• English
    • Login / Register

    ಶಾಕಿಂಗ್‌.. ಎಪ್ರಿಲ್‌ನಿಂದ Kia ಕಾರುಗಳ ಬೆಲೆಯಲ್ಲಿ ಏರಿಕೆ

    ಕಿಯಾ ಸಿರೋಸ್‌ ಗಾಗಿ dipan ಮೂಲಕ ಮಾರ್ಚ್‌ 19, 2025 10:11 pm ರಂದು ಪ್ರಕಟಿಸಲಾಗಿದೆ

    • 10 Views
    • ಕಾಮೆಂಟ್‌ ಅನ್ನು ಬರೆಯಿರಿ

    ಮಾರುತಿ ಮತ್ತು ಟಾಟಾ ನಂತರ, ಮುಂಬರುವ ಹಣಕಾಸು ವರ್ಷದಿಂದ ಭಾರತದಲ್ಲಿ ಬೆಲೆ ಏರಿಕೆಯನ್ನು ಘೋಷಿಸಿದ ಮೂರನೇ ಕಾರು ತಯಾರಕ ಕಂಪನಿ ಕಿಯಾ

    Kia to hike its car prices from April 1, 2025

    2024-25 ರ ಆರ್ಥಿಕ ವರ್ಷವು ಅಂತ್ಯಗೊಳ್ಳುತ್ತಿದ್ದಂತೆ, ತಯಾರಕರು ತಮ್ಮ ಮೊಡೆಲ್‌ಗಳಿಗೆ ಬೆಲೆ ಏರಿಕೆಯನ್ನು ಘೋಷಿಸುತ್ತಿದ್ದಾರೆ. ಟಾಟಾ ಮತ್ತು ಮಾರುತಿಯಂತಹ ಕಾರು ತಯಾರಕರು ಈಗಾಗಲೇ ಬೆಲೆ ಬೆಲೆ ಏರಿಕೆಯನ್ನು ಘೋಷಿಸಿದ್ದರೆ, ಕಿಯಾ ಕೂಡ ಈ ಕಾರು ತಯಾರಕರ ಸಾಲಿಗೆ ಸೇರಿಕೊಂಡಿದ್ದು, 2025ರ ಏಪ್ರಿಲ್‌ನಿಂದ ತನ್ನ ಎಲ್ಲಾ ಕಾರುಗಳ ಬೆಲೆ ಏರಿಕೆಯನ್ನು ಘೋಷಿಸಿದೆ. ಕಾರು ತಯಾರಕ ಕಂಪನಿಯು ತನ್ನ ಮೊಡೆಲ್‌ಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದೆ.

    ಬೆಲೆ ಏರಿಕೆಗೆ ಕಾರಣ

    Kia Syros

    ಸರಕುಗಳು ಮತ್ತು ಇನ್ಪುಟ್ ಸಾಮಗ್ರಿಗಳ ಬೆಲೆಗಳು ಹೆಚ್ಚುತ್ತಿರುವ ಕಾರಣ ಬೆಲೆಗಳನ್ನು ಹೆಚ್ಚಿಸುವುದಾಗಿ ಕಿಯಾ ಹೇಳಿದೆ. ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸುವುದನ್ನು ಮುಂದುವರಿಸಲು ಬೆಲೆ ಏರಿಕೆ ಅಗತ್ಯ ಎಂದು ಕಾರು ತಯಾರಕರು ಹೇಳಿದ್ದಾರೆ. 

    ಇದನ್ನೂ ಓದಿ: Mahindra Thar Roxxಗೆ ಈಗ ಮೂರು ಹೊಸ ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳ ಸೇರ್ಪಡೆ

    ಪ್ರಸ್ತುತ ಲಭ್ಯವಿರುವ ಕಿಯಾ ಕಾರುಗಳು

    Kia Seltos

    ಕೊರಿಯಾದ ಕಾರು ತಯಾರಕ ಕಂಪನಿಯು ತನ್ನ ಕಾರುಗಳ ಪಟ್ಟಿಯಲ್ಲಿ 7 ಕಾರುಗಳನ್ನು ನೀಡುತ್ತದೆ, ಅವುಗಳ ಪ್ರಸ್ತುತ ಬೆಲೆ ರೇಂಜ್‌ ಹೀಗಿದೆ:

    ಮೊಡೆಲ್‌

    ಪ್ರಸ್ತುತ ಬೆಲೆ ರೇಂಜ್‌

    ಕಿಯಾ ಸೊನೆಟ್‌

      8   ಲಕ್ಷ ರೂ.ನಿಂದ 15.60  ಲಕ್ಷ ರೂ.

    ಕಿಯಾ ಸಿರೋಸ್‌

    9  ಲಕ್ಷ ರೂ.ನಿಂದ 17.80  ಲಕ್ಷ ರೂ.

    ಕಿಯಾ ಕಾರೆನ್ಸ್‌

    10.60  ಲಕ್ಷ ರೂ.ನಿಂದ 19.70  ಲಕ್ಷ ರೂ.

    ಕಿಯಾ ಸೆಲ್ಟೊಸ್‌

    11.13  ಲಕ್ಷ ರೂ.ನಿಂದ 20.51  ಲಕ್ಷ ರೂ.

    ಕಿಯಾ ಇವಿ6

    60.97 ಲಕ್ಷ ರೂ.ನಿಂದ 65.97  ಲಕ್ಷ ರೂ.

    ಕಿಯಾ ಕಾರ್ನಿವಲ್‌

      63.90 ಲಕ್ಷ ರೂ.

    ಕಿಯಾ ಇವಿ9

      1.30 ಕೋಟಿ ರೂ.

    ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ.

    ಕಿಯಾದ ಮುಂದಿನ ಪ್ಲ್ಯಾನ್‌ ಏನು?

    2025 Kia EV6

     ಕಿಯಾ ಕಂಪನಿಯು 2025ರ ಏಪ್ರಿಲ್‌ನಲ್ಲಿ ಭಾರತದಲ್ಲಿ 2025 ಕ್ಯಾರೆನ್ಸ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ದೃಢಪಡಿಸಲಾಗಿದೆ ಮತ್ತು ಅದರ ಜೊತೆಗೆ ಕ್ಯಾರೆನ್ಸ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಪರಿಚಯಿಸಲಾಗುವುದು. ಹೆಚ್ಚುವರಿಯಾಗಿ, 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಫೇಸ್‌ಲಿಫ್ಟೆಡ್ ಕಿಯಾ EV6 ಅನ್ನು ಸಹ ಈ ವರ್ಷ ಬಿಡುಗಡೆ ಮಾಡಲಾಗುವುದು.

    ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

    was this article helpful ?

    Write your Comment on Kia ಸಿರೋಸ್‌

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience