• English
  • Login / Register

2023ರ ಏಪ್ರಿಲ್ ನಲ್ಲಿ ಮಾರಾಟವಾದ 10 ಅತ್ಯುತ್ತಮ ಕಾರು ಬ್ರ್ಯಾಂಡ್‌ಗಳು ಯಾವುವು ಗೊತ್ತೇ ?

ಮೇ 15, 2023 07:53 pm ರಂದು shreyash ಮೂಲಕ ಪ್ರಕಟಿಸಲಾಗಿದೆ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಏಪ್ರಿಲ್ 2023ರಲ್ಲಿ ಮಾರುತಿ ಸುಝುಕಿ, ಟಾಟಾ ಮತ್ತು ಕಿಯಾ ಹೊರತಾಗಿ ಎಲ್ಲಾ ಬ್ರ್ಯಾಂಡ್‌ಗಳ ತಿಂಗಳಿಂದ ತಿಂಗಳ ಬೆಳವಣಿಗೆ ಋಣಾತ್ಮಕವಾಗಿದೆ.

Top 10 Best Selling Car Brands In April 2023ಏಪ್ರಿಲ್ 2023ರಲ್ಲಿ , ಹೊಸ BS6 ಹಂತ 2 ಎಮಿಶನ್ ಮಾನದಂಡಗಳು ಜಾರಿಗೆ ಬಂದಿದ್ದು ಇದರಿಂದಾಗಿ ಕೆಲವು ಕಾರುತಯಾರಕ ಸಂಸ್ಥೆಗಳು ತಮ್ಮ ಹೊಸ ಕಾರುಗಳ ಬೆಲೆಗಳನ್ನು ಹೆಚ್ಚಿಸಿವೆ. ಆದಾಗ್ಯೂ ಮಾರಾಟಕ್ಕೆ ಬಂದಾಗ ಕೇವಲ ಮೂರು ಕಾರುತಯಾರಕ ಸಂಸ್ಥೆಗಳಾದ ಮಾರುತಿ, ಟಾಟಾ ಮತ್ತು ಕಿಯಾ ಏಪ್ರಿಲ್ ತಿಂಗಳಲ್ಲಿ ತಿಂಗಳಿಂದ ತಿಂಗಳ ಬೆಳವಣಿಗೆಯನ್ನು  ಧನಾತ್ಮಕವಾಗಿ ದಾಖಲಿಸಿವೆ.

 

ಏಪ್ರಿಲ್ 2023ರಲ್ಲಿ ಈ ಟಾಪ್ 10 ಬ್ರ್ಯಾಂಡ್‌ಗಳು ಹೇಗೆ ಕಾರ್ಯನಿರ್ವಹಿಸಿವೆ ಎಂಬುದರ ವಿವರ ಇಲ್ಲಿದೆ:

ಬ್ರ್ಯಾಂಡ್‌ಗಳು

ಏಪ್ರಿಲ್ 2023

ಮಾರ್ಚ್ 2023

MoM ಬೆಳವಣಿಗೆ (%)

ಏಪ್ರಿಲ್ 2022

YoY ಬೆಳವಣಿಗೆ (%)

ಮಾರುತಿ ಸುಝುಕಿ

1,37,320

1,32,763

3.4%

1,21,995

12.6%

ಹ್ಯುಂಡೈ

49,701

50,600

-1.8%

44,001

13%

ಟಾಟಾ

47,010

44,047

6.7%

41,590

13%

ಮಹೀಂದ್ರಾ

34,694

35,796

-3.6%

22,122

56.8%

ಕಿಯಾ

23,216

21,501

8%

19,019

22.1%

ಟೊಯೋಟಾ

14,162

18,670

-24.1%

15,085

-6.1%

ಹೋಂಡಾ

5,313

6,692

-20.6%

7,874

-32.5%

MG

4,551

6,051

-24.8%

2,008

126.6%

ರೆನಾಲ್ಟ್

4,323

5,389

-19.8%

7,594

-43.1%

ಸ್ಕೋಡಾ

4,009

4,432

-9.5%

5,152

-22.1

 

 ಪ್ರಮುಖ ಸಾರಾಂಶಗಳು

Maruti Grand Vitara

  •  ಮಾರುತಿಯು ಮಾರಾಟ ಚಾರ್ಟ್‌ನಲ್ಲಿ ಮುಂಚೂಣಿಯಲ್ಲಿದ್ದು ಇದು ಹ್ಯುಂಡೈ, ಟಾಟಾ ಮತ್ತು ಮಹೀಂದ್ರಾ ಸಹಯೋಗಕ್ಕಿಂತ ಹೆಚ್ಚಿನ ಮಾಡೆಲ್‌ಗಳನ್ನು ಮಾರಾಟ ಮಾಡಿದೆ. ಈ ಕಾರು ತಯಾರಕರ ತಿಂಗಳಿಂದ ತಿಂಗಳ (MoM) ಬೆಳವಣಿಗೆ 3 ಪ್ರತಿಶತ ಆಗಿದ್ದು, ಇದರ ವರ್ಷದಿಂದ ವರ್ಷದ (YoY) ಬೆಳವಣಿಗೆ ಸುಮಾರು 12.5 ಪ್ರತಿಶತದಷ್ಟು ಇದೆ.

Hyundai Grand i10 Nios

  •  ಎರಡನೇ ಸ್ಥಾನದಲ್ಲಿರುವ ಹ್ಯುಂಡೈ, MoM ಮಾರಾಟದಲ್ಲಿ 2 ಪ್ರತಿಶತ ಇಳಿಕೆಯನ್ನು ಕಂಡಿತು. ಆದಾಗ್ಯೂ, ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ,ಇದರ ಮಾರಾಟವು 13ಪ್ರ ತಿಶತದಷ್ಟು ಹೆಚ್ಚಿದೆ.

 ಇದನ್ನೂ ಓದಿ: ಭಾರತದ ಲೀಥಿಯಮ್ ನಿಕ್ಷೇಪ ಈಗ ದೊಡ್ಡದಾಗಿದೆ

Tata Nexon

  •  ಟಾಟಾ ಮತ್ತೊಮ್ಮೆ ಹ್ಯುಂಡೈಗಿಂತಲೂ ಅಗ್ರಸ್ಥಾನದಲ್ಲಿದ್ದು MoM ಮಾರಾಟದಲ್ಲಿ 6.5 ಪ್ರತಿಶತ ಬೆಳವಣಿಗೆ ಮತ್ತು YoY ಮಾರಾಟದಲ್ಲಿ 13 ಪ್ರತಿಶತ ಬೆಳವಣಿಗೆಗೆ ಸಾಕ್ಷಿಯಾಗಿದೆ.

Mahindra Scorpio N

  •  MoM ಮಾರಾಟದಲ್ಲಿ ಸುಮಾರು 3.5 ಪ್ರತಿಶತದ ತುಸು ಇಳಿಕೆಯನ್ನು ಕಂಡು ನಾಲ್ಕನೇ ಸ್ಥಾನದಲ್ಲಿರುವ ಮಹೀಂದ್ರಾ MoM ಮಾರಾಟದಲ್ಲಿ 3.5 ಪ್ರತಿಶತ ಇಳಿಕೆಯನ್ನು ಕಂಡಿದ್ದು, YoY ಬೆಳವಣಿಗೆಯಲ್ಲಿ 50 ಪ್ರತಿಶತಕ್ಕೂ ಮಿಗಿಲಾಗಿ ದಾಖಲಿಸಿದೆ. 

 ಇದನ್ನೂ ಓದಿ: ರೂ.10 ಲಕ್ಷದೊಳಗಿನ 6 ಏರ್‌ಬ್ಯಾಗ್‌ಗಳಿರುವ 5 ಕಾರುಗಳ ವಿವರ ಇಲ್ಲಿದೆ 

Kia Seltos and Carens

 

  •  ಕಿಯಾ ತನ್ನ ಹಿಂದಿನ ತಿಂಗಳ ಮಾರಾಟಕ್ಕೆ ಹೊಲಿಸಿದರೆ  8 ಪ್ರತಿಶತದಷ್ಟು MoM ಬೆಳವಣಿಗೆಯೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಮಾರುತಿ, ಟಾಟಾ ಮತ್ತು ಕಿಯಾಗೆ ಹೊರತುಪಡಿಸಿದರೆ, ಇದು MoM ಮತ್ತು YoY ಸಂಖ್ಯೆಗಳಲ್ಲಿನ ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ಏಕಮಾತ್ರ ಕಾರುತಯಾರಕ ಸಂಸ್ಥೆಯಾಗಿದೆ.

Toyota Hyryder

  • ಮಾರ್ಚ್‌ಗೆ ಹೋಲಿಸಿದರೆ, ಏಪ್ರಿಲ್ 2023 ೊಯೋಟಾ 4,500 ಯೂನಿಟ್‌ಗಳಷ್ಟು ಮಾರಾಟದಲ್ಲಿ ಇಳಿಕೆಯನ್ನು ಕಂಡಿದ್ದು, ಇದರ ವಾರ್ಷಿಕ ಮಾರಾಟವು (ಅದೇ ತಿಂಗಳಿನಲ್ಲಿ) 900 ಯೂನಿಟ್‌ಗಳಿಗಿಂತಲೂ ಹೆಚ್ಚಿನ ಇಳಿಕೆಯನ್ನು ಕಂಡಿದೆ.

Honda City

  • ೋಂಡಾ ಕೂಡಾ ತನ್ನ ಎರಡೂ ಮಾರಾಟ ಅಂಕಿಗಳಲ್ಲಿ ಇಳಿಕೆಯನ್ನು ಕಂಡಿದೆ. ಇದು MoM ಮಾರಾಟದಲ್ಲಿ ಸುಮಾರು 20.5 ರಷ್ಟು ನಷ್ಟವನ್ನು ಎದುರಿಸಿದ್ದು, YoY ಮಾರಾಟದಲ್ಲಿ  32.5 ಇಳಿಕೆಯನ್ನು ಕಂಡಿದೆ.

2023 MG Hector

  • MGಯ MoM ಮಾರಾಟವು ಸುಮಾರು 25 ಪ್ರತಿಶತದಷ್ಟು ಇಳಿಕೆಯನ್ನು ಕಂಡಿದ್ದರೆ, ಅದೇ ಸಮಯದಲ್ಲಿ ಇದರ YoY ಮಾರಾಟದಲ್ಲಿ ಸುಮಾರು 126.5ರ ಭಾರಿ ಹೆಚ್ಚಳವನ್ನು ಕಂಡಿದೆ.

Renault Kiger

  • ಒಂಭತ್ತನೇ ಸ್ಥಾನದಲ್ಲಿರುವ ರೆನಾಲ್ಟ್ MoM  ಮಾರಾಟ ಸಂಖ್ಯೆಯು 1,000 ಯೂನಿಟ್‌ಗಳಿಗಿಂತಲೂ ಹೆಚ್ಚಿನ ಕುಸಿತ ಕಂಡಿದೆ. ಹಿಂದಿನ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಇದು ಸುಮಾರು 3,000ದಷ್ಟು ಕಡಿಮೆ ಮಾರಾಟ ಹೊಂದಿದ್ದು ಇದರ YoY ಅಂಕಿಯು ಇಲ್ಲಿ ಸುಮಾರು 43 ಪ್ರತಿಶತದ ದೊಡ್ಡ ಕುಸಿತವನ್ನು ಕಂಡಿದೆ.

  •  Skoda Kushaq

  •  ಈ ಪಟ್ಟಿಯಲ್ಲಿ ಸ್ಕೋಡಾ MoM ಮಾರಾಟದಲ್ಲಿನ 9.5 ಪ್ರತಿಶತದಷ್ಟು ಕುಸಿತವನ್ನು ಎದುರಿಸಿದ್ದು, ಇದರ ವಾರ್ಷಿಕ ಮಾರಾಟವು 22 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience