ಕಿಮ್ ಜಾಂಗ್ ಉನ್‌ಗೆ ವ್ಲಾಡಿಮಿರ್ ಪುಟಿನ್ ಉಡುಗೊರೆ ನೀಡಿರುವ Aurus Senat ಕಾರಿನ ವಿಶೇಷತೆಗಳು
ಪುಟಿನ್ ಅವರ ಉತ್ತರ ಕೊರಿಯಾ ಭೇಟಿಯ ಸಂದರ್ಭದಲ್ಲಿ ಉಭಯ ದೇಶದ ನಾಯಕರು ಸೆನೆಟ್ ಡ್ರೈವಿಂಗ್ ಮಾಡುವುದನ್ನು ಆನಂದಿಸುತ್ತಿರುವುದು ಕಂಡುಬಂದಿದೆ
ರಾಷ್ಟ್ರದ ಮುಖ್ಯಸ್ಥರ ಅಧಿಕೃತ ಕಾರನ್ನು ಸಾಮಾನ್ಯವಾಗಿ ಅದೇ ದೇಶದ ಕಾರು ತಯಾರಕರು ತಯಾರಿಸುತ್ತಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಯ್ಕೆಯ ಕಾರು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಶಸ್ತ್ರಸಜ್ಜಿತವಾಗಿರುವ ಔರಸ್ ಸೆನಾಟ್ ಲಿಮೋಸಿನ್ ಆಗಿದೆ. ಮತ್ತೊಬ್ಬ ರಾಷ್ಟ್ರದ ಮುಖ್ಯಸ್ಥ, ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜೊಂಗ್ ಉನ್ ಅವರು ಸೆನೆಟ್‌ನ ಅಭಿಮಾನಿಯಾಗಿದ್ದಾರೆ ಎಂದು ಅನಿಸುತ್ತಿದೆ. ಉತ್ತರ ಕೊರಿಯಾದ ಪ್ಯೊಂಗ್‌ಯಾಂಗ್‌ಗೆ ತನ್ನ ಇತ್ತೀಚಿನ ಪ್ರವಾಸದ ಸಮಯದಲ್ಲಿ, ಪುಟಿನ್ ತನ್ನ ರಾಜತಾಂತ್ರಿಕ ಸ್ನೇಹಿತನಿಗೆ ಔರಸ್ ಸೆನೆಟ್ ಅನ್ನು ಉಡುಗೊರೆಯಾಗಿ ನೀಡಿದರು. ಅದನ್ನು ಒಬ್ಬರಾದ ಮೇಲೆ ಒಬ್ಬರು ಡ್ರೈವಿಂಗ್ ಕೂಡ ಮಾಡಿದರು. ಹಾಗೆ ನೋಡಿದರೆ, ಈ ವರ್ಷ ರಷ್ಯಾದ ಅಧ್ಯಕ್ಷರು ಕಿಮ್‌ಗೆ ನೀಡಿದ ಎರಡನೇ ಸೆನೆಟ್ ಇದಾಗಿದೆ. ಮೊದಲನೆಯದು, 2024 ರ ಆರಂಭದಲ್ಲಿ ನೀಡಲಾಯಿತು. ಇದು ಪುಟಿನ್ ಬಳಸುವಂತಹ ಅದೇ ವಿಸ್ತೃತ ಲಿಮೋಸಿನ್ ಮಾಡೆಲ್ ಆಗಿದ್ದು, ಉದ್ದವಾದ ವೀಲ್‌ಬೇಸ್ ಮತ್ತು ಹೆಚ್ಚಿನ ಕ್ಯಾಬಿನ್ ಜಾಗವನ್ನು ಹೊಂದಿದೆ. ಕಿಮ್ ಜೊಂಗ್ ಉನ್ ಐಷಾರಾಮಿ ಕಾರುಗಳ ಪ್ರಿಯರು ಎಂದು ಹೇಳಲಾಗುತ್ತದೆ. ಔರಸ್ ಸೆನಾಟ್ ಅನ್ನು ವಿಶ್ವ ನಾಯಕನಿಗೆ ಸೂಕ್ತವಾದ ಉಡುಗೊರೆಯಾಗಿ ಏಕೆ ಪರಿಗಣಿಸಲಾಗಿದೆ ಎಂಬುದನ್ನು ಕಂಡುಹಿಡಿಯೋಣ, ಬನ್ನಿ:
ನೀವು ಇವತ್ತಿನವರೆಗೆ ಔರಸ್ ಬಗ್ಗೆ ಕೇಳದಿದ್ದರೆ, ಅದು ಆಶ್ಚರ್ಯವಲ್ಲ, ಏಕೆಂದರೆ ಇದು ಕೇವಲ ರಷ್ಯಾದಲ್ಲಿ ವಾಸಿಸುವವರಿಗೆ ಮಾತ್ರ ತಿಳಿದಿರುವ ಬ್ರಾಂಡ್ ಆಗಿದೆ. ರಷ್ಯಾದ ಐಷಾರಾಮಿ ಅಧ್ಯಕ್ಷರ ವಾಹನವನ್ನು ನಿರ್ಮಿಸಲು ಪುಟಿನ್ ಆದೇಶಿಸಿದ ನಂತರ ಈ ಬ್ರ್ಯಾಂಡ್ ಅನ್ನು ಸ್ಥಾಪಿಸಲಾಯಿತು. ಔರಸ್‌ನ ಮೊದಲ ಉತ್ಪನ್ನ ಸೆನಾಟ್ ಐಷಾರಾಮಿ ಸೆಡಾನ್ ಆಗಿದೆ, ಇದು 2018 ರಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿತು ಮತ್ತು ಮೂರು ರೂಪಗಳಲ್ಲಿ ಲಭ್ಯವಿದೆ: ಸ್ಟ್ಯಾಂಡರ್ಡ್ ಸೆನಾಟ್ (ವ್ಲಾಡಿಮಿರ್ ಮತ್ತು ಕಿಮ್ ಡ್ರೈವ್ ಮಾಡುತ್ತಿರುವ), ಸೆನಾಟ್ ಲಾಂಗ್ ಮತ್ತು ಸೆನಾಟ್ ಲಿಮೋಸಿನ್ (ಪುಟಿನ್ ಉಪಯೋಗಿಸುತ್ತಿದ್ದ ಕಾರು ಮತ್ತು ಈಗ ಜೊಂಗ್ ಉನ್ ಕೂಡ ಬಳಸುತ್ತಿದ್ದಾರೆ).
ಬನ್ನಿ, ಸೆನೆಟ್ ಅನ್ನು ಹತ್ತಿರದಿಂದ ನೋಡೋಣ.
ಸೆನೆಟ್ ಹೊರಭಾಗದ ಡಿಸೈನ್
ಸೆನೆಟ್ ಅನ್ನು ಸಾಮಾನ್ಯವಾಗಿ "ರಷ್ಯನ್ ರೋಲ್ಸ್ ರಾಯ್ಸ್" ಎಂದು ಕರೆಯಲಾಗುತ್ತದೆ, ಇದು ಇದಕ್ಕೆ ಹೊಗಳಿಕೆ ಮತ್ತು ಹೋಲಿಕೆ ಎರಡೂ ಆಗುತ್ತದೆ. ಇದರ ದಪ್ಪವಾದ ಫ್ರಂಟ್ ಗ್ರಿಲ್ ಹಳೆಯ ರೋಲ್ಸ್ ರಾಯ್ಸ್ ಫ್ಯಾಂಟಮ್‌ನಂತೆ ಕಾಣುತ್ತದೆ, ಇದು ವರ್ಟಿಕಲ್ ಕ್ರೋಮ್ ಸ್ಲ್ಯಾಟ್‌ಗಳು ಮತ್ತು ದೊಡ್ಡದಾದ ಔರಸ್ ಬ್ಯಾಡ್ಜ್ ಅನ್ನು ಒಳಗೊಂಡಿದೆ. LED ಹೆಡ್‌ಲೈಟ್‌ಗಳು ಸ್ಲೀಕ್ ಆಗಿ ವೃತ್ತಾಕಾರದಂತೆ ಇದೆ ಮತ್ತು ಇಂಟಿಗ್ರೇಟೆಡ್ DRL ಗಳನ್ನು ಒಳಗೊಂಡಿವೆ. ಮುಂಭಾಗದ ಕೆಳಗಿನ ಬಂಪರ್ ದೊಡ್ಡ ಏರ್ ಗ್ಯಾಪ್ ಗಳನ್ನು ಹೊಂದಿದೆ.
ಸೈಡ್ ನಲ್ಲಿ, ಸೆನೆಟ್ ಪ್ರಬಲವಾದ ಮತ್ತು ಗಮನಾರ್ಹವಾದ ನೋಟವನ್ನು ಹೊಂದಿದ್ದು, ಕೆಳಭಾಗದ ಅಂಚಿನಲ್ಲಿ ಮತ್ತು ವಿಂಡೋಗಳ ಸುತ್ತಲೂ ಕ್ರೋಮ್ ಪಟ್ಟಿಯೊಂದಿಗೆ ಟಿಂಟ್ ಆಗಿರುವ (ಮತ್ತು ಬುಲೆಟ್ ಪ್ರೂಫ್) ವಿಂಡೋಗಳನ್ನು ಹೊಂದಿದೆ. ದೊಡ್ಡದಾದ, ಗಟ್ಟಿಮುಟ್ಟಾಗಿ ಕಾಣುವ ಅಲೊಯ್ ವೀಲ್ ಗಳು ದೇಶದ ಅಧಿಕೃತ ವಾಹನವಾಗಿ ಅದರ ಘನತೆಯನ್ನು ಹೆಚ್ಚಿಸುತ್ತವೆ.
ಇದನ್ನು ಕೂಡ ಓದಿ: ಬಾಲಿವುಡ್ ಮತ್ತು ಟೆಲಿವಿಷನ್ ನಟಿ ಸೌಮ್ಯಾ ಟಂಡನ್ ಖರೀದಿಸಿದ್ದಾರೆ ಹೊಸ ಮರ್ಸಿಡಿಸ್-ಬೆನ್ಜ್ ಇ-ಕ್ಲಾಸ್
ಸೆನೆಟ್‌ನ ಹಿಂಭಾಗವು ಮುಂಭಾಗದಂತೆಯೇ ಸೊಗಸಾಗಿ ಮತ್ತು ಸ್ವಚ್ಛವಾಗಿದೆ, ಮತ್ತು ಲೇಯರ್ಡ್ LED ಟೈಲ್‌ಲೈಟ್‌ಗಳು ಬೆಂಟ್ಲೀಸ್‌ನಲ್ಲಿ ಕಂಡುಬರುವ ಡಿಸೈನ್ ಗಳನ್ನು ನೆನಪಿಸುತ್ತವೆ.
ಸೆನೆಟ್ ಒಳಭಾಗ ಮತ್ತು ಫೀಚರ್ ಗಳು
ನೀವು ಕ್ಯಾಬಿನ್ ಅನ್ನು ನೋಡಿದ ತಕ್ಷಣ ಔರಸ್ ಸೆನೆಟ್ ನ ಐಷಾರಾಮಿ ನೋಟವು ಸ್ಪಷ್ಟವಾಗುತ್ತದೆ. ವ್ಲಾಡಿಮಿರ್ ಮತ್ತು ಕಿಮ್ ಇತ್ತೀಚೆಗೆ ಡ್ರೈವ್ ಮಾಡಿದ ಸ್ಟ್ಯಾಂಡರ್ಡ್ ವರ್ಷನ್ ನಲ್ಲಿ ಕೂಡ, ಇದು ಕ್ಯಾಬಿನ್‌ನಾದ್ಯಂತ ಆರಾಮದಾಯಕವಾದ ಪ್ಲಶ್ ಲೆದರ್ ಸೀಟ್‌ಗಳು ಮತ್ತು ವುಡನ್ ಅಕ್ಸೆಂಟ್ ಗಳನ್ನು ಒಳಗೊಂಡಿದೆ. ಡ್ಯಾಶ್‌ಬೋರ್ಡ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಸ್ಥಳವನ್ನು ಮತ್ತು ಇನ್ಫೋಟೈನ್‌ಮೆಂಟ್‌ಗಾಗಿ ಸೆಂಟ್ರಲ್ ಟಚ್‌ಸ್ಕ್ರೀನ್ ಅನ್ನು ಒಳಗೊಂಡಿದೆ, ಆದರೆ ಇಲ್ಲಿ ಕ್ಲೈಮೇಟ್ ಕಂಟ್ರೋಲ್ ಕನ್ಸೋಲ್ ಬೇರೆ ಫೀಚರ್ ಗಳಿಗೆ ಹೋಲಿಸಿದರೆ ಕಡಿಮೆ ಐಷಾರಾಮಿಯಾಗಿ ಕಾಣುತ್ತದೆ.
ಹಿಂಭಾಗದಲ್ಲಿ, ಒಟ್ಟು ನಾಲ್ಕು ಜನ ಕುಳಿತುಕೊಳ್ಳಬಲ್ಲ ಲಾಂಜ್ ಸೀಟ್ ಗಳಿವೆ. ಈ ಸೀಟ್ ಗಳನ್ನು ಮುಂಭಾಗದ ಸೀಟ್ ಗಳ ಹಿಂಭಾಗದಲ್ಲಿ ಇನ್ಸ್ಟಾಲ್ ಮಾಡಿರುವ ಎಂಟರ್ಟೈನ್ಮೆಂಟ್ ಸ್ಕ್ರೀನ್ ಗಳೊಂದಿಗೆ ಕ್ಲೈಮೇಟ್ ಕಂಟ್ರೋಲ್ ಗಳು ಮತ್ತು ಫೋಲ್ಡ್ ಔಟ್ ಟೇಬಲ್ ಗಳನ್ನು ಒಳಗೊಂಡಿರುವ ಫಿಕ್ಸೆಡ್ ಕನ್ಸೋಲ್ ಮೂಲಕ ಬೇರ್ಪಡಿಸಲಾಗಿದೆ. ಪ್ರತಿಯೊಂದು ಸೀಟ್ ಅನ್ನು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದು ಮತ್ತು ಹಿಂಭಾಗದ ಸೀಟ್ ಗಳು ಬಹುಶಃ ಮಸಾಜ್ ಫೀಚರ್ ಅನ್ನು ಕೂಡ ಹೊಂದಿರಬಹುದು.
ಪುಟಿನ್ ಅವರ ಅಧಿಕೃತ ಕಾರ್ ಆಗಿರುವ ಲಿಮೋಸಿನ್ ವರ್ಷನ್ ನಲ್ಲಿ, ಹಿಂಬದಿ ಮುಖ ಮಾಡುವ ಸೀಟ್ ಗಳಿಗೆ ಸ್ಥಳಾವಕಾಶ ಮತ್ತು ಆಯ್ಕೆಯೂ ಇದೆ. ಈ ಸೀಟ್ ಗಳು ಬಹುಶಃ ಭದ್ರತಾ ಸಿಬ್ಬಂದಿ ಅಥವಾ ರಾಜಕೀಯ ಸಹಾಯಕರಿಗಾಗಿ ಇರಬಹುದು, ಏಕೆಂದರೆ ಅವುಗಳು ಅಷ್ಟೊಂದು ಆರಾಮದಾಯಕವಾಗಿಲ್ಲ. ಇದು ಇನ್ಫೋಟೈನ್ಮೆಂಟ್ ಮತ್ತು ಕಂಟ್ರೋಲ್ ಗಳಿಗಾಗಿ ಹಿಂಭಾಗದ ಸ್ಕ್ರೀನ್ ಅನ್ನು ಕೂಡ ಒಳಗೊಂಡಿದೆ, ಹಾಗೆಯೆ ಆಂಬಿಯೆಂಟ್ ಲೈಟಿಂಗ್ ಕ್ಯಾಬಿನ್ ಅನುಭವವನ್ನು ಹೆಚ್ಚಿಸುತ್ತದೆ.
ಔರಸ್ ಸೆನೆಟ್ ಪರ್ಫಾರ್ಮೆನ್ಸ್
ಔರಸ್ ಸೆನೆಟ್ ಅನ್ನು ರಾಷ್ಟ್ರದ ಮುಖ್ಯಸ್ಥರು ಬಳಸುವುದರಿಂದ, ವಿಶೇಷವಾಗಿ ಅಪಾಯಕಾರಿ ಸಂದರ್ಭಗಳಲ್ಲಿ ವೇಗವಾಗಿ ಚಲಿಸಲು ಇದು ಶಕ್ತಿಶಾಲಿ ಪರ್ಫಾರ್ಮೆನ್ಸ್ ಅನ್ನು ಹೊಂದಿರಬೇಕು. ಇದು 4.4-ಲೀಟರ್ ಟ್ವಿನ್-ಟರ್ಬೊ V8 ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್ ನೊಂದಿಗೆ 598 PS ಮತ್ತು 880 Nm ವರೆಗೆ ಹೊಂದಿದೆ. 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೂಲಕ ಪವರ್ ಎಲ್ಲಾ ನಾಲ್ಕು ವೀಲ್ ಗಳಿಗೆ ನೀಡಲಾಗುತ್ತದೆ. ಸ್ಟ್ಯಾಂಡರ್ಡ್ ಸೆನೆಟ್ 6 ಸೆಕೆಂಡ್‌ಗಳಲ್ಲಿ 0 ರಿಂದ 100 ಕಿಮೀ/ಗಂಟೆ ವೇಗವನ್ನು ಪಡೆಯಬಹುದು ಎಂದು ಔರಸ್ ಹೇಳುತ್ತದೆ.
ಇದನ್ನು ಕೂಡ ಓದಿ: ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಜನಪ್ರಿಯತೆ 2029 ರ ವೇಳೆಗೆ 7 ಪಟ್ಟು ಹೆಚ್ಚಾಗುವ ಸಾಧ್ಯತೆ, ವಿಶ್ಲೇಷಕರಿಂದ ಸ್ಫೋಟಕ ಬೆಳವಣಿಗೆಯ ಮುನ್ಸೂಚನೆ
ಸುರಕ್ಷತೆ
ಔರಸ್ ಸೆನಾಟ್ ಅನ್ನು ಮೊದಲಿನಿಂದಲೂ ಶಸ್ತ್ರಸಜ್ಜಿತ ಐಷಾರಾಮಿ ಸೆಡಾನ್ ಆಗಿ ವಿನ್ಯಾಸಗೊಳಿಸಲಾಗಿರುವುದರಿಂದ, ಅದರ ಸುರಕ್ಷತಾ ಫೀಚರ್ ಗಳಲ್ಲಿ ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳು) ಮತ್ತು ಸೀಟ್ ಬೆಲ್ಟ್‌ಗಳು ಸಾಮಾನ್ಯವಾಗಿವೆ. ಇದು ಲಿಮೋಸಿನ್ ವರ್ಷನ್ ನಲ್ಲಿ ಅತ್ಯಂತ ಸುರಕ್ಷಿತ ಕಾರಾಗಿದೆ. ಇದು VR10-ಲೆವೆಲ್ ಬ್ಯಾಲಿಸ್ಟಿಕ್ ಪ್ರೊಟೆಕ್ಷನ್ ರೇಟಿಂಗ್, 20-ಇಂಚಿನ ಬುಲೆಟ್ ಪ್ರೂಫ್ ವೀಲ್ ಗಳು, ಬೆಂಕಿ ಮತ್ತು ಸ್ಫೋಟ-ನಿರೋಧಕ ಫ್ಯುಯೆಲ್ ಟ್ಯಾಂಕ್, ಅಗ್ನಿಶಾಮಕ ಮತ್ತು ಏರ್ ಫಿಲ್ಟ್ರೇಶನ್ ಸಿಸ್ಟಮ್ ಗಳು, ಎಕ್ಸ್ಟರ್ನಲ್ ಕಮ್ಯುನಿಕೇಶನ್ ಸಿಸ್ಟಮ್ ಮತ್ತು ಎಮರ್ಜೆನ್ಸಿ ಎಕ್ಸಿಟ್ ಅನ್ನು ಹೊಂದಿದೆ.
ಕಿಮ್ ಜಾಂಗ್ ಅನ್ ಗೆ ಇದು ಇಷ್ಟವಾಯಿತೇ?
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಿಮ್ ಜಾಂಗ್ ಉನ್ ಅವರಿಗೆ ಮೊದಲ ಔರಸ್ ಸೆನೆಟ್ ಅನ್ನು ನೀಡಿದಾಗ, ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾದ (ಉತ್ತರ ಕೊರಿಯಾ) ಅಧಿಕೃತ ರಾಷ್ಟ್ರೀಯ ಮಾಧ್ಯಮವು ಅವರ ಸರ್ವೋಚ್ಚ ನಾಯಕ ಅದನ್ನು ಇಷ್ಟಪಟ್ಟಿದ್ದಾರೆ ಎಂದು ವರದಿ ಮಾಡಿತ್ತು. ಅವರ ಡ್ರೈವ್ ಮಾಡುತ್ತಿರುವ ಈ ಹೊಸ ವೀಡಿಯೊ ಅವರಿಬ್ಬರೂ ರೆಗ್ಯುಲರ್ ಸೆನೆಟ್ ಅನ್ನು ಕೂಡ ಇಷ್ಟಪಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. UN ಉತ್ತರ ಕೊರಿಯಾಕ್ಕೆ ಐಷಾರಾಮಿ ಕಾರು ಆಮದುಗಳನ್ನು ನಿಷೇಧಿಸಿದ್ದರೂ ಕೂಡ, ಕಿಮ್ ಜಾಂಗ್ ಉನ್ ಅವರು ಮರ್ಸಿಡಿಸ್-ಮೇಬ್ಯಾಕ್ ಸೆಡಾನ್‌ಗಳು, ರೋಲ್ಸ್ ರಾಯ್ಸ್ ಫ್ಯಾಂಟಮ್‌ಗಳು, ಲೆಕ್ಸಸ್ SUVಗಳು ಮತ್ತು ಈಗ ಎರಡು ಔರಸ್ ಸೆನಾಟ್‌ಗಳಂತಹ ಹಲವಾರು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಇನ್ನಷ್ಟು ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ