• English
  • Login / Register

ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 3 ಕಿಯಾ ಕಾರುಗಳು ಇಲ್ಲಿವೆ

ಕಿಯಾ ಸೊನೆಟ್ ಗಾಗಿ rohit ಮೂಲಕ ಡಿಸೆಂಬರ್ 19, 2023 04:31 pm ರಂದು ಪ್ರಕಟಿಸಲಾಗಿದೆ

  • 103 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಿಯಾ ಸಂಸ್ಥೆಯು 2023ರಲ್ಲಿ ಒಂದು ಕಾರನ್ನು ಮಾತ್ರವೇ ಬಿಡುಗಡೆ ಮಾಡಿದ್ದು, 2024ರಲ್ಲಿ ಕೆಲವೊಂದು ಅಗ್ರ ಶ್ರೇಣಿಯ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದು ಖಚಿತವಾಗಿದೆ.

Upcoming Kia cars in 2024

2023ರಲ್ಲಿ ಈ ಸಂಸ್ಥೆಯು ಪರಿಷ್ಕೃತ ಕಿಯಾ ಸೆಲ್ಟೋಸ್‌ ಅನ್ನು ಮಾತ್ರವೇ ಹೊರತಂದಿತ್ತು. ಇತರ ಸ್ಪರ್ಧಿಗಳಿಗೆ ಹೋಲಿಸಿದರೆ, SUV ಗಳ ವಿಚಾರದಲ್ಲಿ ಕಿಯಾ ಸಂಸ್ಥೆಯು ಈ ವರ್ಷದಲ್ಲಿ ನಿಧಾನ ಗತಿಯಲ್ಲಿ ಸಾಗಿದೆ. ಆದರೆ ಅಗ್ರ ಶ್ರೇಣಿಯ EV ಸೇರಿದಂತೆ 3 ಮಾದರಿಗಳನ್ನು 2024ರಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದನ್ನು ಈ ಕಾರು ತಯಾರಕ ಸಂಸ್ಥೆಯು ದೃಢೀಕರಿಸಿದೆ. ಇನ್ನಷ್ಟು ಮಾಹಿತಿಯನ್ನು ಪಡೆಯುವುದಕ್ಕಾಗಿ ಮುಂದೆ ಓದಿರಿ.

  1.  ಕಿಯಾ ಸೋನೆಟ್‌ ಫೇಸ್‌‌ ಲಿಫ್ಟ್

ಪರಿಷ್ಕೃತ ಕಿಯಾ ಸೋನೆಟ್ ಅನ್ನು ಇತ್ತೀಚೆಗಷ್ಟೇ ಅನಾವರಣಗೊಳಿಸಲಾಗಿದ್ದು ಇದರ ಹೊರಾಂಗಣ ಹಾಗೂ ಒಳಾಂಗಣದಲ್ಲಿ ಮಾಡಲಾದ ಮಾರ್ಪಾಡುಗಳನ್ನು ತೋರಿಸಲಾಗಿದೆ. ಮಿಡ್‌ ಲೈಫ್‌ ರಿಫ್ರೆಶ್‌ ಮೂಲಕ ಈ ಸಬ್-4m SUV‌ ಯು ಇನ್ನಷ್ಟು ಆಕರ್ಷಕ ಮತ್ತು ಸದೃಢವಾಗಿ ಮೂಡಿ ಬಂದಿದೆ ಮಾತ್ರವಲ್ಲದೆ ಹೆಚ್ಚಿನ ಸೌಲಭ್ಯಗಳೊಂದಿಗೆ (ಸುರಕ್ಷಾ ವ್ಯವಸ್ಥೆಯಲ್ಲೂ ಪರಿಷ್ಕರಣೆ ಮಾಡಲಾಗಿದೆ) ರಸ್ತೆಗಿಳಿಯಲಿದೆ. ಹಳೆಯ ಸೋನೆಟ್‌ ನಲ್ಲಿರುವ ಪವರ್‌ ಟ್ರೇನ್‌ ಆಯ್ಕೆಯನ್ನೇ ಮುಂದುವರಿಸಿದ್ದರೂ, ಡೀಸೆಲ್‌ - ಮ್ಯಾನುವಲ್‌ ಕೋಂಬೊ ಅನ್ನು ವಾಪಸ್‌ ತರಲಾಗಿದೆ.

ನಿರೀಕ್ಷಿತ ಬಿಡುಗಡೆ: ಜನವರಿ 2024

ನಿರೀಕ್ಷಿತ ಬೆಲೆ: ರೂ 8 ಲಕ್ಷ

 

  1.  ಹೊಸ ಕಿಯಾ ಕಾರ್ನಿವಲ್

ನಾಲ್ಕನೇ ತಲೆಮಾರಿನ ಕಿಯಾ ಕಾರ್ನಿವಲ್‌ ಅನ್ನು ಭಾರತಕ್ಕೆ ತರುವಲ್ಲಿ ಸಾಕಷ್ಟು ವಿಳಂಬಗೊಂಡಿದ್ದರೂ ಸಹ ಈ ಕಾರು ತಯಾರಕ ಸಂಸ್ಥೆಯು ಈ ಮಾದರಿಯ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಲು ಈಗ ಸಿದ್ಧಗೊಂಡಿದೆ. ಹೊಸ ಕಾರ್ನಿವಲ್‌ ವಾಹನವು ಭಾರತದಲ್ಲಿ 2024ರಲ್ಲಿ ರಸ್ತೆಗಿಳಿಯಲಿದ್ದು, ಜಾಗತಿಕವಾಗಿ ಇತ್ತೀಚೆಗೆ ಅನಾವರಣಗೊಂಡ ಪರಿಷ್ಕೃತ ಅವತಾರದಲ್ಲಿ ಇಲ್ಲೂ ಕಾಣಿಸಿಕೊಳ್ಳಲಿದೆ. ಹೊರ ಹೋಗುವ ಮಾದರಿಗೆ ಹೋಲಿಸಿದರೆ ಒಳಗಡೆ ಮತ್ತು ಹೊರಗಡೆಯಲ್ಲಿ ಇದರ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಐಷಾರಾಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೊಸತನವನ್ನು ಇದರಲ್ಲಿ ತರಲಾಗಿದ್ದು, ಅಂತರಾಷ್ಟ್ರೀಯವಾಗಿ ಅನೇಕ ಪವರ್‌ ಟ್ರೇನ್‌ ಅಯ್ಕೆಗಳನ್ನು ಈ ವಾಹನದಲ್ಲಿ ನೀಡಲಾಗುತ್ತಿದೆ (ಭಾರತದಲ್ಲಿ ಹೊರತರಲಾಗುವ ಕಾರ್ನಿವಲ್‌ ನ ನಿಖರ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕು).

ನಿರೀಕ್ಷಿತ ಬಿಡುಗಡೆ: ಏಪ್ರಿಲ್ 2024

ನಿರೀಕ್ಷಿತ ಬೆಲೆ: ರೂ 40 ಲಕ್ಷ

ಇದನ್ನು ಸಹ ಓದಿರಿ: ಹೊಸ ಕಿಯಾ ಸೋನೆಟ್‌ ನ HTX+ ವೇರಿಯಂಟ್‌ ಅನ್ನು ಈ 7 ಚಿತ್ರಗಳ ಮೂಲಕ ಅರಿತುಕೊಳ್ಳಿರಿ

 

  1.  ಕಿಯಾ EV9

 2023 ರಲ್ಲಿ ತನ್ನ ಅಗ್ರ EV ಉತ್ಪನ್ನವಾದ ಕಿಯಾ EV9 ಅನ್ನುಜಾಗತಿಕವಾಗಿ ಬಿಡುಗಡೆ ಮಾಡಿದೆ. ಇದು 3 ಸಾಲುಗಳ ಸಂಪೂರ್ಣ ಎಲೆಕ್ಟ್ರಿಕ್ SUV‌ ಯಾಗಿದ್ದು, ರಿಯರ್ ವೀಲ್‌ ಡ್ರೈವ್‌ (RWD) ಮತ್ತು ಆಲ್‌ ವೀಲ್‌ ಡ್ರೈವ್ (AWD)‌ ಆಯ್ಕೆಗಳೊಂದಿಗೆ ವಿವಿಧ ಬ್ಯಾಟರಿ ಮತ್ತು ಎಲೆಕ್ಟ್ರಿಕ್‌ ಮೋಟಾರ್‌ ಗಳೊಂದಿಗೆ ಬರಲಿದೆ. ಈ ಆಗ್ರ ಕಿಯಾ EV ಯು, ಆರಿಸಿಕೊಂಡ ಪವರ್‌ ಟ್ರೇನ್‌ ಅನ್ನು ಹೊಂದಿಕೊಂಡು 541 km ಗಿಂತಲೂ ಹೆಚ್ಚಿನ ಶ್ರೇಣಿಯನ್ನು ನೀಡಲಿದೆ. ಇದು ಅಂತರಾಷ್ಟ್ರೀಯವಾಗಿ ಮಾರಲಾಗುತ್ತಿರುವ ಕಿಯಾ ಟೆಲ್ಯುರೈಡ್ SUV‌ ಗೆ ಪರ್ಯಾಯವಾದ  EV ಆಗಿದ್ದು, ಸಾಕಷ್ಟು ಅನುಕೂಲತೆ ಮತ್ತು ಸುರಕ್ಷತೆಯ ತಂತ್ರಜ್ಞಾನವನ್ನು ಹೊತ್ತು ತರಲಿದೆ. ಕಿಯಾ ಸಂಸ್ಥೆಯು EV9 ಯನ್ನು ಕಂಪ್ಲೀಟ್ಲಿ ಬಿಲ್ಟ್‌ ಅಪ್‌ ಯೂನಿಟ್ (CBU) ಪಥದ ಮೂಲಕ ಭಾರತಕ್ಕೆ ತರಲಿದೆ.

ನಿರೀಕ್ಷಿತ ಬಿಡುಗಡೆ: 2024ರ ದ್ವಿತೀಯಾರ್ಧ

ನಿರೀಕ್ಷಿತ ಬೆಲೆ: ರೂ 80 ಲಕ್ಷ

 ಕಿಯಾ ಸಂಸ್ಥೆಯ ಈ 3 ಕಾರುಗಳು 2024ರಲ್ಲಿ ಭಾರತದ ಮಾರುಕಟ್ಟೆಗೆ ಬರಲಿವೆ. ಹೊಸ ಕಾರುಗಳ ಬಗ್ಗೆ ನೀವು ಉತ್ಸುಕರಾಗಿದ್ದೀರಾ ಹಾಗೂ ಕಿಯಾದ ಯಾವ ಕಾರನ್ನು ನೀವಿಲ್ಲಿ ನೋಡಲು ಇಚ್ಚಿಸುತ್ತೀರಿ? ನಿಮ್ಮ ಉತ್ತರವನ್ನು ಪ್ರತಿಕ್ರಿಯೆಯ ರೂಪದಲ್ಲಿ ಹಂಚಿಕೊಳ್ಳಿರಿ.

ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ಬೆಲೆಗಳಾಗಿವೆ

was this article helpful ?

Write your Comment on Kia ಸೊನೆಟ್

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ ಇ vitara
    ಮಾರುತಿ ಇ vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience