• English
  • Login / Register

Tata Nexon EV ಕ್ರಿಯೇಟಿವ್ ಪ್ಲಸ್ Vs Tata Punch EV ಎಂಪವರ್ಡ್ ಪ್ಲಸ್: ನೀವು ಯಾವ EV ಖರೀದಿಸಬೇಕು?

ಟಾಟಾ ನೆಕ್ಸಾನ್ ಇವಿ ಗಾಗಿ shreyash ಮೂಲಕ ಫೆಬ್ರವಾರಿ 21, 2024 06:15 pm ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಚಿಕ್ಕದಾದ ಟಾಟಾ ಪಂಚ್ EVಯು ಟಾಟಾ ನೆಕ್ಸಾನ್ EV ಗಿಂತ ಹೆಚ್ಚಿನ ತಂತ್ರಜ್ಞಾನ ಮತ್ತು ರೇಂಜ್ ಅನ್ನು ಅದೇ ಬೆಲೆಯಲ್ಲಿ ನೀಡುತ್ತದೆ

Tata Nexon EV vs Tata Punch EV

ಇತ್ತೀಚಿನ ಬೆಲೆ ಇಳಿಕೆಯೊಂದಿಗೆ, ಟಾಟಾ ನೆಕ್ಸಾನ್ EV ರೂ 1.2 ಲಕ್ಷದವರೆಗೆ ಕಡಿಮೆ ಬೆಲೆಯಲ್ಲಿ ಸಿಗುವ ಮೂಲಕ ಇನ್ನಷ್ಟು ಕೈಗೆಟುಕುವ ಖರೀದಿಯಾಗಿದೆ. ಇದರ ಆರಂಭಿಕ ಬೆಲೆ ರೂ 14.49 ಲಕ್ಷದಿಂದ ಶುರುವಾಗುತ್ತದೆ. (ಎಕ್ಸ್ ಶೋರೂಂ). ಇದೇ ಬೆಲೆಯಲ್ಲಿ ಟಾಪ್-ಸ್ಪೆಕ್ ಟಾಟಾ ಪಂಚ್ EV ಎಂಪವರ್ಡ್ ಪ್ಲಸ್ ಲಾಂಗ್ ರೇಂಜ್ ವೇರಿಯಂಟ್ (ಎಕ್ಸ್ ಶೋರೂಂ) ಕೂಡ ಸಿಗುತ್ತದೆ.

 ನೆಕ್ಸಾನ್ EV (ಮತ್ತು ಟಿಯಾಗೋ EV ಕೂಡ) ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ತನ್ನ ಕಡಿಮೆಯಾದ ಬ್ಯಾಟರಿ ಬೆಲೆಗಳ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಾಗಿದೆ ಎಂದು ಟಾಟಾ ಹೇಳಿದೆ. ಮತ್ತೊಂದೆಡೆ, ಜನವರಿ 2024 ರಲ್ಲಿ ಬಿಡುಗಡೆಯಾದ ಸಮಯದಲ್ಲಿಯೇ ಪಂಚ್ EV ಗೆ ಬ್ಯಾಟರಿ ಪ್ಯಾಕ್ ವೆಚ್ಚವನ್ನು ಕಡಿಮೆಗೊಳಿಸಿಯೇ ಮಾರುಕಟ್ಟೆಗೆ ತಂದಿದೆ ಎಂದು ಟಾಟಾ ಹೇಳಿಕೆ ನೀಡಿದೆ.

 ಎಂಟ್ರಿ ಲೆವೆಲ್ ನೆಕ್ಸಾನ್ EVಯು ಪಂಚ್ EV ಯ ಟಾಪ್ ವೇರಿಯಂಟ್ ಗೆ ಹೋಲಿಸಿದರೆ ಹೇಗಿದೆ ಎಂದು ನೋಡೋಣ, ಮೊದಲು ಸ್ಪೆಸಿಫಿಕೇಷನ್ ಗಳತ್ತ ಗಮನಹರಿಸೋಣ

 ಡೈಮೆನ್ಷನ್ಸ್

 

 ಟಾಟಾ ನೆಕ್ಸಾನ್ EV

 ಟಾಟಾ ಪಂಚ್ EV

 ಉದ್ದ

 3994 ಮಿ.ಮೀ

 3857 ಮಿ.ಮೀ

 ಅಗಲ

 1811 ಮಿ.ಮೀ

 1742 ಮಿ.ಮೀ

 ಎತ್ತರ

 1616 ಮಿ.ಮೀ

 1633 ಮಿ.ಮೀ

 ವೀಲ್ ಬೇಸ್

 2498 ಮಿ.ಮೀ

 2445 ಮಿ.ಮೀ

 ಗ್ರೌಂಡ್ ಕ್ಲಿಯರೆನ್ಸ್

 205 ಮಿಮೀ ವರೆಗೆ (ಮೀಡಿಯಂ ರೇಂಜ್)

 190 ಮಿಮೀ

 ಬೂಟ್ ಸ್ಪೇಸ್

 350 ಲೀಟರ್

 366 ಲೀಟರ್

  •  ಟಾಟಾ ನೆಕ್ಸಾನ್ EV ಎಲ್ಲಾ ಅಂಶಗಳಲ್ಲಿ ಪಂಚ್ EV ಗಿಂತ ದೊಡ್ಡದಾಗಿದೆ.

  • ಆಶ್ಚರ್ಯವೆಂದರೆ, ಟಾಟಾ ಪಂಚ್ EVಯು ಟಾಟಾ ನೆಕ್ಸಾನ್ EVಗಿಂತ ಹೆಚ್ಚಿನ ಬೂಟ್ ಸ್ಪೇಸ್ ಹೊಂದಿದೆ ಎಂದು ಟಾಟಾ ಹೇಳಿಕೊಂಡಿದೆ. ಹೆಚ್ಚುವರಿ 14 ಲೀಟರ್ ಜಾಗಕ್ಕಾಗಿ ಅದರ ಮುಂಭಾಗದ ಸ್ಟೋರೇಜ್ ಆಯ್ಕೆಯನ್ನು ಟಾಪ್ ಎಂಪವರ್ಡ್ ಪ್ಲಸ್ S ವೇರಿಯಂಟ್ ನಲ್ಲಿ ನೀಡಲಾಗುತ್ತದೆ, ಆದರೆ ಇದಕ್ಕೆ ರೂ. 50,000 ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

Tata Nexon EV

  •  ನೆಕ್ಸಾನ್ EV ಗಾಗಿ ಮೇಲೆ ತಿಳಿಸಲಾದ ಗ್ರೌಂಡ್ ಕ್ಲಿಯರೆನ್ಸ್ ಅದರ ಮೀಡಿಯಂ-ರೇಂಜ್ ವೇರಿಯಂಟ್ ನಲ್ಲಿ ನೀಡಲಾಗಿದೆ. ಆದರೆ, ನೀವು ನೆಕ್ಸಾನ್ EVಯ ಲಾಂಗ್-ರೇಂಜ್ ವರ್ಷನ್ ಅನ್ನು ಆಯ್ಕೆ ಮಾಡಿಕೊಂಡರೆ, ಅದು 190 mm ಗೆ ಕಡಿಮೆಯಾಗುತ್ತದೆ.

 ಪವರ್‌ಟ್ರೇನ್ 

 ಸ್ಪೆಸಿಫಿಕೇಷನ್ ಗಳು

 ಟಾಟಾ ನೆಕ್ಸಾನ್ EV ಕ್ರಿಯೇಟಿವ್ ಪ್ಲಸ್ ಮೀಡಿಯಂ ರೇಂಜ್

 ಟಾಟಾ ಪಂಚ್ EV ಎಂಪವರ್ಡ್ ಪ್ಲಸ್ ಲಾಂಗ್ ರೇಂಜ್

 ಬ್ಯಾಟರಿ ಪ್ಯಾಕ್

30 kWh

35 kWh

 ಪವರ್

129 PS

122 PS

 ಟಾರ್ಕ್

215 Nm

190 Nm

 ಕ್ಲೇಮ್ ಮಾಡಿರುವ ರೇಂಜ್

 325 ಕಿ.ಮೀ

 421 ಕಿ.ಮೀ

  •  ಇದೇ ಬೆಲೆಯಲ್ಲಿ, ಟಾಟಾ ಪಂಚ್ EVಯು ಎಂಟ್ರಿ ಲೆವೆಲ್ ನೆಕ್ಸಾನ್ EV ಗೆ ಹೋಲಿಸಿದರೆ ದೊಡ್ಡ 35 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಹೀಗಾಗಿ ಇದು ಹೆಚ್ಚುವರಿ 96 ಕಿಮೀ ಡ್ರೈವಿಂಗ್ ರೇಂಜ್ ಅನ್ನು ಒದಗಿಸುತ್ತದೆ.

  • ಆದರೆ, ಟಾಟಾ ನೆಕ್ಸಾನ್ EV ಇನ್ನೂ ಹೆಚ್ಚಿನ ಪವರ್ ಮತ್ತು ಟಾರ್ಕ್ ಅನ್ನು ನೀಡುತ್ತದೆ.

 ಚಾರ್ಜಿಂಗ್

ಚಾರ್ಜರ್

 ಚಾರ್ಜಿಂಗ್ ಸಮಯ

 ಟಾಟಾ ನೆಕ್ಸಾನ್ EV ಕ್ರಿಯೇಟಿವ್ ಪ್ಲಸ್ ಮೀಡಿಯಂ ರೇಂಜ್

 ಟಾಟಾ ಪಂಚ್ EV ಎಂಪವರ್ಡ್ ಪ್ಲಸ್ ಲಾಂಗ್ ರೇಂಜ್

 3.3 kW AC ಚಾರ್ಜರ್ (10-100%)

 10.5 ಗಂಟೆಗಳು

 13.5 ಗಂಟೆಗಳು

 50 kW DC ಫಾಸ್ಟ್ ಚಾರ್ಜರ್ (10-80%)

 56 ನಿಮಿಷಗಳು

 56 ನಿಮಿಷಗಳು

  •  3.3 kW AC ಚಾರ್ಜರ್‌ನೊಂದಿಗೆ ಚಾರ್ಜ್ ಮಾಡುವಾಗ, ಪಂಚ್ EV ಗೆ ಹೋಲಿಸಿದರೆ ನೆಕ್ಸಾನ್ EV ಅದರ ಚಿಕ್ಕ ಬ್ಯಾಟರಿ ಪ್ಯಾಕ್‌ನ ಕಾರಣದಿಂದಾಗಿ ಕಡಿಮೆ ಚಾರ್ಜಿಂಗ್ ಸಮಯವನ್ನು ತೆಗೆದುಕೊಳ್ಳುತ್ತದೆ.

  • ಪಂಚ್ EV ಯ ಚಾರ್ಜಿಂಗ್ ಸಮಯವನ್ನು ಕೇವಲ 5 ಗಂಟೆಗಳವರೆಗೆ ಕಡಿಮೆ ಮಾಡಲು ಗ್ರಾಹಕರು ಬಯಸಿದರೆ, ರೂ. 50,000 ಹೆಚ್ಚುವರಿ ಪಾವತಿಸಿ 7.2kW AC ಫಾಸ್ಟ್ ಚಾರ್ಜರ್ ಅನ್ನು ಖರೀದಿಸಬಹುದು.

  • ಎರಡೂ EVಗಳು 56 ನಿಮಿಷಗಳ ಸಮಾನ ಚಾರ್ಜಿಂಗ್ ಸಮಯಗಳೊಂದಿಗೆ 50 kW DC ಚಾರ್ಜಿಂಗ್ ಅನ್ನು ಕೂಡ ಸಪೋರ್ಟ್ ಮಾಡುತ್ತದೆ.

 ಫೀಚರ್ ಹೈಲೈಟ್ ಗಳು

ಒಳಭಾಗ

  • ಡ್ಯುಯಲ್-ಟೋನ್ ಕ್ಯಾಬಿನ್

  • ಆಲ್ ಬ್ಲಾಕ್ ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ

  • ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಮುಂಭಾಗ ಮತ್ತು ಹಿಂಭಾಗದ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು

  • ಡ್ಯುಯಲ್-ಟೋನ್ ಬ್ಲಾಕ್ ಮತ್ತು ಗ್ರೇ ಕ್ಯಾಬಿನ್

  • ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ

  • ಎತ್ತರ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್

  • ಮುಂಭಾಗ ಮತ್ತು ಹಿಂಭಾಗದ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು

  • ಮುಂಭಾಗ ಮತ್ತು ಹಿಂಭಾಗದ ಆರ್ಮ್ ರೆಸ್ಟ್

  • ಲೆಥೆರೆಟ್ ಸುತ್ತಿದ ಸ್ಟೀರಿಂಗ್ ವೀಲ್

 ಸೌಕರ್ಯ ಮತ್ತು ಅನುಕೂಲತೆ

  • ಆಟೋಮ್ಯಾಟಿಕ್ AC

  • ಎಲ್ಲಾ ನಾಲ್ಕು ಪವರ್ ವಿಂಡೋಗಳು

  • ಎಲೆಕ್ಟ್ರಿಕಲ್ ಆಗಿ ಅಡ್ಜಸ್ಟ್ ಮಾಡಬಹುದಾದ ORVMಗಳು

  • ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

  • ಮಲ್ಟಿ ಡ್ರೈವ್ ಮೋಡ್‌ಗಳು - ಇಕೋ, ಸಿಟಿ ಮತ್ತು ಸ್ಪೋರ್ಟ್

  • ರೀಜನರೇಟಿವ್ ಬ್ರೇಕಿಂಗ್ ಮೋಡ್‌ಗಳಿಗಾಗಿ ಪ್ಯಾಡಲ್ ಶಿಫ್ಟರ್

  •  ಆಟೋಮ್ಯಾಟಿಕ್ AC

  • ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು 

  • ಕೂಲ್ಡ್ ಗ್ಲೋವ್‌ಬಾಕ್ಸ್

  • ಎಲ್ಲಾ ನಾಲ್ಕು ಪವರ್ ವಿಂಡೋಗಳು

  • ವೈರ್‌ಲೆಸ್ ಫೋನ್ ಚಾರ್ಜರ್

  • ಮಲ್ಟಿ ಡ್ರೈವ್ ಮೋಡ್‌ಗಳು

  • (ಸಿಟಿ/ಸ್ಪೋರ್ಟ್/ಇಕೋ)

  • ರೀಜನರೇಟಿವ್ ಬ್ರೇಕಿಂಗ್ ಮೋಡ್‌ಗಳಿಗಾಗಿ ಪ್ಯಾಡಲ್ ಶಿಫ್ಟರ್

  • ಕ್ರೂಸ್ ಕಂಟ್ರೋಲ್

  • ಆಟೋ ಫೋಲ್ಡ್ ನೊಂದಿಗೆ ಎಲೆಕ್ಟ್ರಿಕಲ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು

  • ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು

  • ರೈನ್ ಸೆನ್ಸಿಂಗ್ ವೈಪರ್‌ಗಳು

  • ಆಟೋ ಡಿಮ್ಮಿಂಗ್ IRVM

  • ರಿಯರ್ ವೈಪರ್ ಮತ್ತು ಆಟೋ ಡಿಫಾಗರ್

  • ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

  • ಏರ್ ಪ್ಯೂರಿಫೈಯರ್

 ಇನ್ಫೋಟೈನ್ಮೆಂಟ್

  •  7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

  • ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ

  • 4-ಸ್ಪೀಕರ್ ಸೌಂಡ್ ಸಿಸ್ಟಮ್

  • ವಾಯ್ಸ್ ಅಸಿಸ್ಟೆಂಟ್ ಫೀಚರ್ ಗಳು

  • 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ

  • 6-ಸ್ಪೀಕರ್ ಸೌಂಡ್ ಸಿಸ್ಟಮ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ

  • Arcade.EV ಅಪ್ಲಿಕೇಶನ್ ಸೂಟ್

 ಸುರಕ್ಷತೆ

  •  6 ಏರ್‌ಬ್ಯಾಗ್‌ ಗಳು

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

  • EBD ಜೊತೆಗೆ ABS

  • ಸೆನ್ಸರ್ ಗಳೊಂದಿಗೆ ರಿಯರ್ ಪಾರ್ಕಿಂಗ್ ಕ್ಯಾಮೆರಾ

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • 6 ಏರ್‌ಬ್ಯಾಗ್‌ ಗಳು

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್

  • EBD ಜೊತೆಗೆ ABS

  • ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಜೊತೆಗೆ 360-ಡಿಗ್ರಿ ಕ್ಯಾಮೆರಾ

  • ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

Tata Punch EV Interior

  •  14.49 ಲಕ್ಷ ರೂಪಾಯಿಯ ಅದೇ ಬೆಲೆಯಲ್ಲಿ (ಎಕ್ಸ್ ಶೋರೂಂ, ದೆಹಲಿ), ಟಾಟಾ ಪಂಚ್ EV ಟಾಟಾ ನೆಕ್ಸನ್ EV ಗಿಂತ ಹೆಚ್ಚಿನ ಫೀಚರ್ ಗಳನ್ನು ನೀಡುತ್ತದೆ.

  •  ವೆಲ್ಕಮ್ ಮತ್ತು ಗುಡ್ ಬೈ ಅನಿಮೇಷನ್‌ಗಳೊಂದಿಗೆ ಅದರ ಆಲ್-LED ಲೈಟಿಂಗ್‌, 16-ಇಂಚಿನ ಅಲೊಯ್ ವೀಲ್ಸ್ ಮತ್ತು ರೂಫ್ ರೈಲ್ಸ್ ನೊಂದಿಗೆ ಪಂಚ್ EV ಈ ಬೆಲೆಯಲ್ಲಿ ಉತ್ತಮ ಆಯ್ಕೆಯಾಗಿ ಕಾಣುತ್ತದೆ.

  •  ಆದರೆ, ನೆಕ್ಸಾನ್ EV ಕ್ರಿಯೇಟಿವ್ ಪ್ಲಸ್ ಮೀಡಿಯಂ ರೇಂಜ್ ವೇರಿಯಂಟ್ LED DRL ಗಳು ಮತ್ತು LED ಟೈಲ್‌ಲ್ಯಾಂಪ್‌ಗಳೊಂದಿಗೆ LED ಹೆಡ್‌ಲೈಟ್‌ಗಳನ್ನು ಕೂಡ ಪಡೆಯುತ್ತದೆ. ಅದರ 16-ಇಂಚಿನ ಸ್ಟೀಲ್ ವೀಲ್ ಗಳು ಸ್ಟೈಲಿಶ್ ಆಗಿರುವ ವೀಲ್ ಕವರ್‌ಗಳನ್ನು ಪಡೆಯುತ್ತವೆ, ಅದು ಅವುಗಳನ್ನು ಸಾಮಾನ್ಯ ಬೇಸ್-ಸ್ಪೆಕ್ ವೀಲ್ ಗಳಿಗೆ ಹೋಲಿಸಿದರೆ ಇನ್ನಷ್ಟು ಉತ್ತಮವಾಗಿ ಕಾಣುವಂತೆ ಮಾಡುತ್ತದೆ.

  •  ಒಳಭಾಗದಲ್ಲಿ, ಟಾಟಾ ಪಂಚ್ EV ಎಂಪವರ್ಡ್ ಪ್ಲಸ್ ವೇರಿಯಂಟ್ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಪಡೆಯುತ್ತದೆ, ಇದು ದೊಡ್ಡ 10.25-ಇಂಚಿನ ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ ಅನ್ನು ಕೂಡ ಹೊಂದಿದೆ, ಆದರೆ ನೆಕ್ಸಾನ್ EV ಎರಡಕ್ಕೂ 7-ಇಂಚಿನ ಸ್ಕ್ರೀನ್ ಗಳನ್ನು ಪಡೆಯುತ್ತದೆ. ಹಾಗೆಯೇ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಮೂಲಕ ಮ್ಯಾಪ್ ಗಳನ್ನು ತೋರಿಸಲು ಪಂಚ್ EV ಯ ಇನ್ಸ್ಟ್ರುಮೆಂಟ್ ಡಿಸ್ಪ್ಲೇ ಅನ್ನು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಸಿಂಕ್ ಮಾಡಬಹುದು.

Tata Nexon EV Creative Plus vs Tata Punch EV Empowered Plus: Which EV To Buy?

  •  ಬೇಸ್-ಸ್ಪೆಕ್ ನೆಕ್ಸಾನ್ EVಯಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳಂತಹ ಫೀಚರ್ ಗಳು ಲಭ್ಯವಿಲ್ಲ, ಇವೆಲ್ಲವೂ ಟಾಟಾ ಪಂಚ್ EVಯ ಟಾಪ್-ಸ್ಪೆಕ್ ವೇರಿಯಂಟ್ ನೊಂದಿಗೆ ಲಭ್ಯವಿದೆ.

  •  ಸುರಕ್ಷತೆಯ ವಿಷಯದಲ್ಲಿ, ನೆಕ್ಸಾನ್ EV 6 ಏರ್‌ಬ್ಯಾಗ್‌ಗಳು, ಸೆನ್ಸರ್‌ಗಳೊಂದಿಗೆ ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಪಡೆಯುತ್ತದೆ. ಆದರೆ ಪಂಚ್ EV ಯ ಸುರಕ್ಷತಾ ಕಿಟ್ 360-ಡಿಗ್ರಿ ಕ್ಯಾಮೆರಾ, ಆಟೋ-ಹೋಲ್ಡ್ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಕೂಡ ಒಳಗೊಂಡಿದೆ.

 ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಹೋಲಿಕೆ: ಮುಂಚೆ ಮತ್ತು ಈಗ

 ತೀರ್ಪು

 ಸ್ಪಷ್ಟವಾಗಿ ಹೇಳುವುದಾದರೆ, ಟಾಟಾ ನೆಕ್ಸಾನ್ EV ಬೇಸ್-ಸ್ಪೆಕ್ ಕ್ರಿಯೇಟಿವ್ ಪ್ಲಸ್ ವೇರಿಯಂಟ್ ಗೆ ಹೋಲಿಸಿದರೆ ಟಾಟಾ ಪಂಚ್ EV ಟಾಪ್-ಸ್ಪೆಕ್ ಎಂಪವರ್ಡ್ ಪ್ಲಸ್ ಮಾಡೆಲ್ ಹೆಚ್ಚಿನ ಫೀಚರ್ ಗಳನ್ನು ಮತ್ತು ಹೆಚ್ಚಿನ ಡ್ರೈವಿಂಗ್ ರೇಂಜ್ ಅನ್ನು ಅದೇ ಬೆಲೆಯಲ್ಲಿ ನೀಡುತ್ತದೆ. ಆದರೆ, ನೆಕ್ಸಾನ್ EVಯು ಅದರ ದೊಡ್ಡ ಗಾತ್ರದಿಂದಾಗಿ ಹೆಚ್ಚು ಅಗಲವಾದ ಕ್ಯಾಬಿನ್ ಅನ್ನು ನೀಡುತ್ತದೆ, ಹಾಗಾಗಿ ಇದು ಫ್ಯಾಮಿಲಿ ಕಾರ್ ಆಗಿ ಹೊರಹೊಮ್ಮುತ್ತದೆ.

 ನೀವು ಗಾತ್ರ ಮತ್ತು ಸ್ವಲ್ಪ ಇಂಟೀರಿಯರ್ ಜಾಗದಲ್ಲಿ ರಾಜಿ ಮಾಡಿಕೊಳ್ಳಲು ತಯಾರಾಗಿದ್ದರೆ, ಟಾಪ್-ಸ್ಪೆಕ್ ಟಾಟಾ ಪಂಚ್ EVಯು ಬೇಸ್-ಸ್ಪೆಕ್ ಟಾಟಾ ನೆಕ್ಸಾನ್ EV ಗಿಂತ ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. ಒಂದೇ ಬೆಲೆಯನ್ನು ಹೊಂದಿರುವ ಈ ಎರಡರ ನಡುವೆ ನೀವು ಯಾವ EV ಆಯ್ಕೆ ಮಾಡುತ್ತೀರಿ ಮತ್ತು ಏಕೆ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

 ಇನ್ನಷ್ಟು ಓದಿ: ಟಾಟಾ ನೆಕ್ಸಾನ್ EV ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ನೆಕ್ಸಾನ್ ಇವಿ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience