ಭಾರತದಲ್ಲಿ Mercedes-Benz EQB ಫೇಸ್‌ಲಿಫ್ಟ್ ಬಿಡುಗಡೆ, 70.90 ಲಕ್ಷ ರೂ ಬೆಲೆ ನಿಗದಿ, ಈಗ 5-ಸೀಟರ್ ಆಗಿಯೂ ಲಭ್ಯ
ಮರ್ಸಿಡಿಸ್ ಇಕ್ಯೂಬಿ 2022-2024 ಗಾಗಿ shreyash ಮೂಲಕ ಜುಲೈ 08, 2024 08:50 pm ರಂದು ಪ್ರಕಟಿಸಲಾಗಿದೆ
- 65 Views
- ಕಾಮೆಂಟ್ ಅನ್ನು ಬರೆಯಿರಿ
ಮರ್ಸಿಡೀಸ್-ಬೆಂಜ್ ಇಕ್ಯೂಬಿ ಫೇಸ್‌ಲಿಫ್ಟ್ ಈಗ ಇಕ್ಯೂಬಿ 350 4ಮ್ಯಾಟಿಕ್ ಎಎಮ್‌ಜಿ ಲೈನ್ (5-ಸೀಟರ್) ಮತ್ತು ಇಕ್ಯೂಬಿ 250+ (7-ಸೀಟರ್) ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.
- ಇದರ ಹೊಸ ಇಕ್ಯೂಬಿ 250+ ಆವೃತ್ತಿಯು 535 ಕಿಮೀ (WLTP ಕ್ಲೈಮ್ ಮಾಡಲಾದ) ವರೆಗಿನ ಹೆಚ್ಚಿನ ಚಾಲನಾ ರೇಂಜ್‌ಗಾಗಿ ದೊಡ್ಡ 70.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ.
- ಆಪ್‌ಡೇಟ್ ಮಾಡಲಾದ ಇಕ್ಯೂಬಿ 350 4ಮ್ಯಾಟಿಕ್ (5-ಸೀಟರ್) ಅದೇ 66.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಮುಂದುವರಿಯುತ್ತದೆ.
- ಇಕ್ಯೂಬಿಯ 5-ಸೀಟರ್‌ಗಳ ಆವೃತ್ತಿಯು ಎಎಮ್‌ಜಿ ಲೈನ್ ಟ್ರಿಮ್‌ನಲ್ಲಿ ಒಳಗೆ ಮತ್ತು ಹೊರಗೆ ಸ್ಪೋರ್ಟಿಯರ್ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ.
- ಫೀಚರ್‌ನ ಆಪ್‌ಡೇಟ್‌ಗಳು 710W 12-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್, ಮತ್ತು ಹೆಡ್ಸ್ ಅಪ್ ಡಿಸ್‌ಪ್ಲೇ ಸೇರಿವೆ.
- ಇಕ್ಯೂಬಿ ಈಗ ಹೆಚ್ಚು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.
Mercedes-Benz EQB 2022ರ ಡಿಸೆಂಬರ್ ನಿಂದ ಭಾರತೀಯ ಮಾರುಕಟ್ಟೆಯಲ್ಲಿದೆ ಮತ್ತು ಇತ್ತೀಚೆಗೆ ಮಿಡ್‌ಲೈಫ್ ಅಪ್‌ಡೇಟ್‌ಗೆ ಒಳಗಾಗಿದೆ. ಮರ್ಸಿಡಿಸ್ ಈಗ ಇಕ್ಯೂಬಿ ಎಲೆಕ್ಟ್ರಿಕ್ ಎಸ್‌ಯುವಿಯನ್ನು 5-ಸೀಟರ್ ಆಯ್ಕೆಯಲ್ಲಿ ನೀಡುತ್ತಿದೆ, ಇದು ಎಎಮ್‌ಜಿ ಲೈನ್ ವಿನ್ಯಾಸ ಅಂಶಗಳನ್ನು ಒಳಗೆ ಮತ್ತು ಹೊರಗೆ ಪಡೆಯುತ್ತದೆ. ಮತ್ತೊಂದೆಡೆ ಇಕ್ಯೂಬಿಯ 7-ಸೀಟರ್‌ಗಳ ಆವೃತ್ತಿಯು ಈಗ ಹೆಚ್ಚಿನ ಚಾಲನಾ ರೇಂಜ್‌ಗಾಗಿ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ನೀಡುತ್ತದೆ. 2024ರ ಮರ್ಸೀಡೀಸ್-ಬೆಂಜ್ ಇಕ್ಯೂಬಿನ ವೇರಿಯಂಟ್-ವಾರು ಬೆಲೆಗಳು ಇಲ್ಲಿವೆ.
ಮೊಡೆಲ್‌ಗಳು |
ಬೆಲೆಗಳು |
ಇಕ್ಯೂಬಿ 250+ 7-ಸೀಟರ್ |
70.90 ಲಕ್ಷ ರೂ. |
ಇಕ್ಯೂಬಿ 350 4ಮ್ಯಾಟಿಕ್ ಎಎಮ್‌ಜಿ ಲೈನ್ 5-ಸೀಟರ್ |
77.50 ಲಕ್ಷ ರೂ. |
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಆಗಿದೆ
ಇಕ್ಯೂಬಿಯ 5-ಸೀಟರ್‌ಗಳ ಎಎಮ್‌ಜಿ ಲೈನ್ ಆವೃತ್ತಿಯು 7-ಸೀಟರ್‌ಗಳ ಆವೃತ್ತಿಗಿಂತ 6.6 ಲಕ್ಷ ಹೆಚ್ಚು ದುಬಾರಿಯಾಗಿದೆ.
ಇಕ್ಯೂಬಿ 5-ಸೀಟರ್‌ನಲ್ಲಿ ಹೊಸತೇನಿದೆ?
ಇಕ್ಯೂಬಿ ಇಲೆಕ್ಟ್ರಿಕ್ ಎಸ್‌ಯುವಿಯ ಹೊಸದಾಗಿ ಪರಿಚಯಿಸಲಾದ ಇಕ್ಯೂಬಿ 350 4ಮ್ಯಾಟಿಕ್ ಎಎಮ್‌ಜಿ ಲೈನ್ 5-ಸೀಟರ್ ಆವೃತ್ತಿಯು ಒಳಗೆ ಮತ್ತು ಹೊರಗೆ ಸ್ಪೋರ್ಟಿಯರ್ ವಿನ್ಯಾಸ ಅಂಶಗಳನ್ನು ಒಳಗೊಂಡಿದೆ. ಹೊರಭಾಗದ ಹೈಲೈಟ್ಸ್‌ಗಳು ಸ್ಟಾರ್ ಪ್ಯಾಟರ್ನ್‌ನೊಂದಿಗೆ ನವೀಕರಿಸಿದ ಮುಚ್ಚಿದ ಕಪ್ಪು ಮುಂಭಾಗದ ಗ್ರಿಲ್ ಮತ್ತು ಪರಿಷ್ಕೃತ ಮುಂಭಾಗದ ಬಂಪರ್ ಅನ್ನು ಒಳಗೊಂಡಿವೆ. ಬದಿಯಲ್ಲಿ, ಇದು ಹೊಸ 19-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ. ಇಕ್ಯೂಬಿ 350 ಈಗ ಸ್ಪೋರ್ಟ್ಸ್ ಸ್ಟೀರಿಂಗ್ ವೀಲ್ ಮತ್ತು ಸ್ಪೋರ್ಟ್ಸ್ ಸೀಟ್‌ಗಳ ಜೊತೆಗೆ ಸಂಪೂರ್ಣ ಕಪ್ಪು ಇಂಟಿರೀಯರ್ ಅನ್ನು ಪಡೆಯುತ್ತದೆ.
ಫೀಚರ್ ಆಪ್‌ಡೇಟ್‌ಗಳು
2024ರ ಇಕ್ಯೂಬಿನಲ್ಲಿರುವ ವೈಶಿಷ್ಟ್ಯಗಳು ಇತ್ತೀಚಿನ ತಲೆಮಾರಿನ MBUX Gen 2 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ 10.25-ಇಂಚಿನ ಎರಡು ಡಿಸ್‌ಪ್ಲೇಗಳನ್ನು (ಚಾಲಕನ ಡಿಸ್‌ಪ್ಲೇಗಾಗಿ ಮತ್ತು ಇನ್ನೊಂದು ಇನ್ಫೋಟೈನ್‌ಮೆಂಟ್‌ಗಾಗಿ) ಒಳಗೊಂಡಿವೆ. ಫೀಚರ್‌ನ ಅಪ್‌ಡೇಟ್‌ಗಳು 710W 12-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಂ ಮತ್ತು ಹೆಡ್ಸ್ ಅಪ್ ಡಿಸ್‌ಪ್ಲೇ ಅನ್ನು ಸಹ ಒಳಗೊಂಡಿವೆ. ಇಕ್ಯೂಬಿ 350 ಈಗ ಡಿಸ್ಟ್ರೋನಿಕ್ ಆಕ್ಟಿವ್ ಡಿಸ್ಟೆನ್ಸ್ ಅಸಿಸ್ಟ್ ಮತ್ತು ಆಕ್ಟಿವ್ ಲೇನ್ ಕೀಪ್ ಅಸಿಸ್ಟ್‌ನಂತಹ ಹೆಚ್ಚು ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ವೈಶಿಷ್ಟ್ಯಗಳನ್ನು ಪಡೆಯುತ್ತದೆ.
ಇದನ್ನು ಸಹ ಓದಿ: ಬೆಂಝ್‌ನ ಕೈಗೆಟಕುವ ಬೆಲೆಯ ಲಕ್ಷುರಿ ಇವಿ Mercedes-Benz EQA ಬಿಡುಗಡೆ
ಬ್ಯಾಟರಿ ಪ್ಯಾಕ್ ಮತ್ತು ರೇಂಜ್
2024ರ ಇಕ್ಯೂಬಿ ಈಗ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ, ಮತ್ತು ಅವುಗಳ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:
ಮೊಡೆಲ್‌ಗಳು |
ಇಕ್ಯೂಬಿ 250+ |
ಇಕ್ಯೂಬಿ 350 4ಮ್ಯಾಟಿಕ್ |
ಬ್ಯಾಟರಿ ಪ್ಯಾಕ್ |
70.5 ಕಿ.ವ್ಯಾಟ್ |
66.5 ಕಿ.ವ್ಯಾಟ್ |
ಪವರ್ |
190 ಪಿಎಸ್ |
292 ಪಿಎಸ್ |
ಟಾರ್ಕ್ |
385 ಎನ್‌ಎಮ್ |
520 ಎನ್‌ಎಮ್ |
ರೇಂಜ್ (WLTP) |
535 ಕಿ.ಮೀ ವರೆಗೆ |
447 ಕಿ.ಮೀ.ವರೆಗೆ |
ಡ್ರೈವ್‌ನ ಪ್ರಕಾರ |
2-ವೀಲ್‌ಡ್ರೈವ್ (2WD) |
ಆಲ್ ವೀಲ್-ಡ್ರೈವ್ (AWD) |
ಇಕ್ಯೂಬಿಯ 7-ಸೀಟರ್‌ಗಳ ಆವೃತ್ತಿಯು ದೊಡ್ಡ 70.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು ಅದರ 5-ಸೀಟರ್‌ಗಳ ಆವೃತ್ತಿಗೆ ಹೋಲಿಸಿದರೆ 88 ಕಿಮೀ.ಯಷ್ಟು ಹೆಚ್ಚಿನ ಡ್ರೈವಿಂಗ್ ರೇಂಜ್ ಅನ್ನು ನೀಡುತ್ತದೆ.
ಪ್ರತಿಸ್ಪರ್ಧಿಗಳು
2024ರ ಮರ್ಸಿಡೀಸ್ ಬೆಂಜ್ ಇಕ್ಯೂಬಿಯನ್ನು ವೋಲ್ವೋ ಎಕ್ಸ್‌ಸಿ40 ರೀಚಾರ್ಜ್, ವೋಲ್ವೋ ಸಿ40 ರೀಚಾರ್ಜ್ ಮತ್ತು ಬಿಎಮ್‌ಡಬ್ಲ್ಯೂ ಐಎಕ್ಸ್1ಗೆ ಪ್ರೀಮಿಯಂ ಪರ್ಯಾಯವಾಗಿ ಪರಿಗಣಿಸಬಹುದು.
ಆಟೋಮೋಟಿವ್ ಪ್ರಪಂಚದಿಂದ ತ್ವರಿತ ಆಪ್‌ಡೇಟ್‌ಗಳನ್ನು ಬಯಸುವಿರಾ? ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.