• English
  • Login / Register

ಭಾರತಕ್ಕೆ ಮತ್ತೆ ಬರುತ್ತಿದೆ ಮರ್ಸಿಡಿಸ್-AMG SL 55

ಮರ್ಸಿಡಿಸ್ amg sl ಗಾಗಿ tarun ಮೂಲಕ ಜೂನ್ 23, 2023 02:33 pm ರಂದು ಪ್ರಕಟಿಸಲಾಗಿದೆ

  • 17 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಪ್ರಸಿದ್ಧ SL ನಾಮಫಲಕವು ಕೆಲವು ಟಾಪ್ ಡೌನ್ ಮಾನಿಟರಿಂಗ್‌ನ ಅದರಲ್ಲೂ ಪರ್ಫಾರ್ಮೆನ್ಸ್-ಸ್ಪೆಕ್ AMG ಅವತಾರದಲ್ಲಿ ಮತ್ತೆ ಸ್ಟೈಲಿಶ್ ಆಗಿ ಬಂದಿದೆ

Mercedes-AMG SL 55 Makes A Comeback In India

ಮರ್ಸಿಡಿಸ್-AMG SL 55 ರೋಡ್‍ಸ್ಟರ್ ಅನ್ನು ರೂ 2.35 ಕೋಟಿ ಬೆಲೆಗೆ (ಎಕ್ಸ್-ಶೋರೂಂ ಪ್ಯಾನ್ ಇಂಡಿಯಾ) ಬಿಡುಗಡೆಗೊಳಿಸಲಾಗಿದೆ. ಪ್ರಸಿದ್ಧ SL ನಾಮಫಲಕದ ಈ ಕಾರು 2012ರ ತನಕ ಮಾರಾಟದಲ್ಲಿತ್ತು, ಇದರ ನಂತರ ಆರನೇ ಪೀಳಿಗೆ ಮಾಡೆಲ್ ಭಾರತಕ್ಕೆ ಬರಲಿಲ್ಲ. ಈ ಕಾರುತಯಾರಕ ಕಂಪನಿಯು ಭಾರತದಲ್ಲಿ 2-ಡೋರ್ SL ಕ್ಯಾಬ್ರಿಯೋಲೆಟ್‌ಗಾಗಿ ಸುಮಾರು 11 ವರ್ಷಗಳ ನಂತರ ತನ್ನ ಆರ್ಡರ್ ಬುಕ್‌ಗಳನ್ನು ಕೂಡಾ ತೆರೆದಿದೆ.

 

ಮರ್ಸಿಡಿಸ್‌ನ ಕೇವಲ 2-ಡೋರ್ ಕ್ಯಾಬ್ರಿಯೋಲೆಟ್

Mercedes-AMG SL 55 Makes A Comeback In India

 E-ಕ್ಲಾಸ್ ಕ್ಯಾಬ್ರಿಯೋಲೆಟ್ ನಂತರ ಈ AMG SL 55 ರೋಡ್‌ಸ್ಟರ್, ಆ್ಯಫಲ್ಟರ್‌ಬಾಕ್‌ ಭಾರತಕ್ಕೆ ನೀಡಿದ ಎರಡನೇ ಪರಿವರ್ತಿತ ಕಾರು ಆಗಿದೆ. ಇತ್ತೀಚಿನ SL 55 ಮರ್ಸಿಡಿಸ್‌ನ ಪ್ರಸ್ತುತ ವಿನ್ಯಾಸಕ್ಕೆ ಅನುಗುಣವಾಗಿ ನಯವಾದ ಮತ್ತು ವಕ್ರರೇಖೆಗಳನ್ನು ಹೊಂದಿದೆ. ಮುಂಭಾಗದಲ್ಲಿ ಚೂಪಾದ LED ಟೇಲ್‌ಲೈಟ್‌ಗಳೊಂದಿಗೆ ಸ್ಲಾಟೆಡ್ AMG-ಎಕ್ಸ್‌ಕ್ಲೂಸಿವ್ ಗ್ರಿಲ್ ಅನ್ನು ಪಡೆದಿದ್ದು, ಇದಕ್ಕೆ ‘ಆಕರ್ಷಕ‘ ನೋಟವನ್ನು ನೀಡುತ್ತದೆ ಮತ್ತು ತನ್ನ ಕಾರ್ಯಕ್ಷಮತೆಯ ಉದ್ದೇಶವನ್ನು ತೋರಿಸುತ್ತದೆ.

ಈ ರೋಡ್‌ಸ್ಟರ್ ತನ್ನ ಉತ್ಕೃಷ್ಟ-ಕಾರ್ಯಕ್ಷಮತೆಯ  ಟೈರ್‌ಗಳೊಂದಿಗೆ 21-ಇಂಚು AMG-ಸ್ಪೆಕ್ ಅಲಾಯ್ ವ್ಹೀಲ್‌ಗಳ ಮೇಲೆ ಓಡುತ್ತದೆ. ಇದು ಸಾಫ್ಟ್-ಟಾಪ್ ಅವತಾರ್‌ನಲ್ಲಿ ಲಭ್ಯವಿದ್ದು, ಇತರ ಕ್ಯಾಬ್ರಿಯೋಲೆಟ್‌ಗಳಂತೆ, ಇದನ್ನು ಕೇವಲ 15 ಸೆಕೆಂಡುಗಳಲ್ಲಿ 60kmph ವೇಗ ಪಡೆದುಕೊಳ್ಳುವಂತೆ ವಿದ್ಯುತ್‌ಚಾಲಿತಗೊಳಿಸಬಹುದು. ಮುಂಭಾಗವು ಉದ್ದನೆಯ ಪ್ರೊಫೈಲ್ ಹೊಂದಿದ್ದರೂ, ಹಿಂಭಾಗವು ಮೋಟಾಗಿದೆ. ಸ್ಲೀಕ್ ಟೇಲ್ ಲ್ಯಾಂಪ್ ಡಿಸೈನ್ ಮತ್ತು ಕ್ವಾಡ್ ಎಕ್ಸಾಸ್ಟ್‌ಗಳು ಅದಕ್ಕೆ ತೀಕ್ಷ್ಣ ನೋಟವನ್ನು ನೀಡುತ್ತದೆ.

ಹೈಟೆಕ್ ಕ್ಯಾಬಿನ್

Mercedes-AMG SL 55 Makes A Comeback In India

ಇತರ ಎಲ್ಲಾ ಮರ್ಸಿಡಿಸ್-AMG ಆಫರಿಂಗ್‌ನಂತೆಯೇ, ಈ SL 55 ಒಂದು ಸ್ಪೋರ್ಟಿ ಸ್ಪರ್ಶದೊಂದಿಗೆ ವೈಭವದ ನೋಟವನ್ನೂ ಹೊಂದಿದೆ.  ಇದು ಚಂಕಿ 3-ಸ್ಪೋಕ್ AMG ಸ್ಟೀರಿಂಗ್ ವ್ಹೀಲ್ ಮತ್ತು ಹೀಟಿಂಗ್ ಕಾರ್ಯ, ಸ್ಪೋರ್ಟಿ ಪೆಡಲ್‌ಗಳು, ಟರ್ಬೈನ್-ಪ್ರೇರಿತ AC ವೆಂಟ್‌ಗಳು, ಸೆಂಟರ್ ಕನ್ಸೋಲ್‌ನಲ್ಲಿ ಕಾರ್ಬನ್ ಫೈಬರ್ ಅಳವಡಿಕೆಗಳು ಮತ್ತು ಐಚ್ಛಿಕ ನಪ್ಪಾ ಲೆದರ್ ಸೀಟ್ ಅಪ್‌ಹೋಲ್ಸ್‌ಟ್ರಿ ಅನ್ನು ಹೊಂದಿದೆ. ಇಂತಹ ವಿಶಿಷ್ಟ ಐಷಾರಾಮಿ ಸ್ಪೋರ್ಟ್ಸ್ ಕೂಪ್ಸ್ ಆಗಿರುವ SL, 2+2 ಸೀಟಿಂಗ್ ಕಾನ್ಫಿಗರೇಷನ್ ಅನ್ನೂ ಹೊಂದಿದೆ.

 ವೈಶಿಷ್ಟ್ಯಗಳಿಗೆ ಕೊರತೆ ಇಲ್ಲ

Mercedes-AMG SL 55 Makes A Comeback In India

ಈ ವೈಭವಯುತ SL 55 ರೋಡ್‌ಸ್ಟರ್, 12.3 ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಹೀಟಡ್ ಮತ್ತು ವಾತಾಯನದ ಹಾಗೂ ಮಸಾಜ್ ಕಾರ್ಯವನ್ನು ಹೊಂದಿದ ಪವರ್‌ಯುಕ್ತ ಮುಂಭಾಗದ ಸೀಟುಗಳು, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು 64-ಬಣ್ಣದ ಆ್ಯಂಬಿಯೆಂಟ್ ಲೈಟಿಂಗ್ ಅನ್ನು ಪಡೆದಿದೆ. ಮಧ್ಯಭಾಗದಲ್ಲಿ, ಪೋರ್‌ಟ್ರೈಟ್ ಶೈಲಿಯ 11.9 ಇಂಚು ಟಚ್‌ಸ್ಕ್ರೀನ್ MBUX ಚಾಲಿತ ಇನ್ಫೋಟೇನ್‌ಮೆಂಟ್, ಇದರೊಂದಿಗೆ 1220W 17-ಸ್ಪೀಕರ್ ಬರ್ಮ್‌ಸ್ಟರ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ಪಡೆದಿದೆ. ಸುರಕ್ಷತಾ ಕಾರ್ಯಗಳನ್ನು ಬ್ಲೈಂಡ್ ಸ್ಪಾಟ್ ಅಸಿಸ್ಟ್, ಸರೌಂಡ್ ವ್ಯೂ ಸಿಸ್ಟಮ್, ಪಾರ್ಕಿಂಗ್ ಅಸಿಸ್ಟ್, ಎಂಟು ಏರ್‌ಬ್ಯಾಗ್‌ಗಳು, ESP ಮತ್ತು ಐಚ್ಛಿಕ ರಡಾರ್-ಆಧಾರಿತ ADAS ನಿರ್ವಹಿಸುತ್ತವೆ. ಅಲ್ಲದೇ ಬಳಸಬಹುದಾದ ಬೂಟ್ ಮತ್ತು 240 ಸ್ಟೋರೇಜ್ ಅನ್ನೂ ಹೊಂದಿದ್ದು, ಇದು ಸಾಂಪ್ರದಾಯಿಕ ಕಾರಿನಲ್ಲಿ ಇರುವುದಿಲ್ಲ, ಕೆಲವು ಟ್ರಾವೆಲ್ ಬ್ಯಾಗ್‌ಗಳು ಅಲ್ಲದೇ ಗಾಲ್ಫ್ ಬ್ಯಾಗ್ ಕೂಡಾ ಇದರಲ್ಲಿ ಹಿಡಿಯುತ್ತದೆ. 

 

ಎಂಜಿನ್ ಹೇಗಿದೆ?

Mercedes-AMG SL 55 Makes A Comeback In India

 ಮರ್ಸಿಡಿಸ್-AMG SL 55 ತನ್ನ ಬ್ರ್ಯಾಂಡ್ ಸಿಗ್ನೇಚರ್ ಆಗಿರುವ, ಕೈಯಿಂದ ನಿರ್ಮಿಸಲಾದ 4-ಲೀಟರ್ ಟ್ವಿನ್ ಟರ್ಬೋ V8 ಇಂಜಿನ್‌ನಿಂದ ಚಾಲಿತವಾಗಿದೆ. ಈ ಇಂಜಿನ್ 476PS ಮತ್ತು 700Nm ಅನ್ನು ಉತ್ಪಾದಿಸುತ್ತದೆ ಮತ್ತು 3.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100kmphಗೆ ತಲುಪುವ ಸಾಮರ್ಥ್ಯ ಹೊಂದಿದೆ. ಟ್ರಾನ್ಸ್‌ಮಿಷನ್ ಕಾರ್ಯಗಳನ್ನು 9-ಸ್ಪೀಡ್ MCT ಆಟೋಮ್ಯಾಟಿಕ್ ಯೂನಿಟ್ ನಿರ್ವಹಿಸುತ್ತದೆ. 

 ಹಿಂಭಾಗದ ವ್ಹೀಲ್ ಸ್ಟೀರಿಂಗ್ ಮತ್ತು ಹಿಂಭಾಗದ ಲಿಮಿಟಡ್ ಸ್ಲಿಪ್ ಡಿಫರೆನ್ಷಿಯಲ್‌ನೊಂದಿಗೆ ಮರ್ಸಿಡಿಸ್ 4MATIC+ (AWD) ಡ್ರೈವ್‌ಟ್ರೇನ್ ಸ್ಟಾಂಡರ್ಡ್ ಆಗಿದ್ದು, ಇದು ಹೈ-ಸ್ಪೀಡ್ ಕಾರ್ನರಿಂಗ್‌ನಲ್ಲಿ ಸಾಕಷ್ಟು ಹಿಡಿತ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ. ಅಲ್ಲದೇ ಇದು ಆರಾಮದಾಯಕತೆಯಿಂದ ಕ್ರಿಯಾತ್ಮಕ ಡ್ರೈವಿಂಗ್ ಅನುಭವಗಳ ಆಯ್ಕೆಯನ್ನು ನೀಡಲು  ಕ್ರಿಯಾತ್ಮಕ ಸಾಮರ್ಥ್ಯಗಳ ಸಕ್ರಿಯ ಸಸ್ಪೆನ್ಷನ್ ಸಿಸ್ಟಮ್ ಅನ್ನೂ ಹೊಂದಿದೆ. ಮಾತ್ರವಲ್ಲ, ಭಾರತದಂತಹ ರಸ್ತೆಗಳಲ್ಲಿ, ಸೂಕ್ತವಲ್ಲದ ಸ್ಥಳದಲ್ಲಿ ಚಾಲನೆ ಮಾಡಲು ಇದು ಕಾರಿನ ಕ್ಲಿಯರೆನ್ಸ್ ಅನ್ನು 30mmನಷ್ಟು ಹೆಚ್ಚಿಸುತ್ತದೆ.

 ಪೈಪೋಟಿ

ಈ ಬೆಲೆಗೆ AMG SL 55, ಇದೇ ರೀತಿಯ ಬೆಲೆಯನ್ನು ಹೊಂದಿರುವ ಪೋರ್ಶೆ 911 ಕ್ಯಾಬ್ರಿಯೋಲೆಟ್‌ನ ಆರಂಭಿಕ ವೇರಿಯೆಂಟ್‌ಗಳಿಗೆ ನೇರ ಪೈಪೋಟಿ ನೀಡುತ್ತದೆ. ಭಾರತದಲ್ಲಿ ಓಪನ್-ಟಾಪ್ ಮೋಟರಿಂಗ್ ಇನ್ನೂ ವ್ಯಾಪಕವಾಗಿ ಬಳಕೆಯಲ್ಲಿ ಇಲ್ಲದಿದ್ದರೂ, ಈ SL ಖಂಡಿತವಾಗಿಯೂ ದೇಶಕ್ಕಾಗಿ ಇನ್ನಷ್ಟು ಕೇಬ್ರಿಯೋಲೆಟ್‌ಗಳನ್ನು ಉತ್ತೇಜಿಸಲಿದೆ.

was this article helpful ?

Write your Comment on Mercedes-Benz AM ಜಿ SL

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending కన్వర్టిబుల్ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • M ಜಿ Majestor
    M ಜಿ Majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience