• English
  • Login / Register

EV5 ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಕಿಯಾ ಸಂಸ್ಥೆ; ಎರಡು ಹೊಸ ಕಾನ್ಸೆಪ್ಟ್‌ ಗಳ ಅನಾವರಣ

ಕಿಯಾ ಇವಿ5 ಗಾಗಿ ansh ಮೂಲಕ ಅಕ್ಟೋಬರ್ 13, 2023 04:53 pm ರಂದು ಪ್ರಕಟಿಸಲಾಗಿದೆ

  • 146 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಿಯಾದ ಮುಂಬರುವ ಎಲೆಕ್ಟ್ರಿಕ್‌ ಸೆಡಾನ್‌ ಮತ್ತು ಕಾಂಪ್ಯಾಕ್ಟ್‌ SUV ಯನ್ನು ಕಾನ್ಸೆಪ್ಟ್‌ ಗಳಾಗಿ ಪ್ರದರ್ಶಿಸಲಾಗಿದೆ

Kia EV5

  • EV5 ಅನ್ನು ಕಳೆದ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿತ್ತು.
  • ಇದು EV9 SUV ಯಿಂದ ವಿನ್ಯಾಸದಲ್ಲಿ ಪ್ರೇರಣೆಯನ್ನು ಪಡೆದಿದೆ.
  • ಮೂರು ಬೇರೆ ಬೇರೆ ಪವರ್‌ ಟ್ರೇನ್‌ ಗಳಿಂದ ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳನ್ನು ಪಡೆದಿದೆ.
  • ಡ್ಯುವಲ್‌ ಇಂಟಗ್ರೇಟೆಡ್ 12.3‌ ಇಂಚಿನ ಡಿಸ್ಪ್ಲೇ, ವೆಹಿಕಲ್-2-ಲೋಡ್ ಮತ್ತು ADAS ತಂತ್ರಜ್ಞಾನವನ್ನು ಹೊಂದಿದೆ.
  • EV5 ಅನ್ನು ಭಾರತದಲ್ಲಿ 2025ರ ಹೊತ್ತಿಗೆ ರೂ. 55 ಲಕ್ಷಕ್ಕೆ (ಎಕ್ಸ್-ಶೋರೂಂ) ಬಿಡುಗಡೆ ಮಾಡುವ ಸಾಧ್ಯತೆ ಇದೆ.

 ಕೊರಿಯಾದಲ್ಲಿ ಕಿಯಾ ಸಂಸ್ಥೆಯ EV ದಿನಾಚರಣೆಯ ಅಂಗವಾಗಿ ಈ ಕಾರು ತಯಾರಕ ಸಂಸ್ಥೆಯು, ಮಧ್ಯಮ ಗಾತ್ರದ ಎಲೆಕ್ಟ್ರಿಕ್‌ SUV ಆಗಿರುವ  EV5 ಕಾರಿನ ವಿವರಗಳನ್ನು ಬಹಿರಂಗಪಡಿಸಿದ್ದು, ಇದು ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿತ್ತು. EV5 ಕಾರಿನ ವಿವರಗಳೊಂದಿಗೆ, ಕಿಯಾವು ಎರಡು ಕಾನ್ಸೆಪ್ಟ್ Evಗಳನ್ನು ಬಿಡುಗಡೆ ಮಾಡಿದೆ: EV3 ಕಾಂಪ್ಯಾಕ್ಟ್ SUV ಮತ್ತು EV4 ಸೆಡಾನ್‌ - ಇವೆರಡೂ ವಾಹನಗಳನ್ನು ಮುಂದಿನ ವರ್ಷಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಕಾನ್ಸೆಪ್ಟ್‌ ಗಳ ಕುರಿತು ನಾವು ತಿಳಿಯುವ ಮೊದಲು EV5 ಏನನ್ನು ಹೊತ್ತು ತರಲಿದೆ ಎಂಬುದನ್ನು ನೋಡೋಣ:

 

ವಿವಿಧ ಪವರ್‌ ಟ್ರೇನ್‌ ಆಯ್ಕೆಗಳು

ಮಾನದಂಡಗಳು

ಸ್ಟ್ಯಾಂಡರ್ಡ್

ಲಾಂಗ್‌ ರೇಂಜ್

ಲಾಂಗ್‌ ರೇಂಜ್ AWD

ಬ್ಯಾಟರಿ ಪ್ಯಾಕ್

64kWh

88kWh

88kWh

ಪವರ್

217PS

217PS

217PS (ಫ್ರಂಟ್), 95PS (ರಿಯರ್)

ವ್ಯಾಪ್ತಿ (ಅಂದಾಜು)

530km

720km

650km

ಕಿಯಾವು EV5 ಅನ್ನು ಎರಡು ಬ್ಯಾಟರಿ ಪ್ಯಾಕ್‌ ಗಳು ಮತ್ತು ಮೂರು ಪವರ್‌ ಟ್ರೇನ್‌ ಆಯ್ಕೆಗಳೊಂದಿಗೆ ಹೊರತರಲಿದೆ: ಸ್ಟ್ಯಾಂಡರ್ಡ್‌, ಲಾಂಗ್‌ ರೇಂಜ್‌ ಮತ್ತು ಲಾಂಗ್‌ ರೇಂಜ್‌ AWD ಸ್ಟ್ಯಾಂಡರ್ಡ್‌ ಆವೃತ್ತಿಯು 217PS ಎಲೆಕ್ಟ್ರಿಕ್‌ ಮೋಟರ್‌ ಜೊತೆಗೆ 64kWh ಬ್ಯಾಟರಿ ಪ್ಯಾಕ್‌ ಅನ್ನು ಪಡೆಯಲಿದೆ ಹಾಗೂ 530km ನಷ್ಟು ಶ್ರೇಣಿಯನ್ನು ನಿರೀಕ್ಷಿಸಲಾಗಿದೆ. ಲಾಂಗ್‌ ರೇಂಜ್ ಆವೃತ್ತಿಯು‌ ಅದೇ 217PS ಎಲೆಕ್ಟ್ರಿಕ್‌ ಮೋಟರ್‌ ಜೊತೆಗೆ 88kWh ಬ್ಯಾಟರಿ ಪ್ಯಾಕ್‌ ಅನ್ನು ಪಡೆಯಲಿದೆ ಹಾಗೂ 720km ನಷ್ಟು ಶ್ರೇಣಿಯನ್ನು ನಿರೀಕ್ಷಿಸಲಾಗಿದೆ. ಅಂತಿಮವಾಗಿ, ಲಾಂಗ್‌ ರೇಂಜ್‌ AWD ಯು ಡ್ಯುವಲ್‌ ಮೋಟಾರ್‌ ಸೆಟಪ್ (217PS ಫ್ರಂಟ್‌ ಮತ್ತು 95PS ರಿಯರ್)‌ ಜತೆಗೆ 88kWh ಬ್ಯಾಟರಿ ಪ್ಯಾಕ್‌ ಅನ್ನು ಪಡೆಯಲಿದ್ದು, 650km ನಷ್ಟು ಚಾಲನಾ ಶ್ರೇಣಿಯನ್ನು ಕಿಯಾ ಸಂಸ್ಥೆಯು ನಿರೀಕ್ಷಿಸಿದೆ. EV5 ಅನ್ನು ಸೂಪರ್‌ ಫಾಸ್ಟ್ DC ಚಾರ್ಜರ್‌ ಬಳಸಿ 27 ನಿಮಿಷಗಳಲ್ಲಿ 30 ರಿಂದ 100 ಶೇಕಡಾದಷ್ಟು ಚಾರ್ಜ್‌ ಮಾಡಬಹುದು.

 

ಆಧುನಿಕ ವೈಶಿಷ್ಟ್ಯಗಳ ಪಟ್ಟಿ

Kia EV5 Cabin

 ಕಿಯಾ ಸಂಸ್ಥೆಯು ಈ ಎಲೆಕ್ಟ್ರಿಕ್‌ SUV ಯಲ್ಲಿ ಡ್ಯುವಲ್‌ ಇಂಟಗ್ರೇಟೆಡ್‌ 12.3 ಇಂಚಿನ ಡಿಸ್ಪ್ಲೇ ಸೆಟಪ್‌ ಅನ್ನು (ಟಚ್‌ ಸ್ಕ್ರೀನ್‌ ಇನ್ಫಮೇಶನ್‌ ಮತ್ತು ಚಾಲಕನ ಡಿಜಿಟಲ್‌ ಡಿಸ್ಪ್ಲೇ) ಅಳವಡಿಸಿದೆ. ಇದು 5 ಇಂಚಿನ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌, ತ್ರೀ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಹೀಟೆಡ್‌ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಲೂ, ವೆಹಿಕಲ್‌ ಟು ಲೋಡ್‌ (V2L) ಮತ್ತು ವೆಹಿಹಲ್‌ ಟು ಗ್ರಿಡ್ (V2G)‌ ಅನ್ನು ಪಡೆದಿದೆ.

Kia EV5

ಸುರಕ್ಷತೆಯ ದೃಷ್ಟಿಯಿಂದ ಇದನ್ನು ನೋಡುವುದಾದರೆ, ಇದು ಏಳು ಏರ್‌ ಬ್ಯಾಗ್‌ ಗಳು ಮತ್ತು ಲೇನ್‌ ಕೀಪ್‌ ಅಸಿಸ್ಟ್‌, ಲೇನ್‌ ಡಿಪಾರ್ಚರ್‌ ವಾರ್ನಿಂಗ್‌, ಪಾರ್ಕಿಂಗ್‌ ಅಸಿಸ್ಟ್‌, ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಮತ್ತು ಅಟೋ ಎಮರ್ಜೆನ್ಸಿ ಬ್ರೇಕಿಂಗ್‌ ಸೇರಿದಂತೆ ಒಂದಷ್ಟು ADAS (ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ) ಗಳನ್ನು ಇದು ಹೊಂದಿದೆ.

ಇದನ್ನು ಸಹ ಓದಿರಿ: ಕಿಯಾ ಸೆಲ್ಟೋಸ್ ಮತ್ತು ಕಿಯಾ ಕಾರೆನ್ಸ್ ಕಾರುಗಳ ಬೆಲೆಯಲ್ಲಿ ರೂ. 30,000 ದಷ್ಟು ಹೆಚ್ಚಳ

ಈಗ ನಾವು ಅನಾವರಣಗೊಳಿಸಲಾಗಿರುವ ಕಾನ್ಸೆಪ್ಟ್‌ ಗಳನ್ನು ನೋಡೋಣ.

ಕಿಯಾ EV4

Kia EV4 Front
Kia EV4 Side

ಅತ್ಯಂತ ನವೀನ ನೋಟವನ್ನು ಹೊಂದಿರುವ Evಯು ಸಾಧಾರಣವಾಗಿ ಕಾಣುತ್ತಿದ್ದು ಮುಂಭಾಗದಲ್ಲಿ ಕಿಯಾ EV6 ಅನ್ನು ಹೋಲುತ್ತದೆ. ಇದು ಉದ್ದನೆಯ ಮತ್ತು ನುಣುಪಾದ ಗ್ರಿಲ್‌ ಹಾಗೂ ಕಿಯಾ ಸಂಸ್ಥೆಯ ಹುಲಿಯ ಮೂಗಿನ ಹೆಡ್‌ ಲೈಟ್‌ ಸೆಟಪ್‌ ಅನ್ನು ಹೊಂದಿದೆ.  ಇದು ಚೂಪಾದ ಗೆರೆಗಳೊಂದಿಗೆ ಫ್ಲ್ಯಾಟ್‌ ಪ್ರೊಫೈಲ್‌, ವಿಸ್ತರಿತ ರಿಯರ್‌ ಎಂಡ್‌ ಮತ್ತು ಕಾಲ್ಪನಿಕ ವಿಜ್ಞಾನ ಚಲನಚಿತ್ರದಲ್ಲಿ ಕಾಣಿಸಿಕೊಳ್ಳುವಂತಹ ತ್ರೀಕೋಣಾಕಾರದ ಅಲೋಯ್‌ ವೀಲ್‌ ಗಳನ್ನು ಹೊಂದಿದೆ. ಇದರ ರಿಯರ್‌ ಪ್ರೊಫೈಲ್‌, ನೇರ ಗೆರೆಗಳು ಮತ್ತು ಚಪ್ಪಟೆಯಾಕಾರಾದ ಬಾಡಿಯೊಂದಿಗೆ ಅದೇ ಸಾಧಾರಣ ನೋಟವನ್ನು ಹೊಂದಿದೆ.

Kia EV4 Cabin

 ಒಳಗಡೆಗೆ ಇದು ಸಾಧಾರಣ ಕ್ಯಾಬಿನ್‌ ಅನ್ನು ಹೊಂದಿದ್ದು,ಇದು ಕಾನ್ಸೆಪ್ಟ್‌ ಆಗಿದೆ ಎಂಬುದನ್ನು ನೀವು ಸುಲಭವಾಗಿ ಹೇಳಬಹುದು. ಇದರ ಕ್ಯಾಬಿನ್‌ ಪ್ರಕಾಶಮಾನವಾದ ಬಣ್ಣಗಳು, ಆಯತಾಕಾರದ ಸ್ಟೀಯರಿಂಗ್‌ ವೀಲ್‌ ಮತ್ತು ಡ್ಯುವಲ್‌ ಇಂಟಗ್ರೇಟೆಡ್‌ ಡಿಸ್ಪ್ಲೇ ಸೆಟಪ್‌ ಅನ್ನು ಹೊಂದಿದೆ. ಇನ್ನೂ ಸರಳಗೊಳಿಸುವುದಕ್ಕಾಗಿ ಕಿಯಾ ಸಂಸ್ಥೆಯು ಮಧ್ಯದಲ್ಲಿ ಫ್ಲ್ಯಾಟ್‌ ಸೆಂಟರ್‌ ಕನ್ಸೋಲ್‌ ಅಳವಡಿಸುವುದರ ಜೊತೆಗೆ ಸಾಮಾನ್ಯ ಬಿಳಿ ಸೀಟುಗಳನ್ನು ಅಳವಡಿಸಿದೆ.  

ಕಿಯಾ EV3

Kia EV4 Front
Kia EV3 Rear

EV3 ಯು EV4 ನ ವಿನ್ಯಾಸವನ್ನೇ ಹೊಂದಿದೆ. ಈ ಎಲೆಕ್ಟ್ರಿಕ SUV ಯ ಒಟ್ಟಾರೆ ವಿನ್ಯಾಸದಲ್ಲಿ ಸರಳತೆಯನ್ನು ನೋಡಬಹುದು. ಇದರ ಮುಂದಿನ ಪ್ರೊಫೈಲ್‌, EV4 ನ ವಿನ್ಯಾಸವನ್ನೇ ಹೋಲುತ್ತಿದ್ದರೂ ಹೆಚ್ಚು ಎದ್ದು ಕಾಣುತ್ತಿದೆ. ಈ ಪ್ರೊಫೈಲ್‌ ನಲ್ಲಿ ವೀಲ್‌ ಆರ್ಕ್‌ ಗಳು, ಡೋರ್‌ ಕ್ಲಾಡಿಂಗ್‌ ಮತ್ತು ಆಕರ್ಷಕ ಅಲೋಯ್‌ ವೀಲ್‌ ಗಳನ್ನು ಕಾಣಬಹುದು. ಹಿಂಭಾಗದಲ್ಲಿ EV3 ಯು ಚಪ್ಪಟೆಯಾಕಾರದ ಬಾಡಿ, ದೊಡ್ಡದಾದ ಹೆಡ್‌ ಲೈಟ್‌ ಸೆಟಪ್‌ ಮತ್ತು ಬೃಹತ್‌ ಸ್ಕಿಡ್‌ ಪ್ಲೇಟ್‌ ಅನ್ನು ಹೊಂದಿದೆ.

Kia EV3 Cabin

ಇದರ ಕ್ಯಾಬಿನ್‌, EV4 ನ ಕ್ಯಾಬಿನ್‌ ಅನ್ನೇ ಹೋಲುತ್ತದೆ. ಅದೇ ಡ್ಯಾಶ್‌ ಬೋರ್ಡ್‌, ಸ್ಟೀಯರಿಂಗ್‌ ವೀಲ್‌ ಮತ್ತು ಡಿಸ್ಪ್ಲೇ ಸೆಟಪ್‌ ಅನ್ನು ಇದರಲ್ಲಿ ಕಾಣಬಹುದು. ಇದರ ಸೆಂಟರ್‌ ಕನ್ಸೋಲ್‌ ಮಾತ್ರ ಲೇಯರ್ಡ್‌ ಡಿಸೈನ್‌ ಅನ್ನು ಪಡೆದರೆ ಕ್ಯಾಬಿನ್‌ ನಲ್ಲಿ ಬೂದು ಮತ್ತು ಹಸಿರು ಬಣ್ಣಗಳ ಸ್ಕೀಂ ಅನ್ನು ನೋಡಬಹುದು. 

ಇದನ್ನು ಸಹ ಓದಿರಿ: ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ವಿನ್‌ ಫಾಸ್ಟ್‌, ಈ ಬ್ರಾಂಡ್‌ ಮತ್ತು ಇದರ ಕಾರುಗಳ ಬಗ್ಗೆ ತಿಳಿಯಿರಿ

ಈ ಕಾನ್ಸೆಪ್ಟ್‌ ಗಳ ಬ್ಯಾಟರಿ ಪ್ಯಾಕ್‌ ಮತ್ತು ಮೋಟಾರ್‌ ವಿವರಗಳು ಇನ್ನೂ ಹೊರಬಂದಿಲ್ಲ. ಆದರೆ ಈ EV ಗಳು ಉತ್ಪಾದನೆಗೆ ಸಿದ್ಧಗೊಂಡ ನಂತರ ಕಿಯಾ ಸಂಸ್ಥೆಯು ಅವುಗಳ ವಿವರಗಳನ್ನು ಬಹಿರಂಗಪಡಿಸಲಿದೆ.

ಬಿಡುಗಡೆಯ ಸಮಯ

Kia Reveals The Specifications Of EV5 Along With The Showcase Of Two New Concepts

EV5 ಅನ್ನು ಈ ವರ್ಷದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರೆ, 2025ರಲ್ಲಿ ಭಾರತೀಯ ರಸ್ತೆಗಳಿಗೆ ಇಳಿಯುವ ಸಾಧ್ಯತೆ ಇದೆ. EV3 ಮತ್ತು EV4 ಗಳು 2024 ರಲ್ಲಿ ಮಾರುಕಟ್ಟೆಗೆ ಬರಲಿದ್ದು, ಕಿಯಾ ಸಂಸ್ಥೆಯು ಇದನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆ ರೂಪಿಸಿದರೆ ಅವು 2026ರ ಸುಮಾರಿಗೆ ಇಲ್ಲಿಗೆ ಬರಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia ಇವಿ55

Read Full News

explore ಇನ್ನಷ್ಟು on ಕಿಯಾ ಇವಿ5

space Image

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience