• English
  • Login / Register

Mahindra Marazzo ಮಾರಾಟ ಸ್ಥಗಿತ? ಅಧಿಕೃತ ವೆಬ್‌ಸೈಟ್‌ನ ಲಿಸ್ಟಿಂಗ್‌ನಿಂದ ಹೆಸರು ಮಿಸ್ಸಿಂಗ್

ಮಹೀಂದ್ರ ಮರಾಜ್ಜೊ ಗಾಗಿ samarth ಮೂಲಕ ಜುಲೈ 05, 2024 04:15 pm ರಂದು ಪ್ರಕಟಿಸಲಾಗಿದೆ

  • 121 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದನ್ನು 7-ಸೀಟರ್ ಮತ್ತು 8-ಸೀಟರ್ ಸೆಟಪ್‌ ಇರುವ ಸುಪ್ರಸಿದ್ಧ ಟೊಯೋಟಾ ಇನ್ನೋವಾಗೆ ಪರ್ಯಾಯ ಆಯ್ಕೆಯಾಗಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು

Mahindra Marazzo Discontinued

  •  ಮಹೀಂದ್ರಾ ಮರಾಜೊ ಅನ್ನು 2018 ರಲ್ಲಿ ಪರಿಚಯಿಸಲಾಗಿತ್ತು.

  •  ಇದರ ಮಾರಾಟವು ಇತ್ತೀಚಿನ ತಿಂಗಳುಗಳಲ್ಲಿ ಕುಸಿದಿದ್ದು, ಸೆಪ್ಟೆಂಬರ್ 2023 ರಿಂದ 100 ಯುನಿಟ್‌ಗಳನ್ನು ಕೂಡ ದಾಟಿಲ್ಲ.   

  •  ಇದು ಮೂರು ವೇರಿಯಂಟ್ ಗಳಲ್ಲಿ 7-ಸೀಟರ್ ಮತ್ತು 8-ಸೀಟರ್ ಲೇಔಟ್ ನಲ್ಲಿ ಲಭ್ಯವಿತ್ತು.  

  •  MPV ಅನ್ನು 1.5-ಲೀಟರ್ ಡೀಸೆಲ್ ಎಂಜಿನ್ (123 PS/300 Nm) ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಮಾತ್ರ ನೀಡಲಾಗುತಿತ್ತು.

  •  ಮರಾಝೋ ಬೆಲೆಯು 14.59 ಲಕ್ಷದಿಂದ ಪ್ರಾರಂಭವಾಗಿ 17 ಲಕ್ಷದವರೆಗೆ ಇತ್ತು (ಎಕ್ಸ್ ಶೋ ರೂಂ).

 ಮಹೀಂದ್ರಾ ಮರಾಝೋ ಈಗ ಕಾರು ತಯಾರಕರ ವೆಬ್‌ಸೈಟ್‌ನ ಲಿಸ್ಟಿಂಗ್ ನಲ್ಲಿ ಕಾಣಿಸುತ್ತಿಲ್ಲ, ಬಹುಶಃ ಇದನ್ನು ಸದ್ದಿಲ್ಲದೆ ಸ್ಥಗಿತಗೊಳಿಸಲಾಗಿದೆ ಎಂದು ಅನಿಸುತ್ತಿದೆ. ಇದರರ್ಥ, ಮಹೀಂದ್ರಾ ಈಗ SUV ಗಳನ್ನು ಮಾತ್ರ ಮಾರಾಟ ಮಾಡುತ್ತದೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ MPV ಗಳನ್ನು ನೀಡುವುದನ್ನು ನಿಲ್ಲಿಸಿದೆ. 2018 ರಲ್ಲಿ ಬಿಡುಗಡೆಯಾದ ಮರಾಝೋವನ್ನು ಡೀಸೆಲ್ ಎಂಜಿನ್ ನೊಂದಿಗೆ ಮಾತ್ರ ನೀಡಲಾಗಿತ್ತು.

ಕಡಿಮೆ ಮಾರಾಟದ ಪರಿಣಾಮ

Mahindra Marazzo

 ಕಳೆದ 12 ತಿಂಗಳುಗಳಲ್ಲಿ, ಮಹೀಂದ್ರಾ ಸತತವಾಗಿ ಕಡಿಮೆ ಸಂಖ್ಯೆಯ MPV ಗಳನ್ನು ಮಾರಾಟ ಮಾಡಿದೆ, ಮತ್ತು ಕೇವಲ ಸೆಪ್ಟೆಂಬರ್ 2023 ರಲ್ಲಿ ಮಾತ್ರ ಅದು 144 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ 100 ಯೂನಿಟ್ ಗಳ ಸಂಖ್ಯೆಯನ್ನು ದಾಟಿದೆ. ಮರಾಝೊಗೆ ಕಡಿಮೆ ಬೇಡಿಕೆಯಿರುವ ಕಾರಣ, ಮಹೀಂದ್ರಾ ಅದಕ್ಕೆ ಯಾವುದೇ ಅಪ್ಡೇಟ್ ಅನ್ನು ನೀಡಿಲ್ಲ, ಮತ್ತು ಅದರಿಂದಾಗಿ ಅದರ ಮಾರಾಟ ಕೂಡ ಕಡಿಮೆಯಾಗಿರುವ ಸಾಧ್ಯತೆಯಿದೆ.

ಮಹೀಂದ್ರಾ ಮರಾಝೊ: ವಿವರಗಳು

Mahindra Marazzo

 ಮಹೀಂದ್ರಾ ಈ MPV ಯನ್ನು ಮೂರು ವೇರಿಯಂಟ್ ಗಳೊಂದಿಗೆ 7 ಮತ್ತು 8 ಸೀಟರ್ ಆಯ್ಕೆಗಳಲ್ಲಿ ನೀಡಿತ್ತು. ಇದು 123 PS ಮತ್ತು 300 Nm ಉತ್ಪಾದಿಸುವ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ, 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಆಯ್ಕೆಯಲ್ಲಿ ಮಾತ್ರ ಪರಿಚಯಿಸಲಾಗಿತ್ತು.

Mahindra Marazzo

 ಇದನ್ನು ಕೂಡ ಓದಿ: ಮಹೀಂದ್ರಾ ಸ್ಕಾರ್ಪಿಯೊ N ಟಾಪ್-ಸ್ಪೆಕ್ ವೇರಿಯಂಟ್ ಗಳು ಪಡೆಯಲಿವೆ ಇನ್ನಷ್ಟು ಪ್ರೀಮಿಯಂ ಫೀಚರ್ ಗಳು

 ಫೀಚರ್ ಗಳ ವಿಷಯದಲ್ಲಿ, ಇದಕ್ಕೆ 4 ಸ್ಪೀಕರ್‌ಗಳೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಹಿಂಭಾಗದ ವೆಂಟ್ ಗಳೊಂದಿಗೆ ಆಟೋ AC ಮತ್ತು ಕ್ರೂಸ್ ಕಂಟ್ರೋಲ್‌ ಅನ್ನು ನೀಡಲಾಗಿದೆ. ಇದರ ಸುರಕ್ಷತಾ ಕಿಟ್‌ನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ISOFIX ಸೀಟ್ ಆಂಕರ್‌ಗಳು, ಹಿಂಭಾಗದ ಡಿಫಾಗರ್ ಮತ್ತು ಕ್ಯಾಮೆರಾದೊಂದಿಗೆ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ಒಳಗೊಂಡಿದೆ.

 ಇದು ಮಾರುತಿ ಎರ್ಟಿಗಾ, ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಕಿಯಾ ಕ್ಯಾರೆನ್ಸ್ MPV ಗೆ ನೇರ ಪ್ರತಿಸ್ಪರ್ಧಿಯಾಗಿದೆ. ಮಾರುಕಟ್ಟೆಯಲ್ಲಿ ಕೊನೆಯ ಬಾರಿ ಅದನ್ನು ನೋಡಿದಾಗ, ಅದರ ಬೆಲೆ ರೂ 14.59 ಲಕ್ಷದಿಂದ ರೂ 17 ಲಕ್ಷದವರೆಗೆ (ಎಕ್ಸ್ ಶೋರೂಂ, ದೆಹಲಿ) ಇತ್ತು.

 ಇತ್ತೀಚಿನ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

 ಇನ್ನಷ್ಟು ಓದಿ: ಮಹೀಂದ್ರಾ ಮರಾಝೊ ಡೀಸೆಲ್

was this article helpful ?

Write your Comment on Mahindra ಮರಾಜ್ಜೊ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience