Login or Register ಅತ್ಯುತ್ತಮ CarDekho experience ಗೆ
Login

2026ರ ವೇಳೆಗೆ ಭಾರತದಲ್ಲಿ ಮೂರನೇ ಉತ್ಪಾದನಾ ಘಟಕ ಸ್ಥಾಪಿಸಲಿರುವ ಟೊಯೋಟಾ

ನವೆಂಬರ್ 22, 2023 05:50 pm ರಂದು sonny ಮೂಲಕ ಪ್ರಕಟಿಸಲಾಗಿದೆ

ಸುಮಾರು 3,300 ಕೋಟಿ ರೂಪಾಯಿಗಳ ಅಂದಾಜು ಹೂಡಿಕೆಯೊಂದಿಗೆ ಹೊಸ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗುತ್ತದೆ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಜಪಾನಿನ ಕಾರು ತಯಾರಕ ಕಂಪನಿಯಾದ ಟೊಯೋಟಾ, ಹೊಸ ಹೂಡಿಕೆಗಳೊಂದಿಗೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಕರ್ನಾಟಕ ಸರ್ಕಾರದೊಂದಿಗೆ ಒಡಂಬಡಿಕೆ ಪತ್ರಕ್ಕೆ (MOU) ಸಹಿ ಹಾಕಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸುಮಾರು 3,300 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಚ್ಚ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ.

ಇದು ಭಾರತದಲ್ಲಿ ಟೊಯೋಟಾದ ಮೂರನೇ ಘಟಕವಾಗಿದ್ದು ಮತ್ತು ಇದನ್ನು ಬೆಂಗಳೂರಿನ ಬಿಡದಿಯಲ್ಲಿ ಸ್ಥಾಪಿಸಲಾಗುವುದು, ಅಲ್ಲಿ ಕಂಪನಿಯು ಈಗಾಗಲೇ ಎರಡು ಘಟಕಗಳನ್ನು ಹೊಂದಿದೆ. ಕಾರು ತಯಾರಕರ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 1 ಲಕ್ಷ ಯುನಿಟ್‌ಗಳಷ್ಟು ಹೆಚ್ಚಿಸಲು ಯೋಜಿಸಿದೆ ಮತ್ತು 2026 ರ ವೇಳೆಗೆ ಸಿದ್ಧವಾಗಲಿದೆ. ಈ ಹೊಸ ಘಟಕದಲ್ಲಿ ಯಾವ ಕಾರುಗಳನ್ನು ತಯಾರಿಸಲಾಗುವುದು ಎಂಬುದು ಇನ್ನೂ ತಿಳಿದಿಲ್ಲವಾದರೂ, ಇಲ್ಲಿ ತಯಾರಿಸಲಾದ ವಾಹನಗಳಲ್ಲಿ ಟೊಯೋಟಾ ಇನ್ನೋವಾ ಹೈಕ್ರಾಸ್ ಒಂದಾಗಿರಲಿದೆ ಎಂದು ನಾವು ಖಂಡಿತವಾಗಿ ಹೇಳಬಹುದು. ಟೊಯೋಟಾ ಸಧ್ಯಕ್ಕೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲವಾದರೂ ಭವಿಷ್ಯದಲ್ಲಿ ಇದನ್ನು ಪರಿಗಣಿಸುತ್ತದೆ ಮತ್ತು ಆಗ ಈ ಹೊಸ ಘಟಕ ಅವುಗಳ ಉತ್ಪಾದನೆಗೆ ಸಹ ಉಪಯುಕ್ತವಾಗಬಹುದು.

“ಮೇಕ್-ಇನ್-ಇಂಡಿಯಾ” ಗೆ ಕಂಪನಿಯ ಕೊಡುಗೆಯನ್ನು ಮತ್ತಷ್ಟು ಉತ್ತೇಜಿಸಲು, ಹೊಸ ಹೂಡಿಕೆಗಳ ಬಗ್ಗೆ ತಿಳಿಸಲು ನಾವು ತುಂಬಾ ಸಂತೋಷಪಡುತ್ತೇವೆ. TKM ಉತ್ಪಾದನಾ ಸಾಮರ್ಥ್ಯವನ್ನು 1,00,000 ಯುನಿಟ್‌ಗಳಷ್ಟು ಹೆಚ್ಚಿಸಲಾಗುವುದು ಮತ್ತು ಸುಮಾರು 2,000 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಹೊಸ ಹೂಡಿಕೆಯು ಪೂರೈಕೆದಾರ ಪರಿಸರ ವ್ಯವಸ್ಥೆಯಲ್ಲಿ ಬೆಳವಣಿಗೆಯ ಸಾಮರ್ಥ್ಯವನ್ನು ಉಂಟುಮಾಡುತ್ತದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ 25 ವರ್ಷಗಳನ್ನು ಪೂರೈಸಿರುವುದು ನಮ್ಮ ಟೊಯೋಟಾ ತಂಡ ಮತ್ತು ನಮ್ಮ ಷೇರುದಾರರ ಉತ್ಸಾಹ, ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಸುರಕ್ಷಿತ ಭವಿಷ್ಯದ ನಿರ್ಮಾಣದಲ್ಲಿ ಅವರ ಕೊಡುಗೆಗಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಸಾಝಕು ಯೋಶಿಮುರಾ ಹೇಳಿದರು.

ಟೊಯೋಟಾ ಭಾರತದ ಕೆಲವು ಪ್ರಮುಖ ಬ್ರಾಂಡ್‌ಗಳಲ್ಲಿ ಒಂದಾಗಿದ್ದು ಅದರ ಪ್ರಬಲ ಹೈಬ್ರಿಡ್ ಕಾರುಗಳು ಇಲ್ಲಿ ಮಾರಾಟಕ್ಕೆ ಲಭ್ಯವಿದೆ. ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ SUV, ಹೈಕ್ರಾಸ್ MPV, ಕ್ಯಾಮ್ರಿ ಪ್ರೀಮಿಯಂ ಸೆಡಾನ್ ಮತ್ತು ವೆಲ್‌ಫೈರ್ ಲಕ್ಸುರಿ MPVಗಳಲ್ಲಿ ಪ್ರಬಲ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯನ್ನು ನೀಡಿದೆ. ಇನ್ನೋವಾ ಕ್ರಿಸ್ಟಾ ಮತ್ತು ಫಾರ್ಚುನರ್ ಕಂಪನಿಯ ಐಕಾನಿಕ್ ಕಾರುಗಳಾಗಿದ್ದು, ನಿರಂತರವಾಗಿ ಉತ್ತಮ ಬೇಡಿಕೆಯನ್ನು ಪಡೆಯುತ್ತಿವೆ. ಇದರ ಹೊರತಾಗಿ, ಟೊಯೋಟಾ ಮಾರುತಿ ಸುಜುಕಿಯೊಂದಿಗೆ ಗ್ಲ್ಯಾನ್ಜಾ ಹ್ಯಾಚ್‌ಬ್ಯಾಕ್, ರೂಮಿಯನ್ MPV ಮತ್ತು ಮುಂಬರುವ ಮುಂಬರುವ ಮಾರುತಿ ಫ್ರಾಂಕ್ಸ್ ಆಧಾರಿತ ಕ್ರಾಸ್‌ಓವರ್ ಗಳಂತಹ ಮಾರುತಿ ಸುಜುಕಿಯೊಂದಿಗೆ ಹಂಚಿಕೊಂಡ ಮಾಡೆಲ್‌ಗಳು ಅದರ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಈ ಹೊಸ ಘಟಕವು ಭವಿಷ್ಯದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಗೆ ಸಹಾಯ ಮಾಡುವುದಲ್ಲದೆ ಕಾರುಗಳ ವೇಟಿಂಗ್ ಅವಧಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

s
ಅವರಿಂದ ಪ್ರಕಟಿಸಲಾಗಿದೆ

sonny

  • 38 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your ಕಾಮೆಂಟ್

Read Full News

Enable notifications to stay updated with exclusive offers, car news, and more from CarDekho!

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ