• English
    • Login / Register

    ಹೈಯರ್‌ ಸ್ಪೆಕ್‌ ವೇರಿಯಂಟ್‌ಗಳಲ್ಲಿ ಇನ್ನಷ್ಟು ಪ್ರೀಮಿಯಂ ಫೀಚರ್‌ಗಳನ್ನು ಪಡೆದ Mahindra Scorpio N

    ಮಹೀಂದ್ರಾ ಸ್ಕಾರ್ಪಿಯೋ ಎನ್ ಗಾಗಿ shreyash ಮೂಲಕ ಜುಲೈ 09, 2024 05:37 pm ರಂದು ಮಾರ್ಪಡಿಸಲಾಗಿದೆ

    • 21 Views
    • ಕಾಮೆಂಟ್‌ ಅನ್ನು ಬರೆಯಿರಿ

    ಈ ಸದೃಢ ಮಹೀಂದ್ರಾ ಎಸ್‌ಯುವಿಯಲ್ಲಿ ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು ಮತ್ತು ಅಟೋ ಡಿಮ್ಮಿಂಗ್‌ IRVM ಗಳನ್ನು ಸೇರಿಸಲಾಗಿದೆ

    Mahindra Scorpio N Receives More Premium Features On Higher-spec Variants

    • Z8 ಸೆಲೆಕ್ಟ್, Z8, Z8 L‌ ವೇರಿಯಂಟ್‌ ಗಳು ಈಗ ಕೂಲಿಂಗ್‌ ಪ್ಯಾಡ್‌ ಜೊತೆಗೆ ವೈರ್‌ ಲೆಸ್‌ ಫೋನ್‌ ಚಾರ್ಜರ್‌ ಗಳನ್ನು ಹೊಂದಿರಲಿವೆ.
    • ಸ್ಕೋರ್ಪಿಯೊ N ವಾಹನವು ಈಗಾಗಲೇ 8 ಇಂಚಿನ ಟಚ್‌ ಸ್ಕ್ರೀನ್‌, ಡ್ಯುವಲ್‌ ಝೋನ್ AC,‌ ಮತ್ತು ಸಿಂಗಲ್‌ ಪೇನ್‌ ಸನ್‌ ರೂಫ್‌ ಜೊತೆಗೆ ಬರುತ್ತಿದೆ.
    • ಇದು 2 ಲೀಟರ್‌ ಟರ್ಬೊ ಪೆಟ್ರೋಲ್‌ ಮತ್ತು 2.2 ಲೀಟರ್‌ ಡೀಸೆಲ್‌ ಎಂಜಿನ್‌ ಆಯ್ಕೆಗಳೊಂದಿಗೆ ದೊರೆಯುತ್ತಿದೆ.
    • ಸ್ಪೋರ್ಪಿಯೊ N ಕಾರು ಸದ್ಯಕ್ಕೆ ರೂ. 13.85 ರಿಂದ ರೂ. 24.54 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯುತ್ತದೆ.

     ತನ್ನ ಹೈಯರ್‌ ಸ್ಪೆಕ್‌ Z8 ವೇರಿಯಂಟ್‌ ಗಳಿಗೆ ಮೂರು ಹೊಸ ವಿಶೇಷತೆಗಳನ್ನು ಸೇರಿಸುವ ಮೂಲಕ ಮಹೀಂದ್ರಾ ಸ್ಕೋರ್ಪಿಯೊ N ವಾಹನವು ತಾನು ಒದಗಿಸುವ ವಿಶೇಷತೆಗಳ ವಿಷಯದಲ್ಲಿ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಪರಿಷ್ಕೃತ Z8 ವೇರಿಯಂಟ್‌ ಗಳ ಬೆಲೆಯನ್ನು ಸದ್ಯವೇ ಘೋಷಿಸಲಾಗುತ್ತದೆ. 

    ಏನೆಲ್ಲ ಪರಿಷ್ಕರಣೆಗಳನ್ನು ಮಾಡಲಾಗಿದೆ?

    ಸ್ಕೋರ್ಪಿಯೊ N ವಾಹನದ ಪಟ್ಟಿಯಲ್ಲಿ ಈಗ ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು, ಕೂಲಿಂಗ್‌ ಪ್ಯಾಡ್‌ ಜೊತೆಗೆ ವೈರ್‌ ಲೆಸ್‌ ಫೋನ್‌ ಚಾರ್ಜರ್‌ ಮತ್ತು ಅಟೋ ಡಿಮ್ಮಿಂಗ್‌ IRVM ಇತ್ಯಾದಿಗಳು ಸೇರಿವೆ. ಈ ವಿಶೇಷತೆಗಳು ಹೈಯರ್‌ ಸ್ಪೆಕ್‌ Z8 ಟ್ರಿಮ್‌ ಗಳಲ್ಲಿ ಮಾತ್ರವೇ ದೊರೆಯಲಿದ್ದು, ಅವುಗಳ ಹಂಚಿಕೆಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

    ವಿಶೇಷತೆಗಳು

    Z8 ಸೆಲೆಕ್ಟ್

    Z8

    Z8 L

    ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಳು

    ಅಟೋ ಡಿಮ್ಮಿಂಗ್ IRVM

    ಕೂಲಿಂಗ್‌ ಪ್ಯಾಡ್ ನೊಂದಿಗೆ ವೈರ್‌ ಲೆಸ್‌ ಫೋನ್‌ ಚಾರ್ಜರ್

     ವೆಂಟಿಲೇಟೆಡ್‌ ಸೀಟುಗಳು ಮತ್ತು ಅಟೋ ಡಿಮ್ಮಿಂಗ್ IRVM‌ ಇತ್ಯಾದಿಗಳು ಟಾಪ್‌ ಆಫ್‌ ದ ಲೈನ್ Z8 L‌ ಟ್ರಿಮ್‌ ನಲ್ಲಿ ಮಾತ್ರವೇ ಲಭ್ಯವಿದ್ದು, ವೈರ್‌ ಲೆಸ್‌ ಫೋನ್‌ ಚಾರ್ಜರ್‌ ಅನ್ನು ಎಲ್ಲಾ ಮೂರು Z8 ವೇರಿಯಂಟ್‌ ಗಳಲ್ಲಿ ಒದಗಿಸಲಾಗುತ್ತಿದೆ. ಈ ಹೊಸ ವೈಶಿಷ್ಟ್ಯಗಳ ಜೊತೆಗೆ ಮಹೀಂದ್ರಾ ಸಂಸ್ಥೆಯು ಎಲ್ಲಾ ಮೂರು Z8 ಟ್ರಿಮ್‌ ಗಳಲ್ಲಿ ಮಿಡ್‌ ನೈಟ್‌ ಬ್ಲ್ಯಾಕ್‌ ಎಕ್ಸ್‌ ಟೀರಿಯರ್‌ ಶೇಡ್‌ ಅನ್ನು ಪರಿಚಯಿಸಿದೆ. ಇದು ಈ ಹಿಂದೆ Z8 ಸೆಲೆಕ್ಟ್‌ ವೇರಿಯಂಟ್‌ ನಲ್ಲಿ ಮಾತ್ರವೇ ಲಭ್ಯವಿತ್ತು. ಎಲ್ಲಾ ಮೂರು ವೇರಿಯಂಟ್‌ ಗಳ ಪರಿಷ್ಕರಣೆಯಲ್ಲಿ ಗ್ಲಾಸ್‌ ಬ್ಲ್ಯಾಕ್‌ ಸೆಂಟರ್‌ ಕನ್ಸೋಲ್‌ ಸಹ ಸೇರಿದೆ.

    ಇದನ್ನು ಸಹ ನೋಡಿರಿ: ಕಿಯಾ ಸೋನೆಟ್‌ ಮತ್ತು ಸೆಲ್ಟೋಸ್ GTX ವೇರಿಯಂಟ್‌ ಬಿಡುಗಡೆ, X-ಲೈನ್‌ ಟ್ರಿಮ್‌ ಈಗ ಹೊಸ ಬಣ್ಣದಲ್ಲಿಯೂ ಲಭ್ಯ

    ಇತರ ವೈಶಿಷ್ಟ್ಯಗಳು

    Mahindra Scorpio N

    ಸ್ಕೋರ್ಪಿಯೊ N ವಾಹನವು ಈಗಾಗಲೇ 8 ಇಂಚಿನ ಇನ್ಫೋಟೈನ್‌ ಮೆಂಟ್‌ ಸಿಸ್ಟಂ, ಡ್ಯುವಲ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ಕ್ರೂಸ್‌ ಕಂಟ್ರೋಲ್‌, 6 ವೇ ಪವರ್ಡ್‌ ಡ್ರೈವರ್‌ ಸೀಟ್‌, ಸನ್‌ ರೂಪ್‌ ಮತ್ತು 12 ಸ್ಪೀಕರ್‌ ಸೌಂಡ್‌ ಸಿಸ್ಟಂ ಅನ್ನು ಹೊಂದಿದೆ. ಈ SUV ಯ ಸುರಕ್ಷತಾ ಪಟ್ಟಿಯಲ್ಲಿ 6 ಏರ್‌ ಬ್ಯಾಗುಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS), ಮತ್ತು ಫ್ರಂಟ್‌ ಹಾಗೂ ರಿಯರ್‌ ಪಾರ್ಕಿಂಗ್‌ ಕ್ಯಾಮರಾಗಳು ಒಳಗೊಂಡಿವೆ.

     ಪವರ್‌ ಟ್ರೇನ್‌ ಆಯ್ಕೆಗಳು

    ಮಹೀಂದ್ರಾ ಸಂಸ್ಥೆಯು ಸ್ಕೋರ್ಪಿಯೊ N ಅನ್ನು ಟರ್ಬೊ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳೆರಡರಲ್ಲೂ ಹೊರತರುತ್ತಿದೆ:

    ಎಂಜಿನ್

    2-ಲೀಟರ್‌ ಟರ್ಬೊ ಪೆಟ್ರೋಲ್

    2.2-ಲೀಟರ್ ಡೀಸೆಲ್

    ಪವರ್

    203 PS

    132 PS

    175 PS

    ಟಾರ್ಕ್

    380 Nm ತನಕ

    300 Nm

    400 Nm ತನಕ

    ಟ್ರಾನ್ಸ್‌ ಮಿಶನ್

    6-ಸ್ಪೀಡ್ MT, 6-ಸ್ಪೀಡ್ ‌AT

    6-ಸ್ಪೀಡ್ MT, 6-ಸ್ಪೀಡ್ ‌AT

    ಹೆಚ್ಚು ಶಕ್ತಿಯುತ ಡೀಸೆಲ್‌ ಎಂಜಿನ್‌ ನಲ್ಲಿ 4-ವೀಲ್-ಡ್ರೈವ್‌ (4WD) ಡ್ರೈವ್‌ ಟ್ರೇನ್‌ ಆಯ್ಕೆಯನ್ನು ಸಹ ನೀಡಲಾಗಿದೆ.

    ಬೆಲೆ ಮತ್ತು ಪ್ರತಿಸ್ಪರ್ಧಿಗಳು

     ಮಹೀಂದ್ರಾ ಸ್ಕೋರ್ಪಿಯೊ N ವಾಹನವು ರೂ. 13.85 ಲಕ್ಷದಿಂದ ರೂ. 24.54 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯವಿದ್ದು,  Z8 ವೇರಿಯಂಟ್‌ ಗಳ ಬೆಲೆಯು ರೂ. 17.09 ಲಕ್ಷದಿಂದ ಪ್ರಾರಂಭಗೊಳ್ಳುತ್ತದೆ. ಇದು ಟಾಟಾ ಹ್ಯಾರಿಯರ್, ಹ್ಯುಂಡೈ ಅಲ್ಕಜಾರ್, ಟಾಟಾ ಸಫಾರಿ ಇತ್ಯಾದಿ ವಾಹನಗಳೊಂದಿಗೆ ಸ್ಪರ್ಧಿಸುತ್ತಿದ್ದು,  ಮಹೀಂದ್ರಾ XUV700 ವಾಹನಕ್ಕೆ ಬದಲಿ ಆಯ್ಕೆ ಎಂದು ಸಹ ಪರಿಗಣಿಸಲ್ಪಟ್ಟಿದೆ.

     ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ

     ನಿರಂತರ ಮಾಹಿತಿಗಾಗಿ ಕಾರ್‌ ದೇಖೊ ವಾಟ್ಸಪ್‌ ಚಾನಲ್‌ ಅನ್ನು ಅನುಸರಿಸಿ

     ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸ್ಕೋರ್ಪಿಯೊ N ಅಟೋಮ್ಯಾಟಿಕ್

    was this article helpful ?

    Write your Comment on Mahindra ಸ್ಕಾರ್ಪಿಯೊ ಎನ್

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience