Tata Nexon EV Facelift Long Range ವರ್ಸಸ್ Tata Nexon EV (ಹಳೆಯ ವರ್ಷನ್): ಪರ್ಫಾರ್ಮೆನ್ಸ್ ಹೋಲಿಕೆ ಇಲ್ಲಿದೆ
ಟಾಟಾ ನೆಕ್ಸಾನ್ ಇವಿ ಗಾಗಿ shreyash ಮೂಲಕ ಮಾರ್ಚ್ 16, 2024 05:49 am ರಂದು ಪ್ರಕಟಿಸಲಾಗಿದೆ
- 51 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ನೆಕ್ಸಾನ್ EV ಯ ಹೊಸ ಲಾಂಗ್ ರೇಂಜ್ ವೇರಿಯಂಟ್ ಹೆಚ್ಚು ಶಕ್ತಿಶಾಲಿಯಾಗಿದೆ, ಆದರೆ ಇದು ಹಳೆಯ ನೆಕ್ಸಾನ್‌ಗಿಂತ ಕಡಿಮೆ ಟಾರ್ಕ್ ಅನ್ನು ಉತ್ಪಾದಿಸುತ್ತದೆ
ಟಾಟಾ ನೆಕ್ಸಾನ್ EV ಅನ್ನು ಭಾರತದಲ್ಲಿ ಮೊದಲ ಬಾರಿಗೆ 2020 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು 2023 ರಲ್ಲಿ ಕೆಲವು ಗಮನಾರ್ಹವಾದ ಅಪ್ಡೇಟ್ ಗೆ ಒಳಗಾಯಿತು. ಟಾಟಾ ಎಲೆಕ್ಟ್ರಿಕ್ SUV ಇನ್ನು ಮುಂದೆ ಎರಡು ಬ್ಯಾಟರಿ ಪ್ಯಾಕ್‌ಗಳಾದ ಪ್ರೈಮ್ ಮತ್ತು ಮ್ಯಾಕ್ಸ್ (ಲಾಂಗ್ ರೇಂಜ್) ವರ್ಷನ್ ನೊಂದಿಗೆ ಬರುವುದಿಲ್ಲ. ಈಗ, ಇದು MR (ಮಿಡ್ ರೇಂಜ್) ಮತ್ತು LR (ಲಾಂಗ್ ರೇಂಜ್) ಎರಡೂ ವೇರಿಯಂಟ್ ಗಳಲ್ಲಿ ಒಂದೇ ನೆಕ್ಸಾನ್ EV ಆಗಿ ಬರಲಿದೆ.
ಇತ್ತೀಚೆಗೆ, ನೈಜ ರಸ್ತೆಯ ಪರಿಸ್ಥಿತಿಗಳಲ್ಲಿ ಅಪ್ಡೇಟ್ ಆಗಿರುವ ನೆಕ್ಸಾನ್ EV ಲಾಂಗ್-ರೇಂಜ್ ವೇರಿಯಂಟ್ ನ (LR) ಪರ್ಫಾರ್ಮೆನ್ಸ್ ಅನ್ನು ಪರೀಕ್ಷಿಸುವ ಅವಕಾಶ ನಮಗೆ ಸಿಕ್ಕಿತು. ಅದರ ಮೊದಲ ವರ್ಷನ್ ಗೆ ಹೋಲಿಸಿದರೆ, ನೆಕ್ಸಾನ್ EV ಫೇಸ್‌ಲಿಫ್ಟ್ ಪರ್ಫಾರ್ಮೆನ್ಸ್ ಹೇಗಿದೆ ಎಂಬುದನ್ನು ನೋಡೋಣ.
ನಮ್ಮ ಪರೀಕ್ಷೆಗಳಲ್ಲಿ ಟಾಟಾ ನೆಕ್ಸಾನ್ EVಗಳು ಎಷ್ಟು ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡಿವೆ ಎಂಬುದರ ಕುರಿತು ನಾವು ಮಾತನಾಡುವ ಮೊದಲು, ಅವುಗಳ ಬ್ಯಾಟರಿ ಪ್ಯಾಕ್‌ಗಳು ಮತ್ತು ಮೋಟಾರ್‌ಗಳ ಸ್ಪೆಸಿಫಿಕೇಷನ್ ಗಳನ್ನು ಮೊದಲು ಪರಿಶೀಲಿಸೋಣ. ವಿವರಗಳಿಗಾಗಿ ಕೆಳಗಿನ ಟೇಬಲ್ ಅನ್ನು ನೋಡೋಣ.
ಪವರ್‌ಟ್ರೇನ್ ಆಯ್ಕೆಗಳು
|
ಟಾಟಾ ನೆಕ್ಸಾನ್ EV (ಹಳೆಯದು) |
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಲಾಂಗ್ ರೇಂಜ್ (LR) |
ಬ್ಯಾಟರಿ ಪ್ಯಾಕ್ |
30.2 kWh |
40.5 kWh |
ಪವರ್ |
129 PS |
144 PS |
ಟಾರ್ಕ್ |
245 Nm |
215 Nm |
ಕ್ಲೇಮ್ ಮಾಡಿರುವ ರೇಂಜ್ |
312 ಕಿ.ಮೀವರೆಗೆ |
465 ಕಿ.ಮೀವರೆಗೆ |
ಹಳೆಯ ನೆಕ್ಸಾನ್ EVಯು 15 PS ಕಡಿಮೆ ಶಕ್ತಿಶಾಲಿಯಾಗಿದ್ದರೂ ಕೂಡ, ಇದು ಹೊಸ ವರ್ಷನ್ ಗಿಂತ 30 Nm ಹೆಚ್ಚಿನ ಟಾರ್ಕ್ ಅನ್ನು ನೀಡುತ್ತಿತ್ತು. ಆದರೆ, ಫೇಸ್‌ಲಿಫ್ಟ್ ಆಗಿರುವ ನೆಕ್ಸಾನ್ EV ಯ ದೊಡ್ಡ ಬ್ಯಾಟರಿ ಪ್ಯಾಕ್ ವೇರಿಯಂಟ್ ಹೆಚ್ಚುವರಿ 153 ಕಿಮೀ ರೇಂಜ್ ಅನ್ನು ಕ್ಲೇಮ್ ಮಾಡುತ್ತದೆ.
ಇದನ್ನು ಕೂಡ ಓದಿ: ಹೊಸ ಟಾಟಾ ನೆಕ್ಸಾನ್ ಡಾರ್ಕ್: 5 ಚಿತ್ರಗಳಲ್ಲಿ ಡಿಸೈನ್ ಅನ್ನು ವಿವರಿಸಲಾಗಿದೆ
ಆಕ್ಸಿಲರೇಷನ್ ಟೆಸ್ಟ್
ಟೆಸ್ಟ್ ಗಳು |
ಟಾಟಾ ನೆಕ್ಸಾನ್ EV (ಹಳೆಯದು) |
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಲಾಂಗ್ ರೇಂಜ್ (LR) |
0 - 100 ಕಿ.ಮೀ ಪ್ರತಿ ಗಂಟೆ |
9.58 ಸೆಕೆಂಡುಗಳು |
8.75 ಸೆಕೆಂಡುಗಳು |
ಕ್ವಾರ್ಟರ್ ಮೈಲ್ |
17.37 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 119.82 ಕಿ.ಮೀ |
16.58 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 138.11 ಕಿ.ಮೀ |
ಕಿಕ್‌ಡೌನ್ (20-80 ಕಿ.ಮೀ ಪ್ರತಿ ಗಂಟೆ) |
5.25 ಸೆಕೆಂಡುಗಳು |
5.09 ಸೆಕೆಂಡುಗಳು |
ಹೊಸ ಫೇಸ್‌ಲಿಫ್ಟ್ ಆಗಿರುವ ನೆಕ್ಸಾನ್ EV LR ಎಲ್ಲಾ ಆಕ್ಸಿಲರೇಷನ್ ಟೆಸ್ಟ್ ಗಳಲ್ಲಿ ಹಳೆಯದಕ್ಕಿಂತ ವೇಗವಾಗಿದ್ದರೂ ಕೂಡ, ವ್ಯತ್ಯಾಸ ಅಷ್ಟೇನೂ ಜಾಸ್ತಿಯಿಲ್ಲ. 0-100 ಕಿಮೀ ಪ್ರತಿ ಗಂಟೆ ಸ್ಪ್ರಿಂಟ್‌ನಲ್ಲಿ, ನೆಕ್ಸಾನ್ EV ಫೇಸ್‌ಲಿಫ್ಟ್ ಕೇವಲ 0.8 ಸೆಕೆಂಡುಗಳಷ್ಟು ವೇಗವಾಗಿದೆ ಮತ್ತು ಇದು ಕ್ವಾರ್ಟರ್ ಮೈಲಿನಲ್ಲಿ ಹಳೆಯ ನೆಕ್ಸಾನ್‌ಗಿಂತ ಕೇವಲ 1 ಸೆಕೆಂಡ್ ವೇಗವಾಗಿದೆ.
20 ರಿಂದ 80 ಕಿಮೀ ಪ್ರತಿ ಗಂಟೆ ಕಿಕ್‌ಡೌನ್‌ನಲ್ಲಿ, ಅವುಗಳ ಸಮಯದ ನಡುವಿನ ವ್ಯತ್ಯಾಸವು ತುಂಬಾ ಚಿಕ್ಕದಾಗಿದೆ.
ಬ್ರೆಕಿಂಗ್ ಟೆಸ್ಟ್
ಟೆಸ್ಟ್ ಗಳು |
ಟಾಟಾ ನೆಕ್ಸಾನ್ EV (ಹಳೆಯದು) |
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಲಾಂಗ್ ರೇಂಜ್ (LR) |
0 - 100 ಕಿ.ಮೀ ಪ್ರತಿ ಗಂಟೆ |
42.60 ಮೀಟರ್ |
42.87 ಮೀಟರ್ |
80 - 0 ಕಿ.ಮೀ ಪ್ರತಿ ಗಂಟೆ |
26.64 ಮೀಟರ್ |
25.56 ಮೀಟರ್ |
100 ಕಿ.ಮೀ ಪ್ರತಿ ಗಂಟೆ ವೇಗದಿಂದ ನಿಲ್ಲಿಸಲು ಬ್ರೇಕ್ ಹಾಕುವಾಗ, ಫೇಸ್‌ಲಿಫ್ಟ್ ಆಗಿರುವ ನೆಕ್ಸಾನ್ EVಯು ಹಳೆಯ ನೆಕ್ಸಾನ್ EVಗಿಂತ 1.73 ಮೀಟರ್ ಕಡಿಮೆ ಚಲಿಸುತ್ತದೆ. ನಾವು ಪ್ರತಿ ಗಂಟೆಗೆ 80 ಕಿ.ಮೀ.ನಿಂದ ಬ್ರೇಕಿಂಗ್ ಅನ್ನು ಮಾಡಿದಾಗ, ಅವುಗಳ ನಡುವಿನ ನಿಲ್ಲಿಸುವ ಅಂತರವು ಕೇವಲ 1 ಮೀಟರ್ ನಷ್ಟು ಮತ್ತೆ ಕಡಿಮೆಯಾಗುತ್ತದೆ. ನೆಕ್ಸಾನ್ EV LR ಫೇಸ್‌ಲಿಫ್ಟ್ ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬರುತ್ತದೆ, ಆದರೆ ಹಳೆಯ ನೆಕ್ಸಾನ್ ಮುಂಭಾಗದ ಚಕ್ರದಲ್ಲಿ ಮಾತ್ರ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೆಕ್ಸಾನ್‌ನ ಎರಡೂ ವರ್ಷನ್ ಗಳ ಟೈರ್‌ಗಳು ಒಂದೇ ಆಗಿವೆ (215/60 R16).
ಇದನ್ನು ಕೂಡ ಓದಿ: ಟಾಟಾ ಪಂಚ್ EV ಎಂಪವರ್ಡ್ ಪ್ಲಸ್ S ಲಾಂಗ್ ರೇಂಜ್ ವರ್ಸಸ್ ಮಹೀಂದ್ರಾ XUV400 EC ಪ್ರೊ: ನೀವು ಯಾವ EV ಖರೀದಿಸಬೇಕು?
ಟೇಕ್ಅವೇಗಳು
ಒಟ್ಟಾರೆಯಾಗಿ, ಟಾಟಾ ಕಳೆದ ಕೆಲವು ವರ್ಷಗಳಿಂದ ನೆಕ್ಸಾನ್ EV ಯ ಮೆಕ್ಯಾನಿಕಲ್ ಭಾಗಗಳು ಮತ್ತು ಲುಕ್ ಮತ್ತು ಫೀಚರ್ ಗಳಲ್ಲಿ ಸುಧಾರಣೆಯನ್ನು ಮಾಡಿದೆ ಎಂಬುದು ಸ್ಪಷ್ಟವಾಗಿದೆ. ಫೇಸ್‌ಲಿಫ್ಟ್ ಆಗಿರುವ ನೆಕ್ಸಾನ್ EVಯು ಹಳೆಯ ವರ್ಷನ್ ಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಮುಂದಿದೆ, ಆದರೆ ಎಲೆಕ್ಟ್ರಿಕ್ ವಾಹನಗಳ ದೊಡ್ಡ ಮಟ್ಟದ ಮಾರುಕಟ್ಟೆಯಲ್ಲಿ ಪ್ರತಿಯೊಂದು ಬದಲಾವಣೆಯು ಬಹಳಷ್ಟು ಶ್ರಮವನ್ನು ಒಳಗೊಂಡಿರುತ್ತದೆ. ಇವೆಲ್ಲವನ್ನು ನೋಡುತ್ತಿದ್ದರೆ, ಟಾಟಾ ಭಾರತದಲ್ಲಿ ಮುಂಚೂಣಿಯಲ್ಲಿರುವ ಎಲೆಕ್ಟ್ರಿಕ್ ಕಾರ್ ಬ್ರ್ಯಾಂಡ್ ಆಗಿ ಉಳಿದಿರುವುದು ಆಶ್ಚರ್ಯಕರ ವಿಷಯವೇನಲ್ಲ.
ಹಕ್ಕು ನಿರಾಕರಣೆ: ಡ್ರೈವರ್, ಡ್ರೈವಿಂಗ್ ಪರಿಸ್ಥಿತಿಗಳು, ಬ್ಯಾಟರಿಯ ಹೆಲ್ತ್ ಮತ್ತು ತಾಪಮಾನ ಮತ್ತು ಹವಾಮಾನವನ್ನು ಅವಲಂಬಿಸಿ EV ಯ ಪರ್ಫಾರ್ಮೆನ್ಸ್ ಅಂಕಿಅಂಶಗಳು ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
ಬೆಲೆ ಹೋಲಿಕೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ನೆಕ್ಸಾನ್ EV (ಹಳೆಯದು) |
ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಲಾಂಗ್ ರೇಂಜ್ (LR) |
ರೂ. 14.49 ಲಕ್ಷದಿಂದ ರೂ. 17.50 ಲಕ್ಷ (ಕೊನೆಯದಾಗಿ ನೋಡಿದಾಗ) |
ರೂ. 16.99 ಲಕ್ಷದಿಂದ ರೂ. 19.49 ಲಕ್ಷ |
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಯಾಗಿದೆ
ಮೊದಲ ಕೆಲವು ವರ್ಷಗಳಲ್ಲಿ ನೆಕ್ಸಾನ್ EV ಗೆ ಯಾವುದೇ ನೇರ ಪ್ರತಿಸ್ಪರ್ಧಿಗಳು ಇರಲಿಲ್ಲ. ಆದರೆ ಈಗ, ಟಾಟಾ ನೆಕ್ಸಾನ್ EV ಮಹೀಂದ್ರ XUV400 EV ಗೆ ಪ್ರತಿಸ್ಪರ್ಧಿಯಾಗಿದೆ, ಹಾಗೆಯೇ MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ಗೆ ಹೋಲಿಸಿದರೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿದೆ. ಟಾಟಾ ಪಂಚ್ EV ಗೆ ಹೋಲಿಸಿದರೆ ಕೂಡ ಇದು ಹೆಚ್ಚು ವಿಶಾಲವಾದ ಕ್ಯಾಬಿನ್ ಜಾಗ ಹೊಂದಿರುವ ಆಯ್ಕೆಯಾಗಿದೆ.
ಇನ್ನಷ್ಟು ಓದಿ: ಟಾಟಾ ನೆಕ್ಸಾನ್ EV ಆಟೋಮ್ಯಾಟಿಕ್