2024ರ ಏಪ್ರಿಲ್ ವೇಳೆಗೆ Maruti Fronx ಕಾರಿನ ಟೊಯೊಟಾ ಆವೃತ್ತಿ ಬಿಡುಗಡೆ
ನವೆಂಬರ್ 20, 2023 07:28 am ರಂದು sonny ಮೂಲಕ ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಇದು ಭಾರತದಲ್ಲಿ ಮಾರುತಿ - ಟೊಯೊಟಾ ಸಹಭಾಗಿತ್ವದ ಆರನೇ ಮಾದರಿ ಎನಿಸಲಿದೆ
- ಫ್ರಾಂಕ್ಸ್ ಕಾರಿನ ಟೊಯೊಟಾ ಆವೃತ್ತಿಯು ಬಿಡುಗಡೆಯಾಗುವ ಕುರಿತು ಮೊದಲಿಗೆ ಜುಲೈ 2023ರಲ್ಲಿ ವರದಿಯಾಗಿತ್ತು.
- ಇದು 2024ರ ಮೊದಲ ತ್ರೈಮಾಸಿಕದಲ್ಲಿ ಬರುವ ಸಾಧ್ಯತೆ ಇದ್ದು, ಭಾರತದಲ್ಲಿ ಇದು ಈ ಎರಡು ಕಾರು ತಯಾರಕ ಸಂಸ್ಥೆಗಳ ಸಹಭಾಗಿತ್ವದ ಐದನೇ ಮಾದರಿ ಎನಿಸಲಿದೆ.
- ಮುಂಭಾಗದ ಫೇಶಿಯಾ ಮತ್ತು ಕ್ಯಾಬಿನ್ ಬಣ್ಣಗಳಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಇದೆ.
- ಫ್ರಾಂಕ್ಸ್ ಕಾರಿನಲ್ಲಿರುವ ವೈಶಿಷ್ಟ್ಯಗಳು ಮತ್ತು ಎಂಜಿನ್ - ಟ್ರಾನ್ಸ್ ಮಿಶನ್ ಸಂಯೋಜನೆಯನ್ನೇ ಇದು ಪಡೆಯಲಿದೆ.
- ಟೊಯೊಟಾ ಲಾಂಛನದ ಫ್ರಾಂಕ್ಸ್ ವಾಹನವು ಸುಮಾರು ರೂ. 8 ಲಕ್ಷ ಬೆಲೆಗೆ (ಎಕ್ಸ್-ಶೋರೂಂ) ದೊರೆಯುವ ನಿರೀಕ್ಷೆ ಇದೆ.
ಟೊಯೊಟಾ ಮತ್ತು ಮಾರುತಿ ಸುಜುಕಿ ನಡುವಿನ ಸಹಭಾಗಿತ್ವದ ಮೂಲಕ ಭಾರತೀಯ ಕಾರು ಮಾರುಕಟ್ಟೆಗೆ SUV ಯಂತಹ ಇನ್ನೊಂದು ಮಾದರಿಯು ಕಾಲಿಡಲಿದೆ. ಟೊಯೊಟಾ ಸಂಸ್ಥೆಯು ಮಾರುತಿ ಫ್ರಾಂಕ್ಸ್ ಕಾರಿನ ತನ್ನದೇ ಆದ ಆವೃತ್ತಿಯನ್ನು ಹೊರತರುವುದಕ್ಕಾಗಿ ಕೆಲಸ ಮಾಡುತ್ತಿದ್ದು, 2024ರ ಮೊದಲ ತ್ರೈಮಾಸಿಕದಲ್ಲಿ (ಹೆಚ್ಚೆಂದರೆ ಮಾರ್ಚ್ ತಿಂಗಳೊಳಗೆ) ಇದನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ನಿರೀಕ್ಷಿಸಬಹುದಾದ ಬದಲಾವಣೆಗಳು
ಮಾರುತಿ ಮತ್ತು ಟೊಯೊಟಾ ನಡುವಿನ ಸಹಭಾಗಿತ್ವದ ಇತರ ಮಾದರಿಗಳನ್ನು ಆಧರಿಸಿ, ಮರುವಿನ್ಯಾಸಕ್ಕೆ ಒಳಪಟ್ಟ ಫ್ರಾಂಕ್ಸ್ ಕಾರು ಹೊಸ ಶೈಲಿಯ ಗ್ರಿಲ್ ಮತ್ತು ಮುಂಭಾಗದ ಬಂಪರ್ ಜೊತೆಗೆ ಬರಲಿದೆ ಎಂದು ನಾವು ಹೇಳಬಹುದು. ಜತೆಗೆ ಇದು ಕ್ಯಾಬಿನ್ ಗೆ ಬೇರೆಯೇ ವರ್ಣ ಯೋಜನೆಯನ್ನು ಪಡೆಯಲಿದ್ದು, ಮಾರುತಿ ಗ್ರಾಂಡ್ ವಿಟಾರ ಮತ್ತು ಟೊಯೊಟಾ ಹೈರೈಡರ್ ನಡುವೆ ನಾವು ನೋಡಿದಂತೆ ಫ್ರಾಂಕ್ಸ್ ನಲ್ಲಿರುವ ವಿನ್ಯಾಸವನ್ನೇ ಟೊಯೊಟಾದ ಆವೃತ್ತಿಯೂ ಹೊಂದಿರಲಿದೆ.
ಸದೃಶ ವೈಶಿಷ್ಟ್ಯಗಳ ಪಟ್ಟಿ
ಮಾರುತಿ ಮತ್ತು ಟೊಯೊಟಾದ ನಡುವಿನ ಸಹಭಾಗಿತ್ವದ ಇತರ ಮಾದರಿಗಳಂತೆಯೇ, ಟೊಯೊಟಾದ ಲಾಂಛನದ ಅಡಿಯಲ್ಲಿ ಹೊರಬರಲಿರುವ ಫ್ರಾಂಕ್ಸ್ ಕಾರು ಸಹ ಮಾರುತಿಯ ಮಾದರಿಯಲ್ಲಿರುವ ವೈಶಿಷ್ಟ್ಯಗಳು ಮತ್ತು ಅನುಕೂಲತೆಗಳನ್ನೇ ಹೊಂದಿರಲಿದೆ. ಇದು 9 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಘಟಕ, 360 ಡಿಗ್ರಿ ಕ್ಯಾಮರಾ, ಸುತ್ತಲೂ LED ಲೈಟಿಂಗ್, ಅಟೋ AC, ವೈರ್ ಲೆಸ್ ಫೋನ್ ಚಾರ್ಜರ್ ಮತ್ತು 6 ರಷ್ಟು ಏರ್ ಬ್ಯಾಗ್ ಗಳನ್ನು ಹೊಂದಿರಲಿದೆ.
ಟರ್ಬೊಚಾರ್ಜ್ಡ್ ಎಂಜಿನ್ ಪಡೆಯಲಿರುವ ಟೊಯೊಟಾ
ಹೊಸ ಲಾಂಛನದ ಅಡಿಯಲ್ಲಿ ಬರಲಿರುವ ಮಾರುತಿ ಫ್ರಾಂಕ್ಸ್ ಕಾರಿನ ಆವೃತ್ತಿಯು ಅದೇ ಎಂಜಿನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳನ್ನು ಹೊಂದಿರಲಿದೆ. ಕೆಳ ದರ್ಜೆಯ ವೇರಿಯಂಟ್ ಗಳಲ್ಲಿ ಇದು 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (90 PS/ 113 Nm) ಜೊತೆಗೆ ಬರಲಿದ್ದು, 5-ಸ್ಪೀಡ್ MT ಅಥವಾ 5-ಸ್ಪೀಡ್ AMT ಜೊತೆಗೆ ಇದನ್ನು ಹೊಂದಿಸಲಾಗುತ್ತದೆ. ಇತರ ಸಂಪೂರ್ಣ ಲೋಡೆಡ್ ವೇರಿಯಂಟ್ ಗಳಲ್ಲಿ ಇದು 1-ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ (100 PS/ 148 Nm) ಜೊತೆಗೆ 5-ಸ್ಪೀಡ್ MT ಅಥವಾ 6-ಸ್ಪೀಡ್ AT ಆಯ್ಕೆಯೊಂದಿಗೆ ಬರಲಿದೆ. ಇದು ಭಾರತದಲ್ಲಿ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಟೊಯೊಟಾ ಲಾಂಛನದ ಮೊದಲ ಮಾದರಿ ಎನಿಸಲಿದೆ.
ಫ್ರಾಂಕ್ಸ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ CNG ಆಯ್ಕೆಯನ್ನೂ ಹೊಂದಿದ್ದು, ಇದನ್ನು5-ಸ್ಪೀಡ್ MT ಜೊತೆಗೆ ಮಾತ್ರವೇ ನೀಡಲಾಗುತ್ತದೆ.
ಟೊಯೊಟಾ ಫ್ರಾಂಕ್ಸ್ ಏಕೆ ತಯಾರಿಸಲಾಗುತ್ತಿದೆ?
ಟೊಯೊಟಾ ಹೈರೈಡರ್ ಕಾರಿನ ಯಶಸ್ಸಿನ ನಂತರ ಮಾರುತಿ ಬ್ರೆಜ್ಜಾವನ್ನು ಮರುಪರಿಚಯಿಸುವ ಉದ್ದೇಶವನ್ನು ಹೊಂದಿಲ್ಲದ ಕಾರಣ ಟೊಯೊಟಾ ಸಂಸ್ಥೆಯು ಸಬ್-4m SUV ವಿಭಾಗದಲ್ಲಿ ತನ್ನ ಛಾಪನ್ನು ಮೂಡಿಸಲು ಯತ್ನಿಸುತ್ತಿದೆ. ಫ್ರಾಂಕ್ಸ್ ಕಾರು ಬಲೇನೊ ಹ್ಯಾಚ್ ಬ್ಯಾಕ್ ಅನ್ನು ಆಧರಿಸಿರುವ ಕಾರಣ ಹಾಗೂ ಟೊಯೊಟಾ ಗ್ಲಾಂಜ ಆಗಿ ಮಾರುತ್ತಿರುವ ಕಾರಣ, ತನ್ನ ಒಟ್ಟಾರೆ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಈ ಕ್ರಾಸ್ ಓವರ್ SUV ಯು ಅತ್ಯುತ್ತಮ ಆಯ್ಕೆ ಎನಿಸಿದೆ.
ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಟೊಯೊಟಾ ಲಾಂಛನದ ಮಾರುತಿ ಫ್ರಾಂಕ್ಸ್ ಕಾರು ಸುಮಾರು ರೂ. 8 ಲಕ್ಷ ಬೆಲೆಗೆ (ಎಕ್ಸ್-ಶೋರೂಂ) ದೊರೆಯುವ ನಿರೀಕ್ಷೆ ಇದೆ. ಇದು ಸಬ್ ಕಾಂಪ್ಯಾಕ್ಟ್ SUVಗಳಾದ ರೆನೋ ಕೀಗರ್, ನಿಸ್ಸಾನ್ ಮ್ಯಾಗ್ನೈಟ್, ಟಾಟಾ ನೆಕ್ಸನ್, ಕಿಯಾ ಸೋನೆಟ್, ಮಾರುತಿ ಬ್ರೆಜ್ಜಾ, ಮತ್ತು ಹ್ಯುಂಡೈ ವೆನ್ಯು ಜೊತೆಗೆ ಸ್ಪರ್ಧಿಸಲಿದೆ.
ಇದನ್ನು ಸಹ ಓದಿರಿ: ದಕ್ಷಿಣ ಆಫ್ರಿಕಾದ ರಸ್ತೆಗಿಳಿದ ಭಾರತ ನಿರ್ಮಿತ ಜಿಮ್ನಿ 5 ಡೋರ್ ವಾಹನ
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಫ್ರಾಂಕ್ಸ್ AMT
0 out of 0 found this helpful