• English
  • Login / Register

ಆಗಸ್ಟ್‌ 29ರಂದು ಕ್ಯಾಮ್ರಿ ಹೈಬ್ರೀಡ್‌ ಕಾರಿನ ಮೊದಲ ಫ್ಲೆಕ್ಸ್-ಫ್ಯೂಯೆಲ್‌ ಮಾದರಿಯನ್ನು ಬಿಡುಗಡೆ ಮಾಡಲಿರುವ ಟೊಯೊಟಾ

ಟೊಯೋಟಾ ಕ್ಯಾಮ್ರಿ 2022-2024 ಗಾಗಿ shreyash ಮೂಲಕ ಆಗಸ್ಟ್‌ 25, 2023 05:37 pm ರಂದು ಪ್ರಕಟಿಸಲಾಗಿದೆ

  • 46 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ಶ್ರೀ ನಿತಿನ್‌ ಗಡ್ಕರಿ ಅವರು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ

Toyota Camry Hybrid

ಭಾರತದ ಸ್ವಚ್ಛ ಮತ್ತು ಹಸಿರು ಸಾರಿಗೆಯ ಮುಂದಿನ ಹಂತವು ಕೇವಲ ಪೆಟ್ರೋಲ್‌, ಡೀಸೆಲ್‌, ಸಿ.ಎನ್‌.ಜಿ ಅಥವಾ ವಿದ್ಯುಚ್ಛಕ್ತಿ ಮಾತ್ರವಲ್ಲದೆ ಫ್ಲೆಕ್ಸ್‌-ಫ್ಯೂಯೆಲ್‌ ವಾಹನಗಳ ಬಳಕೆಯನ್ನು ಸಹ ಒಳಗೊಂಡಿದೆ. ಟೊಯೊಟಾ ಸಂಸ್ಥೆಯು ಕ್ಯಾಮ್ರಿ ಕಾರಿನ ಮೊದಲ ಫ್ಲೆಕ್ಸ್‌ - ಫ್ಯೂಯೆಲ್‌ ಸ್ಟ್ರಾಂಗ್‌ ಹೈಬ್ರಿಡ್‌ ಕಾರಿನ (BS6 ಹಂತ-II ಅನುಸರಣೆಯ) ಮಾದರಿಯನ್ನು ಆಗಸ್ಟ್‌ 29ರಂದು ಬಿಡುಗಡೆ ಮಾಡಲಿದೆ. ಈ ವಾಹನ ಬಿಡುಗಡೆಯ ವೇಳೆ ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ಶ್ರೀ ನಿತಿನ್‌ ಗಡ್ಕರಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಶ್ರೀ ನಿತಿನ್‌ ಗಡ್ಕರಿ ಅವರು ಟೊಯೊಟಾದ ಎಡಗೈ ವಾಹನ ಚಾಲನೆಯ (LHD) ಕೊರೊಲಾ ಆಲ್ಟಿಸ್‌ ಜೊತೆಗೆ ಫ್ಲೆಕ್ಸ್‌ - ಫ್ಯೂಯೆಲ್‌ ಸ್ಟ್ರಾಂಗ್‌ ಹೈಬ್ರೀಡ್‌ ಕಾರಿನ ಪ್ರಯೋಗಾರ್ಥ ಯೋಜನೆಗೆ ಚಾಲನೆ ನೀಡಿದ್ದರು. ಸುಮಾರು 10 ತಿಂಗಳುಗಳ ಅವಧಿಯಲ್ಲಿ ಟೊಯೊಟಾ ಸಂಸ್ಥೆಯು ಫ್ಲೆಕ್ಸ್‌ - ಫ್ಯೂಯೆಲ್‌ ಸ್ಟ್ರಾಂಗ್‌ ಹೈಬ್ರೀಡ್ ವಾಹನದ ಮೊದಲ ಮಾದರಿಯನ್ನು ಪ್ರಸ್ತುತಪಡಿಸಲು ಸಿದ್ಧವಾಗಿದೆ. ಆದರೆ ಇದು ಕೊರೊಲಾದ ಬದಲಿಗೆ ಕ್ಯಾಮ್ರಿಯ ಮಾದರಿಯಾಗಿದೆ.

ಇಲ್ಲಿಯತನಕ ನಮಗೇನು ತಿಳಿದಿದೆ?

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಶ್ರೀ ಗಡ್ಕರಿ ಅವರು, ಕ್ಯಾಮ್ರಿಯ ಫ್ಲೆಕ್ಸ್‌ - ಫ್ಯೂಯೆಲ್‌ ಆವೃತ್ತಿಯು 100 ಶೇಕಡಾದಷ್ಟು ಜೈವಿಕ ಎಥನಾಲ್‌ ಅನ್ನು ಬಳಸಲಿದ್ದು, ಕಾರನ್ನು ಚಲಾಯಿಸಲು ಅಗತ್ಯವಿರುವ ಇದರ ಶಕ್ತಿಯಲ್ಲಿ ಸುಮಾರು 40 ಶೇಕಡಾವನ್ನು ಉತ್ಪಾದಿಸಲು ಬಲಶಾಲಿ ಹೈಬ್ರೀಡ್‌ ವ್ಯವಸ್ಥೆಯನ್ನು ಬಳಸಲಾಗುವುದು ಎಂದು ಹೇಳಿದ್ದಾರೆ. ಅವರ ಪ್ರಕಾರ ಈ ಫ್ಲೆಕ್ಸ್ - ಫ್ಯೂಯೆಲ್‌ ಕ್ಯಾಮ್ರಿಯು ಸುಮಾರು 15kmpl ರಿಂದ 20kmpl ತನಕ ಮೈಲೇಜ್‌ ಅನ್ನು ನೀಡಲಿದೆ. 

ಆದರೆ, ಈ ವಾಹನ ಬಿಡುಗಡೆಯಾದ ನಂತರವಷ್ಟೇ ಫ್ಲೆಕ್ಸ್‌ - ಫ್ಯೂಲ್‌ ಸ್ಟ್ರಾಂಗ್‌ - ಹೈಬ್ರೀಡ್‌ ಕಾರಿನ ಕುರಿತು ನೈಜ ವಿವರಗಳು ದೊರೆಯಲಿವೆ.

ಫ್ಲೆಕ್ಸ್‌ - ಫ್ಯೂಯೆಲ್‌ ಎಂದರೇನು?

Nitin Gadkari in Toyota Corolla Altis Hybrid

ಫ್ಲೆಕ್ಸ್‌ - ಫ್ಯೂಯೆಲ್‌ ಎಂದರೆ ಎರಡು ಇಂಧನಗಳ ಮಿಶ್ರಣವಾಗಿದೆ. ಇಲ್ಲಿ ಪೆಟ್ರೋಲ್‌ ಮತ್ತು ಎಥನಾಲ್‌ ಅನ್ನು ಬೆರೆಸಲಾಗುತ್ತದೆ. ಫ್ಲೆಕ್ಸ್‌ - ಫ್ಯೂಯೆಲ್‌ ವಾಹನವು ಪೆಟ್ರೋಲ್‌ ಮತ್ತು ಎಥನಾಲ್‌ ಎರಡರಲ್ಲಿಯೂ ಚಲಿಸುತ್ತದೆ ಮಾತ್ರವಲ್ಲದೆ ಇವೆರಡನ್ನು ಉನ್ನತ ಮಟ್ಟದಲ್ಲಿ ಮಿಶ್ರಣ ಮಾಡಿದಾಗಲೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತದೆ. ಎಥನಾಲ್‌ ಅನ್ನು ಜೈವಿಕ ಇಂಧನವೆಂದು ಸಹ ಕರೆಯಲಾಗುತ್ತದೆ. ಏಕೆಂದರೆ ಇದನ್ನು ಕಬ್ಬಿನ ಕಾಕಂಬಿಯಂತಹ ಕೃಷಿ ಮೂಲಗಳಿಂದ ಪಡೆಯಲಾಗುತ್ತದೆ. 

ಇದರ ಪ್ರಾಮುಖ್ಯತೆಯೇನು?

Toyota To Unveil Its First Flex-fuel Prototype Of The Camry Hybrid On August 29

ಹಸಿರು ಇಂಧನ ಮಾತ್ರವಲ್ಲದೆ ಪೆಟ್ರೋಲ್‌ ಮತ್ತು ಡೀಸೆಲಿಗೆ ಅಗ್ಗದ ಪರ್ಯಾಯ ಇಂಧನವೆನಿಸಿರುವ ಫ್ಲೆಕ್ಸ್‌ - ಫ್ಯೂಯೆಲ್‌, ತೈಲದ ಆಮದನ್ನು ತಗ್ಗಿಸಲು ಸಹಾಯ ಮಾಡಲಿದ್ದು ಈ ಮೂಲಕ ಭಾರತದ ಅಟೋಮೊಬೈಲ್‌ ಉದ್ಯಮ ಮತ್ತು ಕೃಷಿ ವಲಯವೆರಡಕ್ಕೂ ಸಹಾಯ ಮಾಡಲಿದೆ. ಜತೆಗೆ ಕೇವಲ ಪಳೆಯುಳಿಕೆ ಇಂಧನಗಳನ್ನು ಅವಲಂಬಿಸುವ ಬದಲಿಗೆ ನವೀಕರಿಸಬಹುದಾದ ಇಂಧನ ಮೂಲಗಳತ್ತ ನಮ್ಮ ಗಮನವನ್ನು ಹರಿಸುವುದು ಅತ್ಯಗತ್ಯ. ಫ್ಲೆಕ್ಸ್‌ - ಫ್ಯೂಯೆಲ್‌ ಇಂಧನವು ಪೆಟ್ರೋಲ್‌ ಮತ್ತು ಡೀಸೆಲಿಗೆ ಹಸಿರು ಪರ್ಯಾಯ ಇಂಧನವೆನಿಸಿದೆ ಮಾತ್ರವಲ್ಲದೆ ಅಗ್ಗದ ಆಯ್ಕೆಯೂ ಆಗಿದೆ. ಪ್ರತಿ ಲೀಟರಿಗೆ ಇದು ರೂ. 60ರ ದರದಲ್ಲಿ ಲಭ್ಯ ಎಂದು ಶ್ರೀ ನಿತಿನ್‌ ಗಡ್ಕರಿ ಹೇಳಿದ್ದಾರೆ. ನಿಮ್ಮ ಇಂಗಾಲದ ಹೆಜ್ಜೆಗುರುತನ್ನು ತಗ್ಗಿಸುವುದಕ್ಕಾಗಿ ಎಲೆಕ್ಟ್ರಿಕ್‌ ವಾಹನದ ಬದಲಿಗೆ ಫ್ಲೆಕ್ಸ್‌ - ಫ್ಯೂಯೆಲ್‌ ವಾಹನವನ್ನು ನೀವು ಪರಿಗಣಿಸುತ್ತೀರಾ? ನಿಮ್ಮ ಪ್ರತಿಕ್ರಿಯೆಗಳನ್ನು ಈ ಕೆಳಗೆ ಹಂಚಿಕೊಳ್ಳಿರಿ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟೊಯೊಟಾ ಕ್ಯಾಮ್ರಿ ಆಟೊಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Toyota ಕ್ಯಾಮ್ರಿ 2022-2024

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience