2024 ರ ಟಾಪ್ 3 ವರ್ಲ್ಡ್ ಕಾರ್ ಫೈನಲಿಸ್ಟ್‌ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ
ಇಲ್ಲಿ ಎಲ್ಲಾ ಮೂರು ಕಾರುಗಳು ಪ್ರೀಮಿಯಂ ಎಲೆಕ್ಟ್ರಿಕ್ ಮಾಡೆಲ್ ಗಳಾಗಿದ್ದು, ಬೆಲೆಯು 50 ಲಕ್ಷದ ಮೇಲೆ ಇರುವ (ಎಕ್ಸ್-ಶೋರೂಮ್) ನಿರೀಕ್ಷೆಯಿದೆ.
ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) ಪ್ರಶಸ್ತಿಯು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕಾರುಗಳಿಗೆ ಮಾತ್ರ ನೀಡಲಾಗುತ್ತದೆ, ಆದರೆ ವರ್ಲ್ಡ್ ಕಾರ್ ಪ್ರಶಸ್ತಿಯನ್ನು ನೀಡಲು ಕಾರುಗಳು ಕನಿಷ್ಠ ಎರಡು ಖಂಡಗಳಲ್ಲಿ ಮಾರಾಟವಾಗಬೇಕು. ಇತ್ತೀಚೆಗೆ, ವರ್ಲ್ಡ್ ಕಾರ್ ಆಫ್ ದಿ ಇಯರ್ 2024 ರ ಫೈನಲಿಸ್ಟ್‌ಗಳನ್ನು ಘೋಷಿಸಲಾಯಿತು. ಆಯ್ಕೆಯಾಗಿರುವ ಎಲ್ಲ ಮೂರು ಮಾಡೆಲ್ ಗಳು EVಯಾಗಿದ್ದು, ಅವುಗಳ ಹೆಸರು - BYD ಸೀಲ್, ಕಿಯಾ EV9 ಮತ್ತು ವೋಲ್ವೋ EX30. ಇಲ್ಲಿ ಒಳ್ಳೆಯ ಸುದ್ದಿ ಏನೆಂದರೆ, ಇವೆಲ್ಲವನ್ನೂ ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುತ್ತದೆ, ಆದ್ದರಿಂದ ಅವುಗಳ ವಿವರಗಳನ್ನು ಸಂಕ್ಷಿಪ್ತವಾಗಿ ನೋಡೋಣ:
BYD ಸೀಲ್
ಲಾಂಚ್: ಮಾರ್ಚ್ 5, 2024
ನಿರೀಕ್ಷಿಸಲಾಗಿರುವ ಬೆಲೆ: ರೂ. 55 ಲಕ್ಷದಿಂದ ಶುರುವಾಗಬಹುದು
BYD ಸೀಲ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಆಟೋ ಎಕ್ಸ್‌ಪೋ 2023 ರಲ್ಲಿ ತೋರಿಸಲಾಯಿತು, ಮತ್ತು ಇದು ಈ ವರ್ಷ ಮಾರ್ಚ್ 5 ರಂದು ಲಾಂಚ್ ಆಗಲಿದೆ. e6 MPV ಮತ್ತು ಆಟ್ಟೋ 3 SUV ನಂತರ ಭಾರತದಲ್ಲಿ ಈ EV ತಯಾರಕರ ಮೂರನೇ ಕೊಡುಗೆಯಾಗಿದೆ. ಇದು ಮಲ್ಟಿ ಬ್ಯಾಟರಿ ಪ್ಯಾಕ್‌ಗಳು ಮತ್ತು ಎಲೆಕ್ಟ್ರಿಕ್ ಮೋಟಾರ್ ಕಾನ್ಫಿಗರೇಶನ್‌ಗಳೊಂದಿಗೆ ಮೂರು ವೇರಿಯಂಟ್ ಗಳಲ್ಲಿ ಲಭ್ಯವಿದೆ, ಇದರ ಜೊತೆಗೆ 570 ಕಿಮೀವರೆಗಿನ WLTC-ಕ್ಲೈಮ್ ಮಾಡಿರುವ ರೇಂಜ್ ಅನ್ನು ಕೂಡ ನೀಡುತ್ತದೆ.
ಪ್ರಮುಖ ಫೀಚರ್ ಗಳಲ್ಲಿ ತಿರುಗುವ 15.6-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್‌ಗಳು ಮತ್ತು ವೆಂಟಿಲೇಟೆಡ್ ಮತ್ತು ಹೀಟೆಡ್ ಮುಂಭಾಗದ ಸೀಟ್ ಗಳನ್ನು ಒಳಗೊಂಡಿವೆ. BYD ತನ್ನ ಸುರಕ್ಷತಾ ಕಿಟ್ ನಲ್ಲಿ ಎಂಟು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳ (ADAS) ಸಮಗ್ರ ಸೂಟ್ ಅನ್ನು ಒದಗಿಸಿದೆ.
ಕಿಯಾ EV9
ಲಾಂಚ್ ಅನ್ನು ಯಾವಾಗ ನಿರೀಕ್ಷಿಸಬಹುದು: 2024 ರ ಎರಡನೇ ಭಾಗದಲ್ಲಿ
ನಿರೀಕ್ಷಿಸಲಾಗಿರುವ ಬೆಲೆ: ರೂ. 80 ಲಕ್ಷ
2023 ರಲ್ಲಿ, ಈ ಕಾರ್‌ಮೇಕರ್ ತನ್ನ ಪ್ರಮುಖ EV ಮಾಡೆಲ್ ಆದ ಕಿಯಾ EV9 ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿತು ಮತ್ತು ಇದನ್ನು ಪ್ರಿ-ಪ್ರೊಡಕ್ಷನ್ ಕಾನ್ಸೆಪ್ಟ್ ರೂಪದಲ್ಲಿ ಆಟೋ ಎಕ್ಸ್‌ಪೋ 2023 ನಲ್ಲಿ ಕೂಡ ಪ್ರದರ್ಶಿಸಲಾಯಿತು. ಈ 3-ಸಾಲಿನ ಆಲ್-ಎಲೆಕ್ಟ್ರಿಕ್ SUV ವಿವಿಧ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಆಯ್ಕೆಗಳನ್ನು ನೀಡುತ್ತದೆ, ಜೊತೆಗೆ ರಿಯರ್-ವೀಲ್-ಡ್ರೈವ್ (RWD) ಮತ್ತು ಆಲ್-ವೀಲ್-ಡ್ರೈವ್ (AWD) ಕೂಡ ಲಭ್ಯವಿದೆ. EV9 541 ಕಿಮೀಗಿಂತಲೂ ಹೆಚ್ಚಿನ ಕ್ಲೇಮ್ ಮಾಡಿರುವ ರೇಂಜ್ ನೀಡುತ್ತದೆ, ಇದು ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಇರುವ ಐಷಾರಾಮಿ SUV ಯನ್ನು ಖರೀದಿಸುವವರಿಗೆ ಒಂದು ಉತ್ತಮ ಪರ್ಯಾಯ ಆಯ್ಕೆಯಾಗಿದೆ. ಕಿಯಾ ತನ್ನ EV9 ಅನ್ನು ಸಂಪೂರ್ಣವಾಗಿ ಬಿಲ್ಟ್- ಅಪ್ ಯೂನಿಟ್ (CBU) ರೀತಿಯಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ನೋಡುತ್ತಿದೆ.
ಕಿಯಾ ತನ್ನ ಗ್ಲೋಬಲ್-ಸ್ಪೆಕ್ EV9 ಅನ್ನು ಎರಡು 12.3-ಇಂಚಿನ ಕನೆಕ್ಟೆಡ್ ಡಿಸ್ಪ್ಲೇಗಳು ಮತ್ತು 708W 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್ ನೊಂದಿಗೆ ನೀಡುತ್ತದೆ. ಇದರ ಸುರಕ್ಷತಾ ಕಿಟ್‌ನಲ್ಲಿ ಒಂಬತ್ತು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮತ್ತು ಫಾರ್ವರ್ಡ್ ಕೊಲಿಷನ್ ಅವಾಯ್ಡೆನ್ಸ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳ (ADAS) ಸಂಪೂರ್ಣ ಸೂಟ್ ಅನ್ನು ನೀಡಬಹುದು.
ಇದನ್ನು ಕೂಡ ಓದಿ: ಆಪಲ್ ಕಂಪನಿಯು ಜನರೇಟಿವ್ AI ಅತ್ತ ಗಮನಹರಿಸುವ ಕಾರಣ EV ಪ್ಲಾನ್ ಅನ್ನು ರದ್ದುಗೊಳಿಸಿದೆ
ವೋಲ್ವೋ EX30
ಲಾಂಚ್ ಅನ್ನು ಯಾವಾಗ ನಿರೀಕ್ಷಿಸಬಹುದು: 2025 ರ ಎರಡನೇ ಭಾಗದಲ್ಲಿ
ನಿರೀಕ್ಷಿಸಲಾಗಿರುವ ಬೆಲೆ: ರೂ. 50 ಲಕ್ಷ
ವೋಲ್ವೋ EX30ಯು ಕಾರು ತಯಾರಕರ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ SUV ಕೊಡುಗೆಯಾಗಿದೆ, ಇದು 2025 ರಲ್ಲಿ ಭಾರತಕ್ಕೆ ಬರುವ ನಿರೀಕ್ಷೆಯಿದೆ. ಇದು ಜಾಗತಿಕವಾಗಿ XC40 ರೀಚಾರ್ಜ್‌ಗಿಂತ (ಈಗ EX40 ಎಂದು ಕರೆಯಲಾಗುತ್ತದೆ) ಕೆಳ ಮಟ್ಟದಲ್ಲಿದೆ ಮತ್ತು ಮಲ್ಟಿಪಲ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ, ಇದರ ಗರಿಷ್ಠ ಕ್ಲೈಮ್ ಮಾಡಲಾದ ರೇಂಜ್ 474 ಕಿ.ಮೀ ಆಗಿದೆ. ಇನ್ಫೋಟೈನ್ಮೆಂಟ್ ವಿಷಯದಲ್ಲಿ, ವೋಲ್ವೋ ಇದಕ್ಕೆ 12.3-ಇಂಚಿನ ಲಂಬವಾಗಿ ಇರಿಸಲಾದ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕನೆಕ್ಟೆಡ್ ಕಾರ್ ಟೆಕ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ನೀಡಿದೆ. EX30ಯು ಡ್ರೈವರ್ ಅಟೆನ್ಟಿವ್ನೆಸ್ ಅಲರ್ಟ್, ಪಾರ್ಕ್ ಅಸಿಸ್ಟ್ ಮತ್ತು ಕೊಲಿಷನ್ ಅವಾಯ್ಡೆನ್ಸ್ ಸೇರಿದಂತೆ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಪಡೆಯುತ್ತದೆ.
ಈ ಮೂರು EV ಗಳಲ್ಲಿ ನೀವು ಯಾವ ಮಾಡೆಲ್ ಬಗ್ಗೆ ಹೆಚ್ಚು ಆಸಕ್ತರಾಗಿದ್ದೀರಿ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ ಬೆಲೆಯಾಗಿದೆ