Magniteನ ಕೆಲ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವ Nissan ಇಂಡಿಯಾ, ನಿಮ್ಮ ಕಾರು ಈ ಪಟ್ಟಿಯಲ್ಲಿದ್ಯಾ?
ಏಪ್ರಿಲ್ 19, 2024 03:19 pm ರಂದು rohit ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
2020ರ ನವೆಂಬರ್ ನಿಂದ 2023ರ ಡಿಸೆಂಬರ್‌ನ ನಡುವೆ ತಯಾರಿಸಲಾದ ಕಾರುಗಳು ಈ ಮರುಪಡೆಯುವಿಕೆ ಪ್ರಕ್ರಿಯೆಗೆ ಒಳಪಡಲಿದೆ.
Nissan Magniteನ ಮುಂಭಾಗದ ಬಾಗಿಲಿನ ಹ್ಯಾಂಡಲ್‌ನ ಸೆನ್ಸಾರ್‌ನಲ್ಲಿ ಕಂಡು ಬಂದ ದೋಷದಿಂದಾಗಿ ಕೆಲ ಕಾರುಗಳನ್ನು ಭಾರತದಲ್ಲಿ ಹಿಂಪಡೆಯಲಾಗಿದೆ. ಜಪಾನಿನ ಈ ಕಾರು ತಯಾರಕರು ಹಿಂಪಡೆಯುವ ಕಾರುಗಳ ಸಂಖ್ಯೆಯ ಕುರಿತು ಮಾಹಿತಿ ನೀಡದಿದ್ದರೂ, 2020ರ ನವೆಂಬರ್ ನಿಂದ 2023ರ ಡಿಸೆಂಬರ್ ವರೆಗೆ ತಯಾರಿಸಿದ ಕಾರುಗಳು ಹಿಂಪಡೆಯುವ ಪ್ರಕ್ರಿಯೆಗೆ ಒಳಪಡಲಿದೆ ಎಂದು ತಿಳಿಸಿದ್ದಾರೆ. 2023ರ ಡಿಸೆಂಬರ್‌ನ ನಂತರ ಉತ್ಪಾದಿಸಲಾದ ಮ್ಯಾಗ್ನೈಟ್‌ನ ಯಾವುದೇ ಕಾರುಗಳು ಹಿಂಪಡೆಯುವ ಪ್ರಕ್ರಿಯೆಯ ಭಾಗವಾಗುವುದಿಲ್ಲ.
ಹಿಂಪಡೆಯುವ ಕುರಿತ ಹೆಚ್ಚಿನ ವಿವರಗಳು
ಈ ಸಬ್-4ಮೀ ಎಸ್‌ಯುವಿಯ ಬೇಸ್-ಮೊಡೆಲ್ XE ಮತ್ತು ಮಿಡ್-ವೇರಿಯೆಂಟ್ XL ಆವೃತ್ತಿಗಳು ಮಾತ್ರ ದೋಷಯುಕ್ತ ಪಾರ್ಟ್ಸ್‌ನ ಸಮಸ್ಯೆಯನ್ನು ಎದುರಿಸುತ್ತಿದೆ ಮತ್ತು ಹಾಗಾಗಿ ಈ ಆವೃತ್ತಿಯ ಕಾರುಗಳನ್ನು ತಪಾಸಣೆಗಾಗಿ ಕರೆಯಲಾಗಿದೆ. ನಿಸ್ಸಾನ್ ಯಾವುದೇ ಶುಲ್ಕವಿಲ್ಲದೆ, ತಮ್ಮ ವಾಹನದಲ್ಲಿನ ದೋಷಯುಕ್ತ ಭಾಗವನ್ನು ಪರೀಕ್ಷಿಸಲು ಮತ್ತು ಬದಲಾಯಿಸಲು ಮೇಲೆ ತಿಳಿಸಲಾದ ಆವೃತ್ತಿಯ ಮಾಲೀಕರನ್ನು ಸಂಪರ್ಕಿಸಲು ಪ್ರಾರಂಭಿಸುತ್ತದೆ. ಹಾಗೆಯೇ ಈ ಆವೃತ್ತಿಗಳನ್ನು ಹೊಂದಿರುವ ಮಾಲೀಕರು ತಮ್ಮ ಎಸ್‌ಯುವಿಯನ್ನು ಯಾವುದೇ ಭಯವಿಲ್ಲದೆ ಬಳಸುವುದನ್ನು ಮುಂದುವರಿಸಬಹುದು ಎಂದು ಜಪಾಪ್ ಮೂಲದ ಕಾರು ತಯಾರಕ ಸಂಸ್ಥೆ ನಿಸ್ಸಾನ್ ಸ್ಪಷ್ಟಪಡಿಸಿದೆ.
ಮಾಲೀಕರು ಏನು ಮಾಡಬಹುದು
ನಿಸ್ಸಾನ್‌ನ ಈ ಎಸ್‌ಯುವಿಯ ಮಾಲೀಕರು ಕಾರಿನ ಪಾರ್ಟ್ಸ್ ಅನ್ನು ಪರಿಶೀಲಿಸಲು ತಮ್ಮ ಕಾರನ್ನು ತಮ್ಮ ಹತ್ತಿರದ ನಿಸ್ಸಾನ್‌ನ ಅಧಿಕೃತ ವರ್ಕ್ಸ್‌ಶಾಪ್‌ಗೆ ಕೊಂಡೊಯ್ಯಬಹುದು. ಇದಕ್ಕಿಂತ ಮೊದಲು, ನಿಸ್ಸಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿನ ‘ಓನರ್ VIN ಚೆಕ್’ ವಿಭಾಗಕ್ಕೆ ಭೇಟಿ ನೀಡುವ ಮೂಲಕ ಮತ್ತು ಅವರ ಕಾರಿನ VIN (ವಾಹನ ಗುರುತಿನ ಸಂಖ್ಯೆ) ನಮೂದಿಸುವ ಮೂಲಕ ತಮ್ಮ ವಾಹನವನ್ನು ಹಿಂಪಡೆಯಲಾಗಿದೆಯೇ ಎಂದು ಪರಿಶೀಲಿಸಬಹುದು. ಈ ಪ್ರಕ್ರಿಯೆ ಕುರಿತು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಗ್ರಾಹಕರು ನಿಸ್ಸಾನ್ ಇಂಡಿಯಾದ ಗ್ರಾಹಕ ಸೇವಾ ಕೇಂದ್ರದ ಟೋಲ್-ಫ್ರೀ ಸಂಖ್ಯೆ 1800-209-3456 ಗೆ ಕರೆ ಮಾಡಬಹುದು.
ಮ್ಯಾಗ್ನೈಟ್‌ನ ಹಿಂಪಡೆಯುವ ಪ್ರಕ್ರಿಯೆಗೆ ಒಳಪಡುವ ಆವೃತ್ತಿಗಳನ್ನು ತಿಳಿಸಿದ್ದರೂ, ಎಷ್ಟು ನಿಖರವಾದ ಕಾರುಗಳ ಮೇಲೆ ಇದರ ಪರಿಣಾಮ ಬೀರಲಿದೆ ಎಂಬುದನ್ನು ನಿಸ್ಸಾನ್ ಸ್ಪಷ್ಟಪಡಿಸಿಲ್ಲ. ಆದರೆ, ನಿಮ್ಮ ವಾಹನವು ಹಿಂಪಡೆಯುವ ಕಾರುಗಳ ಪಟ್ಟಿಗೆ ಒಳಪಟ್ಟಿದೆಯೇ ಎಂದು ಆದಷ್ಟು ಬೇಗ ತಿಳಿದುಕೊಳ್ಳಿ ಎಂದು ನಾವು ಶಿಫಾರಸು ಮಾಡುತ್ತೇವೆ. ಒಳಪಟ್ಟಿದೆ ಎಂದಾದರೆ, ನಿಮ್ಮ ಕಾರನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಯಾವುದೇ ವಿಳಂಬ ಮಾಡದೆ ಅದನ್ನು ಪರೀಕ್ಷಿಸಿ.
ಇದನ್ನೂ ಪರಿಶೀಲಿಸಿ: ವೀಕ್ಷಿಸಿ: ಬೇಸಿಗೆಯಲ್ಲಿ ಯಾಕೆ ನಿಮ್ಮ ಕಾರಿನ ಚಕ್ರವು ಸರಿಯಾದ ಗಾಳಿಯನ್ನು ಹೊಂದಿರಬೇಕು
ಇನ್ನಷ್ಟು ಓದಿ : ನಿಸ್ಸಾನ್ ಮ್ಯಾಗ್ನೈಟ್ ಎಎಮ್‌ಟಿ