ಮಾರುತಿ ಸುಜುಕಿ XL6 vs ಎರ್ಟಿಗಾ : ಚಿತ್ರಗಳಲ್ಲಿ

published on sep 04, 2019 05:52 pm by dhruv ಮಾರುತಿ ಎಕ್ಸ್‌ಎಲ್ 6 2019-2022 ಗೆ

  • 28 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಈ ಎರೆಡು  ಮಾರುತಿ ಸುಜುಕಿ ಯ MPV ಗಳು ಹೇಗೆ ನೋಡಲು ಭಿನ್ನವಾಗಿದೆ ಒಂದೇ ತರಹದ ತಂತ್ರಜ್ಞಾನ ಹೊಂದಿದ್ದರೂ ಸಹ? ನಾವು ತಿಳಿಯೋಣ.

Maruti Suzuki XL6 vs Ertiga: In Pics

ಮಾರುತಿ ಅವರ ನೆಕ್ಸಾ ಔಟ್ಲೆಟ್ ನಲ್ಲಿ ಹೊಸ ಸೇರ್ಪಡೆ ಆಗಿದೆ ಷೋರೂಮ್ ಗಳಲ್ಲಿ ಇಡಲಾಗಿದೆ XL6 ರೂಪದಲ್ಲಿ. ಈ MPV ನೆಕ್ಸಾ ದಲ್ಲಿ ಮೊದಲಬಾರಿಗೆ ತರಲಾಗಿದೆ ಮತ್ತು ಇದರಲ್ಲಿ ಎರ್ಟಿಗಾ ದ  ತುಣುಕುಗಳು ಕಾಣತೊಡಗಿದೆ, ಅದು ಮಾರುತಿ ಸುಜುಕಿ ಡೀಲೇರ್ಶಿಪ್ ಆವರಣದಲ್ಲಿ ದೊರೆಯಲಿದೆ, ಕಾರ್ ಮೇಕರ್  XL6 ಅನ್ನು ಒಂದು ಪ್ರೀಮಿಯಂ ಅವತರಣಿಕೆಯಾಗಿ ಹೊರತಂದಿದ್ದಾರೆ. ಇದರ ಅರ್ಥ ಬಹಳಷ್ಟು ಹೊರನೋಟದ ಬದಲಾವಣೆಗಳನ್ನು  ಕೊಡಲಾಗಿದೆ ಎರೆಡೂ MPV ಗಳು ವಿಭಿನ್ನವಾಗಿ ಕಾಣುವಂತೆ ಮಾಡಲು. ಆದರೆ ಅವೇ ಎಷ್ಟು ವಿಭಿನ್ನವಾಗಿವೆ? ನಾವು ನೋಡೋಣ.

ಮುಂಭಾಗ

ನೇರವಾಗಿ ನೋಡಿದಾಗ, XL6ಎರ್ಟಿಗಾ ಗಿಂತಲೂ ನಯವಾಗಿ ಕಾಣುತ್ತದೆ. ಹೆಡ್ ಲೈಟ್ ಗಳು ಮತ್ತು ಬ್ಲಾಕೆಡ್ ಔಟ್ ಫ್ರಂಟ್ ಗ್ರಿಲ್ ನಲ್ಲಿ ಹೆಚ್ಚು ಮೊನಚಾದ ಕೋಣೆಗಳು ಮತ್ತು ಸ್ಥಿರವಾದ ಡಿಸೈನ್ ಇದೆ ಎರ್ಟಿಗಾ ಜೊತೆ ಹೋಲಿಸಿದಾಗ. ಎರ್ಟಿಗಾ ಡಿಸೈನ್ ಕೋನಗಳಿಂದ ನೋಡಿದಾಗ ನೋಡಲು ಚೆನ್ನಾಗಿದೆ ಮತ್ತು ಹರಿಯುವಂತಹ ವಿನ್ಯಾಸ ಹೊಂದಿದೆ, ಅದರಲ್ಲೂ ಹೆಡ್ ಲೈಟ್ ಗಳು ಕ್ರೋಮ್ ಗ್ರಿಲ್ ಜೊತೆ ಸೇರುವಂತೆ ಮಾಡಿರುವುದು ಅದಕ್ಕೆ ಪೂರಕವಾಗಿದೆ.  ಬಾನೆಟ್, ಬಂಪರ್, ಮತ್ತು ಮುಂಭಾಗದ ಇತರ ತುಣುಕುಗಳನ್ನು ಸಹ XL6, ನಲ್ಲಿ ಮತ್ತೆ ಕೆಲಸ ಮಾಡಲಾಗಿದೆ, ಹಾಗಾಗಿ ಎರ್ಟಿಗಾ ಗಿಂತಲೂ ಭಿನ್ನವಾಗಿ ಕಾಣುತ್ತದೆ. XL6 ಅಳತೆಯಲ್ಲಿ ಎರ್ಟಿಗಾ ಗಿಂತಲೂ ಅಗಲವಾಗಿದೆ, ಆದರೆ ಕೇವಲ  10mmಅಷ್ಟು. ಅದು ಏಕೆಂದರೆ, ಹೆಚ್ಚಿನ ಕ್ಲಾಡಿಂಗ್ ಅನ್ನು XL6 ಬದಿಗಳಲ್ಲಿ ಕೊಡಲಾಗಿದೆ.

ಹೆಡ್ ಲೈಟ್ 

 XL6  ನಲ್ಲಿ ಹೊಸ  ಮತ್ತು  ಆಧುನಿಕ LED ಒಂದಿಗೆ ಬರುತ್ತದೆ,  ಸಂನ್ಯವಾದ ಹ್ಯಾಲೊಜೆನ್ ಪ್ರೊಜೆಕ್ಟರ್ ಸೆಟ್ ಅಪ್ ಇರುವ ಎರ್ಟಿಗಾ ಗೆ ಹೋಲಿಸಿದಾಗ.  ಹೆಡ್ ಲೈಟ್ ಗಾಲ ಬೇಸ್ ಲೇಔಟ್ ಎರೆಡರಲ್ಲೂ ಒಂದೇ ತರಹ ಇದ್ದರೂ   XL6 ಸ್ವಲ್ಪ ಹೆಚ್ಚು ಆಕರ್ಷಕವಾಗಿ  ಕಾಣುತ್ತದೆ, ಅದರ ಸಹೋದರ ಮಾಡೆಲ್ ಗೆ ಹೋಲಿಸಿದರೆ. XL6 ನಲ್ಲಿ LED ಫಾಗ್ ಲ್ಯಾಂಪ್ ಗಳು, ಮತ್ತು DRL ಗಳು ಕೊಡಲಾಗಿದೆ, ಎರ್ಟಿಗಾ ದಲ್ಲಿ ಸಾಂಪ್ರದಾಯಿಕ ಫಾಗ್ ಲ್ಯಾಂಪ್ ಕೊಡಲಾಗಿದೆ DRL ಕೊಡಲಾಗಿಲ್ಲ. 

ಡ್ಯಾಶ್ ಬೋರ್ಡ್ ಲೇಔಟ್ 

ಈ ವಿಚಾರದಲ್ಲಿ ಈ ಎರೆಡು MPV ಗಳ ಹೋಲಿಕೆ ವಿಲಕ್ಷಣವಾಗಿದೆ ಎನಿಸುತ್ತದೆ. ಕೇವಲ ಭಿನ್ನತೆ ಎಂದರೆ ಎರ್ಟಿಗಾ ಕ್ಯಾಬಿನ್ ನಲ್ಲಿ ಬಿಜ್ ಕೊಡಲಾಗಿದೆ ಆದರೆ XL6  ನಲ್ಲಿ ಪೂರ್ಣ ಕಪ್ಪು ಕ್ಯಾಬಿನ್ ಕೊಡಲಾಗಿದೆ, ಹಾಗಾಗಿ ಹೆಚ್ಚು ಸ್ಪರ್ಧಾತ್ಮಕವಾಗಿ ಕಾಣುತ್ತದೆ. ಅದರ ಹೊರತಾಗಿ, ಸ್ಟಿಯರಿಂಗ್ ವೀಲ್, ಡ್ಯಾಶ್ ಬೋರ್ಡ್, ಟಚ್ ಸ್ಕ್ರೀನ್ ಮತ್ತು ಕ್ಲೈಮೇಟ್ ಕಂಟ್ರೋಲ್ ಗಳು ಈ ಎರೆಡು MPV ಗಳಲ್ಲಿ ಒಂದೇ ತರಹ ಇದೆ. 

 ಇನ್ಸ್ಟ್ರುಮೆಂಟ್ ಕ್ಲಸ್ಟರ್ 

ಎರೆಡೂ  MPV ಗಳಲ್ಲಿ ಒಂದೇ ತರಹದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೊಡಲಾಗಿದೆ , ಒಂದು ಫೇತ್ತ್ತುಎ ಅವುಗಳನ್ನು ಬಿನ್ನವಾಗಿರುವಂತೆ ಮಾಡುತ್ತದೆ. XL6 ನಲ್ಲಿ ಕ್ಲಸ್ಟರ್ ಮೇಲೆ ಸೂಕ್ಷ್ಮ ಬೆಳಕಿನ ಗೆರೆ ಇರುತ್ತದೆ ಅದರ ಬೆಳಕು ನೀಲಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ಬದಲಾಗುತ್ತಿರುತ್ತದೆ. ಗ್ರೀನ್ ಬಣ್ಣ ಸೂಚಿಸುವಂತೆ  XL6  ಅನ್ನು ನೀವು ಹೆಚ್ಚು ಮೈಲೇಜ್ ಬರುವ ಹಾಗೆ ಡ್ರೈವ್ ಮಾಡುತ್ತಿದ್ದೀರಿ ಎಂದು, ಬಿಳಿ ಬಣ್ಣ ಅದಕ್ಕೆ ವಿರುದ್ಧವಾದ ಸೂಚನೆ ಕೊಡುತ್ತದೆ . ನೀಲಿ ಬಣ್ಣ  ಮೈಲೇಜ್ ಹಾಗು ಹೆಚ್ಚು ಪವರ್ ಮಧ್ಯದಲ್ಲಿನ ಡ್ರೈವ್ ಸೂಚಿಸುತ್ತದೆ.

ಸೈಡ್ ಪ್ರೊಫೈಲ್ 

ಎರೆಡೂ MPV ಗಳು ಸೈಡ್ ಪ್ರೊಫೈಲ್ ನಲ್ಲಿ ಸ್ವಲ್ಪ ಭಿನ್ನವಾಗಿದೆ. ಎರೆಡೂ MPV ಗಳ ಮೊದಾಲ ಅರ್ಧ ನೋಡಿದಾಗ , XL6 ನಲ್ಲಿ ಹೆಚ್ಚು ಆಧುನಿಕ ಶೈಲಿಯ ಮುಂಭಾಗ ಇದೆ, ಹಾಗಾಗಿ SUV ತರಹ ಕಾಣಿಸುತ್ತದೆ. ಎರ್ಟಿಗಾ ನಲ್ಲಿ ಹೆಚ್ಚು ಇಳಿಜಾರಾಗಿರುವ ಬಾನೆಟ್ ಇದೆ ಮತ್ತು ಆ ಶೈಲಿ ಹಿಂಬದಿ ವರೆಗೂ ಹರಡಿದೆ, ಹಾಗಾಗಿ ಕಾರ್ ಗೆ ವಿಭಿನ್ನವಾದ MPV ನೋಟ ಕೊಡುತ್ತದೆ. XL6 ಅಳತೆಯಲ್ಲಿ ಎರ್ಟಿಗಾ ಗಿಂತಲೂ 50mm ಉದ್ದ ಇದೆ, ಆದರೆ ಅದು ಮತ್ತೆ ಡಿಸೈನ್ ಮಾಡಲ್ಪಟ್ಟ ಈ MPV  ಯ ಮುಂಬದಿಯಿಂದ. ಹಾಗು, XL6 iಯು 10mm ಹೆಚ್ಚು ಎತ್ತರ ಇದೆ ಅದಕ್ಕೆ ಹೆಚ್ಚಿನ ರೂಫ್ ರೈಲ್ ಕಾರಣವಾಗಿದೆ. ವೀಲ್ ಬೇಸ್ ಎರೆಡರಲ್ಲೂ ಒಂದೇ ಸಮನಾಗಿದೆ. 

ಎರೆಡನೆ  ಸಾಲು 

ಈ ವಿಚಾರ ಎರೆಡೂ  ಹೆಚ್ಚು ಸಂನಂತೆ ಇರುವ ಈ MPV ಗಳನ್ನು  ಬಿನ್ನವಾಗಿರುವಂತೆ ಮಾಡುತ್ತದೆ. XL6  ಎರೆಡನೆ ಸಾಲು ಎರೆಡು ಕ್ಯಾಪ್ಟನ್ ಸೀಟ್ ಗಳೊಂದಿಗೆ ಬರುತ್ತದೆ ಎರ್ಟಿಗಾ ದಲ್ಲಿ ಬೆಂಚ್ ತರಹದ ಸೀಟ್ ಕೊಡಲಾಗಿದೆ, ಅದರಲ್ಲಿ ಮೂರು ಮಂದಿ ಕುಳಿತುಕೊಳ್ಳಬಹುದು. 

ಎರೆಡನೆ ಸಾಲಿನ AC

ಎರೆಡೂ MPV ಗಳು ಬ್ಲೌರ್ ಕಂಟ್ರೋಲ್ ಯೂನಿಟ್ ಪಡೆಯುತ್ತದೆ ಎರೆಡನೆ ಸಾಲಿನಲ್ಲಿ , ಅದು ಎರೆಡರಲ್ಲೂ ಒಂದೇ ರೀತಿ ಇದೆ. ಗಮನಾರ್ಹ ವಿಷಯವೆಂದರೆ ಪೂರ್ಣ ಕಪ್ಪು ಕ್ಯಾಬಿನ್ ಇದ್ದರು ಸಹ XL6 ನಲ್ಲಿ ಗ್ರೆ ಬಣ್ಣದ ರೂಫ್ ಇದೆ, ಅದು ಬಿಜ್ ಬಣ್ಣದ ರೂಫ್ ಇರುವ ಎರ್ಟಿಗಾ ಗಿಂತ ಭಿನ್ನವಾಗಿದೆ.

ಬೂಟ್ ಸ್ಪೇಸ್ 

ಎರಡೂ , XL6 ಹಾಗು ಎರ್ಟಿಗಾ ಗಳಲ್ಲಿ ಬೊಂದೇ ಸಮನಾದ ಬೂಟ್ ಸ್ಪೇಸ್ (209 ಲೀಟರ್ ) ಇದೆ ಎಲ್ಲ ಸೀಟ್ ತೆರೆದಿರುವಾಗ. ಮೂರನೆ ಸಾಲನ್ನು ಪೂರ್ಣವಾಗಿ ಮಡಚಿದಾಗ ಹೆಚ್ಚು ಲಗೇಜ್ ಇಡಲು ಅನುಕೂಲವಾಗುತ್ತದೆ. 

ಟೈಲ್ ಲ್ಯಾಂಪ್ 

ಎರೆಡರಲ್ಲಿನ ಹೆಡ್ ಲ್ಯಾಂಪ್ ಗಳು ಭಿನ್ನವಾಗಿದ್ದರೂ, XL6 ಹಾಗು ಎರ್ಟಿಗಾ ದಲ್ಲಿನ ಟೈಲ್ ಲ್ಯಾಂಪ್ ಗಳು ಒಂದೇ ತರಹ ಇದೆ. XL6 ನಲ್ಲಿ LED ಇನ್ಸರ್ಟ್ ಗಳನ್ನು ಹೆಚ್ಚಾಗಿ ಕೊಡಲಾಗಿದೆ.

 ಹಿಂಬದಿ 

ಹಿಂಬದಿಯಿಂದ, ಎರೆಡೂ MPV ಗಳು ಒಂದೇ ತರಹ ಇದೆ. ಕೇವಲ ಭಿನ್ನತೆ ಎಂದರೆ XL6  ನಲ್ಲಿನ ರೇರ್ ವಿಂಡ್ ಶೀಲ್ಡ್ ಹಾಗು ಕ್ರೋಮ್ ಸ್ಟ್ರಿಪ್ ಮದ್ಯ ಇರುವ ಬ್ಲಾಕ್ ಪ್ಯಾನೆಲ್ ಒದ್ದು ಅದು ಎರೆಡೂ ಟೈಲ್ ಲ್ಯಾಂಪ್ ಗಳನ್ನು ಕೂಡುತ್ತದೆ. ಹಾಗು, ಮತ್ತೆ ಡಿಸೈನ್ ಮಾಡಲಾದ XL6 ನ ಬಂಪರ್ ಹೆಚ್ಚು ಸ್ಪರ್ಧಾತ್ಮಕ ನಿಲುವು ಕೊಡುತ್ತದೆ. 

 XL6 ಹಾಗು ಎರ್ಟಿಗಾ ಮದ್ಯ ಗೊಂದಲ ಉಂಟಾಗಿದೆಯೇ? ನಮ್ಮ ಈ ಎರೆಡರ ಹೋಲಿಕೆಯನ್ನು  ನೋಡಿರಿ ಇವೆರಡರಲ್ಲಿ ಯಾವುದು ಉತ್ತಮ  ಕೊಳ್ಳುವಿಕೆ ಎಂದು ತಿಳಿಯಲು, ಇಲ್ಲಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಎಕ್ಸ್‌ಎಲ್ 6 2019-2022

Read Full News

trendingಎಮ್‌ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience