಂಟ್‌ಮೆಂಟ್ ಬುಕ್ ಮಾಡಬಹುದು ಅಥವಾ 1800-108-5005 ನಲ್ಲಿ ಕಾಲ್ ಸೆಂಟರ್ ಅನ್ನು ಸಂಪರ್ಕಿಸಬಹುದು.

ಕಿಯಾ ಇವಿ6: ಸಂಕ್ಷಿಪ್ತ ಮಾಹಿತಿ

EV6 ಬಾಗಿದ ಡ್ಯುಯಲ್ 12.3 ಡಿಜಿಟಲ್ ಡಿಸ್‌ಪ್ಲೇಗಳು, ವೆಂಟಿಲೆಟೆಡ್‌ ಮತ್ತು ಚಾಲಿತ ಮುಂಭಾಗದ ಸೀಟುಗಳು, ಡ್ಯುಯಲ್-ಜೋನ್ ಆಟೋ ಎಸಿ, ಸಿಂಗಲ್-ಪೇನ್ ಸನ್‌ರೂಫ್ ಮತ್ತು 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಸುರಕ್ಷತಾ ಸೂಟ್ 8 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ತಂತ್ರಜ್ಞಾನವನ್ನು ಒಳಗೊಂಡಿದೆ.

ಇವಿ6 ಎರಡು ಮೋಟಾರ್ ಕಾನ್ಫಿಗರೇಶನ್‌ಗಳೊಂದಿಗೆ ಒಂದೇ 77.4 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಅವುಗಳ ವಿಶೇಷಣಗಳು ಈ ಕೆಳಗಿನಂತಿವೆ:

ಬ್ಯಾಟರಿ

                        77.4 ಕಿ.ವ್ಯಾಟ್‌

ಪವರ್‌

229 ಪಿಎಸ್‌

325 ಪಿಎಸ್‌

ಟಾರ್ಕ್‌

350 ಎನ್‌ಎಮ್‌

605 ಎನ್‌ಎಮ್‌

ಡ್ರೈವ್‌ ಟ್ರೈನ್‌

ರಿಯರ್‌ವೀಲ್‌ ಡ್ರೈವ್‌

ಆಲ್‌ವೀಲ್‌ ಡ್ರೈವ್‌

ಕ್ಲೈಮ್‌ ಮಾಡಲಾದ ರೇಂಜ್‌

                708 ಕಿ.ಮೀ.ವರೆಗೆ

ಬ್ಯಾಟರಿಯು 350 ಕಿ.ವ್ಯಾ ಡಿಸಿ ಚಾರ್ಜರ್ ಅನ್ನು ಬೆಂಬಲಿಸುತ್ತದೆ, ಇದು 18 ನಿಮಿಷಗಳಲ್ಲಿ ಬ್ಯಾಟರಿಯನ್ನು 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡುತ್ತದೆ.

ಕಿಯಾ EV6: ಬೆಲೆ ಮತ್ತು ಪ್ರತಿಸ್ಪರ್ಧಿಗಳು 

Kia EV6 Rivals

ಕಿಯಾ ಇವಿ6 ಬೆಲೆ 60.79 ಲಕ್ಷ ರೂ.ನಿಂದ  65.97 ಲಕ್ಷ ರೂ.ವರೆಗೆ(ಎಕ್ಸ್ ಶೋ ರೂಂ, ದೆಹಲಿ) ಇದೆ. ಇದು ಹ್ಯುಂಡೈ ಅಯೋನಿಕ್ 5 ಮತ್ತು BMW iX1 ನಂತಹ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. 

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Kia ಇವಿ6

explore ಇನ್ನಷ್ಟು on ಕಿಯಾ ಇವಿ6

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience