530 ಕಿ.ಮೀ ರೇಂಜ್‌ನೊಂದಿಗೆ ವೋಲ್ವೋ C40 ರಿಚಾರ್ಜ್ ಅನಾವರಣ; ಬಿಡುಗಡೆ ಆಗಸ್ಟ್‌ನಲ್ಲಿ
ವೋಲ್ವೋ ಸಿ40 ರೀಚಾರ್ಜ್ ಗಾಗಿ sonny ಮೂಲಕ ಜೂನ್ 15, 2023 02:00 pm ರಂದು ಪ್ರಕಟಿಸಲಾಗಿದೆ
- 17 Views
- ಕಾಮೆಂಟ್ ಅನ್ನು ಬರೆಯಿರಿ
ಇದು ಸ್ಲೀಕರ್-ನೋಟದ ಸಾಕಷ್ಟು ಜನಪ್ರಿಯ XC40 ರಿಚಾರ್ಜ್‌ನ ಪ್ರತಿರೂಪದಂತಿದ್ದು, ಅಧಿಕ ಡ್ರೈವಿಂಗ್ ರೇಂಜ್‌ನೊಂದಿಗೆ ಅದೇ ಫೀಚರ್‌ಗಳನ್ನು ಹೊಂದಿದೆ.
ವೋಲ್ವೋ C40 ರಿಚಾರ್ಜ್ ಎಂಬುದು ಭಾರತಕ್ಕೆ ಸ್ವೀಡಿಶ್ ಕಾರುತಯಾರಕ ಸಂಸ್ಥೆಯ ಹೊಚ್ಚ ಹೊಸ ಕೊಡುಗೆಯಾಗಿದೆ. ಇದನ್ನು ಅನಾವರಣಗೊಳಿಸಲಾಗಿದ್ದು ಆಗಸ್ಟ್‌ನಲ್ಲಿ ಮಾರಾಟಕ್ಕೆ ಬರಲಿದೆ. ಬೆಲೆಗಳನ್ನು ಪ್ರಕಟಿಸಿದ ನಂತರ ಬುಕಿಂಗ್‌ಗಳು ಪ್ರಾರಂಭವಾಗಲಿವೆ ಮತ್ತು ಡೆಲಿವರಿಗಳು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿವೆ.
ತನ್ನ ಮೆಕ್ಯಾನಿಕಲ್ ಅವಳಿ XC40 ರಿಚಾರ್ಜ್ ನ ನಂತರ ಈ ಲೈನ್ಅಪ್‌ನಲ್ಲಿ ಇದು ಎರಡನೇ ಪೂರ್ಣ-ಇಲೆಕ್ಟ್ರಿಕ್ ಮಾಡೆಲ್ ಆಗಿದೆ. ಈ C40ಯು XC40 ಯ ಕೂಪ್-ಸ್ಟೈಲ್‌ನ ಆವೃತ್ತಿಯಾಗಿದ್ದು, ಸ್ಲೀಕರ್ SUV ಡಿಸೈನ್‌ನ ಬೆಳೆಯುತ್ತಿರುವ ಜನಪ್ರಿಯತೆಯನ್ನು ಬಳಸಿಕೊಳ್ಳುತ್ತಿದೆ.
ಪವರ್‌ಟ್ರೇನ್ ವಿವರಗಳು
C40 ರಿಚಾರ್ಜ್ 78kWh ಬ್ಯಾಟರಿ ಪ್ಯಾಕ್ ಹೊಂದಿದ್ದು XC40 ರಿಚಾರ್ಜ್‌ನಷ್ಟೇ ಸಾಮರ್ಥ್ಯ ಹೊಂದಿದೆ, ಆದರೆ ಇದು ತುಸು ಹೆಚ್ಚು ಏರೋಡೈನಾಮಿಕ್ ಡಿಸೈನ್‌ನಿಂದಾಗಿ ಇದು 530kmನ ತುಸು ಹೆಚ್ಚಿನ WLTP ಕೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ. ಅಲ್ಲದೇ ಇದು ಸ್ಪೋರ್ಟಿ ಡ್ಯುಯಲ್-ಮೋಟರ್ AWD ಸೆಟಪ್ ಅನ್ನು ಪಡೆದಿದ್ದು 408PS ಮತ್ತು 660Nm ಉತ್ಪಾದಿಸುತ್ತದೆ. ಈ C40 ರಿಚಾರ್ಜ್ 4.7 ಸೆಕೆಂಡುಗಳಲ್ಲಿ 0-100kmphಗೆ ಸ್ಪ್ರಿಂಟ್ ಆಗುತ್ತದೆ.
ಅಲ್ಲದೇ ಇದು 150kW ತ್ವರಿತ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಇದು ಬ್ಯಾಟರಿಯನ್ನು 27 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತಕ್ಕೆ ಟಾಪ್ ಮಾಡುತ್ತದೆ.
ಪರಿಚಿತ ಕ್ಯಾಬಿನ್
ಈ C40 ರಿಚಾರ್ಜ್‌ಗೆ ವೋಲ್ವೋ ಯಾವುದೇ ಮಾಡಲ್-ನಿರ್ದಿಷ್ಟ ಬದಲವಾವಣೆಗಳನ್ನು ಮಾಡಿಲ್ಲ. ಇದು ಡ್ಯಾಶ್‌ನ ಮಧ್ಯದಲ್ಲಿ ಆದೇ 9-ಇಂಚು ಲಂಬವಾಗಿ-ಆಧಾರಿತವಾದ ಇನ್‌ಫೋಟೇನ್‌ಮೆಂಟ್ ಟಚ್‌ಸ್ಕ್ರೀನ್ ಮತ್ತು12.3-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಪೂರ್ಣ-ಲೋಡ್‌ನ ಟ್ರಿಮ್, ವಿದ್ಯುತ್‌ಚಾಲಿತವಾಗಿ ಹೊಂದಿಸಬಲ್ಲ ಮುಂಭಾಗದ ಸೀಟುಗಳು (ಹೀಟಡ್ ಮತ್ತು ಕೂಲಿಂಗ್ ಕಾರ್ಯ), ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಮತ್ತು ಪ್ರೀಮಿಯಮ್ ಹರ್ಮನ್ ಕರ್ಡನ್ ಸೌಂಡ್ ಸಿಸ್ಟಮ್ ಅನ್ನು ಪಡೆದಿದೆ.
ಭಾರತದಲ್ಲಿ ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಮ್‌ಗಳನ್ನು (ADAS) ನೀಡಿರುವ ಬ್ರ್ಯಾಂಡ್‌ಗಳಲ್ಲಿ ಮೊದಲನೆಯದಾಗಿರುವ C40 ರಿಚಾರ್ಜ್ ಘರ್ಷಣೆ ತಡೆಗಟ್ಟುವಿಕೆ ಮತ್ತು ಮಿಟಿಗೇಷನ್, ಲೇನ್ ಕೀಪಿಂಗ್ ಏಯ್ಡ್, ಪೋಸ್ಟ್ ಇಂಪ್ಯಾಕ್ಟ್ ಬ್ರೇಕಿಂಗ್, ಡ್ರೈವರ್ ಅಲರ್ಟ್ ಮತ್ತು ರನ್ ಆಫ್ ಮಿಟಿಗೇಷನ್ ಮುಂತಾದ ಫೀಚರ್‌ಗಳಿಂದಲೂ ಸುಸಜ್ಜಿತವಾಗಿದೆ. ಇತರ ಸುರಕ್ಷತಾ ಫೀಚರ್‌ಗಳೆಂದರೆ, ಏಳು ಏರ್‌ಬ್ಯಾಗ್‌ಗಳು ಮತ್ತು 360 ಡಿಗ್ರಿ ಕ್ಯಾಮರಾ.
ಪ್ರತಿಸ್ಪರ್ಧಿಗಳು
ಈ ವೋಲ್ವೋ C40 ರಿಚಾರ್ಜ್ ಬೆಲೆ ರೂ 60 ಲಕ್ಷದ (ಎಕ್ಸ್-ಶೋರೂಂ) ಮೇಲ್ಪಟ್ಟು ಇರಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯ ಇದಕ್ಕೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲದಿದ್ದರೂ, ಇದೇ ರೀತಿಯ EV ಕೊಡುಗೆಗಳಾದ ಹ್ಯುಂಡೈ ಅಯಾನಿಕ್ 5, ಕಿಯಾ EV6, BMW i4 ಮತ್ತು ತನ್ನದೇ ಪ್ರತಿರೂಪದಂತಿರುವ, XC40 ರಿಚಾರ್ಜ್‌ಗೆ ಪೈಪೋಟಿ ನೀಡುತ್ತದೆ.
0 out of 0 found this helpful