Login or Register ಅತ್ಯುತ್ತಮ CarDekho experience ಗೆ
Login

2025ರ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಅಥವಾ ಅನಾವರಣಗೊಳ್ಳಲಿರುವ ಟಾಪ್ 5 ಕಾರುಗಳು

ಮಾರ್ಚ್‌ 31, 2025 09:08 pm ರಂದು anonymous ಮೂಲಕ ಪ್ರಕಟಿಸಲಾಗಿದೆ

ಹೆಚ್ಚಿನ ಬಿಡುಗಡೆಗಳು ಮಾಸ್‌ ಮಾರುಕಟ್ಟೆಯ ಕಾರು ತಯಾರಕರಿಂದ ಬಂದರೆ, ಜರ್ಮನ್ ಬ್ರಾಂಡ್‌ನಿಂದ ಎಂಟ್ರಿ-ಲೆವೆಲ್‌ನ ಸೆಡಾನ್ ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ

ಮಾರ್ಚ್ ತಿಂಗಳಿನಲ್ಲಿ ಹೆಚ್ಚಾಗಿ ಐಷಾರಾಮಿ ಕಾರು ತಯಾರಕರ ಕಾರುಗಳು ಬಿಡುಗಡೆಯಾಗಿದ್ದು, ಮುಂಬರುವ ತಿಂಗಳು ಮಾಸ್‌ ಮಾರ್ಕೆಟ್‌ ಬ್ರಾಂಡ್‌ಗಳಿಂದ ಹಲವು ಎಸ್‌ಯುವಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಇದರಲ್ಲಿ ಮಾರುತಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಮತ್ತು ಕಿಯಾದ ಆಪ್‌ಡೆಟ್‌ ಮಾಡಿದ ಎಮ್‌ಪಿವಿಯ ಅನಾವರಣವೂ ಸೇರಿದೆ. ಆ ನಿಟ್ಟಿನಲ್ಲಿ, 2025ರ ಏಪ್ರಿಲ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಎಲ್ಲಾ ಮುಂಬರುವ ಕಾರುಗಳನ್ನು ನೋಡೋಣ.

ಮಾರುತಿ ಇ ವಿಟಾರಾ

ನಿರೀಕ್ಷಿತ ಬಿಡುಗಡೆ ದಿನಾಂಕ: 2025ರ ಏಪ್ರಿಲ್‌ನ ಮಧ್ಯಭಾಗ

ನಿರೀಕ್ಷಿತ ಬೆಲೆ: 17 ಲಕ್ಷ ರೂ.(ಎಕ್ಸ್ ಶೋರೂಂ)

2025ರ ಆಟೋ ಎಕ್ಸ್‌ಪೋದಲ್ಲಿ ಬಹಿರಂಗಪಡಿಸಿದ ನಂತರ, ಮಾರುತಿ ಇ ವಿಟಾರಾ 2025ರ ಮಾರ್ಚ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು, ಆದರೆ ಈಗ ಅದು ವಿಳಂಬವಾಗುವ ಸಾಧ್ಯತೆ ಇದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಈಗಾಗಲೇ ದೇಶಾದ್ಯಂತ ಕೆಲವು ಡೀಲರ್‌ಶಿಪ್‌ಗಳಿಗೆ ತಲುಪಿದೆ, ಆದರೆ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್‌ಗೆ ಪ್ರತಿಸ್ಪರ್ಧಿಯಾಗಿರುವ ಇ ವಿಟಾರಾ 2025ರ ಏಪ್ರಿಲ್ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.

ಇದು ಮೂರು-ತುಂಡುಗಳ ಎಲ್‌ಇಡಿ ಡಿಆರ್‌ಎಲ್‌ಗಳು, ಏರೋ-ಸ್ನೇಹಿ 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲೈಟ್‌ಗಳಂತಹ ಆಧುನಿಕ ಅಂಶಗಳೊಂದಿಗೆ ಉಬ್ಬಿದ ವಿನ್ಯಾಸವನ್ನು ಹೊಂದಿದೆ. ಇ ವಿಟಾರಾವನ್ನು 48.8 ಕಿ.ವ್ಯಾಟ್‌ ಮತ್ತು 61.1 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು, ಇದು 500 ಕಿ.ಮೀ.ಗಿಂತ ಹೆಚ್ಚಿನ ಕ್ಲೈಮ್‌ ಮಾಡಿದ ರೇಂಜ್‌ಅನ್ನು ನೀಡುತ್ತದೆ.

2025 ಕಿಯಾ ಕ್ಯಾರೆನ್ಸ್

ನಿರೀಕ್ಷಿತ ಬಿಡುಗಡೆ ದಿನಾಂಕ: ಏಪ್ರಿಲ್ 25, 2025

ನಿರೀಕ್ಷಿತ ಬೆಲೆ: 11 ಲಕ್ಷ ರೂ. (ಎಕ್ಸ್ ಶೋ ರೂಂ)

2025 ರ ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್ ಏಪ್ರಿಲ್ ಅಂತ್ಯದ ವೇಳೆಗೆ ಭಾರತದಲ್ಲಿ ಅನಾವರಣಗೊಳ್ಳಲಿದ್ದು, 2025ರ ಜೂನ್ ವೇಳೆಗೆ ಬೆಲೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಅದರ ಮಿಡ್‌ಲೈಫ್ ಆಪ್‌ಡೇಟ್‌ನ ಭಾಗವಾಗಿ, ಕ್ಯಾರೆನ್ಸ್ ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಡಿಆರ್‌ಎಲ್‌ಗಳು, ಪರಿಷ್ಕೃತ ಮುಂಭಾಗದ ಬಂಪರ್, ಆಪ್‌ಡೇಟ್‌ ಮಾಡಲಾದ ಅಲಾಯ್ ವೀಲ್‌ಗಳು ಮತ್ತು ರಿಫ್ರೆಶ್ ಮಾಡಿದ ಎಲ್‌ಇಡಿ ಟೈಲ್ ಲೈಟ್‌ಗಳು ಸೇರಿದಂತೆ ಎಕ್ಸ್‌ಟೀರಿಯರ್‌ನ ಬದಲಾವಣೆಗಳನ್ನು ಪಡೆಯುತ್ತದೆ. ಇಂಟೀರಿಯರ್‌ನ ಫೋಟೊಗಳು ಇನ್ನೂ ಬಹಿರಂಗವಾಗದಿದ್ದರೂ, ಇದು ಆಪ್‌ಡೇಟ್‌ ಮಾಡಿದ ಡ್ಯಾಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್ ವಿನ್ಯಾಸವನ್ನು ಜೊತೆಗೆ ವರ್ಧಿತ ಫೀಚರ್‌ಗಳ ಸೆಟ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ.

2025 ರ ಕ್ಯಾರೆನ್ಸ್ ಎರಡು ಪೆಟ್ರೋಲ್ ಪವರ್‌ಟ್ರೇನ್‌ಗಳು ಮತ್ತು ಒಂದೇ ಡೀಸೆಲ್ ಎಂಜಿನ್ ಆಯ್ಕೆ ಸೇರಿದಂತೆ ಅದೇ ಎಂಜಿನ್ ಆಯ್ಕೆಗಳೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ. ಬಿಡುಗಡೆಯಾದ ನಂತರ, 2025 ಕ್ಯಾರೆನ್ಸ್‌ಗಳು ಮಾರುತಿ ಎರ್ಟಿಗಾ, ಮಾರುತಿ XL6 ಮತ್ತು ಟೊಯೋಟಾ ರೂಮಿಯನ್‌ಗಳೊಂದಿಗೆ ಪೈಪೋಟಿ ನಡೆಸುವುದನ್ನು ಮುಂದುವರಿಸುತ್ತವೆ, ಜೊತೆಗೆ ಮಾರುತಿ ಇನ್ವಿಕ್ಟೊ, ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾಗಳಿಗೆ ಪರ್ಯಾಯವಾಗಲಿದೆ.

ಇದನ್ನೂ ಓದಿ: ಭಾರತದಲ್ಲಿ Kia EV6 ಫೇಸ್‌ಲಿಫ್ಟ್ ಬಿಡುಗಡೆ, ಬೆಲೆ 65.90 ಲಕ್ಷ ರೂ. ನಿಗದಿ

ವೋಕ್ಸ್‌ವ್ಯಾಗನ್ ಟಿಗುವಾನ್ ಆರ್-ಲೈನ್

ದೃಢೀಕೃತ ಬಿಡುಗಡೆ ದಿನಾಂಕ: 14 ಏಪ್ರಿಲ್ 2025

ನಿರೀಕ್ಷಿತ ಬೆಲೆ: 55 ಲಕ್ಷ ರೂ.(ಎಕ್ಸ್ ಶೋರೂಂ)

new-gen Tiguan ವೋಕ್ಸ್‌ವ್ಯಾಗನ್ ತನ್ನ ಸ್ಪೋರ್ಟಿಯರ್ 'ಆರ್-ಲೈನ್' ಆವೃತ್ತಿಯಲ್ಲಿ ಹೊಸ ಜನರೇಶನ್‌ನ ಟಿಗುವಾನ್ ಅನ್ನು ಏಪ್ರಿಲ್ 14, 2025 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಭಾರತಕ್ಕೆ ಸಂಪೂರ್ಣವಾಗಿ ನಿರ್ಮಿಸಲಾದ ಘಟಕವಾಗಿ (CBU) ಬರುವ ಸಾಧ್ಯತೆ ಇದ್ದು, ಇದರ ಬೆಲೆ 50 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ನಿರೀಕ್ಷಿಸಲಾಗಿದೆ. ಭಾರತದಲ್ಲಿ ಮಾರಾಟವಾದ ಹಿಂದಿನ ಜನರೇಶನ್‌ಗೆ ಹೋಲಿಸಿದರೆ, ಟಿಗುವಾನ್ ಆರ್-ಲೈನ್ 'ಆರ್' ಬ್ಯಾಡ್ಜ್‌ಗಳ ಜೊತೆಗೆ ಕಪ್ಪು ಬಣ್ಣದ ಅಕ್ಸೆಂಟ್‌ಗಳೊಂದಿಗೆ ರಿಫ್ರೆಶ್ ವಿನ್ಯಾಸವನ್ನು ಪಡೆಯುತ್ತದೆ.

ಒಳಭಾಗದಲ್ಲಿ, ಕ್ಯಾಬಿನ್ ಕೆಂಪು ಆಕ್ಸೆಂಟ್‌ನೊಂದಿಗೆ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ, ಇದು ರೆಗ್ಯುಲರ್‌ ಮೊಡೆಲ್‌ನಿಂದ ಇದನ್ನು ಪ್ರತ್ಯೇಕಿಸುತ್ತದೆ. ಟಿಗುವಾನ್ ಆರ್-ಲೈನ್ 190 ಪಿಎಸ್‌/320 ಎನ್‌ಎಮ್‌ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ನಿರೀಕ್ಷೆಯಿದೆ, ಇದು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿದೆ.

2025 ಸ್ಕೋಡಾ ಕೊಡಿಯಾಕ್

ನಿರೀಕ್ಷಿತ ಬಿಡುಗಡೆ ದಿನಾಂಕ: ಏಪ್ರಿಲ್ 16, 2025

ನಿರೀಕ್ಷಿತ ಬೆಲೆ: ರೂ 40 ಲಕ್ಷ (ಎಕ್ಸ್ ಶೋ ರೂಂ)

ಸ್ಕೋಡಾ ಕಂಪನಿಯು ಏಪ್ರಿಲ್ ಅಂತ್ಯದ ವೇಳೆಗೆ 2025ರ ಕೊಡಿಯಾಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ. ಇದರ ಬೆಲೆ 40 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ನಿರೀಕ್ಷಿಸಲಾಗಿದೆ ಮತ್ತು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ. ಹೊಸ ತಲೆಮಾರಿನ ಕೊಡಿಯಾಕ್ ವಿನ್ಯಾಸವು ಸಣ್ಣಪುಟ್ಟ ಆಪ್‌ಡೇಟ್‌ಗಳನ್ನು ಹೊಂದಿದ್ದರೆ, ಕ್ಯಾಬಿನ್ ಹೊಸ ವಿನ್ಯಾಸ ಮತ್ತು ಹೊಸ ಫೀಚರ್‌ಗಳೊಂದಿಗೆ ಸಂಪೂರ್ಣ ಹೊಸ ಲುಕ್‌ಅನ್ನು ಪಡೆಯುತ್ತದೆ. ಇವುಗಳಲ್ಲಿ 13-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಪ್‌ಡೇಟ್‌ ಮಾಡಿದ ಎಸಿ ಕಂಟ್ರೋಲ್ ಡಯಲ್‌ಗಳು ಮತ್ತು ರಿಫ್ರೆಶ್ ಮಾಡಿದ ಸೀಟ್ ಕವರ್‌ ಸೇರಿವೆ. 2025 ಕೊಡಿಯಾಕ್ 204 ಪಿಎಸ್ ಉತ್ಪಾದಿಸುವ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನಿರೀಕ್ಷೆಯಿದ್ದು, 7-ಸ್ಪೀಡ್ ಡಿಸಿಟಿ ಮತ್ತು ಆಲ್-ವೀಲ್-ಡ್ರೈವ್ ಸಿಸ್ಟಮ್ ನೊಂದಿಗೆ ಜೋಡಿಸಲಾಗಿದೆ.

2025 ಬಿಎಂಡಬ್ಲ್ಯು 2 ಸಿರೀಸ್‌

ನಿರೀಕ್ಷಿತ ಬಿಡುಗಡೆ ದಿನಾಂಕ: ಏಪ್ರಿಲ್ 20, 2025

ನಿರೀಕ್ಷಿತ ಬೆಲೆ: 46 ಲಕ್ಷ ರೂ.(ಎಕ್ಸ್ ಶೋರೂಂ)

ಬಿಎಮ್‌ಡಬ್ಲ್ಯೂ ಹೊಸ ಜನರೇಶನ್‌ನ 2 ಸಿರೀಸ್‌ಅನ್ನು ಅಕ್ಟೋಬರ್ 2024 ರಲ್ಲಿ ಜಾಗತಿಕವಾಗಿ ಅನಾವರಣಗೊಳಿಸಿತು ಮತ್ತು ಈಗ ಬ್ರ್ಯಾಂಡ್‌ನ ಆರಂಭಿಕ ಹಂತದ ಸೆಡಾನ್ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಪ್ರಮುಖ ವಿನ್ಯಾಸ ಅಪ್‌ಡೇಟ್‌ಗಳನ್ನು ಒಳಗೊಂಡಿದೆ, ಇದರಲ್ಲಿ ಟ್ವೀಕ್ ಮಾಡಿದ ಕಿಡ್ನಿ ಗ್ರಿಲ್, ಅಪ್‌ಡೇಟ್‌ ಮಾಡಿದ 18-ಇಂಚಿನ ಅಲಾಯ್ ವೀಲ್‌ಗಳು (ಜಾಗತಿಕವಾಗಿ 19-ಇಂಚಿಗೆ ಅಪ್‌ಗ್ರೇಡ್ ಮಾಡಬಹುದಾಗಿದೆ), ಮತ್ತು ಪರಿಷ್ಕೃತ ಎಲ್‌ಇಡಿ ಟೈಲ್‌ಲೈಟ್ ವ್ಯವಸ್ಥೆ ಸೇರಿವೆ. ಆಪ್‌ಡೇಟ್‌ ಮಾಡಿದ 2 ಸಿರೀಸ್‌ ಉದ್ದ ಮತ್ತು ಎತ್ತರವು ಕ್ರಮವಾಗಿ 20 ಮಿಮೀ ಮತ್ತು 25 ಮಿಮೀ ಹೆಚ್ಚಾಗಿದೆ.

ಒಳಭಾಗದಲ್ಲಿ, ಇದು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಚಾಲಿತ ಮುಂದಿನ ಸಾಲಿನ ಸೀಟ್‌ಗಳಂತಹ ಫೀಚರ್‌ಗಳೊಂದಿಗೆ ರಿಫ್ರೆಶ್ ಮಾಡಿದ ಕ್ಯಾಬಿನ್ ಅನ್ನು ಪಡೆಯುತ್ತದೆ. 2025ರ BMW 2 ಸಿರೀಸ್‌ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಆದರೆ ಭಾರತ-ಸ್ಪೆಕ್ ಮೊಡೆಲ್‌ ಪ್ರಸ್ತುತ 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಮೇಲೆ ತಿಳಿಸಿದ ಯಾವ ಮೊಡೆಲ್‌ಗಳನ್ನು ನೀವು ಹೆಚ್ಚು ಎದುರು ನೋಡುತ್ತಿದ್ದೀರಿ, ಕೆಳಗಿನ ಕಾಮೆಂಟ್‌ಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

Share via

Write your Comment on Maruti ಇ ವಿಟಾರಾ

explore similar ಕಾರುಗಳು

ವೋಕ್ಸ್ವ್ಯಾಗನ್ ಟಿಗುವಾನ್ 2025

51 ವಿಮರ್ಶೆಈ ಕಾರಿಗೆ ಅಂಕಗಳನ್ನು ನೀಡಿ
Rs.55 ಲಕ್ಷ* Estimated Price
ಏಪ್ರಿಲ್ 14, 2025 Expected Launch
ಟ್ರಾನ್ಸ್ಮಿಷನ್ಮ್ಯಾನುಯಲ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಕಿಯಾ ಕೆರೆನ್ಸ್ 2025

4.84 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.11 ಲಕ್ಷ* Estimated Price
ಏಪ್ರಿಲ್ 25, 2025 Expected Launch
ಟ್ರಾನ್ಸ್ಮಿಷನ್ಮ್ಯಾನುಯಲ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಸ್ಕೋಡಾ ಕೊಡಿಯಾಕ್ 2025

4.84 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.40 ಲಕ್ಷ* Estimated Price
ಏಪ್ರಿಲ್ 16, 2025 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಬಿಎಂಡವೋ 2 ಸರಣಿ 2025

51 ವಿಮರ್ಶೆಈ ಕಾರಿಗೆ ಅಂಕಗಳನ್ನು ನೀಡಿ
Rs.46 ಲಕ್ಷ* Estimated Price
ಏಪ್ರಿಲ್ 20, 2025 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಮಾರುತಿ ಇ ವಿಟಾರಾ

4.611 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.1 7 - 22.50 ಲಕ್ಷ* Estimated Price
ಏಪ್ರಿಲ್ 04, 2025 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಓಲಾ ಎಲೆಕ್ಟ್ರಿಕ್ ಕಾರ್

4.311 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.40 ಲಕ್ಷ* Estimated Price
ಡಿಸೆಂಬರ್ 16, 2036 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ