Tata Nexon ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಹೋಲಿಕೆ: ಮುಂಚೆ ಮತ್ತು ಈಗ

published on ಫೆಬ್ರವಾರಿ 20, 2024 04:21 pm by rohit for ಟಾಟಾ ನೆಕ್ಸ್ಂನ್‌

  • 22 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೇಸ್‌ಲಿಫ್ಟ್ ಆಗಿರುವ ಟಾಟಾ ನೆಕ್ಸಾನ್ ಕೂಡ ಮಾಡೆಲ್ ಗೆ ಸಿಕ್ಕಿರುವ ಹಾಗೆ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ, ಆದರೆ ಆ ಸ್ಕೋರ್ 2018 ಕ್ಕಿಂತ 2024 ರಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದೆ. ಏಕೆ ಎಂದು ಇಲ್ಲಿ ನೀಡಲಾಗಿದೆ

2018 Tata Nexon vs 2024 Tata Nexon Global NCAP comparison

ಗ್ಲೋಬಲ್ NCAP ಅಥಾರಿಟಿ ತನ್ನ #SaferCarsForIndia ಅಭಿಯಾನದ ಅಡಿಯಲ್ಲಿ 2014 ರಿಂದ ಭಾರತ-ಸ್ಪೆಕ್ ಕಾರುಗಳನ್ನು ಕ್ರ್ಯಾಶ್-ಟೆಸ್ಟಿಂಗ್ ಮಾಡಲು ಪ್ರಾರಂಭಿಸಿದೆ, ಆದರೆ ಅದರ ಮೊದಲ ದೊಡ್ಡ ಪ್ರಗತಿಯು 2018 ರಲ್ಲಿ ನೋಡಲಾಯಿತು. ಆಗ ಟಾಟಾ ನೆಕ್ಸಾನ್ ಸುರಕ್ಷತಾ ವಿಷಯದಲ್ಲಿ ಪೂರ್ತಿ 5-ಸ್ಟಾರ್ ರೇಟಿಂಗ್ ಗಳಿಸಿದ ಮೊದಲ ಭಾರತೀಯ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈಗ, ಆರು ವರ್ಷ ಮತ್ತು ಸಮಗ್ರ ಫೇಸ್‌ಲಿಫ್ಟ್ ಪಡೆದ ನಂತರ, ಸಬ್-4m SUV ಅದೇ ರೇಟಿಂಗ್ ಅನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಆ ಸಮಯದಲ್ಲಿ ಕ್ರ್ಯಾಶ್ ಟೆಸ್ಟ್ ಪ್ರೋಟೋಕಾಲ್‌ಗಳನ್ನು ಸಹ ರಿವೈಸ್ ಮಾಡಲಾಗಿರುವುದರಿಂದ ಫಲಿತಾಂಶ ಕೂಡ ಗಮನಾರ್ಹವಾಗಿದೆ.

 ನೆಕ್ಸಾನ್‌ನ ಕ್ರ್ಯಾಶ್ ಟೆಸ್ಟ್ ಪರ್ಫಾರ್ಮೆನ್ಸ್ ಈ ಹಿಂದಿನ ಸಮಯದಿಂದ ಇಂದಿನವರೆಗೆ ಹೇಗೆ ಬದಲಾಗಿದೆ ಎಂಬುದನ್ನು ನಾವು ನೋಡುವ ಮೊದಲು, ಟೆಸ್ಟ್ ಪ್ರೋಟೋಕಾಲ್‌ಗಳ ನಂತರ SUV ಗಾಗಿ ಯಾವ ಅಪ್ಡೇಟ್ ಅನ್ನು ನೀಡಲಾಗಿದೆ ಎಂಬುದನ್ನು ಮೊದಲು ಪರಿಶೀಲಿಸೋಣ.

 ಟಾಟಾ ನೆಕ್ಸಾನ್: ಮುಂಚೆ ಮತ್ತು ಈಗ

2018 Tata Nexon crash tested at Global NCAP

 2017 ರಲ್ಲಿ, ಟಾಟಾ ನೆಕ್ಸಾನ್ ಅನ್ನು ಮೊದಲು ಮಾರುಕಟ್ಟೆಗೆ ತಂದಾಗ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು EBD ಜೊತೆಗೆ ABS ಅನ್ನು ಮಾತ್ರ ಸ್ಟ್ಯಾಂಡರ್ಡ್ ಸುರಕ್ಷತಾ ಟೆಕ್ ಆಗಿ ನೀಡಲಾಗಿತ್ತು. ಟಾಟಾ ನೆಕ್ಸಾನ್ ಅನ್ನು 2018 ರಲ್ಲಿ ಎರಡು ಬಾರಿ ಕ್ರ್ಯಾಶ್-ಟೆಸ್ಟ್ ಮಾಡಲಾಯಿತು ಮತ್ತು ಮುಂಭಾಗದಲ್ಲಿ ಕುಳಿತವರಿಗೆ ಸೀಟ್‌ಬೆಲ್ಟ್ ರಿಮೈಂಡರ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಒದಗಿಸುವ ಒಂದು ಸಣ್ಣ ಅಪ್ಡೇಟ್ ಪಡೆದ ನಂತರ, SUV 5-ಸ್ಟಾರ್ ಸ್ಕೋರ್ ಅನ್ನು ಪಡೆಯಿತು (ಇದು ಮೊದಲು 4-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿತ್ತು).

Tata Nexon GNCAP

 ಇಂದು, SUV ಒಂದೆರಡು ಅಪ್ಡೇಟ್ ಗಳನ್ನು ಪಡೆದಿದೆ ಮತ್ತು ಈಗ ಸಾಕಷ್ಟು ಸುರಕ್ಷತಾ ತಂತ್ರಜ್ಞಾನವನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ. ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಪಡೆದಿದೆ. ಇದಲ್ಲದೆ, ಟಾಟಾ ಇತ್ತೀಚಿನ ಫೇಸ್‌ಲಿಫ್ಟ್‌ನೊಂದಿಗೆ SUV ಯ ಸ್ಟ್ರಕ್ಚರಲ್ ಸಾಮರ್ಥ್ಯ ಮತ್ತು ಬಿಲ್ಡ್ ಗುಣಮಟ್ಟವನ್ನು ಸುಧಾರಿಸಿದೆ, ಇದು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

 ಇದನ್ನು ಕೂಡ ಓದಿ: ಹೊಸ ಕಾರನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ನಿಮ್ಮ ಹಳೆಯ ಕಾರನ್ನು ಸ್ಕ್ರ್ಯಾಪ್ ಮಾಡಿದರೆ ಸಿಗುವ ಎಲ್ಲಾ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ

 ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಗಳ ಪ್ರಗತಿ

 ಗ್ಲೋಬಲ್ NCAP ಭಾರತ-ಸ್ಪೆಕ್ ಕಾರುಗಳ ಕ್ರ್ಯಾಶ್ ಟೆಸ್ಟ್ ಗಳನ್ನು ನಡೆಸಲು ಶುರು ಮಾಡಿದಾಗ, ಅದರ ಪ್ರಾಥಮಿಕ ಉದ್ದೇಶವು ಮುಂಭಾಗದ ಏರ್‌ಬ್ಯಾಗ್‌ಗಳು, ABS ಮತ್ತು ಒಟ್ಟಾರೆ ಸ್ಟ್ರಕ್ಚರಲ್ ಸಮಗ್ರತೆಯನ್ನು ಒದಗಿಸುವುದು ಆಗಿತ್ತು. ಇದು ಮುಂಭಾಗದ ಕ್ರ್ಯಾಶ್ ಟೆಸ್ಟ್ ಗಳನ್ನು ಮಾತ್ರ ನಡೆಸಿತು ಮತ್ತು ಎರಡು ವಿಭಾಗಗಳಲ್ಲಿ ಮಾಡೆಲ್ ಗಳನ್ನು ರೇಟ್ ಮಾಡಲಾಗುತಿತ್ತು: ಒಂದು ವಯಸ್ಕ ಪ್ರಯಾಣಿಕರ ಸುರಕ್ಷೆತೆಗಾಗಿ (17 ಅಂಕಗಳಲ್ಲಿ) ಮತ್ತು ಇನ್ನೊಂದು ಮಕ್ಕಳ ಸುರಕ್ಷೆತೆಗಾಗಿ (49 ಅಂಕಗಳಲ್ಲಿ).

2024 Tata Nexon side pole impact test Global NCAP

 ಇಂದು, ಗ್ಲೋಬಲ್ NCAP ಮುಂಭಾಗದ ಟೆಸ್ಟ್ ಜೊತೆಗೆ ಸೈಡ್ ಇಂಪ್ಯಾಕ್ಟ್, ಸೈಡ್ ಪೋಲ್ ಇಂಪ್ಯಾಕ್ಟ್ ಮತ್ತು ಪಾದಚಾರಿ ಸಂರಕ್ಷಣಾ ಟೆಸ್ಟ್ ಗಳನ್ನು ಕೂಡ ಮೌಲ್ಯಮಾಪನದಲ್ಲಿ ಒಳಗೊಂಡಿದೆ. ಇದಲ್ಲದೆ, ಗರಿಷ್ಠ 5-ಸ್ಟಾರ್ ರೇಟಿಂಗ್ ಅನ್ನು ಸಾಧಿಸಲು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಆರು ಏರ್‌ಬ್ಯಾಗ್‌ಗಳು ಮತ್ತು ISOFIX ನಂತಹ ಇನ್ನೂ ಕೆಲವು ಸುರಕ್ಷತಾ ಸಾಧನಗಳನ್ನು ಇದು ಕಡ್ಡಾಯಗೊಳಿಸಿದೆ. ಇದು ಈಗ ವಯಸ್ಕ ಪ್ರಯಾಣಿಕರ ಸುರಕ್ಷತೆಯನ್ನು 34 ಅಂಕಗಳಲ್ಲಿ ಮೌಲ್ಯಮಾಪನ ಮಾಡುತ್ತದೆ.

 ಟಾಟಾ ನೆಕ್ಸಾನ್ ಗ್ಲೋಬಲ್ NCAP ಸ್ಕೋರ್‌ಗಳು: ಒಂದು ತ್ವರಿತ ಹೋಲಿಕೆ

 

ಪ್ಯಾರಾಮೀಟರ್

 2018 ಟಾಟಾ ನೆಕ್ಸಾನ್ (ಎರಡನೇ ಸ್ಕೋರ್)

 2024 ಟಾಟಾ ನೆಕ್ಸಾನ್

 ವಯಸ್ಕ ಪ್ರಯಾಣಿಕರ ಸುರಕ್ಷತೆ

 5 ಸ್ಟಾರ್ ಗಳು (17 ಅಂಕಗಳಲ್ಲಿ 16.06)

 5 ಸ್ಟಾರ್ ಗಳು (34 ಅಂಕಗಳಲ್ಲಿ 32.22)

 ಮಕ್ಕಳ ಸುರಕ್ಷತೆ

 3 ಸ್ಟಾರ್ ಗಳು (49 ಅಂಕಗಳಲ್ಲಿ 25)

 5 ಸ್ಟಾರ್ ಗಳು (49 ಅಂಕಗಳಲ್ಲಿ 44.52)

 

 ವಯಸ್ಕ ಪ್ರಯಾಣಿಕರ ಸುರಕ್ಷತೆ

2018 Tata Nexon Global NCAP adult occupant protection result
2024 Tata Nexon Global NCAP adult occupant protection result

 SUV ಯ ಎರಡೂ ವರ್ಷನ್ ಗಳು ಮುಂಭಾಗದ ಕ್ರ್ಯಾಶ್ ಟೆಸ್ಟ್ ಗಳಲ್ಲಿ ವಯಸ್ಕ ಪ್ರಯಾಣಿಕರಿಗೆ ' ಅಡಿಕ್ವೆಟ್' ನಿಂದ ' ಗುಡ್' ವರೆಗೆ ಸುರಕ್ಷತೆಯನ್ನು ನೀಡಿತು. ಎರಡೂ ಮಾಡೆಲ್ ಗಳ ಫುಟ್‌ವೆಲ್ ಜಾಗವನ್ನು ಮತ್ತು ಬಾಡಿಶೆಲ್ ಅನ್ನು ' ಸ್ಟೇಬಲ್' ಎಂದು ರೇಟ್ ಮಾಡಲಾಗಿದೆ, ಇದು ಹೆಚ್ಚಿನ ಲೋಡ್ ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. 2024 ನೆಕ್ಸಾನ್ ಹೊಸ ಸೈಡ್ ಪೋಲ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲಿ ' ಮಾರ್ಜಿನಲ್ ' ನಿಂದ ‘ಗುಡ್' ಮಟ್ಟದ ಸುರಕ್ಷತೆಯನ್ನು ಒದಗಿಸಿದೆ.

 ಮಕ್ಕಳ ಸುರಕ್ಷತೆ

 2018 ನೆಕ್ಸಾನ್‌ನಲ್ಲಿ, 3-ವರ್ಷದ ಡಮ್ಮಿ ಮಗುವಿಗೆ ಚೈಲ್ಡ್ ಸೀಟ್ ಅನ್ನು ಮುಂಭಾಗಕ್ಕೆ ಮುಖ ಮಾಡಿ ಇರಿಸಲಾಗಿತ್ತು. ಹಾಗೆಯೇ, ಇದನ್ನು 18 ತಿಂಗಳ ಮಗುವಿಗೆ ಹಿಮ್ಮುಖವಾಗಿ ಇರಿಸಲಾಗಿತ್ತು. ಎರಡೂ ಸನ್ನಿವೇಶಗಳಲ್ಲಿ ISOFIX ಆಂಕಾರೇಜ್‌ಗಳನ್ನು ಬಳಸಲಾಗಿತ್ತು, ಆದರೆ ಎರಡನೇ ಸನ್ನಿವೇಶದಲ್ಲಿ ಸಪೋರ್ಟ್ ಲೆಗ್ ಜಾರಿಗೆ ತರಲಾಯಿತು. ಮೊದಲನೆಯ ಸನ್ನಿವೇಶವು ಅತಿಯಾದ ಮುಂದೆ ಚಲನೆಯನ್ನು ತಡೆಯಲು ಸಮರ್ಥವಾಗಿತ್ತು, ಒಟ್ಟಾರೆ ಪ್ರಯಾಣಿಕರ ರಕ್ಷಣೆಯು 'ಮಾರ್ಜಿನಲ್ ' ಮತ್ತು ' ಗುಡ್ ' ನಡುವೆ ಇತ್ತು.

Nexon facelift side impact test GNCAP

 2024 ನೆಕ್ಸಾನ್‌ನಲ್ಲಿ, 3 ವರ್ಷ ವಯಸ್ಸಿನ ಮತ್ತು 18 ತಿಂಗಳ ವಯಸ್ಸಿನ ಮಕ್ಕಳಿಗಾಗಿ ಎರಡೂ ಚೈಲ್ಡ್ ಸೀಟ್‌ಗಳನ್ನು ಆಂಕಾರೇಜ್‌ಗಳು ಮತ್ತು ಸಪೋರ್ಟ್ ಲೆಗ್ ಬಳಸಿ ಹಿಂಭಾಗದ ಕಡೆಗೆ ಮುಖಮಾಡಿ ಅಳವಡಿಸಲಾಗಿದೆ. ಎರಡೂ ಸಂದರ್ಭಗಳಲ್ಲಿ, ಮಕ್ಕಳಿಗೆ ಸಾಕಷ್ಟು ರಕ್ಷಣೆ ನೀಡಲಾಗಿತ್ತು. ಅದರ ಜೊತೆಗೆ, CRS ಎರಡಕ್ಕೂ ಸೈಡ್ ಇಂಪ್ಯಾಕ್ಟ್ ಕ್ರ್ಯಾಶ್ ಟೆಸ್ಟ್‌ನಲ್ಲಿ ಸಂಪೂರ್ಣ ರಕ್ಷಣೆಯನ್ನು ನೀಡಿತು, ಇದು ಬಹುಶಃ ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳ ಉಪಸ್ಥಿತಿಯಿಂದ ಆಗಿರಬಹುದು.

 ನೆಕ್ಸಾನ್‌ನ ಮುಂದಿನ ಪ್ಲಾನ್?

 ಟಾಟಾ ನೆಕ್ಸಾನ್ ಗ್ಲೋಬಲ್ NCAP ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿದ್ದರೂ ಕೂಡ, ಇದು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB), ರಿಯರ್-ಕ್ರಾಸ್ ಟ್ರಾಫಿಕ್ ಅಲರ್ಟ್‌ ಮತ್ತು ಕೊಲಿಷನ್ ಅವಯ್ಡೆನ್ಸ್ ಅಸಿಸ್ಟ್ ನಂತಹ ಕೆಲವು ಪ್ರಮುಖ ಸುಧಾರಿತ ಡ್ರೈವರ್ ಎಸ್ಸಿಟನ್ಸ್ ಸಿಸ್ಟಮ್ ಗಳ (ADMS) ಫೀಚರ್ ಗಳನ್ನು ಪಡೆಯುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಇನ್ನಷ್ಟು ಸುಧಾರಿಸಬಹುದು.

Tata Nexon EV

 ಅಲ್ಲದೆ, ಹೊಸ ನೆಕ್ಸಾನ್ ಅನ್ನು ಶೀಘ್ರದಲ್ಲೇ ಭಾರತ್ NCAP ಕೂಡ ಕ್ರ್ಯಾಶ್ ಟೆಸ್ಟ್ ಮಾಡಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಇದಲ್ಲದೆ, ಕ್ರ್ಯಾಶ್ ಟೆಸ್ಟ್ ಗಾಗಿ ಟಾಟಾ ತನ್ನ ನೆಕ್ಸಾನ್ EVಯನ್ನು ಕೂಡ ಕಳುಹಿಸಲಿದೆ ಎಂದು ನಾವು ಭಾವಿಸುತ್ತೇವೆ ಮತ್ತು ಇದು ಕೂಡ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಳ್ಳಲಿದೆ ಎಂಬುದು ನಮ್ಮ ನಂಬಿಕೆಯಾಗಿದೆ.

 ಟಾಟಾ ನೆಕ್ಸಾನ್‌ನ ಸುಧಾರಿತ ಸುರಕ್ಷತೆಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

 ಇದನ್ನು ಕೂಡ ಓದಿ: ಭಾರತ್ NCAP ವರ್ಸಸ್ ಗ್ಲೋಬಲ್ NCAP: ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಇಲ್ಲಿ ವಿವರಿಸಲಾಗಿದೆ

 ಇನ್ನಷ್ಟು ಓದಿ: ನೆಕ್ಸಾನ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ನೆಕ್ಸ್ಂನ್‌

1 ಕಾಮೆಂಟ್
1
L
l biswal
Feb 22, 2024, 8:45:39 PM

Rightly quoted: TATA should bring ADAS, AEB, Collision warning sys to Nexon, Altroz. Should also work towards series hybrid electric engines for best fuel efficiency to stay ahead & overcome Maruti

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience