• Maruti Dzire 2017-2020

ಮಾರುತಿ ಡಿಜೈರ್ 2017-2020

change car
Rs.5.70 - 9.53 ಲಕ್ಷ*
This ಕಾರು ಮಾದರಿ has discontinued

ಮಾರುತಿ ಡಿಜೈರ್ 2017-2020 ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು
  • ಉತ್ತಮ ವೈಶಿಷ್ಟ್ಯಗಳು

ಡಿಜೈರ್ 2017-2020 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಮಾರುತಿ ಡಿಜೈರ್ 2017-2020 ಬೆಲೆ ಪಟ್ಟಿ (ರೂಪಾಂತರಗಳು)

ಡಿಜೈರ್ 2017-2020 ಎಲ್ಎಕ್ಸ್ಐ 1.2 ಬಿಎಸ್IV(Base Model)1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.5.70 ಲಕ್ಷ* 
ಡಿಜೈರ್ 2017-2020 ಎಲ್ಎಕ್ಸ್ಐ 1.21197 cc, ಮ್ಯಾನುಯಲ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.5.89 ಲಕ್ಷ* 
ಡಿಜೈರ್ 2017-2020 ವಿಎಕ್ಸ್ಐ 1.2 ಬಿಎಸ್IV1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.6.58 ಲಕ್ಷ* 
ಡಿಜೈರ್ 2017-2020 ಎಲ್‌ಡಿಐ(Base Model)1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.6.67 ಲಕ್ಷ* 
ಡಿಜೈರ್ 2017-2020 ವಿಎಕ್ಸ್ಐ 1.21197 cc, ಮ್ಯಾನುಯಲ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.6.79 ಲಕ್ಷ* 
ಡಿಜೈರ್ 2017-2020 ಎಎಂಟಿ ವಿಎಕ್ಸ್ಐ ಬಿಎಸ್IV1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.7.05 ಲಕ್ಷ* 
ಡಿಜೈರ್ 2017-2020 ಝಡ್ಎಕ್ಸ್ಐ 1.2 ಬಿಎಸ್IV1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.7.20 ಲಕ್ಷ* 
ಡಿಜೈರ್ 2017-2020 ಎಎಂಟಿ ವಿಎಕ್ಸೈ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.7.32 ಲಕ್ಷ* 
ಡಿಜೈರ್ 2017-2020 ಝಡ್ಎಕ್ಸ್ಐ 1.21197 cc, ಮ್ಯಾನುಯಲ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.7.48 ಲಕ್ಷ* 
ಡಿಜೈರ್ 2017-2020 ರೇಂಜ್‌ ಏಕ್ಸ್ಟೆಂಡರ್1197 cc, ಮ್ಯಾನುಯಲ್‌, ಪೆಟ್ರೋಲ್, 20.85 ಕೆಎಂಪಿಎಲ್DISCONTINUEDRs.7.50 ಲಕ್ಷ* 
ಡಿಜೈರ್ 2017-2020 ವಿಡಿಐ1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.7.58 ಲಕ್ಷ* 
ಡಿಜೈರ್ 2017-2020 ಎಎಂಟಿ ಝಡ್ಎಕ್ಸ್ಐ ಬಿಎಸ್IV1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.7.67 ಲಕ್ಷ* 
ಡಿಜೈರ್ 2017-2020 ಎಎಂಟಿ ಙೆಕ್ಸೈ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.8.01 ಲಕ್ಷ* 
ಡಿಜೈರ್ 2017-2020 ಎಎಂಟಿ ವಿಡಿಐ1248 cc, ಆಟೋಮ್ಯಾಟಿಕ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.8.05 ಲಕ್ಷ* 
ಡಿಜೈರ್ 2017-2020 ಝಡ್ಎಕ್ಸ್ಐ ಪ್ಲಸ್ ಬಿಎಸ್lV1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.8.10 ಲಕ್ಷ* 
ಡಿಜೈರ್ 2017-2020 ಝಡ್ಡಿಐ1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.8.17 ಲಕ್ಷ* 
ಡಿಜೈರ್ 2017-2020 ಝಡ್ಎಕ್ಸ್ಐ ಪ್ಲಸ್1197 cc, ಮ್ಯಾನುಯಲ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.8.28 ಲಕ್ಷ* 
ಡಿಜೈರ್ 2017-2020 ಎಎಂಟಿ ಝಡ್ಎಕ್ಸ್ಐ ಪ್ಲಸ್ ಬಿಎಸ್IV1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.8.57 ಲಕ್ಷ* 
ಡಿಜೈರ್ 2017-2020 ಎಎಂಟಿ ಝಡ್ಡಿಐ1248 cc, ಆಟೋಮ್ಯಾಟಿಕ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.8.63 ಲಕ್ಷ* 
ಡಿಜೈರ್ 2017-2020 ಎಎಂಟಿ ಝಡ್ಎಕ್ಸ್ಐ ಪ್ಲಸ್(Top Model)1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.8.80 ಲಕ್ಷ* 
ಡಿಜೈರ್ 2017-2020 ಝಡ್ಡಿಐ ಪ್ಲಸ್1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.9.06 ಲಕ್ಷ* 
ಡಿಜೈರ್ 2017-2020 ಎಜಿಸ್‌ ಝಡ್ಡಿಐ ಪ್ಲಸ್1248 cc, ಆಟೋಮ್ಯಾಟಿಕ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.9.20 ಲಕ್ಷ* 
ಡಿಜೈರ್ 2017-2020 ಎಎಂಟಿ ಝಡ್ಡಿಐ ಪ್ಲಸ್(Top Model)1248 cc, ಆಟೋಮ್ಯಾಟಿಕ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.9.53 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ಡಿಜೈರ್ 2017-2020 ವಿಮರ್ಶೆ

ಬಿಡುಗಡೆಯಾದ ಒಂದು ದಶಕದ ನಂತರ, ಭಾರತದ ಅತ್ಯುತ್ತಮ ಮಾರಾಟದ ಕಾಂಪ್ಯಾಕ್ಟ್ ಸೆಡಾನ್, ಮಾರುತಿ ಸುಝುಕಿ ಡಿಝೈರ್ ಮತ್ತೆ ಹೊಚ್ಚಹೊಸ ಮತ್ತು ಪ್ರಬುದ್ಧ ಅವತಾರದಲ್ಲಿ ಬಂದಿದೆ. ಇದು ದೊಡ್ಡದು, ಹೆಚ್ಚು ಸ್ಥಳಾವಕಾಶ ಹೊಂದಿದೆ, ಹಲವು ಫೀಚರ್ ಗಳನ್ನು ಹೊಂದಿದೆ ಹಾಗೂ ಸ್ಟೈಲಿಷ್ ಕೂಡಾ ಆಗಿದೆ. ಆದರೆ ಈ ಮೂರನೇ ತಲೆಮಾರಿನ ಡಿಝೈರ್ ಇತ್ತೀಚಿನ ಸ್ಪರ್ಧಾತ್ಮಕ ಪ್ರತಿಸ್ಪರ್ಧಿಗಳಾದ ಟಾಟಾ ಟೈಗರ್ ಮತ್ತು ಹ್ಯುಂಡೈ ಕ್ಸೆಸೆಂಟ್ ಫೇಸ್ ಲಿಫ್ಟ್ ಗಳಿಗೆ ಹೋಲಿಸಿದರೆ ಎಷ್ಟು ಚೆನ್ನಾಗಿದೆ? ಇದು ಜನರ ಹೃದಯಗಳನ್ನು ಪ್ರಭಾವಿಸಿ ಮಾರಾಟದ ಪಟ್ಟಿಗಳನ್ನು ಪ್ರಭಾವಿಸುವುದನ್ನು ಮುಂದುವರೆಸುತ್ತದೆಯೇ? ನೋಡೋಣ. 

ಹೊಸ ಡಿಝೈರ್ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ದುಬಾರಿಯಾಗಿದ್ದರೂ ಮುಂದಿನ ಎಮಿಷನ್ ಮತ್ತು ಕ್ರಾಂಶ್ ಕಾಂಪ್ಲಿಯನ್ಸ್ ನಿಯಮಗಳ ಹೊಂದಿಕೊಳ್ಳುವಿಕೆ ಇದರ ಪ್ರೀಮಿಯಂ ಟ್ಯಾಗ್ ಗೆ ಪೂರಕವಾಗಿದೆ. 

ಆದ್ದರಿಂದ, ಬೆಲೆ ಮತ್ತು ಸುಕ್ಕುಗಳಿದ್ದರೂ ಮಾರುತಿ ಸುಝುಕಿಯ ಹೊಸ ಸುಝುಕಿ ಈ ವರ್ಗಕ್ಕೆ ಹೊಸ ಟೋನ್ ರೂಪಿಸಿದೆ. 

ಕಾರ್ ದೇಖೋ ಪರಿಣಿತರ

ಹೊಸ ಮಾರುತಿ ಸ್ವಿಫ್ಟ್ ಡಿಝೈರ್ ಪ್ರೀಮಿಯಂನೆಸ್ ನ ಮನ ಒಲಿಸುವ ಭಾವ ಹೊಂದಿದೆ 

 

ಎಕ್ಸ್‌ಟೀರಿಯರ್

ಅದರ ಅಪಾರ ಯಶಸ್ಸಿನ ನಂತರ ಹಳೆಯ ಡಿಝೈರ್ ಹಿಂದೆಂದೂ ಹೀಗೆ ಕಾಣುತ್ತಿರಲಿಲ್ಲ. ವರ್ಗದಲ್ಲಿನ ಅದರ ಸಹವರ್ತಿಗಳಂತೆ ಇದು ಹ್ಯಾಚ್ ಬ್ಯಾಕ್ ಆಗಿ ಬಂದಿದ್ದರೂ ಸೆಡಾನ್ ನಂತೆ ಕಾಣುತ್ತದೆ. ಹೊಸ ತಲೆಮಾರಿನ ಮಾಡೆಲ್ ನೊಂದಿಗೆ ಡಿಝೈರ್ ಅಂತಿಮವಾಗಿ ಬಯಕೆಯೋಗ್ಯವಾಗಿದೆ-ತಾಜಾ, ಸಮಕಾಲೀನ ಮತ್ತು ಒಂದು ವರ್ಗ ಮೇಲ್ಪಟ್ಟು ಸೆಡಾನ್ ನಂತೆ ಕಾಣುತ್ತದೆ. 

ಇದು ಕೆಲವು ರೀತಿಗಳಲ್ಲಿ ದೊಡ್ಡದು ಕೂಡಾ ಆಗಿದೆ- ಉದ್ದದಲ್ಲಿ ಅಲ್ಲ ಆದರೆ ಅಗಲದಲ್ಲಿ ಇದು 40ಎಂಎಂ ವ್ಹೀಲ್ ಬೇಸ್ 20ಎಂಎಂ ಹೆಚ್ಚಿಸಲಾಗಿದೆ. ಹೊಸ ಡಿಝೈರ್ 40ಎಂಎಂ ಎತ್ತರ ಕಡಿಮೆ ಮಾಡಲಾಗಿದೆ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಅನ್ನು 170ಎಂಎಂನಿಂದ 163ಎಂಎಂಗೆ ಕಡಿಮೆ ಮಾಡಲಾಗಿದೆ. ಈ ಬದಲಾವಣೆಗಳು ಡಿಝೈರ್ ಗೆ ಹೆಚ್ಚು ಪ್ರಮಾಣಾತ್ಮಕ ಮತ್ತು ತೆಳುವಾದ ನಿಲುವು ನೀಡಿವೆ. ಇದು ಉದ್ದೇಶಕ್ಕಾಗಿ ನಿರ್ಮಿಸಿದ್ದು ಮಾತ್ರವಲ್ಲ, ಇದು ವಾಸ್ತವವಾಗಿ ಉದ್ದದ ಮಿತಿ ಇಲ್ಲದೆ ಇದ್ದಲ್ಲಿ ಮತ್ತಷ್ಟು ಉತ್ತಮವಾಗಿ ಕಾಣಬಲ್ಲ ಹ್ಯಾಂಡ್ ಸಮ್ ಸೆಡಾನ್ ಆಗಿರುತ್ತಿತ್ತು.

ಮುಂಬದಿಯಲ್ಲಿ ಹೊಸ ಪೌಟಿ ಗ್ರಿಲ್ ಕ್ರೋಮ್ ನ ದಪ್ಪ ಪದರದ ಬಾಹ್ಯರೇಖೆ ರೂಪಿಸಿದೆ. ಕೆಲ ರೀತಿಗಳಲ್ಲಿ ಇದು ಫಿಯೆಟ್ ಪುಂಟೊದ ಇವೊಸ್ ಗ್ರಿಲ್ ನೆನಪಿಸುತ್ತದೆ. ನಂತರ ಆಕರ್ಷಕ ಡಿ.ಆರ್.ಎಲ್.ಗಳೊಂದಿಗೆ(ಹಗಲಿನ ದೀಪಗಳು) ಎಲ್.ಇ.ಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್ - ಇದು ಹೊಂಡಾ ಸಿಟಿಯಂತಹ ಉನ್ನತ ಮಟ್ಟದ ಕಾರುಗಳಲ್ಲಿ ಮಾತ್ರ ಲಭ್ಯವಿದ್ದು ಈಗ ಇಗ್ನಿಸ್ ನಂತಹ ಕಾರುಗಳಲ್ಲಿಯೂ ಲಭ್ಯ. ಫಾಗ್ ಲ್ಯಾಂಪ್ಸ್ ಕೆಳಗೆ ತೆಳು, ಮೀಸೆಯ ರೀತಿಯ ಕ್ರೋಮ್ ಮುಂಬದಿಯನ್ನು ಮತ್ತಷ್ಟು ಉತ್ತಮಪಡಿಸಿದೆ. ಆದರೆ ಹೊಸ 15-ಇಂಚು `ಪ್ರಿಸಿಷನ್ ಕಟ್' ಅಲಾಯ್ಸ್ ಒಳಗೊಂಡು ಈ ಎಲ್ಲ ವಿಶೇಷತೆಗಳು ಟಾಪ್-ಎಂಡ್ ವೇರಿಯೆಂಟ್ ಗಳಲ್ಲಿ ಮಾತ್ರ ಲಭ್ಯ. ವಿ ವೇರಿಯೆಂಟ್  ಗಳು 14-ಇಂಚು ಸ್ಟೀಲ್ ವ್ಹೀಲ್ಸ್ ಕವರ್ ನೊಂದಿಗೆ ಪಡೆದಿವೆ. 

ರಿಯರ್ ಅನ್ನು ಸರಳವಾಗಿ ಇರಿಸಿದ್ದು ತೆಳು ಕ್ರೋಮ್ ಪಟ್ಟಿ ಇಡೀ ಬೂಟ್ ಉದ್ದಕ್ಕೂ ಸಂಚರಿಸಿ ಈಗ ಎಲ್.ಇ.ಡಿ ಯೂನಿಟ್ ಗಳಾಗಿರುವ ಟೈಲ್ ಲ್ಯಾಂಪ್ಸ್ ನಲ್ಲಿ ವಿಲೀನಗೊಂಡಿದೆ. ಬೂಟ್ ಚೆನ್ನಾಗಿ ಏಕೀಕರಣಗೊಂಡಿದೆ ಮತ್ತು ಇದು ಸಬ್-4 ಮೀಟರ್ ವಿಭಾಗಕ್ಕೆ ಸೇರಲು ಒತ್ತಾಯಪೂರ್ವಕವಾಗಿ ತಂದಂತಹ ಭಾವನೆ ಮೂಡುವುದಿಲ್ಲ. ನಿಮ್ಮ ಲಗೇಜ್ ಅನ್ನು ಬೂಟ್ ಸ್ಪೇಸ್ ನಲ್ಲಿ ಹೊತ್ತೊಯ್ಯಲು ಹೆಚ್ಚು ಸ್ಥಳವಿದ್ದು 62 ಲೀಟರ್ ಗಳಿಂದ 378 ಲೀಟರ್ ಗಳಿಗೆ ಹೆಚ್ಚಿದೆ. ಆದರೆ ಇದು ಪ್ರತಿಸ್ಪರ್ಧಿಗಳಾದ ಟಾಟಾ ಟೈಗರ್, ಹ್ಯುಂಐ ಕ್ಸೆಸೆಂಟ್ ಮತ್ತು ಹೊಂಡಾ ಅಮೇಝ್ ಗಿಂತಲೂ ಕಡಿಮೆ, ಈ ಎಲ್ಲವೂ 400 ಲೀಟರ್  ಗಳ ಕಾರ್ಗೊ ಸ್ಥಳ ಹೊಂದಿವೆ. ಆದರೆ ಇದು ದೊಡ್ಡ ಬ್ಯಾಗ್ ಗಳು ಮತ್ತು ಕ್ಯಾಮರಾ ಸಾಧನ ತುಂಬಲು ತಕ್ಕಷ್ಟು ದೊಡ್ಡದಿದೆ. 

Exterior Comparison

Hyundai XcentVolkswagen Ameo
Length (mm)3995mm3995mm
Width (mm)1660mm1682mm
Height (mm)1520mm1483mm
Ground Clearance (mm)165mm165mm
Wheel Base (mm)2425mm2470mm
Kerb Weight (kg)11201138kg
 

Boot Space Comparison

Volkswagen Ameo
Hyundai Xcent
Volume--

 

ಇಂಟೀರಿಯರ್

ಒಳಗಡೆಗೆ ಡಿಸೈರಬಲ್ ಕೋಷೆಂಟ್ ಚೆನ್ನಾಗಿ ಕೊಂಡೊಯ್ದಿದೆ ಮತ್ತು ಹೇಗೆ ಡಿಝೈರ್ ಕ್ಯಾಬಿನ್ ವಿಕಾಸಗೊಂಡಿದೆ ಎಂದು ತಿಳಿಯಲು ನೀವು ಆಶ್ಚರ್ಯಪಡುತ್ತೀರಿ. ನೀವು ಗಮನಿಸುವ ಮೊದಲ ಅಂಶ ಡ್ಯುಯಲ್-ಟೋನ್ ಡ್ಯಾಶ್ ಬೋರ್ಡ್ ಮತ್ತು ಕ್ರೋಮ್ ಅಕ್ಸೆಂಟ್ ಸ್ಟೀರಿಂಗ್ ವ್ಹೀಲ್ ಕ್ರೋಮೆ ಅಕ್ಸೆಂಟ್ ಗಳು ಮತ್ತು ಫಾಕ್ಸ್ ವುಡ್ ಇನ್ಸರ್ಟ್ ಗಳೊಂದಿಗೆ ಇದು ಆಶ್ಚರ್ಯಕರವಾಗಿ ಚೆನ್ನಾಗಿದೆ(ಅಗ್ಗವಾಗಿ ಅಲ್ಲ). ಸಪಾಟಾದ ತಳದ ಸ್ಟೀರಿಂಗ್ ವ್ಹೀಲ್ ಈ ವಿಭಾಗದಲ್ಲಿ ಪ್ರಥಮವಾಗಿದ್ದು ಇದು ಬೇಸ್ ಎಲ್ ವೇರಿಯೆಂಟ್ ನಿಂದ ಲಭ್ಯವಿದೆ ಎನ್ನುವುದು ಶ್ಲಾಘನೀಯ. ಉನ್ನತ ವೇರಿಯೆಂಟ್ ಗಳಲ್ಲಿ ಸ್ಟೀರಿಂಗ್ ವ್ಹೀಲ್ ಮತ್ತಷ್ಟು ಗಮನ ಪಡೆಯುತ್ತದೆ, ಫಾಕ್ಸ್ ಲೆದರ್ ನೊಂದಿಗೆ ಸುತ್ತುವರಿದಿದೆ. ಸ್ಟೀರಿಂಗ್ ನಲ್ಲಿ ಆಡಿಯೊ ಮತ್ತು ಟೆಲಿಫೋನಿ ನಿಯಂತ್ರಿಸುವ  ಬಟನ್ ಗಳು ಮೃದುವಾಗಿವೆ ಮತ್ತು ಅಪ್ ಮಾರ್ಕೆಟ್ ಭಾವನೆಯನ್ನು ತರುತ್ತವೆ ಅದನ್ನು ಪವರ್ ವಿಂಡೋಸ್ ಬಾಗಿಲುಗಳಿಗೆ ಹೇಳುವಂತಿಲ್ಲ.  ಶ್ರೀಮಂತ ಭಾವನೆ ಗೇರ್ ಲಿವರ್ ಮೇಲೆ ಮುಂದುವರೆಯುತ್ತದೆ ಅದು ಎಎಂಟಿ ಪ್ರೀಮಿಯಂ ಫೀಲ್ ಲೆದರ್ ನೊಂದಿಗೆ ಬಂದಿದ್ದು ಕ್ರೋಮ್ ಸುತ್ತುವರಿದಿರುವುದು ಸಾಕಷ್ಟು ಸುಧಾರಣೆ ನೀಡಿದೆ. 

ಡ್ಯಾಶ್ ಬೋರ್ಡ್ ಗರಿಷ್ಠ ದಕ್ಷತಾಶಾಸ್ತ್ರಕ್ಕೆ ಚಾಲಕನ ಕಡೆಗೆ ತಿರುಗಿಕೊಂಡಿದೆ ಮತ್ತು 7-ಇಂಚು ಸ್ಮಾರ್ಟ್ ಪ್ಲೇ ಇನ್ಫೊಟೈನ್ ಮೆಂಟ್ ಸಿಸ್ಟಂ ವೀಕ್ಷಣೆ ಈಗ ಆಪಲ್ ಕಾರ್ ಪ್ಲೇ ಅಲ್ಲದೆ ಆಂಡ್ರಾಯಿಡ್ ಆಟೊ ಬೆಂಬಲಿಸುತ್ತದೆ. 6-ಸ್ಪೀಕರ್ ಸಿಸ್ಟಂನ ಶಬ್ದದ ಗುಣಮಟ್ಟ ಪರಿಣಾಮಕಾರಿ ಆದರೆ ದುರಾದೃಷ್ಟವಶಾತ್ ಇದನ್ನು ನೀವು ಟಾಪ್-ಎಂಡ್ ವೇರಿಯೆಂಟ್ ನಲ್ಲಿ ಮಾತ್ರ ಕಾಣಬಹುದು. ಕೆಳ ವೇರಿಯೆಂಟ್ ಗಳು ಯು.ಎಸ್.ಬಿ., ಆಕ್ಸ್, ಸಿಡಿ ಮತ್ತು ಬ್ಲೂಟೂಥ್ ಕನೆವ್ಟಿಟಿಯ ನಿಯಮಿತ ಆಡಿಯೊ ಸಿಸ್ಟಂ ಹೊಂದಿದೆ. ಆದರೆ ಈ ಸಿಸ್ಟಂ ಅತ್ಯಂತ ಹಳೆಯದು ಮತ್ತು ಹೊಂದಿಕೊಳ್ಳುವುದಿಲ್ಲ ಎಂಬ ಭಾವನೆ ಮೂಡುತ್ತದೆ. ಹೆಚ್ಚು ಕೈಗೆಟುಕುವ ಪರ್ಯಾಯಗಳಾದ ಫೋರ್ಡ್ ಆಸ್ಪೈರ್ ಕೊಂಡಾಗ ಮಧ್ಯಮ-ಶ್ರೇಣಿಯ ವೇರಿಯೆಂಟ್ ಗಳಲ್ಲಿ ಟಚ್ ಸ್ಕ್ರೀನ್ ನೀಡಲಾಗುತ್ತದೆ. 

ಚಾಲಕನಿಗೆ ಹಲವಾರು ಅನುಕೂಲಗಳಿದ್ದು ಸೀಟ್-ಹೈಟ್ ಅಡ್ಜಸ್ಟರ್, ಸ್ಟಾರ್ಟ್-ಸ್ಟಾಪ್ ಬಟನ್, ಎಲೆಕ್ಟಿಕಲಿ ರಿಟ್ರಾಕ್ಟಬಲ್ ಮತ್ತು ಅಡ್ಜಸ್ಟಬಲ್ ಔಟ್ ಸೈಡ್ ರಿಯರ್ ವ್ಯೂ ಮಿರರ್ ಗಳು ಮತ್ತು ಚಾಲಕನ ಕಡೆಯ ಆಟೊ ಅಪ್-ಡೌನ್ ಪವರ್ ವಿಂಡೋ ಹೊಂದಿದೆ. ಮುಂಬದಿಯ ಸೀಟುಗಳು ದೊಡ್ಡವು ಹಾಗೂ ದೊಡ್ಡ ಜನರಿಗೂ ಅನುಕೂಲಕರವಾಗಿವೆ. ಮಾರುತಿ ಒಂದು ಹೆಜ್ಜೆ ಮುಂದೆ ಹೋಗಿ ಎಎಂಟಿ ವೇರಿಯೆಂಟ್ ಗಳಲ್ಲಿ ಚಾಲಕರ ಆರ್ಮ್ ರೆಸ್ಟ್ ಕೂಡಾ ಸೇರಿಸಿದೆ.

ಹೆಚ್ಚಿಸಿದ ವ್ಹೀಲ್ ಬೇಸ್ ಮತ್ತು ಅಗಲ ಅವುಗಳ ಉಪಸ್ಥಿತಿಯನ್ನು ಅರಿಯುವಂತೆ ಮಾಡಿದ್ದು ಸುಧಾರಿಸಿದ ಕ್ಯಾಬಿನ್ ಸ್ಥಳ ಮತ್ತು ಅತ್ಯಂತ ದೊಡ್ಡ ಪ್ರಯೋಜನ ಪಡೆದವರು ಹಿಂಬದಿಯ ಸೀಟಿನ ಪ್ರಯಾಣಿಕರು. ನೀರೂಂ ನಿಮ್ಮ ಕಾಲುಗಳನ್ನು ಅನುಕೂಲಕರವಾಗಿ ಚಾಚಲು ತಕ್ಕಷ್ಟು ಸ್ಥಳ ಹೊಂದಿದೆ. ಕಡಿಮೆ ಎತ್ತರ ಇದ್ದರೂ ಕ್ಯಾಬಿನ್ ಒಳಗಡೆಯ ಹೆಡ್ ರೂಂ ಗಮನಾರ್ಹ ರೀತಿಯಲ್ಲಿ ಪರಿಣಾಮ ಬೀರಿಲ್ಲ, ಕನಿಷ್ಠ 6 ಅಡಿಗಿಂತ ಕಡಿಮೆ ಇರುವವರಿಗೆ. ಶೌಲ್ಡರ್ ರೂಮ್ ಕೊಂಚ ತೆರೆದಿದೆ, ಆದರೆ ರಸ್ತೆ ಪ್ರಯಾಣದಲ್ಲಿ ಮೂವರು ವಯಸ್ಕರಿಗೆ ಅನುಕೂಲಕರ ಸ್ಥಳ ಆಗುವುದಿಲ್ಲ.  ನಗರದ ಒಳಗಡೆ ಕಿರು ಪ್ರಯಾಣಗಳಿಗೆ ಸೂಕ್ತವಾಗಿದೆ. ಇದು ಇಂದಿಗೂ ಸಬ್-4 ಮೀಟರ್ ಸೆಡಾನ್ ವಿಭಾಗದಲ್ಲಿ ಅತ್ಯುತ್ತಮವಾಗಿದ್ದು ಹಿಂಬದಿಗೆ ಮೂವರ ಸೀಟಿನೊಂದಿಗೆ ಬಂದಿದ್ದು ಫೋರ್ಡ್ ಆಸ್ಪೈರ್ ಅನ್ನು ಅನುಸರಿಸಿದೆ. ಇದು ಹಿಂಬದಿಯ ಪ್ರಯಾಣಿಕರ ಅನುಕೂಲಕ್ಕೆ ರಿಯರ್ ಎಸಿ ವೆಂಟ್ ಗಳನ್ನು ಹೊಂದಿದೆ. 

ಬಳಕೆಯಲ್ಲಿ ಇಲ್ಲದೇ ಇರುವಾಗ ಮಧ್ಯದ ಸೀಟು ಸೆಂಟರ್ ಆರ್ಮ್ ರೆಸ್ಟ್ ಗೆ ಕಪ್ ಹೋಲ್ಡರ್ ಗಳೊಂದಿಗೆ ಮಡಚಬಹುದು. ಹಿಂಬದಿಯಲ್ಲಿ ಬಾಗಿಲಿನಲ್ಲಿ ಬಾಟಲ್ ಹೋಲ್ಡರ್, ಸೀಟ್ ಬ್ಯಾಕ್ ಪಾಕೆಟ್ ಮತ್ತು ಮೊಬೈಲ್ ಹೋಲ್ಡರ್ ರಿಯರ್ ಎಸಿ ವೆಂಟ್ ನಂತರ ಇದೆ. ನಿಮ್ಮ ಯಾವುದೇ ಡಿವೈಸ್ ಬ್ಯಾಟರಿ ಖಾಲಿಯಾದಾಗ ಕೂಡಲೇ ಚಾರ್ಜ್ ಮಾಡಿಕೊಳ್ಳಬಹುದು. 

ಕಾರ್ಯಕ್ಷಮತೆ

ಹೊಸ ಡಿಝೈರ್ ಗೆ ಶಕ್ತಿ ನೀಡುವುದು ನಂಬಿಕೆ, ವಿಶ್ವಾಸಾರ್ಹ 1.2-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಯೂನಿಟ್ ಗಳು ಇವು ಹಳೆಯ ಡಿಝೈರ್ ನಲ್ಲಿ ಇದ್ದವೇ ಆಗಿವೆ. ಪವರ್ ಮತ್ತು ಟಾರ್ಕ್ ಫಲಿತಾಂಶ ಬದಲಾಗದೆ ಉಳಿದಿವೆ. ಬದಲಾಗಿರುವುದು ಮಾರುತಿ 5-ಸ್ಪೀಡ್ ಎಎಂಟಿ(ಆಟೊಮೇಟೆಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್) ಮಾದರಿಯಲ್ಲಿ ನೀಡುತ್ತಿರುವ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ಇದನ್ನು ವಿ ವೇರಿಯೆಂಟ್ ನಂತರ ನೀಡಲಾಗುತ್ತಿದ್ದು ಹಿಂದೆ ಟಾಪ್-ಎಂಡ್ ಟ್ರಿಮ್ ನಲ್ಲಿ ನೀಡಲಾಗುತ್ತಿತ್ತು. ಹೊಸ ಡಿಝೈರ್ ಎಂಜಿನ್ ಆಧರಿಸಿ 85-95 ಕೆಜಿ ತೂಕ ಕೂಡ ಇಳಿಸಿಕೊಂಡಿದೆ. 

ನಾವು ಇಗ್ನಿಸ್ ನ ಎಎಂಟಿಯಿಂದ ಅತ್ಯಂತ ಪ್ರಭಾವಿತರಾಗಿದ್ದೇವೆ ಮತ್ತು ಆದ್ದರಿಂದ ಡಿಝೈರ್ ಸೆಟಪ್ ಗೆ ಕೂಡಾ ಹೆಚ್ಚಿನ ನಿರೀಕ್ಷೆಗಳಿವೆ. ಮಾರುತಿ ಡಿಝೈರ್ ನಲ್ಲಿ ಗೇರಿಂಗ್ ಮತ್ತು ಕ್ಯಾಲಿಬ್ರೇಷನ್ ಅನ್ನು ಸುಧಾರಿಸಲಾಗಿದೆ ಎಂದು ಹೇಳುತ್ತದೆ. ನಗರದಲ್ಲಿ ಡಿಝೈರ್ ಡೀಸೆಲ್ ಎಎಂಟಿ ಚಾಲನೆ ಮಾಡುವುದು ಸುಲಭ ಮತ್ತು ಕ್ರೀಪ್ ಫಂಕ್ಷನ್ ನಿಂತು ಮುನ್ನಡೆಯುವ ಸನ್ನಿವೇಶಗಳಲ್ಲಿ ಅನುಕೂಲಕರ. ಆದರೆ ಮುಕ್ತರಸ್ತೆಗಳಲ್ಲಿ ಎಎಂಟಿ ಗೇರ್ ಬಾಕ್ಸ್ ಗಳಿಗೆ ಸಂಬಂಧಿಸಿದ `ಹೆಡ್-ನಾಡಿಂಗ್' ಇರುತ್ತದೆ(ಇದು ಆಶ್ಚರ್ಯಕರವಾಗಿ ಇಗ್ನಿಸ್ ನಲ್ಲಿ ಗೈರು ಹಾಜರಾಗಿದೆ) ನೀವು 2000ಆರ್.ಪಿ.ಎಂ ಮಾರ್ಕ್ ತಲುಪಿದಾಗ ಅದು ಇನ್ನಷ್ಟು ಅಸಹನೀಯವಾಗುತ್ತದೆ. ಓವರ್ ಟೇಕ್ ಮಾಡಬೇಕೇ? ನಿಮ್ಮ ಚಲನೆಯನ್ನು ಆಕ್ಸಲರೇಟರ್ ಬಡಿಯುವ ಮೂಲಕ ಅಥವಾ ಮುಂದೆ ಸಾಗುವ ಮುನ್ನ ಡೌನ್ ಶಿಫ್ಟ್ ಅನ್ನು ನಿಧಾನಗೊಳಿಸಿ ಯೋಜಿಸಬೇಕು. ಅದಕ್ಕಿಂತ ಸುಲಭದ ಆಯ್ಕೆ ಎಂದರೆ ಮ್ಯಾನ್ಯುಯಲ್ ಮೋಡ್ ಗೆ ಬದಲಾಯಿಸಿ, ಇದರಿಂದ ನಿಮ್ಮ ಎಡಗೈ ಸಕ್ರಿಯವಾಗಿರುತ್ತದೆ. 

ನೀವು ಹೆಚ್ಚಾಗಿ ಹೆದ್ದಾರಿಯಲ್ಲಿ ಚಾಲನೆ ಮಾಡುವಿರಾದರೆ ನೀವು ಡೀಸೆಲ್ ಮ್ಯಾನ್ಯುಯಲ್ ನೋಡಬೇಕು. ಗೇರ್ ಬಾಕ್ಸ್ ರೆಸ್ಪಾನ್ಸಿವ್ ಮತ್ತು ಶಿಫ್ಟ್ ಗಳು ತಡೆಯಿರದೆ ಬದಲಾಗುತ್ತವೆ ಮತ್ತು ನಿಮಗೆ ಅಡೆತಡೆಯ ಅನುಭವ ಆಗುವುದೇ ಇಲ್ಲ. ತೂಕ ಇಳಿಸಿದ್ದರೂ ಡೀಸೆಲ್ ಇನ್ನೂ ಭಾರವಾಗಿಯೇ ಇದೆ ಎನ್ನಿಸುತ್ತದೆ ಮತ್ತು ಕಾರು ವೇಗ ಪಡೆಯಲು ಕೊಂಚ ಕಾಯಲೇಬೇಕು. ನಂತರ ಅದು ಯಾವುದೇ ತಡೆಯಿಲ್ಲದೆ 80-100ಕೆಎಂಪಿಎಚ್ ವೇಗವನ್ನು ಪಡೆಯುತ್ತದೆ. 0-100ಕೆಎಂಪಿಎಚ್ ವೇಗವನ್ನು ಈ ಸಂಯೋಜನೆಯಲ್ಲಿ 13.03 ಸೆಕೆಂಡುಗಳಲ್ಲಿ ಪಡೆಯುತ್ತದೆ 3ನೇ ಇನ್-ಗೇರ್ ಆಕ್ಸಲರೇಷನ್(30-80ಕೆಎಂಪಿಎಚ್) ಮತ್ತು 4ರಲ್ಲಿ(40-100ಕೆಎಂಪಿಎಚ್) ಕ್ರಮವಾಗಿ 11 ಸೆಕೆಂಡುಗಳು ಮತ್ತು 14.72 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. 

ಕಾರು ನಗರ ಮತ್ತು ಹೆದ್ದಾರಿ ಚಾಲನೆ ಎರಡರಲ್ಲೂ ಉತ್ತಮವಾಗಿರಲು ಬಯಸಿದರೆ ಡಿಝೈರ್ ಪೆಟ್ರೋಲ್ ಎಎಂಟಿಯಲ್ಲಿದೆ. ಎಂಜಿನ್ ಸುಧಾರಿತವಾಗಿ ಮತ್ತು ವೇಗವಾಗಿದೆ ಮತ್ತು ಗೇರ್ ಶಿಫ್ಟ್ ಗಳು ಚಾಲಕರ ಅಗತ್ಯಗಳಿಗೆ ಅನುಸಾರ ಮೃದುವಾಗಿವೆ. ಪೆಟ್ರೋಲ್-ಮ್ಯಾನ್ಯುಯಲ್ ಸಂಯೋಜನೆ ಆಶ್ಚರ್ಯಕರವಾಗಿ ಚಾಲನೆಗೆ ಸ್ಫೂರ್ತಿದಾಯಕವಾಗಿದ್ದು ಕೇವಲ 11.88 ಸೆಕೆಂಡುಗಳಲ್ಲಿ 0-100 ಕೆಎಂಪಿಎಚ್ ಪಡೆಯುತ್ತದೆ. ಇನ್-ಗೇರ್ ಆಕ್ಸಲರೇಷನ್ ಕೂಡಾ ತ್ವರಿತವಾಗಿದ್ದು 3(30-80 ಕೆಎಂಪಿಎಚ್) ಮತ್ತು 4(40-100ಕೆಎಂಪಿಎಚ್)ರಲ್ಲಿ ಕ್ರಮವಾಗಿ 10.39 ಸೆಕೆಂಡುಗಳು ಮತ್ತು 19.82 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.

ಚಾಲನೆ ಮತ್ತು ನಿರ್ವಹಣೆ

ಡಿಝೈರ್ ಕುರಿತಾಗಿ ಒಂದು ಅಂಶವೆಂದರೆ ಅದರ ಚಾಲನೆಯ ಗುಣಮಟ್ಟದಿಂದ ನಮ್ಮನ್ನು ಸಂಪೂರ್ಣ ಸೆಳೆದಿದೆ. ಸಸ್ಪೆನ್ಷನ್ ಬಹಳ ನಿಶ್ಯಬ್ದವಾಗಿದೆ, ರೈಡ್ ಅತ್ಯಂತ ಮೃದುವಾಗಿದೆ ಮತ್ತು ಅದು ದೊಡ್ಡ ಸ್ಟೇಟ್ ಮೆಂಟ್ ರೀತಿಯಲ್ಲಿ ಭಾಸವಾಗುತ್ತದೆ, ಆದರೆ ಈ ಸೆಡಾನ್ ನಲ್ಲಿ ಅವ್ಯವಸ್ಥೆಗೊಳಿಸುವುದಿಲ್ಲ. ನಾವು ನಿಜಕ್ಕೂ ಕೆಲ ಒರಟಾದ ಮತ್ತು ಒಡೆದ ರಸ್ತೆಗಳ ಮೇಲೆ ಚಲಿಸಿದೆವು ಆದರೆ ಡಿಝೈರ್ ಸಸ್ಪೆನ್ಷನ್ ಯಾವುದೇ ಅಡೆತಡೆ ಅಥವಾ ಏರಿಳಿಯದೆ ಮುನ್ನಡೆಯಿತು ಅದರಲ್ಲಿಯೂ ಎಎಂಟಿ ವೇರಿಯೆಂಟ್ ಗಳಲ್ಲಿ. ಹಳೆಯ ಡಿಝೈರ್ ನಲ್ಲಿ ಭಾಸವಾಗುವ ಹಾಗೆ ಏರಿಳಿತ ಅನುಭವಕ್ಕೆ ಬರಲಿಲ್ಲ. ಇದರ ಗ್ರೌಂಡ್ ಕ್ಲಿಯರೆನ್ಸ್ 7ಎಂಎಂಗಿಂತ ಕಡಿಮೆಯಾಗಿದ್ದರೂ ಡಿಝೈರ್ ಉಬ್ಬುಗಳ ಮೇಲೆ ಅತಿಯಾದ ವೇಗದಲ್ಲಿ ಚಲಿಸಿದರೂ ಇದು ಅನುಕೂಲಕರವಾಗಿದೆ. 

ನೇರ ರಸ್ತೆಗಳಲ್ಲಿ ಮತ್ತು 100ಕೆಎಂಪಿಎಚ್ ವೇಗದಲ್ಲಿ ಡಿಝೈರ್ ಸ್ಥಿರವಾದ ಭಾವನೆ ನೀಡುತ್ತದೆ, 186/85 ಟೈರ್ ಗಳು ಗಟ್ಟಿಯಾದ ಹಿಡಿತ ನೀಡಿವೆ. ಆದರೆ ಇದು ಬದಿಗಳಲ್ಲಿ ಅದೇ ಬಗೆಯ ವಿಶ್ವಾಸ ನೀಡುವುದಿಲ್ಲ. ಸ್ಟೀರಿಂಗ್ ವ್ಹೀಲ್ ಕಡಿಮೆ ವೇಗದಲ್ಲಿ ಚಲಿಸುವಾಗ ತಕ್ಕಷ್ಟು ತೂಕ ಹೊಂದಿರುತ್ತದೆ. ವೇಗ ಪಡೆದಂತೆ ಇದು ಕೊಂಚ ಹಗುರವಾದಂತೆ ಕಂಡರೂ ಮುಂಬದಿ ಚಕ್ರಗಳು ಏನು ಮಾಡುತ್ತಿವೆ ಎನ್ನುವುದು ಅಸ್ಪಷ್ಟವಾಗಿರುತ್ತದೆ. ಬ್ರೇಕ್ ಗಳು ಪ್ರತಿಕ್ರಿಯಾತ್ಮಕವಾಗಿವೆ ಮತ್ತು ಕೆಲಸ ಮಾಡುತ್ತವೆ ಆದರೆ ಪ್ಯಾನಿಕ್ ಬ್ರೇಕಿಂಗ್ ಸನ್ನಿವೇಶಗಳನ್ನು ತಪ್ಪಿಸುವುದು ಒಳಿತು. 

ಇಂಧನ ಕ್ಷಮತೆ

 

ಹೊಸ ಮಾರುತಿ ಸುಝುಕಿ ಡಿಝೈರ್ ಪೆಟ್ರೋಲ್ ಮ್ಯಾನ್ಯುಯಲ್ ಮತ್ತುಎಎಂಟಿ ಎರಡರಲ್ಲೂ ಹಿಂದಿಗಿಂತ 1.1 ಕೆಎಂಪಿಎಲ್ ಹೆಚ್ಚಿಸಿ 22ಕೆಎಂಪಿಎಲ್ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಆದರೆ ಡೀಸೆಲ್ 28.04ಕೆಎಂಪಿಎಲ್ ಮೈಲೇಜ್ ಎನ್ನುತ್ತಿದ್ದು ನೀವು ನಂಬುವುದಿಲ್ಲ! ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅದು ಕಾಗದದ ಮೇಲೆ ಕ್ಲೇಮು ಅಷ್ಟೇ. ನೈಜ ಪರೀಕ್ಷೆಗಳಲ್ಲಿ ಡಿಝೈರ್ ಡೀಸೆಲ್ ಎಂ.ಟಿ. ನಗರದಲ್ಲಿ 19.05ಕೆಎಂಪಿಎಲ್ ಮತ್ತು ಹೆದ್ದಾರಿಯಲ್ಲಿ 20.09 ಕೆಎಂಪಿಎಲ್ ನೀಡಿದೆ. ಪೆಟ್ರೋಲ್ ಮ್ಯಾನ್ಯುಯಲ್ ಮಾರುತಿ ಡಿಝೈರ್ ಸಮರ್ಥವಾಗಿದ್ದು ನಗರದಲ್ಲಿ 15.85 ಕೆಎಂಪಿಎಲ್ ಮತ್ತು ಹೆದ್ದಾರಿಯಲ್ಲಿ 20.90ಕೆಎಂಪಿಎಲ್ ನೀಡುತ್ತದೆ. 

ಡಿಝೈರ್ ನ ಅತ್ಯಂತ ಅನುಕೂಲಗಳಲ್ಲಿ ಒಂದು ಅದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಬೇಸ್ ಎಲ್ ನಿಂದ ಹೊಂದಿದ್ದು ಇದು ಹಳೆಯ ಎಲ್(ಐಚ್ಛಿಕ) ವೇರಿಯೆಂಟ್ ಗಿಂತ ಬೆಲೆ ಕಡಿಮೆ ಹೊಂದಿದೆ ಮತ್ತು ಸೇಫ್ಟಿ ಫೀಚರ್ ಗಳನ್ನು ರೂ.7,000ಕ್ಕೆ ನೀಡುತ್ತಿದೆ. ಅದು ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಮಹತ್ತರ ಕ್ರಮವಾಗಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಡಿಝೈರ್ ಮಾರುತಿಯ ಹಾರ್ಟೆಕ್ಟ್ ಪ್ಲಾಟ್ ಫಾರಂನಲ್ಲಿ ನಿರ್ಮಾಣವಾಗಿದ್ದು ಭವಿಷ್ಯದ ಸುರಕ್ಷತೆಯ ನಿಯಮಗಳಿಗೆ ಸನ್ನದ್ಧವಾಗಿಸಿದೆ. 

ಇತರೆ ಸುರಕ್ಷತೆಯ ಅಂಶಗಳಲ್ಲಿ ಐಸೊಫಿಕ್ಸ್ ಚೈಲ್ಡ್ ಆಂಕರೇಜ್ ಗಳು ನಿಮ್ಮ ಪುಟ್ಟ ಮಕ್ಕಳನ್ನು ಸುರಕ್ಷಿತಗೊಳಿಸುತ್ತವೆ ಮತ್ತು ಪ್ರಿಟೆನ್ಷನರ್ ಗಳು ಮತ್ತು ಫೋರ್ಸ್ ಲಿಮಿಟರ್ ನೊಂದಿಗೆ ಮುಂಬದಿಯ ಸೀಟ್ ಬೆಲ್ಟ್ ಗಳು. ಆದರೆ ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳನ್ನು ಝಡ್ ವೇರಿಯೆಂಟ್ ನಲ್ಲಿ ಮಾತ್ರ ನೀಡಲಾಗುತ್ತದೆ ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮರಾ ಬೇಕೆಂದರೆ ನೀವು ಝಡ್+ ವೇರಿಯೆಂಟ್ ಕೊಳ್ಳಬೇಕು. ಮಾರುತಿ ಪಾರ್ಕಿಂಗ್ ಸೆನ್ಸರ್ ಗಳನ್ನು ಈ ದಿನಗಳಲ್ಲಿ ನಮ್ಮ ರಸ್ತೆಗಳ ಮೇಲೆ ಎಷ್ಟು ಮುಖ್ಯ ಎಂದು ಪರಿಗಣಿಸಿ ವಿ ವೇರಿಯೆಂಟ್ ನೀಡಿದೆ. ಸೆಂಟ್ರಲ್ ಲಾಕಿಂಗ್, ಸ್ಪೀಡ್-ಸೆನ್ಸಿಂಗ್ ಡೋರ್ ಲಾಕ್ಸ್ ಮತ್ತು ಆಂಟಿ ಥೆಫ್ಟ್ ಸಿಸ್ಟಂ ಹಿಂದೆ ಸ್ಟಾಂಡರ್ಡ್ ಆಗಿದ್ದರೂ ಈಗ ವಿ ವೇರಿಯೆಂಟ್ ನಂತರ ನೀಡಲಾಗುತ್ತದೆ. 

 

ಮಾರುತಿ ಡಿಜೈರ್ 2017-2020

ನಾವು ಇಷ್ಟಪಡುವ ವಿಷಯಗಳು

  • ಹಿಂದೆಂದಿಗಿಂತಲೂ ಹೆಚ್ಚು ಪ್ರಯಾಣಿಕರು ಮತ್ತು ಲಗೇಜ್ ಸ್ಥಳಾವಕಾಶ
  • ಸ್ಟಾಂಡರ್ಡ್ ಸೇಫ್ಟಿ ಫೀಚರ್ ಗಳು: ಡ್ಯುಯಲ್-ಫ್ರಂಟ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್ ಮತ್ತು ರಿಯರ್ ಚೈಲ್ಡ್ ಸೀಟ್ ಆಂಕರ್ಸ್
  • ಇಲ್ಲಿಯವರೆಗೂ ಅತ್ಯುತ್ತಮ ನೋಟದ ಡಿಝೈರ್! ಹಿಂದಿನ ತಲೆಮಾರಿಗಿಂತ ಹೆಚ್ಚು ಪ್ರಮಾಣಾನುಗತ ವಿನ್ಯಾಸ
  • ಹೊಸ, ಲಘು ಮತ್ತು ಸದೃಢ ಬಲೆನೊ-ಪಡೆದ ಪ್ಲಾಟ್ ಫಾರಂ ಮುಂದಿನ ಕ್ರಾಶ್ ಟೆಸ್ಟ್ ನಿಯಮಗಳ ಅನ್ವಯ ಇದೆ.
  • ವೆಚ್ಚ ಳಿಸುವ ಎಎಂಟಿಯ ಅನುಕೂಲ(ಬೇಸ್ ಎಲ್ ವೇರಿಯೆಂಟ್ ಹೊರತಾಗಿಸಿ ಎಲ್ಲ ಲೈನಪ್ ನಲ್ಲೂ ಲಭ್ಯ)
  • ಅದ್ಭುತ ರೈಡ್ ಗುಣಮಟ್ಟ- ಡಿಝೈರ್ ರಸ್ತೆ ಗುಂಡಿಗಳು ಮತ್ತು ಮುರಿದ ರಸ್ತೆಗಳಲ್ಲಿ ಅಡೆತಡೆಯಿಲ್ಲದೆ ಮುನ್ನಡೆಯುತ್ತದೆ

ನಾವು ಇಷ್ಟಪಡದ ವಿಷಯಗಳು

  • ಕೆಲ ಸ್ಥಳಗಳಲ್ಲಿರುವ ಫಿಟ್ ಅಂಡ್ ಫಿನಿಷ್ ಪ್ಲಾಸ್ಟಿಕ್ ಗಳು ಬಯಸಿದಂತಿಲ್ಲ
  • ನಾಯ್ಸ್ ಇನ್ಸುಲೇಷನ್ ಇನ್ನಷ್ಟು ಉತ್ತಮಗೊಳ್ಳಬಹುದಿತ್ತು, ಸಾಕಷ್ಟು ಎಂಜಿನ್ ಶಬ್ದ ಕ್ಯಾಬಿನ್ ಒಳಗಡೆ ಬರುತ್ತಿದೆ
  • ಹೊಸ ಝಡ್+ ವೇರಿಯೆಂಟ್ ಗಳು ಕೊಂಚ ಬೆಲೆ ಹೆಚ್ಚಾಗಿವೆ
  • ಫೈನ್-ಟ್ಯೂನ್ ಮಾಡಿದ ಎಎಂಟಿ, ಆದರೆ ಸುಧಾರಣೆಯಲ್ಲಿ ಸಾಂಪ್ರದಾಯಿಕ ಎಟಿಗಳಿಗೆ ಹೊಂದಿಕೆಯಿಲ್ಲ
  • ಡಿಝೈರ್ ಡೀಸೆಲ್ ಎಎಂಟಿ ಪೆಟ್ರೋಲ್ ವಾಹನಕ್ಕೆ ಹೋಲಿಸಿದರೆ ಮೃದುವಾಗಿಲ್ಲ
  • ಕಳೆದ ವರ್ಷ ಬಿಡುಗಡೆಯಾದ ಡಿಝೈರ್ ದೀರ್ಘ ಕಾಯುವ ಅವಧಿ ಹೊಂದಿದೆ.

ಮಾರುತಿ ಡಿಜೈರ್ 2017-2020 Car News & Updates

  • ಇತ್ತೀಚಿನ ಸುದ್ದಿ
  • Must Read Articles

ಮಾರುತಿ ಡಿಜೈರ್ 2017-2020 ಬಳಕೆದಾರರ ವಿಮರ್ಶೆಗಳು

4.6/5
ಆಧಾರಿತ1487 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (1487)
  • Looks (341)
  • Comfort (462)
  • Mileage (499)
  • Engine (161)
  • Interior (181)
  • Space (231)
  • Price (151)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Verified
  • Critical
  • Excellent Sedan Car

    Excellent sedan car with comfort in riding and without affecting pocket. Low maintenance cost with h...ಮತ್ತಷ್ಟು ಓದು

    ಇವರಿಂದ ravindra dasari
    On: Mar 07, 2021 | 109 Views
  • Best Gadi

    It is the best car.

    ಇವರಿಂದ anku choudhary
    On: Feb 22, 2021 | 46 Views
  • Great Car

    Maruti Swift Dzire is a very good and comfortable car at a good price. I and my family is so impress...ಮತ್ತಷ್ಟು ಓದು

    ಇವರಿಂದ amarjit
    On: Mar 20, 2020 | 64 Views
  • Best in the class.

     I have purchase Dzire AMT in 2017, I m truly satisfied with this car. My friends suggested me to pu...ಮತ್ತಷ್ಟು ಓದು

    ಇವರಿಂದ dev
    On: Mar 18, 2020 | 126 Views
  • Best in safety.

    Dzire completes my all Dzire. I am very much satisfied with the comfort and mileage of the car. It h...ಮತ್ತಷ್ಟು ಓದು

    ಇವರಿಂದ suresh rajpurohit
    On: Mar 18, 2020 | 114 Views
  • ಎಲ್ಲಾ ಡಿಜೈರ್ 2017-2020 ವಿರ್ಮಶೆಗಳು ವೀಕ್ಷಿಸಿ

ಡಿಜೈರ್ 2017-2020 ಇತ್ತೀಚಿನ ಅಪ್ಡೇಟ್

ಮಾರುತಿ ಸುಜುಕಿ ಡಿಸೈರ್ ಬೆಲೆ ಹಾಗು ವೇರಿಯೆಂಟ್ ಗಳು :  ಡಿಸೈರ್ ನ ಬೆಲೆ ಪಟ್ಟಿ ಆರಂಭ ರೂ  5.82 ಲಕ್ಷ ದಿಂದ ಹಾಗು ಅದು ರೂ 9.52 ಲಕ್ಷ ವರೆಗೂ ವ್ಯಾಪಿಸಿದೆ (ಎಕ್ಸ್ ಶೋ ರೂಮ್ ದೆಹಲಿ )

ಮಾರುತಿ ಕುಡುತ್ತಿದೆ ಡಿಸೈರ್ ಅನ್ನು ನಾಲ್ಕು ವೇರಿಯೆಂಟ್ ಗಳಲ್ಲಿ :L, V, Z, ಹಾಗು  Z+  ಜೊತೆಗೆ ಎರೆಡು ಎಂಜಿನ್ ಆಯ್ಕೆ ಗಳಲ್ಲಿ. 

 ಮಾರುತಿ ಸುಜುಕಿ ಡಿಸೈರ್ ಎಂಜಿನ್, ಟ್ರಾನ್ಸ್ಮಿಷನ್ ಹಾಗು ಮೈಲೇಜ್: ಮಾರುತಿ ಸಬ್ -4m ಸೆಡಾನ್ ಲಭ್ಯವಿದೆ 1.2- ಲೀಟರ್ ಪೆಟ್ರೋಲ್ ಎಂಜಿನ್ ಹಾಗು 1.3-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ. ಪೆಟ್ರೋಲ್ ಯುನಿಟ್ ಪಡೆಯುತ್ತದೆ ಗರಿಷ್ಟ 83PS  ಪವರ್ ಹಾಗು  113Nm ಗರಿಷ್ಟ ಟಾರ್ಕ್ . ಡೀಸೆಲ್ ಆವೃತ್ತಿ ಕೊಡುತ್ತದೆ 75PS ಪವರ್ ಹಾಗು 190Nm ಟಾರ್ಕ್ . ಎರೆಡೂ ಎಂಜಿನ್ ಗಳು 5- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ ಜೊತೆಯಲ್ಲಿ 5-ಸ್ಪೀಡ್  AMT (ಆಟೋಮೇಟೆಡ್ -ಮಾನ್ಯುಯಲ್ ಟ್ರಾನ್ಸ್ಮಿಷನ್ )ಅನ್ನು ಆಯ್ಕೆಯಾಗಿ ಕೊಡಲಾಗಿದೆ. ಮಾರುತಿ ಹೇಳಿಕೆಯಂತೆ ಅದು 21.21kmpl ಹಾಗು  28.40kmpl ಅನ್ನು ಡಿಸೈರ್ ನ  ಪೆಟ್ರೋಲ್ ಹಾಗು ಡೀಸೆಲ್ (ಮಾನ್ಯುಯಲ್ ಹಾಗು AMT ಗಳು )  ವೇರಿಯೆಂಟ್ ಗಳಲ್ಲಿ ಅನುಗುಣವಾಗಿ ಪಡೆಯುತ್ತದೆ. 

ಮಾರುತಿ  ಸುಜುಕಿ ಡಿಸೈರ್ ಫೀಚರ್ ಗಳು: ಅದರ ಪ್ರಮುಖ ಸುರಕ್ಷತೆ ಫೀಚರ್ ಗಳಾದ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ರೇವೆರ್ಸ್ ಪಾರ್ಕಿಂಗ್ ಸೆನ್ಸರ್ ಗಳು, ಕೋ-ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್ , ಸ್ಪೀಡ್ ಅಲರ್ಟ್, ABS with EBD, ಹಾಗು ಬ್ರೇಕ್ ಅಸಿಸ್ಟ್ ಗಳನ್ನು ಹಾಗು  ISOFIX ಚೈಲ್ಡ್ ಸೀಟ್ ಅಂಕೋರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಅದರ ಫೀಚರ್ ಗಳ ಪಟ್ಟಿಯಲ್ಲಿ LED  ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು,  DRL ಗಳು, ರೇವೆರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಸೆನ್ಸರ್ ಗಳು, ಹಾಗು 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಜೊತೆಗೆ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಕಾಂಪ್ಯಾಟಿಬಿಲಿಟಿ ಕೊಡಲಾಗಿದೆ. ಹಾಗು ಅದು ಪಡೆಯುತ್ತದೆ ಫಾಸ್ಸಿವ್ ಕೀ ಲೆಸ್ ಎಂಟ್ರಿ ಜೊತೆಗೆ ಪುಶ್ ಬಟನ್ ಎಂಜಿನ್ ಸ್ಟಾರ್ಟ್/ ಸ್ಟಾಪ್ , ಆಟೋ ಕ್ಲೈಮೇಟ್ ಕಂಟ್ರೋಲ್ ಜೊತೆಗೆ ರೇರ್ AC ವೆಂಟ್ ಗಳು, ಹಾಗು ಇಲೆಕ್ಟ್ರಾನಿಕ್ ಆಗಿ ಅಳವಡಿಸಬಹುದಾದ ಹಾಗು ಮಡಚಬಹುದಾದ ORVM ಗಳು . 

ಮಾರುತಿ ಸುಜುಕಿ ಡಿಸೈರ್ ಪ್ರತಿಸ್ಪರ್ಧೆ: ಮಾರುತಿ ಸುಜುಕಿ ಡಿಸೈರ್ ಪ್ರತಿಸ್ಪರ್ಧೆ ವೋಕ್ಸ್ವ್ಯಾಗನ್ ಅಮೆಯೋ, ಹೋಂಡಾ ಅಮೇಜ್, ಟಾಟಾ ಟಿಗೋರ್, ಹಾಗು ಫೋರ್ಡ್ ಆಸ್ಪೈರ್  ಗಳೊಂದಿಗೆ. ಹಾಗು ಇದೆ ಮುಂಬರುವ ಹುಂಡೈ ಔರ ಜೊತೆಗೂ ಸ್ಪರ್ದಿಸುತ್ತದೆ. 

ಮತ್ತಷ್ಟು ಓದು

ಮಾರುತಿ ಡಿಜೈರ್ 2017-2020 ವೀಡಿಯೊಗಳು

  • Which Maruti Dzire Variant Should You Buy?
    8:29
    Which ಮಾರುತಿ Dzire ವೇರಿಯಯೇಂಟ್ Should ನೀವು Buy?
    6 years ago | 82.8K Views
  • Maruti DZire Hits and Misses
    3:22
    ಮಾರುತಿ DZire Hits ಮತ್ತು Misses
    6 years ago | 52.8K Views
  • Maruti Suzuki Dzire 2017 Review in Hinglish
    8:38
    Maruti Suzuki Dzire 2017 ವಿಮರ್ಶೆ ರಲ್ಲಿ {0}
    6 years ago | 28.8K Views

ಮಾರುತಿ ಡಿಜೈರ್ 2017-2020 ಮೈಲೇಜ್

ಮಾರುತಿ ಡಿಜೈರ್ 2017-2020 ಮೈಲೇಜು 20.85 ಗೆ 28.4 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 28.4 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 28.4 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 22 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 22 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌28.4 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌28.4 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌22 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌22 ಕೆಎಂಪಿಎಲ್

ಮಾರುತಿ ಡಿಜೈರ್ 2017-2020 Road Test

Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the price of Maruti Suzuki Dzire in Samastipur Bihar?

RakeshRanjan asked on 18 Mar 2020

Maruti Dzire is priced between Rs.5.82 - 9.52 Lakh (ex-showroom Samastipur). In ...

ಮತ್ತಷ್ಟು ಓದು
By CarDekho Experts on 18 Mar 2020

Where I can get Dzire petrol car by end of March 2020 in Goa?

Faroj asked on 18 Mar 2020

For the availability of Dzire petrol variant in Goa, we would suggest you walk i...

ಮತ್ತಷ್ಟು ಓದು
By CarDekho Experts on 18 Mar 2020

What are the colours in desire petrol vdi model?

Subbarao asked on 18 Mar 2020

Maruti Dzire is offering 6 different colours for it's variants - Silky silve...

ಮತ್ತಷ್ಟು ಓದು
By CarDekho Experts on 18 Mar 2020

What is the price of Dzire VXi in Bokakhat Assam?

Dibyajyoti asked on 13 Mar 2020

Maruti Dzire VXi is priced at Rs.6.73 Lakh (ex-showroom Bokakhat). In order to k...

ಮತ್ತಷ್ಟು ಓದು
By CarDekho Experts on 13 Mar 2020

Please give the list of all the accessories available in Dzire ZXI Plus AMT.

Ajitkumar asked on 8 Mar 2020

For this, we would suggest you walk into the nearest dealership as they will be ...

ಮತ್ತಷ್ಟು ಓದು
By CarDekho Experts on 8 Mar 2020

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಏಪ್ರಿಲ್ offer
view ಏಪ್ರಿಲ್ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience