Login or Register ಅತ್ಯುತ್ತಮ CarDekho experience ಗೆ
Login

ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ಹೊಸ ಫೀಚರ್‌ಗಳನ್ನು ಪಡೆಯಲಿರುವ Tata Nexon EV

ಸೆಪ್ಟೆಂಬರ್ 24, 2024 09:32 pm ರಂದು rohit ಮೂಲಕ ಪ್ರಕಟಿಸಲಾಗಿದೆ
49 Views

ಟಾಟಾ ನೆಕ್ಸಾನ್ ಇವಿಯನ್ನು ದೊಡ್ಡದಾದ 45 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ 489 ಕಿ.ಮೀ.ಯಷ್ಟು ರೇಂಜ್‌ ಅನ್ನು ಕ್ಲೈಮ್‌ ಮಾಡಿದೆ, ಹಾಗೆಯೇ ಈ ಸಂಪೂರ್ಣ ಆಲ್-ಎಲೆಕ್ಟ್ರಿಕ್ ಎಸ್‌ಯುವಿಯ ಹೊಸ ರೆಡ್ ಡಾರ್ಕ್ ಎಡಿಷನ್‌ ಅನ್ನು ಸಹ ಬಿಡುಗಡೆ ಮಾಡಿದೆ

ಟಾಟಾ ನೆಕ್ಸಾನ್ ಇವಿಯು ತನ್ನ ಎಲೆಕ್ಟ್ರಿಕ್ ಪವರ್‌ಟ್ರೇನ್ ಮತ್ತು ಪನರೋಮಿಕ್‌ ಸನ್‌ರೂಫ್ ಸೇರಿದಂತೆ ಫೀಚರ್‌ಗಳ ಸೆಟ್‌ಗೆ ಕೆಲವು ಪ್ರಮುಖ ಆಪ್‌ಡೇಟ್‌ಗಳನ್ನು ನೀಡಿದೆ. ಅಷ್ಟೇ ಅಲ್ಲದೇ, ಇದು ಈಗ ಹೊಸ ರೆಡ್ ಡಾರ್ಕ್ ಎಡಿಷನ್‌ನಲ್ಲಿಯೂ ಬರುತ್ತದೆ. ಹೊಸ ನೆಕ್ಸಾನ್‌ ಇವಿಯ 45 ಲಾಂಗ್ ರೇಂಜ್‌ನ ಆಪ್‌ಡೇಟ್‌ ಮಾಡಲಾದ ವೇರಿಯಂಟ್-ವಾರು ಬೆಲೆಗಳನ್ನು ಪರಿಶೀಲಿಸೋಣ:

ವೇರಿಯೆಂಟ್‌

ಹೊಸ ನೆಕ್ಸಾನ್‌ ಇವಿ 45 ಲಾಂಗ್‌ ರೇಂಜ್‌

ಕ್ರಿಯೆಟಿವ್‌

13.99 ಲಕ್ಷ ರೂ.

ಫಿಯರ್‌ಲೆಸ್‌

14.99 ಲಕ್ಷ ರೂ.

ಎಂಪವರ್ಡ್‌

15.99 ಲಕ್ಷ ರೂ.

ಎಂಪವರ್ಡ್‌ ಪ್ಲಸ್‌

16.99 ಲಕ್ಷ ರೂ.

ನೆಕ್ಸಾನ್‌ ಇವಿಯ ಲಾಂಗ್ ರೇಂಜ್ (LR) ಹೊಸ ರೆಡ್ ಡಾರ್ಕ್ ಎಡಿಷನ್‌ನಲ್ಲಿ ಲಭ್ಯವಿದೆ, ಇದು ಸಂಪೂರ್ಣವಾಗಿ ಲೋಡ್ ಮಾಡಲಾದ ಎಂಪವರ್ಡ್‌ ಪ್ಲಸ್ ಆವೃತ್ತಿಯನ್ನು ಆಧರಿಸಿದೆ, ಇದರ ಬೆಲೆ 17.19 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಅಲ್ಲದೆ, ನೆಕ್ಸಾನ್‌ ಇವಿ ಲಾಂಗ್ ರೇಂಜ್‌ನಲ್ಲಿ ಲೋವರ್‌ ವೇರಿಯೆಂಟ್‌ ಆಗಿ ಕ್ರಿಯೇಟಿವ್ ಟ್ರಿಮ್‌ ಅನ್ನು ಪರಿಚಯಿಸಲ್ಪಟ್ಟಿರುವುದರಿಂದ ಆರಂಭಿಕ ಬೆಲೆಯಲ್ಲಿ ಸುಮಾರು 60,000 ರೂ.ವರೆಗೆ ಕಡಿತವಾಗಿದೆ.

ಎಲೆಕ್ಟ್ರಿಕ್‌ ಪವರ್‌ಟ್ರೈನ್‌

ಟಾಟಾ ನೆಕ್ಸಾನ್‌ ಇವಿ ಎಲ್‌ಆರ್‌ ಈಗ ದೊಡ್ಡದಾದ 45 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು ಕರ್ವ್‌ ಇವಿಯಲ್ಲಿ ಲಭ್ಯವಿರುವ ಅದೇ ಗಾತ್ರವನ್ನು ಹೊಂದಿದೆ ಮತ್ತು 489 ಕಿ.ಮೀ.ಯಷ್ಟು ರೇಂಜ್‌ ಅನ್ನು ಕ್ಲೈಮ್‌ ಮಾಡಿದೆ. ಇದು ಮೊದಲಿನಂತೆಯೇ ಅದೇ 145 ಪಿಎಸ್‌/215 ಎನ್‌ಎಮ್‌ ಎಲೆಕ್ಟ್ರಿಕ್ ಮೋಟಾರ್ ಅನ್ನು ಪಡೆಯುತ್ತದೆ. ಇದರ C75 ಕ್ಲೈಮ್‌ ಮಾಡಲಾದ ರೇಂಜ್‌ (ಅಂದಾಜು ರಿಯಲ್‌ ಟೈಮ್‌ ಬಳಕೆಯ ಆಧಾರದ ಮೇಲೆ) ಸುಮಾರು 350 ಕಿ.ಮೀ ನಿಂದ 370 ಕಿ.ಮೀ. ವರೆಗೆ ಇದೆ. ಟಾಟಾ ಅಸ್ತಿತ್ವದಲ್ಲಿರುವ ಬ್ಯಾಟರಿ ಪ್ಯಾಕ್‌ಗಳನ್ನು ನೆಕ್ಸಾನ್‌ ಇವಿಯೊಂದಿಗೆ ನೀಡುವುದನ್ನು ಮುಂದುವರಿಸುತ್ತದೆ, ಅವುಗಳೆಂದರೆ, 325 ಕಿಮೀ ರೇಂಜ್‌ನೊಂದಿಗೆ 30 ಕಿ.ವ್ಯಾಟ್‌ ಬ್ಯಾಟರಿ ಮತ್ತು 465 ಕಿಮೀ ರೇಂಜ್‌ನೊಂದಿಗೆ 40.5 ಕಿ.ವ್ಯಾಟ್‌ ಬ್ಯಾಟರಿ.

ನೆಕ್ಸಾನ್‌ ಇವಿಯಲ್ಲಿನ ಹೊಸ ಬ್ಯಾಟರಿ ಪ್ಯಾಕ್ ಅನ್ನು 60 ಕಿ.ವ್ಯಾಟ್‌ ಫಾಸ್ಟ್‌ ಚಾರ್ಜರ್ ಬಳಸಿ ಕೇವಲ 40 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್‌ ಮಾಡಬಹುದು.

ಯಾವುದಾದರು ಫೀಚರ್‌ನಲ್ಲಿ ಬದಲಾವಣೆ ?

ನೆಕ್ಸಾನ್‌ ಇವಿಯಲ್ಲಿನ ಅತಿದೊಡ್ಡ ಆಪ್‌ಡೇಟ್‌ಗಳಲ್ಲಿ ಒಂದಾಗಿರುವ ಪನರೋಮಿಕ್‌ ಸನ್‌ರೂಫ್‌ನ ಸೇರ್ಪಡೆಯಾಗಿದೆ. ಹೆಚ್ಚುವರಿ ಫೀಚರ್‌ ಎಂದರೆ ಫ್ರಂಕ್ (ಮುಂಭಾಗದ ಟ್ರಂಕ್‌). ಇತರ ಪ್ರಮುಖ ಹೈಲೈಟ್ಸ್‌ಗಳು 12.3-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್, ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ ಲಭ್ಯ), 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ನೆಕ್ಸಾನ್‌ ಇವಿ ರೆಡ್ ಡಾರ್ಕ್ ಎಡಿಷನ್‌ನ ಪರಿಚಯ

ನೆಕ್ಸಾನ್‌ ಇವಿಯಲ್ಲಿ ಪರಿಚಯಿಸಲಾದ ಅಪ್‌ಡೇಟ್‌ಗಳೊಂದಿಗೆ, ಕಾರು ತಯಾರಕರು ಈಗ ಈ ಎಸ್‌ಯುವಿಯಲ್ಲಿ ರೆಡ್ ಡಾರ್ಕ್ ಎಡಿಷನ್‌ ಅನ್ನು ಸಹ ಪರಿಚಯಿಸಿದ್ದಾರೆ. ಇದು ರೆಗುಲರ್‌ ಮೊಡೆಲ್‌ನಂತೇ, ಅದೇ ಕಾರ್ಬನ್ ಬ್ಲ್ಯಾಕ್ ಪೇಂಟ್ ಆಯ್ಕೆಯಲ್ಲಿ ಬರುತ್ತದೆ, ಹಾಗೆಯೇ ಸಂಪೂರ್ಣ ಕಪ್ಪಾದ ರೂಫ್ ರೈಲ್‌ಗಳು, ORVM ಗಳು, ಅಲಾಯ್‌ ವೀಲ್‌ಗಳು ಮತ್ತು ಗ್ರಿಲ್ ಅನ್ನು ಒಳಗೊಂಡಿದೆ. ಇದು ಕೆಂಪು ಕಲರ್‌ನಲ್ಲಿ ಫಿನಿಶ್‌ ಮಾಡಲಾದ ಮುಂಭಾಗದ ಫೆಂಡರ್‌ಗಳಲ್ಲಿ '#ಡಾರ್ಕ್' ಬ್ಯಾಡ್ಜ್ ಅನ್ನು ಸಹ ಪಡೆಯುತ್ತದೆ.

ಒಳಭಾಗದಲ್ಲಿ, ಕ್ಯಾಬಿನ್ ಅದರ ವಿಶಿಷ್ಟ ಸ್ವಭಾವವನ್ನು ಪಡೆಯಲು ಕಪ್ಪು ಮತ್ತು ಕೆಂಪು ಥೀಮ್ ಅನ್ನು ಹೊಂದಿದೆ. ಟಾಟಾ ಟಚ್‌ಸ್ಕ್ರೀನ್‌ನ UI ಗೆ ಡಾರ್ಕ್ ಥೀಮ್ ಅನ್ನು ಸಹ ನೀಡಿದೆ, ಹಾಗೆಯೇ ಮುಂಭಾಗದ ಸೀಟ್ ಹೆಡ್‌ರೆಸ್ಟ್‌ಗಳು "ಡಾರ್ಕ್" ಚಿಹ್ನೆಯನ್ನು ಹೊಂದಿದೆ.

ಇದನ್ನೂ ಓದಿ: ಬಹುನಿರೀಕ್ಷಿತ Tata Nexon ಸಿಎನ್‌ಜಿ ಬಿಡುಗಡೆ, ಬೆಲೆಗಳು 8.99 ರೂ.ನಿಂದ ಪ್ರಾರಂಭ

ಟಾಟಾ ನೆಕ್ಸಾನ್‌ ಇವಿ ಪ್ರತಿಸ್ಪರ್ಧಿಗಳು

ಟಾಟಾ ನೆಕ್ಸಾನ್ ಇವಿಯು ಮಹೀಂದ್ರಾ ಎಕ್ಸ್‌ಯುವಿ400 ಗೆ ನೇರ ಪ್ರತಿಸ್ಪರ್ಧಿಯಾಗಿದೆ, ಹಾಗೆಯೇ ಟಾಟಾ ಕರ್ವ್‌ ಇವಿ ಮತ್ತು ಎಂಜಿ ವಿಂಡ್ಸರ್ ಇವಿಗೆ ಪರ್ಯಾಯವಾಗಿದೆ. ಅದರ ವಿಶೇಷಣಗಳನ್ನು ಗಮನಿಸುವಾಗ, ಇದನ್ನು ಎಮ್‌ಜಿ ಜೆಡ್‌ಎಸ್‌ ಇವಿಗೆ ಒಂದು ಆಯ್ಕೆಯಾಗಿ ಪರಿಗಣಿಸಬಹುದು.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇದರ ಕುರಿತು ಇನ್ನಷ್ಟು ಓದಿ : ನೆಕ್ಸಾನ್‌ ಇವಿ ಆಟೋಮ್ಯಾಟಿಕ್‌

Share via

Write your Comment on Tata ನೆಕ್ಸಾನ್ ಇವಿ

ಇನ್ನಷ್ಟು ಅನ್ವೇಷಿಸಿ on ಟಾಟಾ ನೆಕ್ಸಾನ್ ಇವಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ