ಮೊದಲ ಬಾರಿಗೆ ಟೆಸ್ಟಿಂಗ್ ಮಾಡುವಾಗ ಸೆರೆಸಿಕ್ಕTata Sierra, ವಿವರಗಳು ಇಲ್ಲಿವೆ
ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಟಾಟಾ ಸಿಯೆರಾ ಮೊದಲು ಎಲೆಕ್ಟ್ರಿಕ್ ವಾಹನವಾಗಿ (EV) ಬರಬಹುದು, ಪೆಟ್ರೋಲ್ ಅಥವಾ ಡೀಸೆಲ್ ವರ್ಷನ್ ನಂತರ ಬರಲಿದೆ
ಹಿಂದಿನ ಆಟೋ ಎಕ್ಸ್‌ಪೋಗಳಲ್ಲಿ ಇವಿ ಮತ್ತು ಪೆಟ್ರೋಲ್/ಡೀಸೆಲ್ ವರ್ಷನ್‌ಗಳನ್ನು ಪರಿಕಲ್ಪನೆಗಳಾಗಿ ತೋರಿಸಿದ ನಂತರ ಹೊಸ ಟಾಟಾ ಸಿಯೆರಾವನ್ನು ಮೊದಲ ಬಾರಿಗೆ ಪರೀಕ್ಷಿಸಲಾಗುತ್ತಿದೆ. 2025 ರ ಆಟೋ ಎಕ್ಸ್‌ಪೋದಲ್ಲಿ, ಟಾಟಾ ಮೊದಲ ಬಾರಿಗೆ ಸಿಯೆರಾ ಕಾನ್ಸೆಪ್ಟ್‌ನ ICE ವರ್ಷನ್ ಅನ್ನು ಪ್ರದರ್ಶಿಸಿತು. ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ ಟಾಟಾ ಸಿಯೆರಾ, ಮೊದಲು ಇವಿ ಆಗಿ ಲಭ್ಯವಿರುತ್ತದೆ, ಪೆಟ್ರೋಲ್/ಡೀಸೆಲ್ ವರ್ಷನ್ ನಂತರ ಬರಲಿದೆ. ಬನ್ನಿ, ಸಿಯೆರಾದ ಸ್ಪೈ ಶಾಟ್‌ಗಳಲ್ಲಿ ಕಾಣಿಸಿಕೊಂಡಿರುವ ಪ್ರಮುಖ ವಿವರಗಳನ್ನು ನೋಡೋಣ.
ಸ್ಪೈ ಶಾಟ್‌ಗಳಲ್ಲಿ ಏನೇನನ್ನು ನೋಡಲಾಗಿದೆ?
ಈ ಟೆಸ್ಟ್ ವಾಹನವನ್ನು ಎಲ್ಲಾ ಕಡೆಗಳಿಂದ ಮುಚ್ಚಿರುವ ಕಾರಣ ಇದು ಇವಿ ಅಥವಾ ಪೆಟ್ರೋಲ್/ಡೀಸೆಲ್ ವರ್ಷನ್ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, LED ಹೆಡ್‌ಲೈಟ್‌ಗಳು ಸೇರಿದಂತೆ ಇದರ ಡಿಸೈನ್ ಪರಿಕಲ್ಪನೆಗೆ ಹೋಲುತ್ತದೆ ಎಂಬುದನ್ನು ನಾವು ನೋಡಬಹುದು. ಕೆಳಗಿನ ಬಂಪರ್ ಮೇಲೆ ನೀವು ಏರ್ ಡ್ಯಾಮ್ ಅನ್ನು ಕೂಡ ನೋಡಬಹುದು. ಅದು ಇಲ್ಲಿ ಗೋಚರಿಸದಿದ್ದರೂ, ಅಂತಿಮ ಪ್ರೊಡಕ್ಷನ್ ಮಾಡೆಲ್ ಫುಲ್-ವಿಡ್ತ್ ಲೈಟ್ ಬಾರ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸೈಡ್ ಪ್ರೊಫೈಲ್ 90 ರ ದಶಕದ ಕ್ಲಾಸಿಕ್ ಸಿಯೆರಾ ವಿನ್ಯಾಸವನ್ನು ಮರಳಿ ತರುತ್ತದೆ ಆದರೆ ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಂತೆ ಆಧುನಿಕ ಸ್ಪರ್ಶ ಕೂಡ ನೀಡಲಾಗಿದೆ. ಇಲ್ಲಿ ಕಾಣಿಸದಿದ್ದರೂ, ಇದು ಮೂಲ ಮಾಡೆಲ್‌ನಿಂದ ಐಕಾನಿಕ್ ಆಲ್ಪೈನ್ ಹಿಂಭಾಗದ ವಿಂಡೋಗಳ ಅಪ್ಡೇಟ್ ಆಗಿರುವ ವರ್ಷನ್ ಅನ್ನು ಕೂಡ ಒಳಗೊಂಡಿರುತ್ತದೆ. 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಮಾಡೆಲ್ ಅಲೊಯ್ ವೀಲ್‌ಗಳನ್ನು ಹೊಂದಿತ್ತು, ಆದರೆ ಟೆಸ್ಟ್ ವಾಹನವು ಸ್ಟೀಲ್ ವೀಲ್‌ಗಳೊಂದಿಗೆ ಕಂಡುಬಂದಿದೆ.
ಹಿಂಭಾಗವನ್ನು ಎಲ್ಲಾ ಕಡೆಗಳಿಂದ ಮರೆಮಾಚಿರುವ ಕಾರಣ, ಟೈಲ್‌ಲ್ಯಾಂಪ್‌ಗಳು ಮತ್ತು ಹಿಂಭಾಗದ ವಿಂಡೋ ಮಾತ್ರ ಕಾಣಿಸುತ್ತದೆ. ಆಟೋ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ಮಾಡೆಲ್ ಕನೆಕ್ಟೆಡ್ LED ಟೈಲ್ ಲ್ಯಾಂಪ್‌ಗಳು, ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಮಧ್ಯದಲ್ಲಿ ಸಿಯೆರಾ ಬ್ಯಾಡ್ಜಿಂಗ್ ಅನ್ನು ಒಳಗೊಂಡಿತ್ತು.
ಇದನ್ನು ಕೂಡ ಓದಿ: 7 ಶೋರೂಮ್ ಫೋಟೋಗಳಲ್ಲಿ ಇಲ್ಲಿದೆ ಕಿಯಾ ಸೈರೋಸ್‌ನ ಮಿಡ್-ಸ್ಪೆಕ್ HTK ಪ್ಲಸ್ ವೇರಿಯಂಟ್‌ನ ಹೊರಭಾಗ ಮತ್ತು ಒಳಭಾಗ
ಟಾಟಾ ಸಿಯೆರಾದಲ್ಲಿ ನಿರೀಕ್ಷಿಸಲಾಗಿರುವ ಫೀಚರ್‌ಗಳು
ಟಾಟಾ ಸಿಯೆರಾ ಟೆಸ್ಟ್ ಗಾಡಿಯ ಒಳಭಾಗವನ್ನು ಇನ್ನೂ ನಾವು ನೋಡಿಲ್ಲ. ಆದರೆ, ಇದು 12.3-ಇಂಚಿನ ಟ್ರಿಪಲ್-ಸ್ಕ್ರೀನ್ ಸೆಟಪ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಫೀಚರ್‌ಗಳೊಂದಿಗೆ ಬರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇತರ ನಿರೀಕ್ಷಿಸಲಾಗಿರುವ ಫೀಚರ್‌ಗಳಲ್ಲಿ ಡ್ಯುಯಲ್-ಜೋನ್ ಆಟೋ ಎಸಿ, ಪವರ್ಡ್ ಫಂಕ್ಷನಾಲಿಟಿಗಳೊಂದಿಗೆ ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಮತ್ತು ಪ್ರೀಮಿಯಂ ಜೆಬಿಎಲ್ ಸೌಂಡ್ ಸಿಸ್ಟಮ್ ಸೇರಿವೆ.
ಸುರಕ್ಷತೆಯ ವಿಷಯದಲ್ಲಿ, ಸಿಯೆರಾ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ISOFIX ಚೈಲ್ಡ್ ಸೀಟ್ ಆಂಕಾರೇಜ್ ಮತ್ತು ಲೆವೆಲ್ 2 ADAS ಗಳನ್ನು ಪಡೆಯುವ ನಿರೀಕ್ಷೆಯಿದೆ.
ಟಾಟಾ ಸಿಯೆರಾದ ನಿರೀಕ್ಷಿಸಲಾಗಿರುವ ಪವರ್‌ಟ್ರೇನ್
ಟಾಟಾ ಸಿಯೆರಾದ ಪವರ್‌ಟ್ರೇನ್ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಹೊಂದಿರಬಹುದು ಎಂದು ನಾವು ನಿರೀಕ್ಷಿಸುತ್ತೇವೆ, ಅದರ ಸ್ಪೆಸಿಫಿಕೇಷನ್‌ಗಳು ಈ ಕೆಳಗಿನಂತಿವೆ:
ಎಂಜಿನ್ |
1.5-ಲೀಟರ್ ಟರ್ಬೊ ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
170 PS |
118 PS |
ಟಾರ್ಕ್ |
280 Nm |
260 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT*, 7-ಸ್ಪೀಡ್ DCT^ |
6-ಸ್ಪೀಡ್ MT, 7-ಸ್ಪೀಡ್ DCT^ |
*MT= ಮಾನ್ಯುಯಲ್ ಟ್ರಾನ್ಸ್‌ಮಿಷನ್
^DCT= ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್
ಟಾಟಾ ಸಿಯೆರಾ ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಸಿಯೆರಾದ ಆರಂಭಿಕ ಬೆಲೆಯು ಸುಮಾರು ರೂ. 11 ಲಕ್ಷಗಳಿಂದ (ಎಕ್ಸ್ ಶೋ ರೂಂ) ಶುರುವಾಗಬಹುದು. ಇದು ಹುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಎಂಜಿ ಆಸ್ಟರ್ ಮತ್ತು ಹೋಂಡಾ ಎಲಿವೇಟ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.