ದಕ್ಷಿಣ ಆಫ್ರಿಕಾದ ರಸ್ತೆಗಳಿಗೆ ಕಾಲಿಟ್ಟ ಭಾರತ ನಿರ್ಮಿತ Jimny 5-door ವಾಹನ
ಮಾರುತಿ ಜಿಮ್ನಿ ಗಾಗಿ ansh ಮೂಲಕ ನವೆಂಬರ್ 17, 2023 07:35 pm ರಂದು ಮಾರ್ಪಡಿಸಲಾಗಿದೆ
- 47 Views
- ಕಾಮೆಂಟ್ ಅನ್ನು ಬರೆಯಿರಿ
ದಕ್ಷಿಣ ಆಫ್ರಿಕಾದ ರಸ್ತೆಗಳಿಗಾಗಿ ಸಿದ್ದಪಡಿಸಲಾಗಿರುವ 5 ಡೋರ್ ಜಿಮ್ನಿಯು ಅದೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬರಲಿದ್ದು ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಆಯ್ಕೆಗಳೆರಡನ್ನೂ ಹೊಂದಿರಲಿದೆ.
- ರೂ. 19.65 ರಿಂದ ರೂ. 21.93 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ಬೆಲೆ, ದಕ್ಷಿಣ ಆಫ್ರಿಕಾದ ರಾಂಡ್ ನಿಂದ ಪರಿವರ್ತಿಸಿದಾಗ).
- ಇದು ಅದೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದರೂ ಕಡಿಮೆ ಔಟ್ಪುಟ್ ಅನ್ನು ಹೊಂದಿರಲಿದೆ.
- ಇದು ಭಾರತೀಯ ಮಾದರಿಯಲ್ಲಿರುವ ವೈಶಿಷ್ಟ್ಯಗಳನ್ನೇ ಹೊಂದಿರಲಿದ್ದು, 9 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6 ಏರ್ ಬ್ಯಾಗ್ ಗಳು ಮತ್ತು ರಿಯರ್ ವ್ಯೂ ಕ್ಯಾಮರಾವನ್ನು ಹೊಂದಿರಲಿದೆ.
5 ಬಾಗಿಲುಗಳ ಮಾರುತಿ ಜಿಮ್ನಿ ವಾಹನವು ಈ ವರ್ಷದಲ್ಲಿ ನಡೆದ 2023 ಅಟೋ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಜಾಗತಿಕ ಬಿಡುಗಡೆಯನ್ನು ಕಂಡಿದ್ದು, ತದನಂತರ ಇದನ್ನು ಭಾರತದಲ್ಲಿ ಅನಾವರಣಗೊಳಿಸಲಾಯಿತು. ಭಾರತಕ್ಕಾಗಿ 5 ಬಾಗಿಲುಗಳ ಜಿಮ್ನಿಯನ್ನು ತಯಾರಿಸುವುದರ ಜೊತೆಗೆ, ಮಾರುತಿ ಸಂಸ್ಥೆಯು, ಈಗಾಗಲೇ 3 ಬಾಗಿಲುಗಳ ಜಿಮ್ನಿಯನ್ನು ಹೊಂದಿರುವ ಇತರ ದೇಶಗಳಿಗೂ ರಫ್ತು ಮಾಡುತ್ತಿದೆ. ಇವುಗಳಲ್ಲಿ ದಕ್ಷಿಣ ಆಫ್ರಿಕಾವೂ ಸೇರಿದ್ದು, ಸುಜುಕಿಯು ಇತ್ತೀಚೆಗಷ್ಟೇ ಇಲ್ಲಿ 5 ಬಾಗಿಲುಗಳ ಜಿಮ್ನಿಯನ್ನು ಬಿಡುಗಡೆ ಮಾಡಿದೆ.
ಬೆಲೆ
ದಕ್ಷಿಣ ಆಫ್ರಿಕಾದ 5 ಬಾಗಿಲುಗಳ ಸುಜುಕಿ ಜಿಮ್ನಿ (ದಕ್ಷಿಣ ಆಫ್ರಿಕಾದ ರಾಂಡ್ ನಿಂದ ಸರಿಸುಮಾರು ಪರಿವರ್ತನೆ) |
ಭಾರತದಲ್ಲಿರುವ 5 ಬಾಗಿಲುಗಳ ಮಾರುತಿ ಜಿಮ್ನಿ |
ರೂ 19.65 ಲಕ್ಷದಿಂದ ರೂ 21.93 ಲಕ್ಷ (R4,29,900 ನಿಂದ R4,79,900) |
ರೂ. 12.74 ಲಕ್ಷದಿಂದ ರೂ. 15.05 ಲಕ್ಷ |
* ಎಕ್ಸ್ - ಶೋರೂಂ ಬೆಲೆಗಳು
ದಕ್ಷಿಣ ಆಫ್ರಿಕಾದಲ್ಲಿ ಬೇಸ್ ಸ್ಪೆಕ್ 5 ಡೋರ್ ಜಿಮ್ನಿಯ ಬೆಲೆಯು ಭಾರತೀಯ ಆವೃತ್ತಿಯ ವಾಹನಕ್ಕಿಂತ ರೂ. 7 ಲಕ್ಷದಷ್ಟು ಹೆಚ್ಚು ಇದೆ. ಭಾರತೀಯ ರಸ್ತೆಗಳಲ್ಲಿ ಓಡಾಡುತ್ತಿರುವ ಮಾದರಿಯಂತೆಯೇ ದಕ್ಷಿಣ ಆಫ್ರಿಕಾದ ಮಾದರಿಯೂ ಸಹ GL ಮತ್ತು GLX ಎನ್ನುವ ಎರಡು ವೇರಿಯಂಟ್ ಗಳಲ್ಲಿ ಬರುತ್ತದೆ. ಆರಂಭಿಕ ಹಂತದ ಜಿಮ್ನಿ 5 ಡೋರ್ ವಾಹನವು, ರೂ. 17.87 ಲಕ್ಷ (R3,90,900 ರಿಂದ ಪರಿವರ್ತಿಸಿದಾಗ) ಬೆಲೆಯನ್ನು ಹೊಂದಿರುವ ಬೇಸ್ ಸ್ಪೆಕ್ ಜಿಮ್ನಿ 3 ಡೋರ್ ವಾಹನಕ್ಕಿಂತ ರೂ. 1.78 ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ.
ಪವರ್ ಟ್ರೇನ್ ವಿವರಗಳು
ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಳ್ಳಲಿರುವ ಆಫ್ ರೋಡರ್ ಕಾರು ಭಾರತೀಯ ರಸ್ತೆಗಳಲ್ಲಿ ಓಡುತ್ತಿರುವ 5 ಡೋರ್ ಜಿಮ್ನಿಯು ಹೊಂದಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನೇ ಹೊಂದಿದ್ದರೂ ಸ್ವಲ್ಪ ಭಿನ್ನವಾದ ಔಟ್ಪುಟ್ ಅನ್ನು ಹೊಂದಿರಲಿದೆ. ಇದು 102 PS ಮತ್ತು 130 Nm ಉಂಟು ಮಾಡಲಿದ್ದು ಇದು ಭಾರತೀಯ ಮಾದರಿಗಿಂತ 3 PS ಮತ್ತು 4 Nm ನಷ್ಟು ಕಡಿಮೆ ಇದೆ. ಆದರೆ ಅವುಗಳ ಟ್ರಾನ್ಸ್ ಮಿಶನ್ ಆಯ್ಕೆಯಲ್ಲಿಯೂ ಯಾವುದೇ ಬದಲಾವಣೆ ಇಲ್ಲ: 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಅಟೋಮ್ಯಾಟಿಕ್. 5 ಬಾಗಿಲುಗಳ ಜಿಮ್ನಿಯು ಕಡಿಮೆ ಶ್ರೇಣಿಯ ಟ್ರಾನ್ಸ್ ಫರ್ ಕೇಸ್ ಮತ್ತು 210 mm ನಷ್ಟು ಗ್ರೌಂಡ್ ಕ್ಲಿಯರೆನ್ಸ್ ಜೊತೆಗೆ ಪ್ರಮಾಣಿತ ಫೋರ್ ವೀಲ್ ಡ್ರೈವ್ ಅನ್ನು ಪಡೆಯಲಿದೆ.
ಇದನ್ನು ಸಹ ಓದಿರಿ: ಭಾರತದಲ್ಲಿನ ಮಾರುತಿ ಸ್ವಿಫ್ಟ್ ಗಿಂತ ಹೆಚ್ಚಿನ ಉದ್ದವನ್ನು ಹೊಂದಿರುವ 2023 ಸುಜುಕಿ ಸ್ವಿಫ್ಟ್
ಗುಣಲಕ್ಷಣಗಳು ಮತ್ತು ಸುರಕ್ಷತೆ
ಭಾರತೀಯ ಮಾದರಿಯು ಹೊಂದಿರುವ ವಿಶೇಷತೆಗಳನ್ನೇ ಇದು ಹೊಂದಿರಲಿದೆ. ಇದು ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 9 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6ರ ತನಕದ ಏರ್ ಬ್ಯಾಗ್ ಗಳು, EBD ಜೊತೆಗೆ ABS, ಟ್ರ್ಯಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಮತ್ತು ಡೆಸೆಂಟ್ ಕಂಟ್ರೋಲ್ ಹಾಗೂ ರಿಯರ್ ವ್ಯೂ ಕ್ಯಾಮೆರಾವನ್ನು ಹೊಂದಿರಲಿದೆ.
ಭಾರತದಲ್ಲಿ ಜಿಮ್ನಿಯ ಪ್ರತಿಸ್ಪರ್ಧಿಗಳು
ಭಾರತದಲ್ಲಿ 5 ಬಾಗಿಲುಗಳ ಮಾರುತಿ ಜಿಮ್ನಿಯು ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ವಾಹನದ ಜೊತೆ ಮಾತ್ರವೇ ಸ್ಪರ್ಧಿಸಲಿವೆ. ಏಕೆಂದರೆ ಈ ಬೆಲೆ ಶ್ರೇಣಿಯಲ್ಲಿ 5 ಬಾಗಿಲುಗಳ ಬೇರೆ ಯಾವುದೇ ಆಫ್ ರೋಡರ್ ವಾಹನಗಳು ಇಲ್ಲಿಲ್ಲ. However, the 5 ಬಾಗಿಲುಗಳ ಮಹೀಂದ್ರಾ ಥಾರ್ ಮತ್ತು 5 ಬಾಗಿಲುಗಳ ಫೋರ್ಸ್ ಗೂರ್ಖಾ ವಾಹನಗಳು ಅಭಿವೃದ್ಧಿಯ ಹಂತದಲ್ಲಿದ್ದು ಇವುಗಳನ್ನು ಬೇಗನೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಈ ವಾಹನಗಳು ದೊಡ್ಡ ಗಾತ್ರವನ್ನು ಹೊಂದಿರಲಿದ್ದು ಜಿಮ್ನಿಗಿಂತ ದುಬಾರಿ ಬೆಲೆಯೊಂದಿಗೆ ರಸ್ತೆಗಿಳಿಯಲಿವೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಜಿಮ್ನಿ ಆನ್ ರೋಡ್ ಬೆಲೆ
0 out of 0 found this helpful