Login or Register ಅತ್ಯುತ್ತಮ CarDekho experience ಗೆ
Login

ಸೆಪ್ಟೆಂಬರ್‌ 15ರಂದು ಭಾರತದ ರಸ್ತೆಗಿಳಿಯಲಿರುವ Mercedes-Benz EQE SUV

published on ಆಗಸ್ಟ್‌ 28, 2023 12:35 pm by ansh for ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಈ ಲಕ್ಷುರಿ ಎಲೆಕ್ಟ್ರಿಕ್‌ SUV ವಾಹನವು ರಿಯರ್‌ ವೀಲ್‌ ಮತ್ತು ಆಲ್‌ ವೀಲ್‌ ಟ್ರೈವ್‌ ಟ್ರೇನ್‌ ನೊಂದಿಗೆ 450km ತನಕದ ಶ್ರೇಣಿಯನ್ನು ಹೊಂದಿದೆ

  • ಇದು ಜಾಗತಿಕ ಮಾರುಕಟ್ಟೆಯಲ್ಲಿ ಮೂರು ವೇರಿಯೆಂಟ್‌ ಗಳನ್ನು ಹೊಂದಿದೆ: 350+, 350 4MATIC ಮತ್ತು 500 4MATIC.
  • 90.6kWh ಬ್ಯಾಟರಿ ಪ್ಯಾಕ್‌ ನೊಂದಿಗೆ ಮೂರು ಪವರ್‌ ಟ್ರೇನ್‌ ಆಯ್ಕೆಗಳನ್ನು ಹೊಂದಿದೆ.
  • ಇದರ ಸೊಗಸಾದ ಡ್ಯಾಶ್‌ ಬೋರ್ಡ್‌ ವಿನ್ಯಾಸಕ್ಕಾಗಿ ಐಚ್ಛಿಕ 56 ಇಂಚಿನ MBUX ಹೈಪರ್‌ ಸ್ಕ್ರೀನ್‌ ಜೊತೆಗೆ ಬರುತ್ತದೆ.
  • ಏರೋಡೈನಾಮಿಕ್‌ ದಕ್ಷತೆ ಮತ್ತು ಶ್ರೇಣಿಗಾಗಿ ಸಾಮಾನ್ಯ ಮರ್ಸಿಡಿಸ್‌ SUV ವಾಹನಗಳಿಗಿಂತಲೂ ನಯವಾದ ವಿನ್ಯಾಸವನ್ನು ಹೊಂದಿದೆ.
  • ಇದು ಸುಮಾರು ರೂ. 1 ಕೋಟಿಗಿಂತ (ಎಕ್ಸ್‌ - ಶೋರೂಂ) ಹೆಚ್ಚಿನ ಮೌಲ್ಯವನ್ನು ಹೊಂದಿರುವ ನಿರೀಕ್ಷೆ ಇದೆ.

ಮರ್ಸಿಡಿಸ್‌ ಬೆಂಜ್ ಇತ್ತೀಚೆಗಷ್ಟೇ ಭಾರತದಲ್ಲಿ ಮರ್ಸಿಡಿಸ್‌ ಬೆಂಜ್ EQE SUV ವಾಹನವನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಈ ಜರ್ಮನ್‌ ಸಂಸ್ಥೆಯು ಸೆಪ್ಟೆಂಬರ್‌ 15ರಂದು ಎಲೆಕ್ಟ್ರಿಕ್‌ ಲಕ್ಷುರಿ SUV ಕಾರನ್ನು ಅನಾವರಣಗೊಳಿಸಲಿದ್ದು, ತಕ್ಷಣವೇ ಇದು ಗ್ರಾಹಕರಿಗೆ ದೊರೆಯುವ ಸಾಧ್ಯತೆ ಇದೆ. EQE SUV ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ.

ವಿನ್ಯಾಸ

ಇದು ಸಾಂಪ್ರದಾಯಿಕ ಮರ್ಸಿಡಿಸ್-EQ‌ ನೋಟದೊಂದಿಗೆ ಬರಲಿದ್ದು,‌ ಜೊತೆಗೆ ಬೃಹತ್‌ ಕ್ಲೋಸ್ಡ್‌ ಗ್ರಿಲ್‌ ಮೇಲೆ ದೊಡ್ಡ ಮರ್ಸಿಡಿಸ್‌ ತ್ರೀ-ಪಾಯಿಂಟೆಡ್‌ ಸ್ಟಾರ್ ಇರಲಿದೆ. ಈ ಗ್ರಿಲ್‌, ಮೇಲ್ಗಡೆಗೆ ನಯಹೊಳಪಿನ LED DRL ಗಳನ್ನು ಹೊಂದಿರುವ ದೊಡ್ಡದಾದ ಹೆಡ್‌ ಲೈಟ್‌ ಗಳೊಂದಿಗೆ ಬರಲಿದೆ. ಫೇಶಿಯಾದ ಕೆಳಭಾಗವು ಅಂದವಾದ ಮತ್ತು ತೆಳ್ಳಗಿನ ಬಂಪರ್‌ ಗಾಗಿ ಕ್ಲೋಸ್ಡ್‌ ಆಫ್‌ ಏರ್‌ ಡ್ಯಾಮ್‌ ಗಳನ್ನು ಹೊಂದಿದೆ.

ಇನ್ನೊಂದೆಡೆ ಇದು 19ರಿಂದ 21 ಇಂಚಿನ ನಡುವಿನ ಸೊಗಸಾದ‌ ಅಲೋಯ್‌ ಗಳೊಂದಿಗೆ ರಸ್ತೆಗೆ ಇಳಿಯಲಿದೆ. ಇದು ಕನಿಷ್ಠ ಕ್ರೀಸಿಂಗ್‌ ಮತ್ತು ಇಳಿಜಾರಾದ ರೂಫ್‌ ಲೈನ್‌ ನೊಂದಿಗೆ ನಯವಾದ ಮತ್ತು ಸುಗಮವಾದ ಪ್ರೊಫೈಲ್‌ ಅನ್ನು ಹೊಂದಿದೆ. ಈ SUV ಯು ವಿಶೇಷ ನೋಟದೊಂದಿಗೆ ಗಮನ ಸೆಳೆಯುವುದಕ್ಕಾಗಿ, ಈ EQE ಯು ವೀಲ್‌ ಆರ್ಚ್‌ ಗಳು ಮತ್ತು ಬಾಗಿಲುಗಳ ಮೇಲೆ ಲೇಪನವನ್ನು ಹೊಂದಿದೆ.

ಇದರ ಹಿಂದಿನ ಪ್ರೊಫೈಲ್‌, ವಕ್ರವಾದ ನೋಟವನ್ನು ಹೊಂದಿದೆ. ಇಳಿಜಾರಾದ ರೂಫ್‌ ಲೈನ್‌ ರಿಯರ್‌ ಸ್ಪಾಯ್ಲರ್‌ ಜೊತೆಗೆ ಸಂಧಿಸುತ್ತದೆ ಹಾಗೂ ಇದರ ಕೆಳಗೆ ದೊಡ್ಡದಾದ ಸಂಪರ್ಕಿತ ಟೇಲ್‌ ಲ್ಯಾಂಪ್‌ ಅನ್ನು ನೀವು ಸುಲಭವಾಗಿ ಗಮನಿಸಬಹುದು. ಪಕ್ಕದಲ್ಲಿರುವ ಏರ್‌ ಡ್ಯಾಮ್‌ ಗಳನ್ನು ಹೊರತುಪಡಿಸಿ, ರಿಯರ್‌ ಪ್ರೊಫೈಲ್‌ ನಲ್ಲಿ ಮೊನಚಾದ ಕಟ್‌ ಗಳು ಹೊಂದಿಲ್ಲ. ಬದಲಾಗಿ ನೀವಿಲ್ಲಿ ದೊಡ್ಡದಾದ ರಿಯರ್‌ ಬಂಪರ್‌ ಅನ್ನು ಪಡೆಯಲಿದ್ದೀರಿ.

ಕ್ಯಾಬಿನ್

ಮರ್ಸಿಡಿಸ್‌ ಬೆಂಜ್ EQE SUV ವಾಹನವು ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳೊಂದಿಗೆ EQS ಸೆಡಾನ್‌ ಕಾರಿನ ಕ್ಯಾಬಿನ್‌ ಅನ್ನೇ ಹೊಂದಿದೆ. ಪ್ರಕಾಶಮಾನವಾಗಿ ಕಾಣಿಸುವ ಈ ಕ್ಯಾಬಿನ್‌ ನಲ್ಲಿ, ಮೂರು ಡಿಸ್ಪ್ಲೇಗಳನ್ನು ಹೊಂದಿರುವ ಬೃಹತ್‌ MBUX ಹೈಪರ್‌ ಸ್ಕ್ರೀನ್‌ ಅನ್ನು ನೀವು ಗಮನಿಸಬಹುದು. ಈ ಸ್ಕ್ರಿನ್‌, ಸೆಂಟರ್‌ ಕನ್ಸೋಲ್‌ ಜೊತೆಗೆ ಸಂಧಿಸುತ್ತದೆ. ಇಲ್ಲಿನ ವುಡನ್‌ ಫಿನಿಶ್‌, EQS ಗಿಂತಲೂ ಭಿನ್ನವಾದ ಮಾದರಿಯನ್ನು ಹೊಂದಿದೆ.

ಕ್ಯಾಬಿನ್‌ ಸುತ್ತಲಿನ ಆಂಬಿಯೆಂಟ್‌ ಲೈಟಿಂಗ್‌ ಜೊತೆಗೆ ಕಂದು ಉಪೋಲ್ಸ್ಟರಿಯೊಂದಿಗೆ ಇದು ಕಂಗೊಳಿಸಲಿದೆ ಎಂಬುದು ಇಲ್ಲಿಯತನಕ ಲಭ್ಯವಿರುವ ವಿವರಗಳಿಂದ ತಿಳಿದು ಬಂದಿದೆ. ಈ EQE ವಾಹನದ ಒಟ್ಟಾರೆ ಕ್ಯಾಬಿನ್‌ ವಿನ್ಯಾಸವು ಭವ್ಯವಾದ ಮತ್ತು ಮಿನಿಮಲಿಸ್ಟಿಕ್‌ ನೋಟವನ್ನು ಹೊಂದಿದೆ.

ಪವರ್‌ ಟ್ರೇನ್

ವಿವರಗಳು

EQE 350+

EQE 350 4MATIC

EQE 500 4MATIC

ಬ್ಯಾಟರಿ

90.6kWh

89kWh

90.6kWh

ಡ್ರೈವ್‌ ಟ್ರೇನ್

RWD

AWD

AWD

ಪವರ್

292PS

292PS

408PS

ಟಾರ್ಕ್

565Nm

765Nm

858Nm

ರೇಂಜ್‌ (ಕ್ಲೇಮು ಮಾಡಲಾದ)

450km

407km

433km

ಜಾಗತಿಕವಾಗಿ EQE ವಾಹನವು ಮೂರು ವೇರಿಯೆಂಟ್‌ ಗಳ ಜೊತೆ ಬರುತ್ತದೆ. ಪವರ್‌ ಟ್ರೇನ್‌ ವಿವರಗಳನ್ನು ಮೇಲಿನ ಕೋಷ್ಠಕದಲ್ಲಿ ತಿಳಿಸಲಾಗಿದೆ. ಈ ವಾಹನವು 450km ತನಕದ ಶ್ರೇಣಿಯನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಅಲ್ಲದೆ ಇದು ಎರಡು ಚಾರ್ಜಿಂಗ್‌ ಆಯ್ಕೆಗಳನ್ನು ಹೊಂದಿದೆ: 240V ವಾಲ್‌ ಬಾಕ್ಸ್‌ ಚಾರ್ಜರ್‌ - ಇದು 9.5 ಗಂಟೆಗಳಲ್ಲಿ 10 ರಿಂದ 100 ಶೇಕಡಾದಷ್ಟು ಚಾರ್ಜ್‌ ಮಾಡಬಲ್ಲದು, ಮತ್ತು 170kW DC ವೇಗದ ಚಾರ್ಜಿಂಗ್‌ ಆಯ್ಕೆಯು 32 ನಿಮಿಷಗಳಲ್ಲಿ 10 ರಿಂದ 80 ಶೇಕಡಾದಷ್ಟು ಚಾರ್ಜ್‌ ಮಾಡಬಲ್ಲದು.

ಇದನ್ನು ಸಹ ಓದಿರಿ: ಹೊಸ ಮರ್ಸಿಡಿಸ್‌ ಬೆಂಜ್ V-ಕ್ಲಾಸ್‌ ಕುರಿತು ನೀವು ತಿಳಿದಿರಬೇಕಾದ 5 ವಿಷಯಗಳು

ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು 90.6kWh ಬ್ಯಾಟರಿ ಪ್ಯಾಕ್‌ ಆಯ್ಕೆಯೊಂದಿಗೆ ಬರಲಿದ್ದು, ಇದರ ವಿವರಗಳನ್ನು ಸೆಪ್ಟೆಂಬರ್ 15‌ ರಂದು ಬಿಡುಗಡೆ ಮಾಡಲಾಗುತ್ತದೆ.

ಗುಣಲಕ್ಷಣಗಳು ಮತ್ತು ಸುರಕ್ಷತೆ

ಇದು ಐಚ್ಛಿಕ 56 ಇಂಚ್ MBUX‌ ಹೈಪರ್‌ ಸ್ಕ್ರೀನ್‌ ಜೊತೆಗೆ ಲಭ್ಯವಿದ್ದು, ಚಾಲಕನ ಡಿಜಿಟಲ್‌ ಡಿಸ್ಪ್ಲೇ, ಸೆಂಟರ್‌ ಇನ್ಫೋಟೈನ್‌ ಮೆಂಟ್‌ ಡಿಸ್ಪ್ಲೇ, ಮತ್ತು ಫ್ರಂಟ್‌ ಪ್ಯಾಸೆಂಜರ್‌ ಡಿಸ್ಪ್ಲೇ ಜೊತೆಗೆ ಬರಲಿದೆ. ಈ EQE ವಾಹನವು ಫೋರ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಇತರ ವೈಶಿಷ್ಟ್ಯಗಳಾದ ಪವರ್ಡ್‌ ಸೀಟುಗಳು, ಪ್ಯಾನರೋಮಿಕ್‌ ಸನ್‌ ರೂಫ್‌, ಡಾಲ್ಬಿ ಅಟೋಮ್ಸ್‌ ಜೊತೆಗೆ ಬರ್ಮಿಸ್ಟರ್‌ ಸೌಂಡ್‌ ಸಿಸ್ಟಂ ಮತ್ತು ಏರ್‌ ಪ್ಯೂರಿಫೈರ್‌ ಅನ್ನು ಹೊಂದಿದೆ.

ಇದನ್ನು ಸಹ ಓದಿರಿ: ರಸ್ತೆಗಿಳಿದ 2023 ಮರ್ಸಿಡಿಸ್‌ ಬೆಂಜ್ GLC - ನಿಮಗೆ ತಿಳಿದಿರಬೇಕಾದ 5 ವಿಷಯಗಳು

ಸುರಕ್ಷತೆಗಾಗಿ ಇದು ಅನೇಕ ಏರ್‌ ಬ್ಯಾಗುಗಳು, EBD ಜೊತೆಗೆ ABS ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಚಾಲಕನಿಗೆ ನೆರವು ಒದಗಿಸುವುದಕ್ಕಾಗಿ ಲೇನ್‌ ಕೀಪ್‌ ಅಸಿಸ್ಟ್‌, ಅಟೋನೊಮಸ್‌ ಎಮರ್ಜೆನ್ಸಿ ಬ್ರೇಕಿಂಗ್‌, ಬ್ಲೈಂಡ್‌ ಸ್ಪಾಟ್‌ ಮಾನಿಟರಿಂಗ್‌, ಮತ್ತು ಪಾರ್ಕಿಂಗ್‌ ಅಸಿಸ್ಟ್‌ ಇತ್ಯಾದಿ ಗುಣಲಕ್ಷಣಗಳು ಇರದಲ್ಲಿವೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಮರ್ಸಿಡಿಸ್‌ ಬೆಂಜ್ EQE SUV‌ ವಾಹನವು ರೂ. 1 ಕೋಟಿಗಿಂತಲೂ ಹೆಚ್ಚಿನ (ಎಕ್ಸ್-ಶೋರೂಂ) ಹೆಚ್ಚಿನ ಬೆಲೆಯನ್ನು ಹೊಂದಿರಲಿದ್ದು, ಬಿಡುಗಡೆಯಾದ ನಂತರ ಇದು ಆಡಿ Q8 e-Tron, BMW iX, and ಜಾಗ್ವರ್ I-ಪೇಸ್‌ ಇತ್ಯಾದಿ ವಾಹನಗಳಿಗೆ ಸ್ಪರ್ಧೆಯೊಡ್ಡುವ ನಿರೀಕ್ಷೆ ಇದೆ.

a
ಅವರಿಂದ ಪ್ರಕಟಿಸಲಾಗಿದೆ

ansh

  • 38 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮರ್ಸಿಡಿಸ್ EQE ಎಸ್‌ಯುವಿ

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ