• English
  • Login / Register

ಭಾರತದಲ್ಲಿ Mercedes-Benz GLE ಫೇಸ್‌ಲಿಫ್ಟ್ ಬಿಡುಗಡೆ, 96.40 ಲಕ್ಷ ರೂ.ನಿಂದ ಬೆಲೆ ಪ್ರಾರಂಭ

ಮರ್ಸಿಡಿಸ್ ಗ್ಲೆ ಗಾಗಿ shreyash ಮೂಲಕ ನವೆಂಬರ್ 02, 2023 10:23 pm ರಂದು ಪ್ರಕಟಿಸಲಾಗಿದೆ

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಜಾಗತಿಕ-ಆಧಾರಿತ ಮಾದರಿಯಲ್ಲಿ ಪ್ಲಗ್-ಇನ್ ಹೈಬ್ರಿಡ್ ಆಯ್ಕೆಗಳಿಗಿಂತ ಭಿನ್ನವಾಗಿ, ಇಂಡಿಯಾ-ಆಧಾರಿತ ಮರ್ಸಿಡಿಸ್ ಬೆಂಜ್ GLE ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಮಾತ್ರ ಪಡೆಯುತ್ತದೆ.

Mercedes-Benz GLE facelift

  • ಹೊಸ Mercedes-Benz GLE ಯ ಎಕ್ಸ್ ಶೋರೂಂ ಬೆಲೆ 96.40 ಲಕ್ಷ ರೂ.ನಿಂದ 1.15 ಕೋಟಿ ರೂ ವರೆಗೆ ಇರಲಿದೆ.
  • ಹೊಸ ಮರ್ಸಿಡೀಸ್‌ ಬೆಂಜ್‌ ಜಿಎಲ್‌ಇ ಫೇಸ್‌ಲಿಫ್ಟ್‌ನಲ್ಲಿನ ವಿನ್ಯಾಸ ಬದಲಾವಣೆಗಳು ಸೂಕ್ಷ್ಮವಾಗಿವೆ. 
  • ಒಳಗೆ ಗಮನಿಸುವಾಗ, ಫೇಸ್‌ಲಿಫ್ಟ್‌ GLE ಹೊಸ ಸ್ಟೀರಿಂಗ್ ಚಕ್ರವನ್ನು ಪಡೆಯುತ್ತದೆ ಮತ್ತು ಮರ್ಸಿಡಿಸ್‌ನ ಇತ್ತೀಚಿನ MBUX ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲು ಸ್ಕ್ರೀನ್‌ಗಳನ್ನು ಅಪ್‌ಡೇಟ್‌ ಮಾಡಲಾಗಿದೆ.
  • 1 ಪೆಟ್ರೋಲ್ ಮತ್ತು 2 ಡೀಸೆಲ್ ಎಂಜಿನ್ ಸೇರಿದಂತೆ 3 ಪವರ್ ಟ್ರೈನ್ ಆಯ್ಕೆಗಳೊಂದಿಗೆ ಬರುತ್ತದೆ.
  • ಲಕ್ಸುರಿಯಸ್‌ ಮತ್ತು ಸೌಕರ್ಯಭರಿತ ಕ್ಯಾಬಿನ್, ಪವರ್ಡ್‌ ಸೀಟ್‌ಗಳು, ಮಲ್ಟಿ-ಝೋನ್‌ ಕ್ಲೈಮೆಟ್‌ ಕಂಟ್ರೋಲ್‌ ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.

2023 ರ ಫೆಬ್ರವರಿಯಲ್ಲಿ ಜಾಗತಿಕ ಪ್ರವೇಶದ ನಂತರ ಇದೀಗ ಮರ್ಸೀಡೀಸ್‌-ಬೆಂಜ್‌ ಜಿಎಲ್‌ಇ ಫೇಸ್‌ಲಿಫ್ಟ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಭಾರತದಾದ್ಯಂತ ಇದರ ಎಕ್ಸ್ ಶೋರೂಂ ಬೆಲೆಗಳು ರೂ 96.40 ಲಕ್ಷದಿಂದ ಪ್ರಾರಂಭವಾಗುತ್ತವೆ. ಇದರ ಬಾಹ್ಯ ಮತ್ತು ಇಂಟಿರೀಯರ್‌ನಲ್ಲಿನ ಸೂಕ್ಷ್ಮ ಬದಲಾವಣೆಗಳ ಜೊತೆಗೆ, ಹೊಸ GLE ನವೀಕರಿಸಿದ ಪವರ್‌ಟ್ರೇನ್ ಆಯ್ಕೆಗಳನ್ನು ಸಹ ಒಳಗೊಂಡಿದೆ. ಹೊಸ Mercedes GLE ನ ಸಂಪೂರ್ಣ ಬೆಲೆ ಪಟ್ಟಿಯನ್ನು ಕೆಳಗೆ ವಿವರಿಸಲಾಗಿದೆ.

ಬೆಲೆಗಳು

ವೇರಿಯಂಟ್ 

ಬೆಲೆ

ಜಿಎಲ್‌ಇ 300 ಡಿ 4MATIC

96.40 ಲಕ್ಷ ರೂ

ಜಿಎಲ್‌ಇ 450 ಡಿ 4MATIC

1.13 ಕೋಟಿ ರೂ

ಜಿಎಲ್‌ಇ 450 4MATIC

1.15 ಕೋಟಿ ರೂ

ನಿರೀಕ್ಷೆಯಂತೆ, ಮರ್ಸಿಡಿಸ್ GLE ಫೇಸ್‌ಲಿಫ್ಟ್ ಮೊಡೆಲ್‌ ಇದರ ಹಿಂದಿನ ಆವೃತ್ತಿಗಿಂತ ಕೆಲವು ಲಕ್ಷಗಳಷ್ಟು ದುಬಾರಿಯಾಗಿದೆ. ಎಲ್ಲಾ 3 ವೇರಿಯೆಂಟ್‌ಗಳಿಗೆ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿದೆ ಮತ್ತು GLE 300 d ಮತ್ತು GLE 450 ಗಾಗಿ ಡೆಲಿವೆರಿಗಳು ನವೆಂಬರ್‌ನಿಂದಲೇ ಪ್ರಾರಂಭವಾಗುತ್ತವೆ. GLE 450 d ಗಾಗಿ ವಿತರಣೆಗಳು 2024ರ ಮೊದಲ ತ್ರೈಮಾಸಿಕದಿಂದ ಪ್ರಾರಂಭವಾಗುತ್ತವೆ.

ಹೊಸತೇನಿದೆ?

Mercedes-Benz GLE facelift front
Mercedes-Benz GLE facelift rear

 

ಆಪ್‌ಡೇಟ್‌ ಆಗಿರುವ GLE ಎಸ್‌ಯುವಿಯಲ್ಲಿನ ಬದಲಾವಣೆಗಳು ಸಾಕಷ್ಟು ಸೂಕ್ಷ್ಮವಾಗಿವೆ ಮತ್ತು ಇದು ತನ್ನ ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯಂತೆಯೇ ಅದೇ ಸಿಲೂಯೆಟ್ ಮತ್ತು ವಿನ್ಯಾಸ ಶೈಲಿಯನ್ನು ಉಳಿಸಿಕೊಂಡಿದೆ. ಮುಂಭಾಗದಲ್ಲಿ, ಮರ್ಸಿಡೀಸ್‌-ಬೆಂಜ್‌ ಜಿಎಲ್‌ಇ ಫೇಸ್‌ಲಿಫ್ಟ್ ನವೀಕರಿಸಿದ ಎಲ್‌ಇಡಿ ಹೆಡ್‌ಲೈಟ್‌ಗಳ ಜೊತೆಗೆ ಹೊಸ ಸಿಂಗಲ್-ಸ್ಲ್ಯಾಟ್ ಗ್ರಿಲ್ ಅನ್ನು ಒಳಗೊಂಡಿದೆ. ಹೊಸ ರೀತಿಯ ಲುಕ್‌ಗಾಗಿ ಬಂಪರ್‌ಗೆ ಮೈಲ್ಡ್‌ ಆದ ಆಪ್‌ಡೇಟ್‌ ನೀಡಲಾಗಿದೆ. ಪ್ರೊಫೈಲ್ ಕುರಿತು ಹೇಳುವಾಗ, 2023ರ GLE 20-ಇಂಚಿನ ಅಲಾಯ್‌ ವೀಲ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ ಮತ್ತು ಇದನ್ನು 22-ಇಂಚಿನವರೆಗೆ ಹೆಚ್ಚಿಸಬಹುದು. ಹಿಂಭಾಗದಲ್ಲಿ, ಟೈಲ್‌ಲ್ಯಾಂಪ್‌ಗಳನ್ನು ಪರಿಷ್ಕರಿಸಲಾಗಿದೆ ಮತ್ತು ಹಿಂಭಾಗದ ಬಂಪರ್ ಗೆ ಸಹ ಹೊಸತನದ ಟಚ್‌ ನೀಡಲಾಗಿದೆ. 

ಈ ಹಿಂದಿನ ಆವೃತ್ತಿಯಂತೆ, ಭಾರತದ ಮಾರುಕಟ್ಟೆಗಾಗಿ ನೀಡುವ ಮರ್ಸಿಡಿಸ್ GLE ಯು ತನ್ನ ಲಾಂಗ್-ವೀಲ್‌ಬೇಸ್ (LWB) ಆವೃತ್ತಿಯನ್ನು ಹೆಚ್ಚುವರಿ ಕ್ಯಾಬಿನ್ ಸ್ಥಳಕ್ಕಾಗಿ ಮಾತ್ರ ಪಡೆಯುತ್ತದೆ.

ಇದನ್ನು ಸಹ ಪರಿಶೀಲಿಸಿ: ವೀಕ್ಷಿಸಿ: 500 ಕಿಮೀ ರೇಂಜ್‌ನ್ನು ಹೊಂದಿರುವ ವಿಷನ್ ಮರ್ಸಿಡಿಸ್ ಮೇಬ್ಯಾಕ್ 6, ಆದರೆ ಇದನ್ನು ಖರೀದಿಸಲು ಸಾಧ್ಯವಿಲ್ಲ

ಕ್ಯಾಬಿನ್ ಆಪ್‌ಡೇಟ್‌ಗಳು

Mercedes-Benz GLE facelift Interior

ಒಳಗಡೆಯೂ ಸಹ, GLE ಫೇಸ್‌ಲಿಫ್ಟ್‌ಗಾಗಿ ಮರ್ಸಿಡಿಸ್ ಕೆಲವೇ ಬದಲಾವಣೆಗಳನ್ನು ನೀಡುತ್ತಿದೆ. ಡ್ಯಾಶ್‌ಬೋರ್ಡ್ ವಿನ್ಯಾಸವು ದೊಡ್ಡ ಮಟ್ಟದಲ್ಲಿ ಬದಲಾಗದೆ ಉಳಿದಿದೆ. ಹಾಗಾಗಿ ಇದರ ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯನ್ನು ಹೋಲುತ್ತದೆ. ಆದಾಗಿಯೂ, ಇದು ಈಗ ಟಚ್-ಹ್ಯಾಪ್ಟಿಕ್ ನಿಯಂತ್ರಣಗಳೊಂದಿಗೆ ಹೊಸ ಸ್ಟೀರಿಂಗ್ ಚಕ್ರವನ್ನು ಹೊಂದಿದೆ ಮತ್ತು ಇಂಟಿಗ್ರೇಟೆಡ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇಗಳನ್ನು (ಎಲ್ಲಾದಕ್ಕೂ 12.3-ಇಂಚಿನ) ಮರ್ಸಿಡಿಸ್‌ನ ಇತ್ತೀಚಿನ MBUX ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲು ಅಪ್‌ಗ್ರೇಡ್ ಮಾಡಲಾಗಿದೆ.

ಜಿಎಲ್‌ಇ ಫೇಸ್‌ಲಿಫ್ಟ್‌ನಲ್ಲಿರುವ ಇತರ ವೈಶಿಷ್ಟ್ಯಗಳೆಂದರೆ, 4-ಜೋನ್ ಕ್ಲೈಮೇಟ್ ಕಂಟ್ರೋಲ್, ಏರ್ ಪ್ಯೂರಿಫೈಯರ್, ಎಲೆಕ್ಟ್ರಿಕ್ ಟೈಲ್‌ಗೇಟ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 590W 13-ಸ್ಪೀಕರ್‌ನ ಬರ್ಮೆಸ್ಟರ್ ಸೌಂಡ್ ಸಿಸ್ಟಮ್ (ಸ್ಟ್ಯಾಂಡರ್ಡ್‌ ಆಗಿ), ಮತ್ತು ಮೆಮೊರಿ ಕಾರ್ಯದೊಂದಿಗೆ (ಮುಂಭಾಗದ ಆಸನಗಳು) ವಿದ್ಯುತ್‌ನಿಂದ ಹೊಂದಾಣಿಕೆ ಮಾಡಬಹುದಾದ ಮುಂಭಾಗ ಮತ್ತು ಹಿಂಭಾಗದ ಆಸನಗಳಾಗಿವೆ. ಹಿಂದಿನ USB-C ಚಾರ್ಜ್ ಪೋರ್ಟ್‌ಗಳು ಈಗ 100W ವೇಗದ ಚಾರ್ಜಿಂಗ್‌ಗೆ ಸಪೊರ್ಟ್‌ ಆಗುತ್ತದೆ. ಟಾಪ್‌-ಎಂಡ್‌ ವೇರಿಯೆಂಟ್‌ನಲ್ಲಿ ಹೆಚ್ಚುವರಿಯಾಗಿ ಸಿಗುವ ಗಳೆಂದರೆ, ಹೆಡ್-ಅಪ್ ಡಿಸ್ಪ್ಲೇ, ಕಸ್ಟಮೈಸ್‌ ಮಾಡಬಹುದಾದ ಸೀಟುಗಳು ಮತ್ತು AIRMATIC ಸಸ್ಪೆನ್ಸನ್‌ ಆಗಿದೆ.

ಪ್ರಯಾಣಿಕರ ಸುರಕ್ಷತೆಯನ್ನು ಗಮನಿಸುವಾಗ, ಇದು 9 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೋಲ್, ಪಾರ್ಕ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋನೊಮಸ್‌ ತುರ್ತು ಬ್ರೇಕಿಂಗ್‌ನಂತಹ ADAS ವೈಶಿಷ್ಟ್ಯಗಳನ್ನು ನೀಡುತ್ತದೆ.

ಇದನ್ನೂ ಪರಿಶೀಲಿಸಿ: ವೀಕ್ಷಿಸಿ: ಹೊಸ Mercedes-Benz EQE ಎಲೆಕ್ಟ್ರಿಕ್ SUV ಯ ಬೂಟ್ ಅನ್ನು ಹೇಗೆ ತೆರೆಯುವುದು ಎಂಬುದು ಇಲ್ಲಿದೆ

ಪವರ್‌ಟ್ರೇನ್‌ ಕುರಿತು

ಜಾಗತಿಕವಾಗಿ, ಫೇಸ್‌ಲಿಫ್ಟ್‌ ಆಗಿರುವ ಮರ್ಸಿಡೀಸ್‌-ಬೆನ್ಜ್‌ ಜಿಎಲ್‌ಇ ಪೆಟ್ರೋಲ್, ಡೀಸೆಲ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಸೇರಿದಂತೆ ಹಲವು ಪವರ್‌ಟ್ರೇನ್ ಆಯ್ಕೆಗಳನ್ನು ಪಡೆಯುತ್ತದೆ. ಆದರೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಫೇಸ್‌ಲಿಫ್ಟೆಡ್ ಎಸ್‌ಯುವಿಯು ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಮಾತ್ರ ಬರುತ್ತವೆ. ಹಾಗೆಯೇ ನಾವು ಅವುಗಳ ವಿಶೇಷಣಗಳ ಕುರಿತು ಕೆಳಗೆ ವಿವರಿಸಿದ್ದೇವೆ.

Variant

ಜಿಎಲ್‌ಇ 300ಡಿ 4MATIC

ಜಿಎಲ್‌ಇ 450ಡಿ 4MATIC

ಜಿಎಲ್‌ಇ 450 4MATIC

ಇಂಜಿನ್

2-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್

3-ಲೀಟರ್ 6-ಸಿಲಿಂಡರ್ ಡೀಸೆಲ್ ಎಂಜಿನ್

3-ಲೀಟರ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್

ಪವರ್‌

269ಪಿಎಸ್‌

367ಪಿಎಸ್‌

381ಪಿಎಸ್‌

ಟಾರ್ಕ್‌

550ಎನ್‌ಎಮ್‌

750ಎನ್‌ಎಮ್‌

500ಎನ್‌ಎಮ್‌

ಟ್ರಾನ್ಸ್‌ಮಿಷನ್‌

9-ಸ್ಪೀಡ್ ಆಟೋಮ್ಯಾಟಿಕ್ 

9-ಸ್ಪೀಡ್ ಆಟೋಮ್ಯಾಟಿಕ್

99-ಸ್ಪೀಡ್ ಆಟೋಮ್ಯಾಟಿಕ್

ವೇಗವರ್ಧನೆ 0-100kmph

6.9 ಸೆಕೆಂಡುಗಳು

5.6 ಸೆಕೆಂಡುಗಳು

5.6 ಸೆಕೆಂಡುಗಳು

ಎಲ್ಲಾ 3 ಎಂಜಿನ್‌ಗಳನ್ನು 48V ಮೈಲ್ಡ್‌-ಹೈಬ್ರಿಡ್ ಸಿಸ್ಟಮ್‌ಗೆ ಜೋಡಿಸಲಾಗಿದೆ ಅದು ವರ್ಧಿತ ಇಂಧನ ದಕ್ಷತೆಗೆ ಸಹಾಯ ಮಾಡುತ್ತದೆ. ಇವುಗಳು ಪ್ರಿ-ಫೇಸ್‌ಲಿಫ್ಟ್ GLE ನಲ್ಲಿ ನೀಡಲಾದ ಅದೇ ಪವರ್‌ಟ್ರೇನ್ ಆಯ್ಕೆಗಳಾಗಿವೆ.

ಪ್ರತಿಸ್ಪರ್ಧಿಗಳು

 ಮರ್ಸಿಡೀಸ್‌-ಬೆನ್ಜ್‌ ಜಿಎಲ್‌ಇ ಫೇಸ್‌ಲಿಫ್ಟ್ ಭಾರತದಲ್ಲಿ ಬಿಎಂಡಬ್ಲ್ಯೂ X5, ಆಡಿ Q7 ಮತ್ತು ವೋಲ್ವೋ XC90 ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನಷ್ಟು ಓದಿ: ಜಿಎಲ್ಇ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mercedes-Benz ಗ್ಲೆ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience