Login or Register ಅತ್ಯುತ್ತಮ CarDekho experience ಗೆ
Login

ಕರ್ನಾಟಕದ ಪ್ರವಾಸೋದ್ಯಮದ ಕಿರೀಟಕ್ಕೆ ಮತ್ತೊಂದು ಗರಿ: ಟಾಟಾದಿಂದ Nexon EV ಬಂಡೀಪುರ ಎಡಿಷನ್‌ನ ಅನಾವರಣ

ಜನವರಿ 17, 2025 05:04 pm ರಂದು shreyash ಮೂಲಕ ಪ್ರಕಟಿಸಲಾಗಿದೆ
30 Views

ನೆಕ್ಸಾನ್ ಇವಿ ಬಂಡೀಪುರ ಎಡಿಷನ್‌ ಈ ಎಸ್‌ಯುವಿಯ ಮತ್ತೊಂದು ರಾಷ್ಟ್ರೀಯ ಉದ್ಯಾನವನ ಆವೃತ್ತಿಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಆನೆಗಳು ಮತ್ತು ಹುಲಿಗಳಂತಹ ವನ್ಯಜೀವಿ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ.

  • ನೆಕ್ಸಾನ್ ಕಾಜಿರಂಗ ಎಡಿಷನ್‌ನ ನಂತರ ನೆಕ್ಸಾನ್ ಇವಿ ಬಂಡೀಪುರ್‌ ಟಾಟಾದ ಕಡೆಯಿಂದ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೊಂದು ಗೌರವವಾಗಿದೆ.

  • ಫೀಚರ್‌ಗಳ ಹೈಲೈಟ್‌ಗಳಲ್ಲಿ 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಸೇರಿವೆ.

  • ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಸೇರಿವೆ.

  • 1.2-ಲೀಟರ್ ಟರ್ಬೊ-ಪೆಟ್ರೋಲ್, 1.2-ಲೀಟರ್ ಟರ್ಬೊ ಸಿಎನ್‌ಜಿ, ಮತ್ತು 1.5-ಲೀಟರ್ ಡೀಸೆಲ್ ಒಳಗೊಂಡ ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.

ಟಾಟಾ ನೆಕ್ಸಾನ್ ಇವಿ ಹೊಸ ಬಂಡೀಪುರ ಎಡಿಷನ್‌ ಅನ್ನು ಪಡೆಯುತ್ತಿದೆ, ಇದು ಕಾಜಿರಂಗ ಆವೃತ್ತಿಯ ನಂತರ ಭಾರತದ ರಾಷ್ಟ್ರೀಯ ಉದ್ಯಾನವನಕ್ಕೆ ಸಂದ ಮತ್ತೊಂದು ಪ್ರಶಂಸೆಯಾಗಿದೆ. ಕರ್ನಾಟಕದ ಪ್ರವಾಸೋದ್ಯಮದ ಹೆಮ್ಮೆಯಾಗಿರುವ ಬಂಡೀಪುರ ರಾಷ್ಟ್ರೀಯ ಅರಣ್ಯವು ವನ್ಯಜೀವಿ ಛಾಯಾಗ್ರಾಹಕರಿಗೆ ಮತ್ತು ಹುಲಿಗಳು ಮತ್ತು ಆನೆಗಳಿಗೆ ಹೆಸರುವಾಸಿಯಾಗಿದೆ. 2025 ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಟಾಟಾ ಹ್ಯಾರಿಯರ್ ಬಂಡಿಪುರ ಮತ್ತು ಟಾಟಾ ಸಫಾರಿ ಬಂಡಿಪುರ ಆವೃತ್ತಿಯ ಎಸ್‌ಯುವಿಗಳೊಂದಿಗೆ ನೆಕ್ಸಾನ್ ಇವಿ ಬಂಡಿಪುರವನ್ನು ಪ್ರದರ್ಶಿಸಲಾಗಿದೆ. ನೆಕ್ಸಾನ್ ಇವಿ ಬಂಡೀಪುರವು ಅದರ ರೆಗ್ಯುಲರ್‌ ಆವೃತ್ತಿಗೆ ಹೋಲಿಸಿದರೆ ಎಷ್ಟು ಭಿನ್ನವಾಗಿದೆ ಎಂಬುದು ಇಲ್ಲಿದೆ.

ವಿಶಿಷ್ಟವಾದ ಬಾಡಿ-ಕಲರ್‌

ನೆಕ್ಸಾನ್ ಇವಿ ಬಂಡೀಪುರ ಹೊಸ ಬಾಡಿ-ಕಲರ್‌ನೊಂದಿಗೆ ಬರುತ್ತದೆ, ಇದು ಬಂಪರ್ ಸುತ್ತಲೂ ಕಪ್ಪು ಬಣ್ಣದ ಹೈಲೈಟ್‌ಗಳು, ಸಂಪೂರ್ಣ ಕಪ್ಪಾದ ಅಲಾಯ್‌ ವೀಲ್‌ಗಳು, ಕಪ್ಪು ಬಣ್ಣದ ಅಲಂಕಾರಗಳು ಮತ್ತು ಟೈಲ್‌ಗೇಟ್‌ನಲ್ಲಿ ಬ್ಲ್ಯಾಕ್‌ ರೂಫ್‌ನೊಂದಿಗೆ ಬರುತ್ತಿದೆ. ಫೆಂಡರ್‌ಗಳ ಮೇಲೆ 'ಬಂಡಿಪುರ' ಬ್ಯಾಡ್ಜ್‌ಗಳು ಸಹ ಇವೆ, ಅದು ಇದನ್ನು ಎಸ್‌ಯುವಿಯ ಸ್ಪೆಷಲ್‌ ಎಡಿಷನ್‌ ಅನ್ನು ಗುರುತಿಸಲು ಸಹಾಯ ಮಾಡುತ್ತದೆ. ಉಳಿದ ವಿನ್ಯಾಸ ವಿವರಗಳಾದ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು, ಹೆಡ್‌ಲೈಟ್ ಹೌಸಿಂಗ್‌ಗಳು ಮತ್ತು ಕನೆಕ್ಟೆಡ್ ಎಲ್‌ಇಡಿ ಟೈಲ್ ಲೈಟ್‌ಗಳು ಟಾಟಾ ನೆಕ್ಸಾನ್ ಇವಿಯ ರೆಗ್ಯುಲರ್‌ ಆವೃತ್ತಿಯಂತೆಯೇ ಇರುತ್ತವೆ.

ಬಂಡೀಪುರ ಥೀಮ್‌ನ ಇಂಟೀರಿಯರ್

ಒಳಭಾಗದಲ್ಲಿ, ನೆಕ್ಸಾನ್ ಇವಿ ಬಂಡೀಪುರದ ಕ್ಯಾಬಿನ್ ವಿಶಿಷ್ಟವಾದ ಬಣ್ಣದ ಥೀಮ್ ಅನ್ನು ಪಡೆಯುತ್ತದೆ ಮತ್ತು ಹೆಡ್‌ರೆಸ್ಟ್‌ಗಳ ಮೇಲೆ 'ಬಂಡಿಪುರ' ಬ್ರ್ಯಾಂಡಿಂಗ್ ಅನ್ನು ಪಡೆಯುತ್ತದೆ. ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಸೆಂಟರ್ ಕನ್ಸೋಲ್ ವಿನ್ಯಾಸವು ಸಾಮಾನ್ಯ ನೆಕ್ಸಾನ್ ಇವಿ ಒಳಗೆ ಕಂಡುಬರುವಂತೆಯೇ ಉಳಿದಿದೆ.

Share via

Write your Comment on Tata ನೆಕ್ಸಾನ್ ಇವಿ

explore similar ಕಾರುಗಳು

ಓಲಾ ಎಲೆಕ್ಟ್ರಿಕ್ ಕಾರ್

4.311 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.40 ಲಕ್ಷ* Estimated Price
ಡಿಸೆಂಬರ್ 16, 2036 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ