EM90 ಎಲೆಕ್ಟ್ರಿಕ್ ಎಂಪಿವಿಯ ಜಾಗತಿಕ ಪಾದರ್ಪಣೆಯೊಂದಿಗೆ ಐಷಾರಾಮಿ MPV ಲೋಕಕ್ಕೆ ಪ್ರವೇಶಿಸುತ್ತಿರುವ ವೋಲ್ವೋ
ನವೆಂಬರ್ 14, 2023 11:20 pm ರಂದು sonny ಮೂಲಕ ಪ್ರಕಟಿಸಲಾಗಿದೆ
- 74 Views
- ಕಾಮೆಂಟ್ ಅನ್ನು ಬರೆಯಿರಿ
ಇದು 6-ಆಸನಗಳನ್ನು ಕೊಡುಗೆಯಾಗಿ ನೀಡುತ್ತಿದ್ದು, ಮಧ್ಯದ ಸಾಲಿನಲ್ಲಿ ಲಾಂಜ್ ತರಹದ ಅನುಭವವನ್ನು ಹೊಂದಿದೆ
- ವೋಲ್ವೋ EM90 ಮೂಲಕ ಐಷಾರಾಮಿ ಎಂಪಿವಿ ಸೆಗ್ಮೆಂಟ್‌ಗೆ ಸ್ವೀಡಿಷ್ ಬ್ರಾಂಡ್‌ನ ಪ್ರವೇಶವಾಗಿದೆ.
- ಇದು ಮಧ್ಯದ ಸಾಲಿನಲ್ಲಿ ಮಸಾಜ್ ಫಂಕ್ಷನ್ ಮತ್ತು ಬಿಲ್ಟ್-ಇನ್ ಟೇಬಲ್‌ಗಳನ್ನು ನೀಡುವ ಲೌಂಜ್ ಸೀಟ್‌ಗಳೊಂದಿಗೆ ಬರುತ್ತದೆ.
- 15.8-ಇಂಚಿನ ರೂಫ್-ಮೌಂಟೆಡ್ ಡಿಸ್ಪ್ಲೇ ಮತ್ತು ದೊಡ್ಡ ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ.
- EM90 116 kWh ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ ಮತ್ತು 700 ಕಿ.ಮೀ (CLTC) ಗಿಂತ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್‌ಗಾಗಿ ಒಂದೇ ವಿದ್ಯುತ್ ಮೋಟರ್ ಅನ್ನು ಬಳಸುತ್ತದೆ.
- ಮೊದಲು ಚೀನಾದಲ್ಲಿ ಬಿಡುಗಡೆಯಾಗಲಿದೆ ಮತ್ತು 2025 ರ ವೇಳೆಗೆ ಭಾರತಕ್ಕೆ ಬರಬಹುದು.
ಐಷಾರಾಮಿ ಮಲ್ಟಿ-ಪರ್ಪಸ್ ವೆಹಿಕಲ್ (ಎಂಪಿವಿ) ಸೆಗ್ಮೆಂಟ್‌ನ ಕಾರುಗಳು ಪ್ರಪಂಚದಾದ್ಯಂತ, ವಿಶೇಷವಾಗಿ ಏಷ್ಯಾದಾದ್ಯಂತ ವಿವಿಧ ಮಾರುಕಟ್ಟೆಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಅಂತೆಯೇ, ವೋಲ್ವೋ EM90 ನ ಪಾದಾರ್ಪಣೆಯೊಂದಿಗೆ ಐಕಾನಿಕ್ ಬ್ರ್ಯಾಂಡ್‌ನ ಪ್ರವೇಶವನ್ನು ಐಷಾರಾಮಿ ಎಂಪಿವಿ ವಿಭಾಗ ಎದುರು ನೋಡುತ್ತಿದೆ. ಈ ಕಾರು ಮೊದಲು ಚೀನಾದ ಮಾರುಕಟ್ಟೆಗೆ ಲಭ್ಯವಾಗಲಿದೆ.
ಬಾಹ್ಯ ವಿನ್ಯಾಸ
ವೋಲ್ವೋ EM90 ಸ್ವೀಡಿಷ್ ಕಾರು ತಯಾರಕರ ಸೊಗಸಾದ ವಿನ್ಯಾಸದೊಂದಿಗೆ ವಿಶಿಷ್ಟವಾದ ಬಾಕ್ಸ್ ಎಂಪಿವಿ ಅನುಪಾತಗಳ ಮಿಶ್ರಣವನ್ನು ಹೊಂದಿದೆ. ಇದರ ಮುಂಭಾಗದಲ್ಲಿರುವ ಥೋರ್‌ನ ಹ್ಯಾಮರ್ ಹೆಡ್‌ಲ್ಯಾಂಪ್‌ಗಳಿಂದಾಗಿ ಇದನ್ನು ಕಂಡ ತಕ್ಷಣವೇ ವೋಲ್ವೋ ಎಂದು ಗುರುತಿಸಬಹುದಾಗಿದೆ. ಆದರೆ ಇದು ವಿಶೇಷವಾಗಿ ದೊಡ್ಡ ಮುಚ್ಚಿದ ಗ್ರಿಲ್ ಅನ್ನು ಹೊಂದಿದ್ದು, ಹಾಗೆಯೇ ಇದು ಪ್ರಕಾಶಿತವಾದ ಲೋಗೋವನ್ನು ಸಹ ಹೊಂದಿದೆ.
ಬದಿಯಿಂದ ಗಮನಿಸುವಾಗ, ಇದು ಕಪ್ಪಾಗಿರುವ ಪಿಲ್ಲರ್‌ಗಳು ಮತ್ತು ದೊಡ್ಡ ಗಾಜಿನ ಮೇಲ್ಮೈಗಳೊಂದಿಗೆ ಸೊಗಸಾಗಿದ್ದು ಮತ್ತು ಯಾವುದೇ ಅಸಂಬದ್ಧ ವಿನ್ಯಾಸವನ್ನು ಹೊಂದಿಲ್ಲ. ಇದು 19- ಅಥವಾ 20-ಇಂಚಿನ ಚಕ್ರಗಳ ಮೇಲೆ ತನ್ನ ಸವಾರಿಯನ್ನು ಮಾಡುತ್ತದೆ ಮತ್ತು ಸ್ಲೈಡ್ ಮಾಡುವಂತಹ ಹಿಂಭಾಗದ ಬಾಗಿಲುಗಳನ್ನು ಪಡೆಯುತ್ತದೆ.
ಇದರೊಂದಿಗೆ, EM90ನ ಹಿಂಬದಿಯ ವಿನ್ಯಾಸವು ಹೆಚ್ಚು ವಿಶಿಷ್ಟವಾಗಿದೆ, ಇದು ಹಿಂಭಾಗದ ವಿಂಡ್‌ಸ್ಕ್ರೀನ್‌ನ ತಳದ ಮೇಲೆ ಮತ್ತು ಕೆಳಗೆಯನ್ನು ವಿಸ್ತರಿಸುವ ಲಂಬವಾದ ಟೈಲ್‌ಲ್ಯಾಂಪ್‌ಗಳಲ್ಲಿ ಹೊಸತನವನ್ನು ಸೇರಿಸಲಾಗಿದೆ. ಅವುಗಳನ್ನು ಜೋಡಿಸಿರುವ ಸ್ಥಾನವು ಕ್ರೋಮ್‌ನ ಸಾರವನ್ನು ಒಳಗೊಂಡಿರುವ ಮಧ್ಯದ ಅಡ್ಡ ವಿಭಾಗದೊಂದಿಗೆ ಎಮ್‌ಪಿವಿಯ ಯ ಅಗಲವನ್ನು ಒತ್ತಿಹೇಳುತ್ತದೆ.
ಆರಾಮದಾಯಕ ಒಳಾಂಗಣ
ವೋಲ್ವೋ ಈಗಾಗಲೇ ಚೀನಾದ ರಸ್ತೆಗಾಗಿ ಸಿದ್ಧಪಡಿಸಿರುವ EM90 ಅನ್ನು ಒಂದೇ ರೀತಿಯ ಗಾತ್ರ ಅಥವಾ ಸಂರಚನೆಯಲ್ಲಿ ಕುಟುಂಬ ಮತ್ತು ಆಫೀಸ್ ಕುರಿತ ಪ್ರಯಾಣದ ಉದ್ದೇಶಗಳನ್ನು ಪೂರೈಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿದೆ. 6-ಆಸನಗಳ ಕಾರಾಗಿರುವಾಗ, ಇದು ಪವರ್ಡ್ ಆಡ್ಜಸ್ಟ್‌ಮೆಂಟ್, ಮಸಾಜ್ ಫಂಕ್ಷನ್, ತಾಪನ ಮತ್ತು ವೆಂಟಿಲೇಶನ್ ಮತ್ತು ಫಿಕ್ಸ್ ಆಗಿರುವ ಟೇಬಲ್‌ಗಳೊಂದಿಗೆ ಮಧ್ಯದ ಸಾಲಿನಲ್ಲಿ ಲೌಂಜ್ ಸೀಟ್‌ಗಳನ್ನು ಪಡೆಯುತ್ತದೆ.
ಮಧ್ಯ-ಸಾಲಿನ ಪ್ರಯಾಣಿಕರು ದೊಡ್ಡ ಪ್ಯಾನರೋಮಿಕ್ ಸನ್‌ರೂಫ್‌ನಿಂದ ಮತ್ತಷ್ಟು ಸೌಕರ್ಯವನ್ನು ಪಡೆಯುತ್ತಾರೆ ಮತ್ತು ರೂಫ್-ಮೌಂಟೆಡ್ 15.6-ಇಂಚಿನ ಸ್ಕ್ರೀನ್‌ನ್ನು ಕೆಳಗೆ ಮಡಚಬಹುದು ಮತ್ತು ನಿಮ್ಮ ವೀಕ್ಷಣಾ ಆಂಗಲ್‌ಗೆ ಸರಿಹೊಂದುವಂತೆ ಅಡ್ಜಸ್ಟ್ ಮಾಡಬಹುದು. ಹಿಂಭಾಗದ ಕಿಟಕಿಗಳು, ಬ್ಲೈಂಡ್‌ಗಳು ಮತ್ತು ಪ್ರತ್ಯೇಕ ಹವಾಮಾನ ಝೋನ್‌ಗಳ ಕಂಟ್ರೋಲ್‌ಗಳನ್ನು ಡೋರ್‌ನ ಮೇಲೆ ಕಾಣಬಹುದು, ಇದು ಸಣ್ಣ TFT ಡಿಸ್‌ಪ್ಲೇಯಿಂದ ಟಚ್ ಮೂಲಕ ಕಾರ್ಯನಿರ್ವಹಿಸುತ್ತದೆ.
ಡ್ರೈವರ್‌ಗಾಗಿ, ವೋಲ್ವೋ EM90 ಕೇವಲ ಎರಡು ಡಿಸ್‌ಪ್ಲೇಗಳೊಂದಿಗೆ ಸರಳ ಮತ್ತು ಕನಿಷ್ಠ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ ಮತ್ತು ಮಧ್ಯದಲ್ಲಿ ಯಾವುದೇ ಕಂಟ್ರೋಲ್ ಪ್ಯಾನೆಲ್‌ಗಳಿಲ್ಲ. ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇಗಾಗಿ ದೊಡ್ಡ ಸ್ಕ್ರೀನ್ ಮತ್ತು ಇನ್ಫೋಟೈನ್‌ಮೆಂಟ್ ಮತ್ತು ಕಾರ್ ಸಂಬಂಧಿತ ಇತರ ಹಲವಾರು ಕಾರ್ಯಗಳಿಗಾಗಿ ದೊಡ್ಡ 15.4-ಇಂಚಿನ ಟಚ್‌ಸ್ಕ್ರೀನ್ ಇದೆ. ಇದು ಕನೆಕ್ಟೆಡ್ ಕಾರ್ ಟೆಕ್ನೊಲಾಜಿಯೊಂದಿಗೆ ಮತ್ತು 21-ಸ್ಪೀಕರ್‌ನ ಬೋವರ್ಸ್ ಮತ್ತು ವಿಲ್ಕಿನ್ಸ್ ಸೌಂಡ್ ಸಿಸ್ಟಮ್ ನೊಂದಿಗೆ ಬರುತ್ತದೆ.
ಇದರೊಂದಿಗೆ, ಡ್ಯಾಶ್‌ಗೆ ಎಲ್ಲಾ ರೀತಿಯಲ್ಲಿ ಸಂಪರ್ಕಿಸುವ ಆರ್ಮ್‌ರೆಸ್ಟ್ ಎತ್ತರದಲ್ಲಿರುವ ಸೆಂಟರ್ ಕನ್ಸೋಲ್ ಮುಂಭಾಗದ ಪ್ರಯಾಣಿಕರಿಗೆ ವಲಯ ಪ್ರತ್ಯೇಕತೆಯನ್ನು ಸೃಷ್ಟಿಸುತ್ತದೆ. ಇದು ಗ್ಲಾಸ್ ಫಿನಿಶ್, ಕಪ್‌ಹೋಲ್ಡರ್‌ಗಳು ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ನೊಂದಿಗೆ ಸುಂದರವಾಗಿ ರಚಿಸಲಾದ ಡ್ರೈವ್-ಸೆಲೆಕ್ಟರ್ ಅನ್ನು ಸಹ ಹೊಂದಿದೆ.
ಮೂರನೇ ಸಾಲಿನಲ್ಲಿ ಸೌಕರ್ಯಗಳು ಸೀಮಿತವಾಗಿದ್ದರೂ, ಸ್ಲೈಡಿಂಗ್ ಬಾಗಿಲುಗಳ ವಿಶಾಲವಾದ ತೆರೆಯುವಿಕೆ ಮತ್ತು ಮಧ್ಯ-ಸಾಲಿನ ಆಸನಗಳ ಹೊಂದಾಣಿಕೆಯ ರೆಂಜ್ ನಿಂದಾಗಿ ಪ್ರವೇಶಿಸಲು ಸುಲಭವಾಗಿರಬೇಕು. EM90 ಗೆ ಎತ್ತರದ ವಿನ್ಯಾಸವನ್ನು ನೀಡಲಾಗಿದೆ, ಇದು ಕೊನೆಯ ಸಾಲಿನ ಪ್ರಯಾಣಿಕರಿಗೆ ಸಾಕಷ್ಟು ಹೆಡ್‌ರೂಮ್ ಅನ್ನು ಸಹ ನೀಡುತ್ತದೆ.
ಪವರ್‌ಟ್ರೇನ್ ವಿವರಗಳು
ವೋಲ್ವೋ EM90 ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.ಇದು 116 kWh ಬ್ಯಾಟರಿಯನ್ನು ಹೊಂದಿದ್ದು, 272 PS ನಷ್ಟು ಶಕ್ತಿಯನ್ನು ಉತ್ಪಾದಿಸಬಲ್ಲ ಏಕೈಕ ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿಯನ್ನು ನೀಡುತ್ತದೆ. ಕಾರು ತಯಾರಕರ ಪ್ರಕಾರ, ಇದು 8.3 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಸುಲಭವಾಗಿ ಪಡೆಯುತ್ತದೆ. ಈ ಎಲೆಕ್ಟ್ರಿಕ್ MPV ಯು ಚೀನಾದ ಮಾರುಕಟ್ಟೆಗೆ ಪಾದಾರ್ಪಣೆ ಮಾಡುತ್ತಿರುವುದರಿಂದ, CLTC (ಚೀನಾ ಲೈಟ್ ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್) ಪ್ರಕಾರ ಫುಲ್ ಚಾರ್ಜ್ ಮಾಡಿದಾಗ 738 ಕಿ.ಮೀ.ಯಷ್ಟು ದೂರವನ್ನು ಕ್ರಮಿಸುತ್ತದೆ. ಅಲ್ಲದೆ, ಈ EM90 ಯು ಸುಮಾರು 30 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಲು ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಗೆ ಸಪೋರ್ಟ್ ಆಗುತ್ತದೆ.
ಇದು ಭಾರತಕ್ಕೆ ಬರುವುದೇ?
ಯಾವ ಮಾರುಕಟ್ಟೆಗಳು ಹೊಸ EM90 ಪ್ರೀಮಿಯಂ ಎಲೆಕ್ಟ್ರಿಕ್ ಎಂಪಿವಿಯನ್ನು ಪಡೆಯುತ್ತವೆ ಎಂಬುದನ್ನು ವೋಲ್ವೋ ಅಧಿಕೃತವಾಗಿ ದೃಢೀಕರಿಸದಿದ್ದರೂ, ಭಾರತವು ಆ ಪಟ್ಟಿಯಲ್ಲಿದೆ ಎಂದು ನಾವು ಭಾವಿಸುತ್ತೇವೆ. ಟೊಯೊಟಾ ವೆಲ್‌ಫೈರ್‌ನ ಯಶಸ್ಸನ್ನು ಗಮನಿಸುವಾಗ ಐಷಾರಾಮಿ MPV ಗಳಿಗೆ ಭಾರತದಲ್ಲಿ ಬೇಡಿಕೆಯಿದೆ ಎಂಬುವುದು ಖಾತ್ರಿಯಾಗಿದೆ. ಅದು ಇತರ ಯಾವುದೇ ಬಾಡಿ ಟೈಪ್‌ಗಿಂತ ಹೆಚ್ಚು ಆರಾಮದಾಯಕವಾದ ಲೌಂಜ್ ಅನುಭವವನ್ನು ನೀಡುತ್ತದೆ. ಆದಾಗ್ಯೂ, ಪ್ಯೂರ್-ಎಲೆಕ್ಟ್ರಿಕ್ ನೇಚರ್‌ನ ಈ ಎಂಪಿವಿಯ ಮಾರುಕಟ್ಟೆ ಪ್ರವೇಶವನ್ನು 2025 ಕ್ಕೆ ವಿಳಂಬಗೊಳಿಸಬಹುದು, ಏಕೆಂದರೆ ಇದಕ್ಕಿಂತ ಮೊದಲು ವೋಲ್ವೋ EX90 ಎಲೆಕ್ಟ್ರಿಕ್ SUV ಅನ್ನು ಭಾರತಕ್ಕೆ ತರುವ ಸಾಧ್ಯತೆಯಿದೆ.