2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ನಿರೀಕ್ಷಿಸಬಹುದಾದ ಎಲ್ಲಾ ಹೊಸ ಮಾರುತಿ, ಟಾಟಾ ಮತ್ತು ಹುಂಡೈ ಕಾರುಗಳ ವಿವರಗಳು
ಮಾರುತಿ ಇ vitara ಗಾಗಿ kartik ಮೂಲಕ ಜನವರಿ 10, 2025 07:39 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಎರಡು ಟಾಪ್ ಕಾರು ತಯಾರಕರಿಂದ ಸಂಪೂರ್ಣವಾಗಿ ಎಲೆಕ್ಟ್ರಿಕ್ ಕಾರುಗಳ ನಿರೀಕ್ಷೆಯಿದ್ದರೂ, ಟಾಟಾದ ಎಕ್ಸ್‌ಪೋ ಲೈನ್-ಅಪ್ ICE ಮತ್ತು ಇವಿ ಗಳ ಮಿಶ್ರಣವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ
ಭಾರತದ ಅತಿದೊಡ್ಡ ಆಟೋಮೋಟಿವ್ ಕಾರ್ಯಕ್ರಮಗಳಲ್ಲಿ ಒಂದಾದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ಗೆ ದಿನಗಣನೆ ಆರಂಭವಾಗಿದ ಮತ್ತು ನಾವು ಈಗಾಗಲೇ ಎಕ್ಸ್‌ಪೋದಲ್ಲಿ ಭಾಗವಹಿಸಲಿರುವ ಎಲ್ಲಾ ಕಾರು ತಯಾರಕರ ಬಗ್ಗೆ ತಿಳಿಸಿದ್ದೇವೆ. ಹಲವು ಕಂಪನಿಗಳು ಭಾರತೀಯ ಮಾರುಕಟ್ಟೆಗೆ ತಮ್ಮ ಹೊಸ ಕಾರುಗಳನ್ನು ಅನಾವರಣ ಮತ್ತು ಬಿಡುಗಡೆ ಮಾಡಲಿವೆ, ಆದರೆ ಭಾರತದ ಅಗ್ರ ಮೂರು ಕಾರು ತಯಾರಕರು ನಮಗಾಗಿ ಏನನ್ನು ಕಾಯ್ದಿರಿಸಿದ್ದಾರೆ ಎಂಬುದರ ಮೇಲೆ ಗಮನ ಹರಿಸೋಣ. ಮಾರುತಿಯ ಮೊದಲ ಇವಿ, ಹುಂಡೈ ತನ್ನ ಬೆಸ್ಟ್ ಸೆಲ್ಲರ್ ಅನ್ನು ಎಲೆಕ್ಟ್ರಿಕರಣಗೊಳಿಸುತ್ತಿದೆ ಮತ್ತು ಟಾಟಾ 1990 ರ ದಶಕದ ಜನಪ್ರಿಯ ಹೆಸರನ್ನು ಮರಳಿ ತರುತ್ತಿದೆ, ಈ ಬಾರಿ ಎಕ್ಸ್‌ಪೋ ಇಲೆಕ್ಟ್ರಿಕ್‌ಮಯವಾಗಲಿದೆ ಎಂಬುವುದನ್ನು ಎಂದು ನಾವು ನಿರೀಕ್ಷಿಸುತ್ತೇವೆ.
ಮಾರುತಿ ಇ-ವಿಟಾರಾ
ನಿರೀಕ್ಷಿತ ಬೆಲೆ: 22 ಲಕ್ಷ ರೂ.
ಮಾರುತಿ ಇ ವಿಟಾರಾವನ್ನು ಮೊದಲು 2023 ರ ಆಟೋ ಎಕ್ಸ್‌ಪೋದಲ್ಲಿ 'eVX' ಪರಿಕಲ್ಪನೆಯಾಗಿ ಪ್ರದರ್ಶಿಸಲಾಯಿತು. ಈ ವರ್ಷ ಪ್ರದರ್ಶಿಸಲಾಗುವ ಮಾದರಿಯು ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ-ಸ್ಪೆಕ್ ಆವೃತ್ತಿಯಾಗಿರಬಹುದು. ಕಾರು ತಯಾರಕರು ಈ ಇವಿಯ ಟೀಸರ್ ಅನ್ನು ಒಂದೆರಡು ಬಾರಿ ಬಿಡುಗಡೆ ಮಾಡಿದ್ದಾರೆ, ಮತ್ತು ಭಾರತೀಯ ಮೊಡೆಲ್‌ನ ಹೊರಭಾಗವು ಜಾಗತಿಕವಾಗಿ ಅನಾವರಣಗೊಂಡ ಸುಜುಕಿ ಇ ವಿಟಾರಾವನ್ನು ಹೋಲುತ್ತದೆ ಎಂದು ನಮಗೆ ತಿಳಿದಿದೆ. ಇ ವಿಟಾರಾ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಬಲವಾದ ಸ್ಪರ್ಧೆಯನ್ನು ನೀಡಲು ಸಹಾಯ ಮಾಡುವ ಸೌಕರ್ಯ ಮತ್ತು ಅನುಕೂಲತೆಯನ್ನು ಹೊಂದಿರುವ ಫೀಚರ್‌ಗಳಿಂದ ತುಂಬಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಭಾರತೀಯ ಆವೃತ್ತಿಯು ಜಾಗತಿಕ-ಸ್ಪೆಕ್ ಮೊಡೆಲ್‌ನಂತೆಯೇ ಅದೇ ಪವರ್‌ಟ್ರೇನ್ ಅನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ, ಇದು 49 ಕಿ.ವ್ಯಾಟ್ ಮತ್ತು ದೊಡ್ಡ 61 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ. ಇದು 500 ಕಿ.ಮೀ.ಗಿಂತ ಹೆಚ್ಚಿನ ರೇಂಜ್ ಅನ್ನು ನೀಡಬಹುದು ಎಂದು ನಾವು ನಿರೀಕ್ಷಿಸುತ್ತೇವೆ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್
ನಿರೀಕ್ಷಿತ ಬೆಲೆ: 17 ಲಕ್ಷ ರೂ.
ಹ್ಯುಂಡೈ ಇತ್ತೀಚೆಗೆ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಬಿಡುಗಡೆಯಾಗುವ ಮುನ್ನ, ಕ್ರೆಟಾ ಎಲೆಕ್ಟ್ರಿಕ್‌ನ ಕ್ಯಾಬಿನ್‌ನ ಒಂದು ಸಣ್ಣ ನೋಟವನ್ನು ಅದರ ಪವರ್‌ಟ್ರೇನ್‌ನ ವಿಶೇಷಣಗಳೊಂದಿಗೆ ನೀಡಿತು. ಇದರ ಡ್ಯಾಶ್‌ಬೋರ್ಡ್ ಅದರ ಇಂಧನ ಚಾಲಿತ ಎಂಜಿನ್ (ICE) ಪ್ರತಿರೂಪಕ್ಕೆ ಹೋಲಿಕೆಗಳನ್ನು ಹೊಂದಿದ್ದರೂ, ಎರಡನ್ನೂ ಪ್ರತ್ಯೇಕಿಸಲು ಇದು ಸಣ್ಣ ವ್ಯತ್ಯಾಸಗಳನ್ನು ಹೊಂದಿದೆ. ಕ್ರೆಟಾ ಎಲೆಕ್ಟ್ರಿಕ್‌ಗೆ ಶಕ್ತಿ ತುಂಬಲು, ಹ್ಯುಂಡೈಯು 42 ಕಿ.ವ್ಯಾಟ್ ಮತ್ತು 51.4 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯೊಂದಿಗೆ ಇವಿಯನ್ನು ನೀಡಲಿದೆ, ಎರಡೂ ಕ್ರಮವಾಗಿ 135 ಪಿಎಸ್ ಮತ್ತು 171 ಪಿಎಸ್ ಉತ್ಪಾದಿಸುವ ಒಂದೇ ಮೋಟಾರ್ ಸೆಟಪ್‌ನಿಂದ ಚಾಲಿತವಾಗಿವೆ. ಸ್ಟ್ಯಾಂಡರ್ಡ್ ಬ್ಯಾಟರಿ ಪ್ಯಾಕ್ ARAI- ಕ್ಲೈಮ್ ಮಾಡಿದ 390 ಕಿಮೀ ರೇಂಜ್ ಅನ್ನು ಹೊಂದಿದ್ದರೆ, ದೊಡ್ಡ ಪ್ಯಾಕ್ ARAI- ಕ್ಲೈಮ್ ಮಾಡಿದ 473 ಕಿಮೀ ರೇಂಜ್ ಅನ್ನು ಹೊಂದಿದೆ.
ಇದನ್ನು ಸಹ ಓದಿ: Hyundai Creta Electricನ ಇಂಟೀರಿಯರ್ ಅನಾವರಣ, ಪ್ರಮುಖ ಫೀಚರ್‌ಗಳ ಬಹಿರಂಗ
ಟಾಟಾ ಸಿಯೆರಾ ಇವಿ ಮತ್ತು ಐಸಿಇ
ಸಿಯೆರಾ ಇವಿ ನಿರೀಕ್ಷಿತ ಬೆಲೆ: ರೂ 20 ಲಕ್ಷ
ಸಿಯೆರಾ ಐಸಿಇ ನಿರೀಕ್ಷಿತ ಬೆಲೆ: ರೂ 11 ಲಕ್ಷ
ಟಾಟಾ ಸಿಯೆರಾ ಇವಿಯು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಮೂರನೇ ಬಾರಿಗೆ ಪ್ರದರ್ಶನಗೊಳ್ಳಲಿದೆ, ಇದಕ್ಕಿಂತ ಮೊದಲು 2020 ರ ಆಟೋ ಎಕ್ಸ್‌ಪೋದಲ್ಲಿ ಒಂದು ಪರಿಕಲ್ಪನೆಯಾಗಿ ಕಾಣಿಸಿಕೊಂಡಿತು ಮತ್ತು ನಂತರ 2023 ರಲ್ಲಿ ಹೆಚ್ಚು ವಿಕಸಿತ ಮೊಡೆಲ್ ಆಗಿ ಕಾಣಿಸಿಕೊಂಡಿತು. ಈ ಇವಿಯು 60-80 ಕಿ.ವ್ಯಾಟ್ ಬ್ಯಾಟರಿ ಮತ್ತು 500 ಕಿ.ಮೀ.ಗಿಂತ ಹೆಚ್ಚಿನ ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಮತ್ತೊಂದೆಡೆ, ಸಿಯೆರಾ ICE ಇಲ್ಲಿಯವರೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಮುಂಬರುವ ಎಕ್ಸ್‌ಪೋದಲ್ಲಿ ಅದರ ಇವಿ ಪ್ರತಿರೂಪದೊಂದಿಗೆ ಇದನ್ನು ಪ್ರದರ್ಶಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಬಾನೆಟ್‌ನ ಅಡಿಯಲ್ಲಿ, ಸಿಯೆರಾ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು ಅದು 170 ಪಿಎಸ್ ಮತ್ತು 280 ಎನ್‌ಎಮ್ ಅನ್ನು ಉತ್ಪಾದಿಸುತ್ತದೆ ಎಂದು ಅಂದಾಜಿಸಲಾಗಿದೆ. ಟಾಟಾ ಸಿಯೆರಾವನ್ನು 2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮತ್ತೊಂದು ಎಂಜಿನ್ ಆಯ್ಕೆಯನ್ನು ನೀಡಬಹುದು, ಇದು 170 ಪಿಎಸ್ ಮತ್ತು 350 ಎನ್‌ಎಮ್ ಅನ್ನು ಉತ್ಪಾದನೆಯನ್ನು ಹೊಂದಿದೆ, ಇದು ಟಾಟಾ ಹ್ಯಾರಿಯರ್‌ನಲ್ಲಿರುವಂತೆಯೇ ಇರುತ್ತದೆ.
ಇದರ ಬಗ್ಗೆ ಇನ್ನಷ್ಟು ಓದಲು: 2025ರಲ್ಲಿ ಮಾರಾಟವಾಗಬಹುದಾದ ಎಲ್ಲಾ ಟಾಟಾ ಕಾರುಗಳ ಮಾಹಿತಿ ಇಲ್ಲಿದೆ
ಟಾಟಾ ಹ್ಯಾರಿಯರ್ ಇವಿ
ನಿರೀಕ್ಷಿತ ಬೆಲೆ: 25 ಲಕ್ಷ ರೂ.
ಇದು ಟಾಟಾ ಹ್ಯಾರಿಯರ್ ಇವಿಯ ಸತತ ಮೂರನೇ ಪ್ರದರ್ಶನವಾಗಿದ್ದು, ಇದು 2023 ರ ಆಟೋ ಎಕ್ಸ್‌ಪೋದಲ್ಲಿ ಪರಿಕಲ್ಪನೆಯಾಗಿ ಪಾದಾರ್ಪಣೆ ಮಾಡಿತು ಮತ್ತು 2024ರಲ್ಲಿ ಹೆಚ್ಚು ವಿಕಸಿತ ಆವೃತ್ತಿಯಾಗಿ ಪ್ರದರ್ಶಿಸಲ್ಪಟ್ಟಿತು. ಇವಿಯ ಪರೀಕ್ಷಾರ್ಥ ವಾಹನಗಳನ್ನು ರಸ್ತೆಯಲ್ಲಿ ಹಲವು ಬಾರಿ ಗುರುತಿಸಲಾಗಿದ್ದು, ಇದರ ವಿನ್ಯಾಸವು ಈ ಹಿಂದೆ ಪ್ರದರ್ಶಿಸಲಾದ ಪರಿಕಲ್ಪನೆಯೊಂದಿಗೆ ಹೋಲಿಕೆಗಳನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ. ಟಾಟಾ ಹ್ಯಾರಿಯರ್ ತನ್ನ ICE ಮೊಡೆಲ್‌ನೊಂದಿಗೆ ಫೀಚರ್‌ಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ ಮತ್ತು ಪವರ್‌ಟ್ರೇನ್‌ಗಾಗಿ AWD ಮತ್ತು 500 ಕಿ.ಮೀ ಗಿಂತ ಹೆಚ್ಚಿನ ರೇಂಜ್ ಅನ್ನು ಸಕ್ರಿಯಗೊಳಿಸಲು ಎರಡು ಮೋಟಾರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಮಾರುತಿ, ಹುಂಡೈ ಮತ್ತು ಟಾಟಾ ಪರಿಚಯಿಸಲಿರುವ ಯಾವ ಕಾರುಗಳ ಬಗ್ಗೆ ನೀವು ಉತ್ಸುಕರಾಗಿದ್ದೀರಾ ಅಥವಾ ನೀವು ಇಷ್ಟಪಡುವ ಬೇರೆ ಯಾವುದಾದರೂ ಕಾರು ಇದೆಯೇ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ