• English
  • Login / Register

Mahindra Scorpio N Carbon ಬಿಡುಗಡೆ, ಬೆಲೆ 19.19 ಲಕ್ಷ ರೂ. ನಿಗದಿ

ಮಹೀಂದ್ರಾ ಸ್ಕಾರ್ಪಿಯೋ ಎನ್ ಗಾಗಿ dipan ಮೂಲಕ ಫೆಬ್ರವಾರಿ 24, 2025 07:55 pm ರಂದು ಪ್ರಕಟಿಸಲಾಗಿದೆ

  • 12 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಾರ್ಬನ್ ಆವೃತ್ತಿಯು ಟಾಪ್‌-ಸ್ಪೆಕ್ Z8 ಮತ್ತು Z8 L ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ರೆಗ್ಯುಲರ್‌ ಸ್ಕಾರ್ಪಿಯೋ ಎನ್‌ನ ಅನುಗುಣವಾದ ವೇರಿಯೆಂಟ್‌ಗಳಿಗಿಂತ 20,000 ರೂ.ನಷ್ಟು ಹೆಚ್ಚು ದುಬಾರಿಯಾಗಿದೆ

Scorpio N Carbon edition launched

  • ಕೆಲವು ಸಂಪೂರ್ಣ ಕಪ್ಪಾದ ಅಂಶಗಳೊಂದಿಗೆ ಇದೇ ರೀತಿಯ ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್‌ ವಿನ್ಯಾಸವನ್ನು ಹೊಂದಿದೆ.

  • ಕಪ್ಪು ಅಲಾಯ್‌ ವೀಲ್‌ಗಳು, ವಿಂಡೋ ಗಾರ್ನಿಶ್‌ ಮತ್ತು ರೂಫ್‌ ರೇಲ್ಸ್‌ಗಳನ್ನು ಪಡೆಯುತ್ತದೆ.

  • ಕ್ಯಾಬಿನ್ ಸಂಪೂರ್ಣವಾಗಿ ಕಪ್ಪು ಬಣ್ಣದ ಥೀಮ್ ಹೊಂದಿದ್ದು, ಸೀಟುಗಳ ಮೇಲೆ ಕಪ್ಪು ಲೆದರೆಟ್ ಕವರ್‌ಅನ್ನು ಪಡೆಯುತ್ತದೆ.

  • ಸೌಲಭ್ಯಗಳಲ್ಲಿ 8-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡ್ರೈವರ್ ಡಿಸ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಸೇರಿವೆ.

  • ಸುರಕ್ಷತಾ ಸೂಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, TPMS ಮತ್ತು ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಸೇರಿವೆ.

  • ರೆಗ್ಯುಲರ್‌ ಮೊಡೆಲ್‌ನಂತೆ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ ಕಾರ್ಬನ್ ಅನ್ನು 19.19 ಲಕ್ಷ ರೂ.ನಿಂದ 24.89 ಲಕ್ಷ ರೂ.ವರೆಗಿನ (ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ) ಬೆಲೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು Z8 ಮತ್ತು Z8L ವೇರಿಯೆಂಟ್‌ಗಳ 7-ಸೀಟರ್‌ ಆವೃತ್ತಿಗಳೊಂದಿಗೆ ಲಭ್ಯವಿದೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಮ್ಯಾನ್ಯುವಲ್‌ ಮತ್ತು ಆಟೋಮ್ಯಾಟಿಕ್‌ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ವೇರಿಯೆಂಟ್‌ಗಳ ವಿವರವಾದ ಬೆಲೆಗಳು ಇಲ್ಲಿವೆ:

ವೇರಿಯೆಂಟ್‌

ರೆಗ್ಯುಲರ್‌ ಸ್ಕಾರ್ಪಿಯೋ ಎನ್‌

ಸ್ಕಾರ್ಪಿಯೋ ಎನ್‌ ಕಾರ್ಬನ್‌

ಬೆಲೆ ವ್ಯತ್ಯಾಸ

Z8 ಪೆಟ್ರೋಲ್ ಮ್ಯಾನ್ಯುವಲ್‌

18.99 ಲಕ್ಷ ರೂ.

19.19 ಲಕ್ಷ ರೂ.

+ 20,000 ರೂ.

Z8 ಪೆಟ್ರೋಲ್ ಆಟೋಮ್ಯಾಟಿಕ್‌

20.50 ಲಕ್ಷ ರೂ.

20.70 ಲಕ್ಷ ರೂ.

+ 20,000 ರೂ.

Z8 ಡೀಸೆಲ್ ಮ್ಯಾನ್ಯುವಲ್‌ 2ವೀಲ್‌-ಡ್ರೈವ್‌

19.45 ಲಕ್ಷ ರೂ.

19.65 ಲಕ್ಷ ರೂ.

+ 20,000 ರೂ.

Z8 ಡೀಸೆಲ್ ಆಟೋಮ್ಯಾಟಿಕ್‌ 2ವೀಲ್‌-ಡ್ರೈವ್‌

20.98 ಲಕ್ಷ ರೂ.

21.18 ಲಕ್ಷ ರೂ.

+ 20,000 ರೂ.

Z8 ಡೀಸೆಲ್ ಮ್ಯಾನ್ಯುವಲ್‌ 4ವೀಲ್‌-ಡ್ರೈವ್‌

21.52 ಲಕ್ಷ ರೂ.

21.72 ಲಕ್ಷ ರೂ.

+ 20,000 ರೂ.

Z8 ಡೀಸೆಲ್ ಆಟೋಮ್ಯಾಟಿಕ್‌ 4ವೀಲ್‌-ಡ್ರೈವ್‌

20.98 ಲಕ್ಷ ರೂ.

23.44 ಲಕ್ಷ ರೂ.

+ 20,000 ರೂ.

Z8 L ಪೆಟ್ರೋಲ್ ಮ್ಯಾನ್ಯುವಲ್‌

20.70 ಲಕ್ಷ ರೂ.

20.90 ಲಕ್ಷ ರೂ.

+ 20,000 ರೂ.

Z8 L ಪೆಟ್ರೋಲ್ ಆಟೋಮ್ಯಾಟಿಕ್‌

22.11 ಲಕ್ಷ ರೂ.

22.31 ಲಕ್ಷ ರೂ.

+ 20,000 ರೂ.

Z8 L ಡೀಸೆಲ್ ಮ್ಯಾನ್ಯುವಲ್‌ 2ವೀಲ್‌-ಡ್ರೈವ್‌

21.10 ಲಕ್ಷ ರೂ.

21.30 ಲಕ್ಷ ರೂ.

+ 20,000 ರೂ.

Z8 L ಡೀಸೆಲ್ ಆಟೋಮ್ಯಾಟಿಕ್‌ 2ವೀಲ್‌-ಡ್ರೈವ್‌

22.56 ಲಕ್ಷ ರೂ.

22.76 ಲಕ್ಷ ರೂ.

+ 20,000 ರೂ.

Z8 L ಡೀಸೆಲ್ ಮ್ಯಾನ್ಯುವಲ್‌ 4ವೀಲ್‌-ಡ್ರೈವ್‌

23.13 ಲಕ್ಷ ರೂ.

23.33 ಲಕ್ಷ ರೂ.

+ 20,000 ರೂ.

Z8 L ಡೀಸೆಲ್ ಆಟೋಮ್ಯಾಟಿಕ್‌ 4ವೀಲ್‌-ಡ್ರೈವ್‌

24.69 ಲಕ್ಷ ರೂ.

24.89 ಲಕ್ಷ ರೂ.

+ 20,000 ರೂ.

ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್‌ಶೋರೂಮ್‌ ಬೆಲೆಯಾಗಿದೆ

ಹೆಸರೇ ಸೂಚಿಸುವಂತೆ ಕಾರ್ಬನ್ ಆವೃತ್ತಿಯು, ರೆಗ್ಯುಲರ್‌ ಸ್ಕಾರ್ಪಿಯೋ ಎನ್‌ನಿಂದ ಒಳಗೆ ಮತ್ತು ಹೊರಗೆ ಬಹಳಷ್ಟು ಕಪ್ಪು ಅಂಶಗಳೊಂದಿಗೆ ಬರುತ್ತದೆ. ಬದಲಾವಣೆಗಳನ್ನು ವಿವರವಾಗಿ ನೋಡೋಣ:

ಹೇಗೆ ಭಿನ್ನ?

Mahindra Scorpio N Carbon

ಮಹೀಂದ್ರಾ ಸ್ಕಾರ್ಪಿಯೋ ಎನ್ ನ ಕಾರ್ಬನ್‌ನ ಎಕ್ಸ್‌ಟೀರಿಯರ್‌ ವಿನ್ಯಾಸವು ರೆಗ್ಯುಲರ್‌ ಮೊಡೆಲ್‌ನಂತೆಯೇ ಇರುತ್ತದೆ. ಎರಡೂ ಎಸ್‌ಯುವಿ ಆವೃತ್ತಿಗಳಲ್ಲಿ ಹೆಡ್‌ಲೈಟ್‌ಗಳು, ಟೈಲ್ ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಫಾಗ್ ಲ್ಯಾಂಪ್‌ಗಳು ಒಂದೇ ಆಗಿವೆ.

ಹಾಗೆಯೇ, ವಿಭಿನ್ನವಾದ ವಿಷಯವೆಂದರೆ, ಅಲಾಯ್ ವೀಲ್‌ಗಳು, ರೂಫ್‌ ರೆಲ್‌ಗಳು, ಔಟ್‌ಸೈಡ್‌ ರಿಯರ್‌ವ್ಯೂ ಮಿರರ್‌ಗಳು (ORVM ಗಳು) ಮತ್ತು ಕಿಟಕಿ ಕ್ಲಾಡಿಂಗ್‌ಗಳನ್ನು ಕಪ್ಪು ಬಣ್ಣದಲ್ಲಿ ನೀಡಲಾಗಿದೆ. ಇದಲ್ಲದೆ, ರೆಗ್ಯುಲರ್‌ ಸ್ಕಾರ್ಪಿಯೋ N ನಲ್ಲಿ ಸಿಲ್ವರ್‌ ಫಿನಿಶ್‌ ಅನ್ನು ಹೊಂದಿರುವ ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು ಮತ್ತು ಡೋರ್ ಕ್ಲಾಡಿಂಗ್ ಈಗ ಕಾರ್ಬನ್ ಆವೃತ್ತಿಯಲ್ಲಿ ಡಾರ್ಕ್‌ ಗ್ರೇ ಬಣ್ಣದ ಫಿನಿಶ್‌ ಅನ್ನು ಹೊಂದಿದೆ. ಹೊರಗಿನ ಬಾಗಿಲಿನ ಹ್ಯಾಂಡಲ್‌ಗಳು ಡಾರ್ಕ್‌ ಕ್ರೋಮ್ ಆಕ್ಸೆಂಟ್‌ ಅನ್ನು ಹೊಂದಿವೆ.

Mahindra Scorpio N Carbon interior

ಹೊರಭಾಗದಲ್ಲಿನ ಬದಲಾವಣೆಗಳು ಸೂಕ್ಷ್ಮವಾಗಿದ್ದರೂ, ಸಂಪೂರ್ಣ ಕಪ್ಪು ಥೀಮ್ ಸೇರ್ಪಡೆಯಿಂದಾಗಿ ಒಳಾಂಗಣವು ಸಂಪೂರ್ಣವಾಗಿ ಪರಿಷ್ಕರಿಸಲ್ಪಟ್ಟಿದೆ, ಆದರೂ ವಿನ್ಯಾಸವು ರೆಗ್ಯುಲರ್‌ ಮೊಡೆಲ್‌ನಂತೆಯೇ ಇರುತ್ತದೆ. ಇದಲ್ಲದೆ, ಕಾರ್ಬನ್ ಕಪ್ಪು ಲೆಥೆರೆಟ್ ಸೀಟುಗಳು ಮತ್ತು ಎಸಿ ವೆಂಟ್‌ಗಳು ಮತ್ತು ಟಚ್‌ಸ್ಕ್ರೀನ್ ಪ್ಯಾನೆಲ್ ಸುತ್ತಲೂ ಬ್ರಷ್ಡ್ ಅಲ್ಯೂಮಿನಿಯಂ ಟ್ರಿಮ್‌ನೊಂದಿಗೆ ಬರುತ್ತದೆ.

ಫೀಚರ್‌ ಮತ್ತು ಸುರಕ್ಷತೆ

Mahindra Scorpio N Carbon seats

ಕಾರ್ಬನ್‌ನಲ್ಲಿರುವ ಫೀಚರ್‌ಗಳ ಸೂಟ್ ರೆಗ್ಯುಲರ್‌ ಮೊಡೆಲ್‌ನಂತೆಯೇ ಇರುತ್ತದೆ. ಆದ್ದರಿಂದ, ಇದು 8-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 12-ಸ್ಪೀಕರ್ ಸೋನಿ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಇದು ಸಿಂಗಲ್-ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 6-ವೇ ವಿದ್ಯುತ್ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು, ಮುಂಭಾಗದಲ್ಲಿ ವೇಂಟಿಲೇಟೆಡ್‌ ಸೀಟುಗಳು, ಆಟೋ ಎಸಿ, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ವೈಪರ್‌ಗಳನ್ನು ಸಹ ಹೊಂದಿದೆ.

ಸುರಕ್ಷತಾ ಸೂಟ್ ಕೂಡ ಒಂದೇ ರೀತಿಯದ್ದಾಗಿದ್ದು, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಹಿಲ್ ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಚಾಲಕ ಅರೆನಿದ್ರಾವಸ್ಥೆ ಪತ್ತೆ ಮುಂತಾದ ಫೀಚರ್‌ಗಳನ್ನು ಒಳಗೊಂಡಿದೆ. ಇದು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಸಹ ಹೊಂದಿದೆ.

ಇದನ್ನೂ ಓದಿ: Toyota Innova EV 2025: ಭಾರತಕ್ಕೆ ಬರುತ್ತಿದೆಯೇ?

ಪವರ್‌ಟ್ರೈನ್‌ ಆಯ್ಕೆಗಳು

ಮಹೀಂದ್ರಾ ಸ್ಕಾರ್ಪಿಯೊ ಎನ್ ಕಾರ್ಬನ್ ರೆಗ್ಯುಲರ್‌ ಮೊಡೆಲ್‌ನಂತೆಯೇ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ವಿವರವಾದ ವಿಶೇಷಣಗಳು ಇಲ್ಲಿವೆ:

ಎಂಜಿನ್‌

2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

2.2-ಲೀಟರ್ ಡೀಸೆಲ್ ಎಂಜಿನ್

ಪವರ್‌

203 ಪಿಎಸ್‌

175 ಪಿಎಸ್‌

ಟಾರ್ಕ್‌

370 ಎನ್‌ಎಮ್‌ (MT) / 380 ಎನ್‌ಎಮ್‌ (AT)

370 ಎನ್‌ಎಮ್‌ (MT) / 400 ಎನ್‌ಎಮ್‌ (AT)

ಗೇರ್‌ಬಾಕ್ಸ್‌

6-ಸ್ಪೀಡ್ MT / 6-ಸ್ಪೀಡ್ AT

6-ಸ್ಪೀಡ್ MT / 6-ಸ್ಪೀಡ್ AT

ಡ್ರೈವ್‌ಟ್ರೈನ್‌^

RWD

RWD / 4WD

*AT = ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

MT = ಮ್ಯಾನುವಲ್ ಟ್ರಾನ್ಸ್‌ಮಿಷನ್‌

^RWD =ರಿಯರ್‌ ವೀಲ್‌ ಡ್ರೈವ್‌;

4WD = 4-ವೀಲ್ ಡ್ರೈವ್

ಪ್ರತಿಸ್ಪರ್ಧಿಗಳು

Mahindra Scorpio N Carbon

 ಮಹೀಂದ್ರಾ ಸ್ಕಾರ್ಪಿಯೋ ಎನ್‌ ಇತರ ಮಧ್ಯಮ ಗಾತ್ರದ ಎಸ್‌ಯುವಿಗಳಾದ ಟಾಟಾ ಹ್ಯಾರಿಯರ್, ಟಾಟಾ ಸಫಾರಿ, ಎಮ್‌ಜಿ ಹೆಕ್ಟರ್ ಮತ್ತು ಹ್ಯುಂಡೈ ಅಲ್ಕಾಜರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

was this article helpful ?

Write your Comment on Mahindra ಸ್ಕಾರ್ಪಿಯೊ ಎನ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience