Login or Register ಅತ್ಯುತ್ತಮ CarDekho experience ಗೆ
Login

ತನ್ನ ವಿಭಾಗದಲ್ಲೇ ಮೊದಲು ಬಾರಿಗೆ 4-ಸೀಟ್‌ ಲಾಂಜ್ ಲೇಔಟ್ ನೀಡಲಿದೆ ಟಾಟಾ ಸಿಯೆರಾ

published on ಜನವರಿ 27, 2023 11:19 am by tarun for ಟಾಟಾ ಸಿಯೆರಾ

ಆಟೋ ಎಕ್ಸ್‌ಪೋದಲ್ಲಿ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾದ ಸಿಯೆರಾವನ್ನು ಎಲೆಕ್ಟ್ರಿಕ್ ಮತ್ತು ಐಸಿಇ ಆವೃತ್ತಿಯಲ್ಲಿ ನೀಡಲಾಗುತ್ತದೆ

  • ಸಿಯೆರಾ ಸರಿಸುಮಾರು 4.4-ಮೀಟರ್‌ಗಳಷ್ಟು ಉದ್ದವಿದ್ದು, ಹ್ಯಾರಿಯರ್‌ಗಿಂತ 200ಎಂಎಂ ಚಿಕ್ಕದಾಗಿರುತ್ತದೆ.

  • ಐದು-ಸೀಟುಗಳ ಸೆಟಪ್ ಮತ್ತು ನಾಲ್ಕು-ಸೀಟುಗಳ ಲಾಂಜ್ ಆಯ್ಕೆಯೊಂದಿಗೆ ನೀಡಲಾಗುವುದು.

  • ಲಾಂಜ್ ಆವೃತ್ತಿಯು ಕ್ಯಾಪ್ಟನ್ ಸೀಟುಗಳನ್ನು ಹೊಂದಿದ್ದು, ಅದನ್ನು ಬಾಗಿಸಬಹುದು ಮತ್ತು ಹಿಂದೆ/ಮುಂದೆ ಎಳೆಯಬಹುದಾಗಿದೆ.

  • ಆ್ಯಂಬಿಯೆಂಟ್ ಲೈಟಿಂಗ್, ವಿಸ್ತೃತ ಲೆಗ್ ರೆಸ್ಟ್, ಮತ್ತು ರಿಯರ್ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ಗಳನ್ನು ನಿರೀಕ್ಷಿಸಬಹುದು.

  • ಸಿಯೆರಾ ಇವಿ 500km ರೇಂಜ್‌ನ ಕೊಡುಗೆಯನ್ನು ನೀಡಬೇಕು; ಐಸಿಇಯು 1.5-ಲೀಟರ್ ಟರ್ಬೋ-ಪೆಟ್ರೋಲ್ ಅನ್ನು ಪಡೆದಿದೆ.

ಈ ಆಟೋ ಎಕ್ಸ್‌ಪೋದಲ್ಲಿ ಟಾಟಾದ ಸಿಯೆರಾ ಮರಳಿ ಬಂದಿದ್ದು ಆಶ್ಚರ್ಯಕರ ವಿಷಯವಾಗಿತ್ತು. ಈ ಎಸ್‌ಯುವಿಯು ಉತ್ಪಾದನೆಯಾಗಲಿದೆ ಮತ್ತು ಎಕ್ಸ್‌ಪೋದಲ್ಲಿ ಕಾಣಿಸಿಕೊಂಡಂತೆಯೇ ಇರಲಿದೆ ಎಂದು ಕಾರು ತಯಾರಕರು ದೃಢೀಕರಿಸಿದ್ದಾರೆ.

ಸಿಯೆರಾ ಸುಮಾರು 4.4-ಮೀಟರ್ ಉದ್ದವಿದ್ದು, ಹ್ಯಾರಿಯರ್‌ಗಿಂತ ಸರಿಸುಮಾರು 200ಮಿಮೀ (ಉದ್ದಕ್ಕೆ ಸಂಬಂಧಿಸಿದಂತೆ) ಚಿಕ್ಕದಾಗಿರುತ್ತದೆ. ಇದು ನಾಲ್ಕು ಸೀಟುಗಳ ಲಾಂಜ್ ಆವೃತ್ತಿಯೊಂದಿಗೆ ಐದು-ಸೀಟುಗಳ ಸಂರಚನೆಯನ್ನು ಹೊಂದಿರುತ್ತದೆ. ಇದು ಎರಡು ಕ್ಯಾಪ್ಟನ್ ಸೀಟುಗಳನ್ನು ಹೊಂದಿದ್ದು, ಅವುಗಳನ್ನು ಬಾಗಿಸಬಹುದು ಮತ್ತು ಹಿಂದೆ/ಮುಂದೆ ಎಳೆಯಬಹುದಾಗಿದೆ.

ಇದನ್ನೂ ಓದಿ: ಕೊನೆಗೂ! ಟಾಟಾ ಹ್ಯಾರಿಯರ್ ಆಲ್-ವ್ಹೀಲ್ ಡ್ರೈವ್ ಅನ್ನು ಪಡೆದುಕೊಳ್ಳುತ್ತಿದೆ, ಆದರೆ ಒಂದು ಬಹುದೊಡ್ಡ ಟ್ವಿಸ್ಟ್‌ನೊಂದಿಗೆ!

ಇದಲ್ಲದೇ, ಇದು ಆ್ಯಂಬಿಯೆಂಟ್ ಮೂಡ್ ಲೈಟಿಂಗ್, ಬಹು ಯುಎಸ್‌ಬಿ ಚಾರ್ಜರ್‌ಗಳು, ಕಪ್ ಹೋಲ್ಡರ್‌ಗಳನ್ನು ಹೊಂದಿದ ಸೆಂಟರ್ ಆರ್ಮ್‌ರೆಸ್ಟ್, ಮತ್ತು ಇನ್ನೊಂದು ಸ್ಟೋರೇಜ್ ಸ್ಥಳ ಹಾಗೂ ವಿಸ್ತೃತ ಲೆಗ್ ರೆಸ್ಟ್ ಅನ್ನು ಪಡೆಯುವ ಮೂಲಕ ಹಿಂಬದಿ ಸೀಟುಗಳ ಸುಖಾನುಭೂತಿಯನ್ನು ಹೆಚ್ಚಿಸಿಕೊಂಡಿದೆ. ಫೋಲ್ಡ್ ಔಟ್ ಟ್ರೇಗಳು, ರಿಯರ್ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ಗಳು ಮತ್ತು ಹಿಂಭಾಗದ ವೈರ್‌ಲೆಸ್ ಚಾರ್ಜರ್ ಅನ್ನು ಆ್ಯಕ್ಸೆಸರಿಗಳಾಗಿ ಪಡೆಯಬಹುದು. ನಾಲ್ಕು-ಸೀಟುಗಳ ಲಾಂಜ್ ಆವೃತ್ತಿಯನ್ನು ಅಸಾಧಾರಣ ವೇರಿಯೆಂಟ್ ಆಗಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಸಿಯೆರಾ ಇವಿಯ ಸ್ಪೆಕ್ಸ್ ಅನ್ನು ಟಾಟಾ ಬಹಿರಂಗಪಡಿಸಿಲ್ಲ, ಆದರೆ ನೆಕ್ಸಾನ್ ಇವಿ ಮ್ಯಾಕ್ಸ್‌ಗಿಂತ ದೊಡ್ಡದಾದ 40.5kWh ಯೂನಿಟ್‌ನ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಮತ್ತು 500 ಕಿಲೋಮೀಟರ್ ರೇಂಜ್ ಅನ್ನು ಕ್ಲೈಮ್ ಮಾಡಲಾಗುತ್ತದೆ ಎಂಬುದನ್ನು ನಾವು ಊಹಿಸಬಹುದಾಗಿದೆ. ಹ್ಯಾರಿಯರ್ ಇವಿ ಆಲ್-ವ್ಹೀಲ್-ಡ್ರೈವ್ ಅನ್ನು ಪಡೆಯುತ್ತಿರುವುದರಿಂದ, ಸಿಯೆರಾ ಇವಿಯೂ ಅದೇ ರೀತಿ ಆಗಿರಬೇಕೆಂದು ನಾವು ಆಶಿಸುತ್ತೇವೆ.

ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಸಿಯೆರಾ ಎಲೆಕ್ಟ್ರಿಕ್ ಮಾಡೆಲ್ ಆಗಿದ್ದು, ಇದರ ಐಸಿಇ ಆವೃತ್ತಿಯು ನೋಟದಲ್ಲಿ ಕೆಲವು ವ್ಯತ್ಯಾಸವನ್ನು ಹೊಂದಿದೆ. ಇದು ಹೊಸದಾಗಿ ಆವಿಷ್ಕರಿಸಿದ 170PS 1.5-ಲೀಟರ್ TGDi ಟರ್ಬೋ-ಪೆಟ್ರೋಲ್ ಇಂಜಿನ್‌ನೊಂದಿಗೆ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಸಿಯೆರಾ, ಸಂಪರ್ಕಿತ ಕಾರ್ ಟೆಕ್‌ನೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಸುತ್ತನೋಟವುಳ್ಳ ಸನ್‌ರೂಫ್, ಮತ್ತು ದೊಡ್ಡ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹಾಗೂ ಎಡಿಎಎಸ್ (ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಹೊಂದಿದೆ.

ಇದನ್ನೂ ಓದಿ: 2020 ರಿಂದ ಟಾಟಾ ಸಿಯೆರಾ ಇವಿ ಎಷ್ಟು ವಿಕಸನಗೊಂಡಿದೆ ಎಂಬುದನ್ನು ಪರಿಶೀಲಿಸಿ

ಟಾಟಾವು ಸಿಯೆರಾ ಐಸಿಇ-ಆವೃತ್ತಿಗೆ ಸುಮಾರು ರೂ. 12 ಲಕ್ಷಗಳಷ್ಟು (ಎಕ್ಸ್-ಶೋರೂಮ್) ಬೆಲೆಯನ್ನು ನಿಗದಿಪಡಿಸಬಹುದು, ಆದರೆ ಅದರ ಇವಿ ಆವೃತ್ತಿಯು ಸುಮಾರು ರೂ. 25 ಲಕ್ಷದಿಂದ ಪ್ರಾರಂಭವಾಗಬಹುದು.

t
ಅವರಿಂದ ಪ್ರಕಟಿಸಲಾಗಿದೆ

tarun

  • 49 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಸಿಯೆರಾ

Read Full News

explore ಇನ್ನಷ್ಟು on ಟಾಟಾ ಸಿಯೆರಾ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ