• English
  • Login / Register

ವೀಕ್ಷಿಸಿ: ರೆಗ್ಯುಲರ್‌ Kia Carnivalಗಿಂತ Hi-Limousine ಹೇಗೆ ಭಿನ್ನವಾಗಿದೆ ? ಸಂಪೂರ್ಣ ಚಿತ್ರಣ ಇಲ್ಲಿದೆ..

ಕಿಯಾ ಕಾರ್ನಿವಲ್ ಗಾಗಿ dipan ಮೂಲಕ ಜನವರಿ 24, 2025 10:57 pm ರಂದು ಪ್ರಕಟಿಸಲಾಗಿದೆ

  • 10 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಾರ್ನಿವಲ್ ಹೈ-ಲಿಮೋಸಿನ್ ವೇರಿಯೆಂಟ್‌ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿತ್ತು, ಆದರೆ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ತೀರ ಕಡಿಮೆಯಾಗಿದೆ

Watch: Differences On The Kia Carnival Hi-Limousine From The Regular Model That Was Showcased At Auto Expo 2025

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಕಿಯಾ ಪ್ರದರ್ಶಿಸಿದ ಕಾರುಗಳ ಕುರಿತು ನಾವು ಈಗಾಗಲೇ ವಿವರವಾಗಿ ಹೇಳಿದ್ದರೂ, ಉಳಿದವುಗಳಿಂದ ಎದ್ದು ಕಾಣುವ ಒಂದು ಮೊಡೆಲ್‌ ಎಂದರೆ ಕಿಯಾ ಕಾರ್ನಿವಲ್, ಇದು ಹೊಸ ಹೈ-ಲಿಮೋಸಿನ್ ವೇರಿಯೆಂಟ್‌ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿತು. ಕಾರ್‌ದೇಖೋ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನ ಇತ್ತೀಚಿನ ರೀಲ್‌ನಲ್ಲಿ, ನಾವು ಈ ಎಲ್ಲಾ ವ್ಯತ್ಯಾಸಗಳನ್ನು ವಿವರಿಸಿದ್ದೇವೆ.. 

A post shared by CarDekho India (@cardekhoindia)

ಕಾರ್ನಿವಲ್ ಹೈ-ಲಿಮೋಸಿನ್‌ನಲ್ಲಿನ ವ್ಯತ್ಯಾಸಗಳು

Kia Carnival Hi-Limousine roof

ಕಿಯಾ ಕಾರ್ನಿವಲ್ ಹೈ-ಲಿಮೋಸಿನ್ 2025 ರ ಆಟೋ ಎಕ್ಸ್‌ಪೋದಲ್ಲಿ ಜಾಗತಿಕವಾಗಿ ಪಾದಾರ್ಪಣೆಗೊಂಡಿತು, ಸಾಮಾನ್ಯ ಕಾರ್ನಿವಲ್‌ನಂತೆಯೇ ಅದೇ ಬಾಡಿ ಶೈಲಿಯನ್ನು ಹೊಂದಿದ್ದು, ಆದರೆ ಉಬ್ಬು ರೂಫ್‌ಅನ್ನು ಹೆಚ್ಚುವರಿಯಾಗಿ ಪಡೆಯುತ್ತದೆ. ಈ ಎಮ್‌ಪಿವಿಗೆ ರೂಫ್‌ಟಾಪ್ ಲಗೇಜ್ ಬಾಕ್ಸ್ ಅನ್ನು ಜೋಡಿಸಲಾಗಿದೆ ಎಂಬ ಭಾವನೆಯನ್ನು ನೀಡುತ್ತದೆ, ಆದರೆ ಇದು ಒಳಗೆ ಹೆಚ್ಚಿನ ಹೆಡ್‌ರೂಮ್ ಅನ್ನು ನೀಡುತ್ತದೆ. 

Kia Carnival Hi-Limousine

ಇದರ ಒಳಗೆ ಆರು ಸೀಟ್‌ಗಳಿದ್ದು, ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳಿವೆ. ಇದರ ಫ್ಲೋರ್‌ಅನ್ನು ವುಡನ್‌ ಮೆಟಿರಿಯಲ್‌ಗಳಿಂದ ಮಾಡಲಾಗಿದ್ದು, ಬ್ರಷ್ ಮಾಡಿದ ಅಲ್ಯೂಮಿನಿಯಂ ಅಂಶಗಳಿವೆ. ಮುಂಭಾಗದ ಸೀಟಿನ ಹಿಂಭಾಗದಲ್ಲಿ ತಿಂಡಿಗಳು ಮತ್ತು ಕಾಫಿ ಇಡಲು ಟ್ರೇ ಇದೆ.

Kia Carnival Hi-Limousine 2nd row seats
Kia Carnival Hi-Limousine screen for second row passengers

ಎರಡನೇ ಸಾಲಿನ ಸೀಟುಗಳು ಸಹ ಹೊಸದಾಗಿದ್ದು, ಕೊನೆಯ ಸಾಲಿನವರೆಗೆ ಜಾರುವುದರಿಂದ ಇದು ಕಾಲಿನ ಜಾಗವನ್ನು ಪಡೆಯುತ್ತದೆ. ಈ ಸೀಟ್‌ಗಳು ಇಲೆಕ್ಟ್ರಿಕ್‌ ಆಗಿ ಹೊಂದಾಣಿಕೆ ಮಾಡಬಹುದಾದ ಬ್ಯಾಕ್‌ರೆಸ್ಟ್‌ಗಳು, ವಿಸ್ತೃತ ಲೆಗ್ ಸಪೋರ್ಟ್ ಮತ್ತು ತೊಡೆಯ ಕೆಳಗೆ ಸಪೋರ್ಟ್ ಹೊಂದಿವೆ. ಪ್ರಯಾಣದಲ್ಲಿರುವಾಗ ಚಲನಚಿತ್ರಗಳನ್ನು ವೀಕ್ಷಿಸಲು ರೂಫ್‌ನ ಮೇಲೆ ಜೋಡಿಸಲಾದ ಸ್ಕ್ರೀನ್‌ ಇದೆ.

Kia Carnival Hi-Limousine roof

ಕಾರ್ನಿವಲ್ ಹೈ-ಲಿಮೋಸಿನ್ ಕಾರಿನ ರೂಫ್‌ನ ಮೇಲೆ ಅಳವಡಿಸಲಾದ ದೀಪವನ್ನು ಸಹ ಹೊಂದಿದ್ದು, ಅಗತ್ಯವಿರುವಂತೆ ಅದನ್ನು ಪ್ರಕಾಶಮಾನಗೊಳಿಸಬಹುದು ಅಥವಾ ಮಂದಗೊಳಿಸಬಹುದು. ಇದು ಸ್ಟಾರ್‌ಲೈಟ್ ಹೆಡ್‌ಲೈನರ್ ರೂಫ್ ಲೈಟ್‌ಗಳನ್ನು ಹೊಂದಿದ್ದು, ಅವಶ್ಯಕತೆಗೆ ಅನುಗುಣವಾಗಿ ಇದರ ಬಣ್ಣವನ್ನು ಕಸ್ಟಮೈಸ್ ಮಾಡಬಹುದು.

was this article helpful ?

Write your Comment on Kia ಕಾರ್ನಿವಲ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience