• English
  • Login / Register

ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗುತ್ತಿರುವ VinFast, ತಮಿಳುನಾಡಿನಲ್ಲಿ EV ಉತ್ಪಾದನಾ ಘಟಕದ ನಿರ್ಮಾಣ ಪ್ರಾರಂಭ

vinfast vf6 ಗಾಗಿ shreyash ಮೂಲಕ ಫೆಬ್ರವಾರಿ 27, 2024 08:37 pm ರಂದು ಪ್ರಕಟಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ EV ಉತ್ಪಾದನಾ ಘಟಕವು 400 ಎಕರೆಗಳಷ್ಟು ಜಾಗವನ್ನು ಹೊಂದಿದ್ದು, ವಾರ್ಷಿಕ 1.5 ಲಕ್ಷ ವಾಹನಗಳ ಸಾಮರ್ಥ್ಯವನ್ನು ಹೊಂದಿದೆ

VinFast Plant Inauguration

  • ವಿಯೆಟ್ನಾಂನ ಈ ಕಾರು ತಯಾರಕ ಸಂಸ್ಥೆಯು ಐದು ವರ್ಷಗಳಲ್ಲಿ 4,100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಜಿಸಿದೆ.

  • VinFast EV ಉತ್ಪಾದನಾ ಘಟಕವು ವರ್ಷಕ್ಕೆ 1.5 ಲಕ್ಷ ಯೂನಿಟ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಗುರಿಯಾಗಿಸಿಕೊಂಡಿದೆ.

  • VinFast VF7, VinFast VF8, VinFast VFe34, ಮತ್ತು VinFast VF6 ಭಾರತದಲ್ಲಿ ಬಿಡುಗಡೆಯಾಗುವ ಮೊದಲ ಕೆಲವು ಮಾದರಿಗಳಾಗಿರಬಹುದು.

  • ಈ ವಾಹನ ತಯಾರಕ ಸಂಸ್ಥೆಯು 2025 ರಲ್ಲಿ ಭಾರತೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ.

ವಿಯೆಟ್ನಾಂ ಮೂಲದ ಕಾರು ತಯಾರಕ ಸಂಸ್ಥೆಯಾದ ವಿನ್‌ಫಾಸ್ಟ್ ಕೆಲವು ಸಮಯದಿಂದ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಬಯಸುತ್ತಿದೆ ಮತ್ತು ಆ ನಿಟ್ಟಿನಲ್ಲಿ ಜಾಗತಿಕ ಪ್ರತಿಸ್ಪರ್ಧಿ ಟೆಸ್ಲಾಗಿಂತ ಮುಂದಿದೆ. ತಮಿಳುನಾಡಿನ ತೂತುಕುಡಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ತಿರು ಎಂ.ಕೆ.ಸ್ಟಾಲಿನ್ ಅವರ ಸಮ್ಮುಖದಲ್ಲಿ 400 ಎಕರೆ ಉತ್ಪಾದನಾ ಘಟಕವನ್ನು ಉದ್ಘಾಟನೆ ಮಾಡುವ ಮೂಲಕ ಅದು ತನ್ನ ಗುರಿಯತ್ತ ಒಂದು ಹೆಜ್ಜೆ ಮುಂದೆ ಸಾಗಿದೆ. ವಿನ್‌ಫಾಸ್ಟ್ ದೇಶಾದ್ಯಂತ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ಸ್ಥಾಪಿಸಲು ಯೋಜಿಸಿದೆ, ಆದರೆ ಈ ಪ್ರಯತ್ನಕ್ಕಾಗಿ ನಿಖರವಾದ ಟೈಮ್‌ಲೈನ್‌ಗಳನ್ನು ಇನ್ನೂ ಖಚಿತಪಡಿಸಿಲ್ಲ. ಅವರ ಉದ್ದೇಶಗಳು ಮತ್ತು ಸಂಭಾವ್ಯ ಭವಿಷ್ಯದ ಉತ್ಪನ್ನಗಳನ್ನು ಹತ್ತಿರದಿಂದ ನೋಡೋಣ.

ಭಾರತದಲ್ಲಿ ವಿನ್‌ಫಾಸ್ಟ್

VinFast

ವಿನ್‌ಫಾಸ್ಟ್ ಭಾರತದಲ್ಲಿ ತನ್ನ ಇವಿ ಉತ್ಪಾದನಾ ಘಟಕಕ್ಕೆ ಮುಂದಿನ ಐದು ವರ್ಷಗಳಲ್ಲಿ ಸರಿಸುಮಾರು ರೂ 4,144 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ, ಇದು ವಾರ್ಷಿಕವಾಗಿ 1.5 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಯೋಜನೆಯು ರಾಜ್ಯದಲ್ಲಿ 3,000 ರಿಂದ 3,500 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಉದ್ಘಾಟನಾ ಸಮಾರಂಭದ ಕುರಿತು ಪ್ರತಿಕ್ರಿಯಿಸಿದ ವಿನ್‌ಫಾಸ್ಟ್ ಇಂಡಿಯಾದ ಸಿಇಒ ಶ್ರೀ ಫಾಮ್ ಸಾನ್ ಚೌ ಅವರು, “ತಮಿಳುನಾಡಿನ ತೂತುಕುಡಿಯಲ್ಲಿ ವಿನ್‌ಫಾಸ್ಟ್ ತನ್ನ ಸ್ಥಾವರಕ್ಕೆ ಅಡಿಪಾಯ ಹಾಕುವ ಸಮಾರಂಭವು ಭಾರತದಲ್ಲಿ ಸುಸ್ಥಿರ ಮತ್ತು ಗ್ರೀನ್‌ ಮೊಬಿಲಿಟಿಯತ್ತ ಮಹತ್ವದ ಹೆಜ್ಜೆಯಾಗಿದೆ. ಸಂಯೋಜಿತ ಎಲೆಕ್ಟ್ರಿಕ್ ವಾಹನ ಸೌಲಭ್ಯವನ್ನು ಸ್ಥಾಪಿಸುವ ಮೂಲಕ, ಉದ್ಯೋಗ ಸೃಷ್ಟಿ, ಹಸಿರು ಸಾರಿಗೆ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳಿಗೆ ಕಂಪನಿಯ ಬದ್ಧತೆಯು ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಪ್ರಮುಖ ಭಾಗವಾಗಿ ವಿನ್‌ಫಾಸ್ಟ್ ಸ್ಥಾನವನ್ನು ಗಟ್ಟಿಗೊಳಿಸುತ್ತದೆ. ಈ ಮೈಲಿಗಲ್ಲು ವಿಯೆಟ್ನಾಂ ಮತ್ತು ಭಾರತದ ದೃಢವಾದ ಆರ್ಥಿಕತೆಗಳ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಮತ್ತು ಶೂನ್ಯ-ಎಮಿಷನ್‌ನ ಸಾರಿಗೆ ಭವಿಷ್ಯಕ್ಕಾಗಿ ವಿನ್‌ಫಾಸ್ಟ್‌ನ ಸಮರ್ಪಣೆಯನ್ನು ಒತ್ತಿಹೇಳುತ್ತದೆ, ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆ, ನಾವೀನ್ಯತೆ ಮತ್ತು ಪರಿಸರ ಸುಸ್ಥಿರತೆಗೆ ವೇದಿಕೆಯನ್ನು ಹೊಂದಿಸುತ್ತದೆ.”

ಇದನ್ನು ಸಹ ಓದಿ: Mitsubishi ಮತ್ತೆ ಭಾರತದಲ್ಲಿ ಬರಲು ಸಿದ್ಧವಾಗಿದೆ, ಆದರೆ ನೀವು ಯೋಚಿಸುವ ರೀತಿಯಲ್ಲಿ ಅಲ್ಲ..! 

ವಿನ್‌ಫಾಸ್ಟ್ ಬಗ್ಗೆ ಇನ್ನಷ್ಟು

VinFast VF7

ಆಟೋಮೋಟಿವ್ ಉದ್ಯಮದಲ್ಲಿ ಹೊಸ ಸಂಸ್ಥೆಯಾಗಿರುವ ವಿನ್‌ಫಾಸ್ಟ್ ಅಧಿಕೃತವಾಗಿ 2017 ರಲ್ಲಿ ವಿಯೆಟ್ನಾಂನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆರಂಭದಲ್ಲಿ, ಇವಿ ತಯಾರಕರು ಬಿಎಮ್‌ಡಬ್ಲ್ಯೂ ಕಾರುಗಳನ್ನು ಆಧರಿಸಿ ಸ್ಕೂಟರ್‌ಗಳು ಮತ್ತು ಮಾದರಿಗಳನ್ನು ಪರಿಚಯಿಸಿದರು. 2021 ರಲ್ಲಿ, ವಿನ್‌ಫಾಸ್ಟ್ ತನ್ನ ಕೊಡುಗೆಗಳನ್ನು ವಿಸ್ತರಿಸಿತು, ಮೂರು ಎಲೆಕ್ಟ್ರಿಕ್ ಕಾರುಗಳು, ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ವಿಯೆಟ್ನಾಂನಲ್ಲಿ ಎಲೆಕ್ಟ್ರಿಕ್ ಬಸ್ ಅನ್ನು ಬಿಡುಗಡೆ ಮಾಡಿತು.

ಮುಂದಿನ ವರ್ಷ, ವಿನ್‌ಫಾಸ್ಟ್ ಯುಎಸ್, ಯುರೋಪ್ ಮತ್ತು ಕೆನಡಾದಲ್ಲಿ ಶೋರೂಮ್‌ಗಳನ್ನು ಸ್ಥಾಪಿಸುವ ಮೂಲಕ ತನ್ನ ಜಾಗತಿಕ ಅಸ್ತಿತ್ವವನ್ನು ವಿಸ್ತರಿಸಲು ಪ್ರಾರಂಭಿಸಿತು. VinFast ಪ್ರಸ್ತುತ ಯುನೈಟೆಡ್‌ ಸ್ಟೇಟ್‌ನಲ್ಲಿ ವಿಎಫ್‌8 ಮತ್ತು ವಿಎಫ್‌9 ಎಸ್‌ಯುವಿಗಳಂತಹ ಮೊಡೆಲ್‌ಗಳನ್ನು ಮತ್ತು ಕೆನಡಾದಲ್ಲಿ ವಿಎಫ್‌6 ಮತ್ತು ವಿಎಫ್‌7 ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿದೆ.

ಇದನ್ನು ಸಹ ಓದಿ: ಇವುಗಳು ಭಾರತದಲ್ಲಿ ಕ್ರೂಸ್ ಕಂಟ್ರೋಲ್ ಹೊಂದಿರುವ 10 ಅತ್ಯಂತ ಕೈಗೆಟುಕುವ ಕಾರುಗಳು 

ನಿರೀಕ್ಷಿತ ಮೊಡೆಲ್‌ಗಳು ಮತ್ತು ಬಿಡುಗಡೆಯ ಕುರಿತು

 ವಿನ್‌ಫಾಸ್ಟ್‌ ತನ್ನದೇ ಆದ ಉತ್ಪಾದನಾ ಘಟಕವನ್ನು ಸ್ಥಾಪಿಸುವುದರೊಂದಿಗೆ ಭಾರತೀಯ ಮಾರುಕಟ್ಟೆಗೆ ತನ್ನ ಬದ್ಧತೆಯನ್ನು ತೋರಿಸಿದೆ. ಆದರೆ ನಾವು ಸ್ಥಳೀಯವಾಗಿ ನಿರ್ಮಿಸಲಾದ ಮೊಡೆಲ್‌ಗಳನ್ನು ಭಾರತೀಯ ರಸ್ತೆಗಳಲ್ಲಿ ಕಾಣಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದು 2025 ರಿಂದ ಪ್ರಾರಂಭವಾಗುವ ಸಂಪೂರ್ಣ-ನಿರ್ಮಿತ ಆಮದುಗಳೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿರಬಹುದು ಮತ್ತು ನಂತರ 2026 ರ ವೇಳೆಗೆ ಭಾರತದಲ್ಲಿಯೇ ಸಂಪೂರ್ಣವಾಗಿ ಉತ್ಪಾದಿಸಿರುವ ಕಾರುಗಳನ್ನು ಮಾರುಕಟ್ಟೆಗೆ ಒದಗಿಸುವ ಗುರಿಯನ್ನು ಹೊಂದಿದೆ, ನಂತರ ಸ್ಥಳೀಯ ಮಾದರಿಗಳನ್ನು ಪರಿಚಯಿಸಲಾಗುವುದು. ಮೊದಲ ಕೆಲವು ಮೊಡೆಲ್‌ಗಳು ಎಸ್‌ಯುವಿಗಳು ಮತ್ತು  VinFast VF7 ಮತ್ತು VinFast VF6 ನಂತಹ ಕ್ರಾಸ್ಒವರ್‌ಗಳಾಗಿರಬಹುದು. ಈ ಮಾದರಿಗಳ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಲಿಂಕ್‌ಗೆ ಭೇಟಿ ನೀಡಬಹುದು.

VinFast ಮತ್ತು ಅದರ ಉತ್ಪನ್ನಗಳ ಕುರಿತು ನಿಮ್ಮ ಆಲೋಚನೆಗಳು ಏನು? ಹೆಚ್ಚಿನ ವಾಹನ ತಯಾರಕರು ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ಪರಿಚಯಿಸಬೇಕು ಎಂದು ನಿಮಗೆ ಅನಿಸುತ್ತದಾ? ಕೆಳಗೆ ಕಾಮೆಂಟ್ ಮಾಡಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on VinFast vf6

Read Full News

explore similar ಕಾರುಗಳು

  • vinfast vf6

    Rs.35 Lakh* Estimated Price
    ಆಗಸ್ಟ್‌ 12, 2026 Expected Launch
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • vinfast vf7

    Rs.50 Lakh* Estimated Price
    ಜುಲೈ 12, 2025 Expected Launch
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • vinfast vf8

    Rs.60 Lakh* Estimated Price
    ಡಿಸೆಂಬರ್ 12, 2025 Expected Launch
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • vinfast vf e34

    51 ವಿಮರ್ಶೆಈ ಕಾರಿಗೆ ಅಂಕಗಳನ್ನು ನೀಡಿ
    Rs.25 Lakh* Estimated Price
    ಜುಲೈ 12, 2026 Expected Launch
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience