2023 ರ ಡಿಸೆಂಬರ್‌ನಲ್ಲಿ ಕಾರು ಮಾರಾಟದಲ್ಲಿ Hyundai ಅನ್ನು ಹಿಂದೆ ತಳ್ಳಿ, ಎರಡನೇ ಅತಿ ಹೆಚ್ಚು ಮಾರಾಟವಾದ ಬ್ರ್ಯಾಂಡ್ ಆದ Tata
ಜನವರಿ 05, 2024 04:29 pm ರಂದು ansh ಮೂಲಕ ಪ್ರಕಟಿಸಲಾಗಿದೆ
- 90 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿ ಮತ್ತು ಮಹೀಂದ್ರಾ ಹಿಂದಿನ ತಿಂಗಳಿನಲ್ಲಿ ಇದ್ದ ಸ್ಥಾನಗಳಲ್ಲಿ ಮುಂದುವರೆದಿದೆ
ಡಿಸೆಂಬರ್ 2023 ರ ಕಾರುಗಳ ಮಾರಾಟದ ಅಂಕಿಅಂಶಗಳು ಈಗ ಹೊರಬಿದ್ದಿವೆ ಮತ್ತು ನವೆಂಬರ್ 2023 ಕ್ಕೆ ಹೋಲಿಸಿದರೆ ಮಾರುಕಟ್ಟೆಯು ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಅಕ್ಟೋಬರ್ ತಿಂಗಳ ಹಬ್ಬದ ನಂತರ, ಮಾರಾಟವು ಕೆಳಮುಖವಾಗಿದೆ ಮತ್ತು ವರ್ಷಾಂತ್ಯ ಕೂಡ ಅದೇ ರೀತಿಯಲ್ಲಿ ಸಾಗಿದೆ. ಆದರೆ, ಈ ಬಾರಿ ಅತಿ ಹೆಚ್ಚು ಮಾರಾಟವಾದ ಬ್ರ್ಯಾಂಡ್‌ಗಳ ಸ್ಥಾನಗಳಲ್ಲಿ ಬದಲಾವಣೆಯಾಗಿದೆ. ಟಾಟಾ ತನ್ನ ಕಾರುಗಳ ಮಾರಾಟದಲ್ಲಿ ಹ್ಯುಂಡೈ ಅನ್ನು ಹಿಂದಿಕ್ಕುವ ಮೂಲಕ ಎರಡನೇ ಸ್ಥಾನಕ್ಕೆ ಏರಿದೆ. ಡಿಸೆಂಬರ್ 2023 ರ ಕಾರು ಮಾರಾಟದ ಅಂಕಿಅಂಶಗಳ ವಿವರವಾದ ವಿಶ್ಲೇಷಣೆ ಇಲ್ಲಿದೆ.
ಬ್ರ್ಯಾಂಡ್ |
ಡಿಸೆಂಬರ್ 2023 |
ನವೆಂಬರ್ 2023 |
ತಿಂಗಳಾನು ತಿಂಗಳ ಬೆಳವಣಿಗೆ (%) |
ಡಿಸೆಂಬರ್ 2022 |
ವರ್ಷಾನು ವರ್ಷದ ಬೆಳವಣಿಗೆ (%) |
ಮಾರುತಿ ಸುಜುಕಿ |
1,04,778 |
1,34,158 |
-21.9 |
1,12,010 |
-6.5 |
ಟಾಟಾ |
43,471 |
46,070 |
-5.6 |
40,045 |
8.6 |
ಹ್ಯುಂಡೈ |
42,750 |
49,451 |
-13.6 |
38,831 |
10.1 |
ಮಹೀಂದ್ರ |
35,171 |
39,981 |
-12 |
28,333 |
24.1 |
ಟೊಯೋಟಾ |
21,372 |
16,924 |
26.3 |
10,421 |
105.1 |
ಕಿಯಾ |
12,536 |
22,762 |
-44.9 |
15,184 |
-17.4 |
ಹೋಂಡಾ |
7.902 |
8,730 |
-9.5 |
7,062 |
11.9 |
ಫೋಕ್ಸ್‌ವ್ಯಾಗನ್ |
4,930 |
3,095 |
59.3 |
4,709 |
4.7 |
ಸ್ಕೋಡಾ |
4,670 |
3,783 |
23.4 |
4,789 |
-2.5 |
ಎಂಜಿ |
4,400 |
4,154 |
5.9 |
3,899 |
12.8 |
ಒಟ್ಟು |
2,81,980 |
3,29,108 |
2,65,283 |
ಪ್ರಮುಖ ಅಂಶಗಳು
-
ಮಾರುತಿ ಸುಜುಕಿಯ ಮಾರಾಟವು ತಿಂಗಳಾನು ತಿಂಗಳ (MoM) ಮತ್ತು ವರ್ಷಾನು ವರ್ಷದ (YoY) ಮಾರಾಟದಲ್ಲಿ ಇಳಿಕೆ ಕಂಡಿದೆ. ಡಿಸೆಂಬರ್ 2023 ರಲ್ಲಿ 1 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಇನ್ನೂ ಅಗ್ರಸ್ಥಾನದಲ್ಲಿ ಇದ್ದರೂ ಕೂಡ, ಮಾಸಿಕ ಮತ್ತು ವಾರ್ಷಿಕ ಅಂಕಿಅಂಶಗಳು ಕ್ರಮವಾಗಿ 22 ಪ್ರತಿಶತ ಮತ್ತು 6.5 ಪ್ರತಿಶತದಷ್ಟು ಕಡಿಮೆಯಾಗಿದೆ.
-
ಇನ್ನು ಅಚ್ಚರಿಯ ಸಂಗತಿಯೆಂದರೆ, ಟಾಟಾ ಡಿಸೆಂಬರ್ 2023 ರಲ್ಲಿ ಹ್ಯುಂಡೈ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿತು. 43,000 ಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟದೊಂದಿಗೆ, ಅದರ ವಾರ್ಷಿಕ ಅಂಕಿಅಂಶಗಳು 8.6 ಶೇಕಡಾ ಹೆಚ್ಚಾಗಿವೆ, ಆದರೆ ಮಾಸಿಕ 5.6 ಶೇಕಡಾ ಕುಸಿತವನ್ನು ಕಂಡಿದೆ.
ಇದನ್ನು ಓದಿ: ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ವೇರಿಯಂಟ್ ಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಬಹಿರಂಗಪಡಿಸಲಾಗಿದೆ
-
ಹ್ಯುಂಡೈ ಡಿಸೆಂಬರ್ 2023 ರಲ್ಲಿ 42,000 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮೂರನೇ ಸ್ಥಾನಕ್ಕೆ ಇಳಿದಿದೆ. ಅದರ ವಾರ್ಷಿಕ ಅಂಕಿಅಂಶಗಳು 10 ಪ್ರತಿಶತದಷ್ಟು ಏರಿದೆ, ಆದರೆ ಮಾಸಿಕ ಮಾರಾಟದಲ್ಲಿನ ಕುಸಿತವು 13.5 ಪ್ರತಿಶತಕ್ಕಿಂತ ಹೆಚ್ಚಿದೆ.
-
ಮಹೀಂದ್ರಾ ನವೆಂಬರ್ 2023 ರಲ್ಲಿ ಇದ್ದ ಸ್ಥಾನದಲ್ಲಿಯೇ ಇದೆ ಮತ್ತು ಮಾಸಿಕ ಮಾರಾಟದಲ್ಲಿ 12 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಇದು ಡಿಸೆಂಬರ್ 2023 ರಲ್ಲಿ 35,000 ಯುನಿಟ್‌ಗಳಿಗಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯ ಕಾರನ್ನು ಮಾರಾಟ ಮಾಡಿದೆ.
ಇದನ್ನು ಓದಿ: ಟೊಯೋಟಾ ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಕ್ರಾಸ್, ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಈಗ 42,000 ರೂಪಾಯಿಯಷ್ಟು ದುಬಾರಿಯಾಗಿದೆ.
-
ಟೊಯೋಟಾ ಡಿಸೆಂಬರ್ 2023 ರಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಕಾರು ಮಾರಾಟ ಮಾಡಿದ ಸಂಖ್ಯೆಯಲ್ಲಿ ಕಿಯಾವನ್ನು ಮೀರಿಸಿದೆ. ಈ ಜಪಾನಿನ ಕಾರು ತಯಾರಕ ಬ್ರಾಂಡ್ ಮಾಸಿಕ ಮಾರಾಟದಲ್ಲಿ 26 ಶೇಕಡಾ ಬೆಳವಣಿಗೆಯನ್ನು ಕಂಡಿತು ಮತ್ತು ಅದರ ವಾರ್ಷಿಕ ಮಾರಾಟವು ಎರಡು ಪಟ್ಟು ಹೆಚ್ಚಾಗಿದೆ.
-
ಕಿಯಾ ಡಿಸೆಂಬರ್ 2023 ರ ತನ್ನ ಮಾಸಿಕ ಮಾರಾಟದಲ್ಲಿ ಸುಮಾರು 45 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ ಮತ್ತು ಅದರ ವಾರ್ಷಿಕ ಮಾರಾಟವು 17 ಪ್ರತಿಶತದಷ್ಟು ಕಡಿಮೆಯಾಗಿದೆ. 10,000 ಯುನಿಟ್‌ಗಳ ಮಾರಾಟದ ಸಂಖ್ಯೆಯನ್ನು ದಾಟಿದ ಕೊನೆಯ ಬ್ರ್ಯಾಂಡ್ ಆಗಿ ಕಿಯಾ ಈ ಪಟ್ಟಿಯಲ್ಲಿದೆ.
-
ಸುಮಾರು 8,000 ಯುನಿಟ್‌ಗಳಷ್ಟು ಕಾರನ್ನು ಮಾರಾಟ ಮಾಡುವು ಮೂಲಕ ಹೋಂಡಾ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಅದರ ಮಾಸಿಕ ಮಾರಾಟದ ಅಂಕಿಅಂಶಗಳು ಸುಮಾರು 10 ಪ್ರತಿಶತದಷ್ಟು ಕಡಿಮೆಯಾಗಿದೆ, ಆದರೆ ವಾರ್ಷಿಕ ಸಂಖ್ಯೆಗಳು ಸುಮಾರು 12 ಪ್ರತಿಶತದಷ್ಟು ಏರಿದೆ.
-
ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ, ಈ ಎರಡೂ ಬ್ರಾಂಡ್ ಗಳು ಈ ತಿಂಗಳು ಕ್ರಮವಾಗಿ 4,930 ಮತ್ತು 4,670 ಯುನಿಟ್‌ಗಳ ಮಾರಾಟದೊಂದಿಗೆ ಒಂದು ಸ್ಥಾನವನ್ನು ಏರಿಸಿಕೊಂಡಿವೆ. ಫೋಕ್ಸ್‌ವ್ಯಾಗನ್ ಮಾಸಿಕ ಮತ್ತು ವಾರ್ಷಿಕ ಮಾರಾಟ ಎರಡರಲ್ಲೂ ಏರಿಕೆ ಕಂಡರೆ, ಸ್ಕೋಡಾ ತನ್ನ ಮಾಸಿಕ ಮಾರಾಟದಲ್ಲಿ ಮಾತ್ರ ಹೆಚ್ಚಳವನ್ನು ಕಂಡಿತು.
-
ಕೊನೆಯದಾಗಿ, MG ತನ್ನ ಮಾಸಿಕ ಮತ್ತು ವಾರ್ಷಿಕ ಅಂಕಿಅಂಶಗಳಲ್ಲಿ ಏರಿಕೆ ಕಂಡರೂ ಕೂಡ, ಡಿಸೆಂಬರ್ 2023 ರಲ್ಲಿ ಹತ್ತನೇ ಸ್ಥಾನಕ್ಕೆ ಇಳಿಯಿತು.
0 out of 0 found this helpful