- + 3ಬಣ್ಣಗಳು
- + 30ಚಿತ್ರಗಳು
- ವೀಡಿಯೋಸ್
ಎಂಜಿ ಜೆಡ್‌ಎಸ್ ಇವಿ 2020-2022
ಎಂಜಿ ಜೆಡ್‌ಎಸ್ ಇವಿ 2020-2022 ನ ಪ್ರಮುಖ ಸ್ಪೆಕ್ಸ್
ರೇಂಜ್ | 419 km |
ಪವರ್ | 140.8 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 44.5 kwh |
ಚಾರ್ಜಿಂಗ್ ಸಮಯ | 6-8hours |
ಆಸನ ಸಾಮರ್ಥ್ಯ | 5 |
- ಹಿಂಭಾಗದ ಕ್ಯಾಮೆರಾ
- ಕೀಲಿಕೈ ಇಲ್ಲದ ನಮೂದು
- voice commands
- ಕ್ರುಯಸ್ ಕಂಟ್ರೋಲ್
- ಪಾರ್ಕಿಂಗ್ ಸೆನ್ಸಾರ್‌ಗಳು
- key ವಿಶೇಷಣಗಳು
- top ವೈಶಿಷ್ಟ್ಯಗಳು
ಎಂಜಿ ಜೆಡ್‌ಎಸ್ ಇವಿ 2020-2022 ಬೆಲೆ ಪಟ್ಟಿ (ರೂಪಾಂತರಗಳು)
following details are the last recorded, ಮತ್ತು the prices ಮೇ vary depending on the car's condition.
ವೇರಿಯಯೇಂಟ್ | ಹಳೆಯ ಶೋರೂಮ್ ಬೆಲೆ | |
---|---|---|
ಜೆಡ್‌ಎಸ್ ಇವಿ 2020-2022 ಎಕ್ಸೈಟ್(Base Model)44.5 kwh, 419 km, 140.8@3500rpm ಬಿಹೆಚ್ ಪಿ | Rs.22 ಲಕ್ಷ* | |
ಜೆಡ್‌ಎಸ್ ಇವಿ 2020-2022 ಎಕ್ಸ್ಕ್ಲೂಸಿವ್(Top Model)44.5 kwh, 419 km, 140.8@3500rpm ಬಿಹೆಚ್ ಪಿ | Rs.25.88 ಲಕ್ಷ* |
ಎಂಜಿ ಜೆಡ್‌ಎಸ್ ಇವಿ 2020-2022 ವಿಮರ್ಶೆ
ಎಕ್ಸ್‌ಟೀರಿಯರ್
ನಿವು ZS EV ಯನ್ನು ಎಲೆಕ್ಟ್ರಿಕ್ ವಾಹನ ಎಂದು ಘೋಷಿಸಲಾಗುತ್ತದೆ ಎಂದು ಭಾವಿಸಿದ್ದಾರೆ, ಅದು ಡಿಸೈನ್ ನಲ್ಲಿ ಹಾಗೆ ಕಾಣುವುದಿಲ್ಲ. ಅದು MG ಹೆಕ್ಟರ್ ಗೆ ಬಹು ವಿಭಿನ್ನವಾಗಿದೆ , ಅದಕ್ಕಿಂತ ಹೆಚ್ಚು ದೊಡ್ಡ ಕಾರ್ ಆಗಿ ಕಾಣುವುದಿಲ್ಲ ( ರಸ್ತೆಯಲ್ಲಿನ ನಿಲುವು ಹುಂಡೈ ಕ್ರೆಟಾ ತರಹ ಇದೆ ) ಹಾಗು ಅದರ ಸ್ಟೈಲಿಂಗ್ ಆಕರ್ಷಕವಾಗಿಲ್ಲ. ನಮಗೆ ಕಂಡುಬಂದ ನೋಟದಲ್ಲಿನ ಹಿನ್ನಡತೆ ಎಂದರೆ ಅದು ಫೆಂಡರ್ ಮೇಲೆ ಇರುವ ಸ್ಟಿಕರ್ ಅದು 'ಎಲೆಕ್ಟ್ರಿಕ್ ' ಎಂದು ಘೋಷಿಸುತ್ತದೆ , ಅವುಗಳು ಫ್ರಿಡ್ಜ್ ಮ್ಯಾಗ್ನೆಟ್ ತರಹ ಇವೆ.
ಅಳತೆಗಳ ವಿಚಾರಕ್ಕೆ ಬಂದರೆ, ಅದು ಕೋನ ಗಿಂತ ಹೆಚ್ಚು ದೊಡ್ಡದಾಗಿದೆ, ವೀಲ್ ಬೇಸ್ ಹೊರತಾಗಿ. ಆದರೆ , ಕೋನ ಸ್ಟೈಲಿಂಗ್ ಸ್ವಲ್ಪ ಹೆಚ್ಚು ಆಕರ್ಷಕವಾಗಿದೆ ಎನ್ನಬಹುದು ZS EV ನಯವಾಗಿದೆ ಹಾಗು ಯುರೋಪಿಯನ್ ಶೈಲಿ ಹೊಂದಿದೆ. ಆಕ್ವಾ ಬ್ಲೂ ಬಣ್ಣದ ಹೊರತಾಗಿ ನೀವು MG ಜಾಹಿರಾತಿನಲ್ಲಿ ನೋಡಿದಂತೆ , ನೀವು ಕೆಂಪು ಅಥವಾ ಬಿಳಿ ಯನ್ನು ಪಡೆಯಬಹುದು.
Dimensions | Kona EV | ZS EV |
Length | 4180mm | 4314mm |
Width | 1800mm | 1809mm |
Height | 1570mm | 1644mm |
Wheelbase | 2600mm | 2585mm |
ಅದು ಹೆಚ್ಚು ಹೊಳೆಯುವಿಕೆಯಿಂದ ದೂರ ನಿಲ್ಲುತ್ತದೆ. ಹೌದು ನೀವು ಪಡಯುತ್ತಿರಿ LED DRL ಗಳು ಹಾಗು ವಿಂಡ್ ಮಿಲ್ ಶೈಲಿಯ 17-ಇಂಚು ಅಲಾಯ್ ವೀಲ್ ಗಳು, ಆದರೆ ಅವುಗಳನ್ನು ಸೂಕ್ಷ್ಮವಾಗಿ ಅಳವಡಿಸಲಾಗಿದೆ ಮತ್ತು ZS EV ನ ಸರಳ ಶೈಲಿಯ ಡಿಸೈನ್ ಅನ್ನು ಮೆಚ್ಚುವಂತೆ ಮಾಡುತ್ತದೆ. ಕೋನ EV ಯಂತೆ , ನೀವು ಪಡೆಯುತ್ತೀರಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಕೂಡ. ಆದರೆ MG ಹ್ಯಾಲೊಜೆನ್ ಗಳೊಂದಿಗೆ ನಿಭಾಯಿಸುತ್ತದೆ ಹಾಗು ಕೋನ ಪಡೆಯುತ್ತದೆ LED ಗಳು.
ನಿಮಗೆ ಒಂದು ''ನನ್ನನು ನೋಡು , ನಾನು ಎಲೆಕ್ಟ್ರಿಕ್ ''! ಎನ್ನುವಂತೆ ಕಾಣುವ SUV ಬೇಕೆಂದರೆ ZS EV ನಿಮಗಾಗಿ ಅಲ್ಲ. ಅದು ಸರಳವಾಗಿ ಹಾಗು ಆಕರ್ಷಕವಾಗಿ ಇದೆ ಯಾವುದೇ ಪೆಟ್ರೋಲ್/ಡೀಸೆಲ್ SUV ಗಳಂತೆ. ಆದರೆ ಅದು ಇತರ ಸಾಮಾನ್ಯ ರೂ 20 ಲಕ್ಷ SUV ಗಳಂತೆ ಇರುವುದಿಲ್ಲ, ನೀವು ನೋಡುಗರ ಕುತುಹೂಲ ಭರಿತ ಪ್ರಶ್ನೆಗಳಿಗೆ ತಯಾರಿರಬೇಕಾಗುತ್ತದೆ. ಬಹಳಷ್ಟು ರೀತಿಯಲ್ಲಿ ಇದು VW ಟಿಯಾಗುನ್ ತರಹ ಇದೆ. ಅಂದರೆ ದುಬಾರಿ SUV ಆದರೆ ನೋಟದಲ್ಲಿ ಹೆಚ್ಚು ಅಳತೆ ಹೊಂದಿಲ್ಲ ಅಥವಾ ಹೆಚ್ಚು ಸ್ಟೈಲಿಂಗ್ ಪಡೆದಿಲ್ಲ. ಹಾಗು ಇದು ಒಂದೇ ವಿಚಾರ ಅಲ್ಲ ವೋಕ್ಸ್ವ್ಯಾಗನ್ ನಂತೆ ಕಂಡುಬರುವುದು.
ಇಂಟೀರಿಯರ್
ನಾವು ಮೊದಲಿಗೆ MG ಹೆಕ್ಟರ್ ಡ್ರೈವ್ ಮಾಡಿದೆವು, ನಮಗೆ ಇಷ್ಟವಾಗದಿದ್ದ ವಿಚಾರವೆಂದರೆ ಅದು ಕ್ಯಾಬಿನ್ ನಲ್ಲಿ ಬಳಸಲಾದ ವಸ್ತುಗಳ ಗುಣಮಟ್ಟ. ಅದು ಹೆಚ್ಚು ಐಷಾರಾಮಿ ಆಗಿ ಅನುಭವವಾಗಲಿಲ್ಲ. ZS EV ನೋಡಲು ಹಾಗು ಅಂತರಿಕಗಳಲ್ಲೂ ಸಹ ಪ್ರೀಮಿಯಂ ಆಗಿ ಕಂಡುಬರುತ್ತದೆ. ಪೂರ್ಣ ಕಪ್ಪು ಕ್ಯಾಬಿನ್ ಸಿಲ್ವರ್ ಹೈಲೈಟ್ ಗಳಿಂದ ಬಿನ್ನವಾಗಿರುವಂತೆ ಮಾಡಲಾಗಿದೆ ಹಾಗು ಆಕರ್ಷಕವಾಗಿದೆ. ಬಹಳಷ್ಟು ಮೆತ್ತಗಿನ ತುಣುಕುಗಳನ್ನು ಕ್ಯಾಬಿನ್ ನಲ್ಲಿ ಹರಡಲಾಗಿದೆ, ಸ್ಟ್ಯಾಂಡರ್ಡ್ ಡ್ಯಾಶ್ ಬೋರ್ಡ್ ಸೇರಿ.
ನಾವು ಇದನ್ನು ವೋಕ್ಸ್ವ್ಯಾಗನ್ ಗೆ ಏಕೆ ಹೋಲಿಸುತ್ತೇವೆ ಎಂದರೆ ಅದ್ರ ಟ್ರಿಮ್ ಪ್ಲಾಸ್ಟಿಕ್ ಗಳು, ಸ್ಟಿಯರಿಂಗ್ ವೀಲ್, ಟಿಲ್ಟ್ ಅಳವಡಿಕೆ ಹಾಗು ಸ್ಟಿಯರಿಂಗ್ ಮೌಂಟೆಡ್ ಬಟನ್ ಗಳು ಎಲ್ಲವು ನಾವು VW ಕಾರ್ ಗಳಲ್ಲಿ ನೋಡಿದ ಹಾಗೆ ಇದೆ, ಅದು ಮೆಚ್ಚುವಂತಹ ವಿಷಯವಾಗಿದೆ. ಡ್ಯಾಶ್ ಬೋರ್ಡ್ ನಲ್ಲಿ ಫೀಚರ್ ಗಳಾದ ಟರ್ಬೈನ್ ಶೈಲಿಯ AC ವೆಂಟ್ ಗಳು, ನಾವು ಆಡಿ A3 ಯಲ್ಲಿ ನೋಡಿದ ಹಾಗೆ ಇದೆ. ಹೆಚ್ಚುವರಿಯಾಗಿ , ಡಯಲ್ ಗೇರ್ ಸೆಲೆಕ್ಟರ್ ಹಾಗು ಡ್ರೈವ್ ಟೊಗ್ಗಲ್ ಗಳು ಅದನ್ನು ಬಹಳಷ್ಟು ಮಟ್ಟಿಗೆ ಮೆರ್ಸೆಡಿಸ್ ಬೆಂಜ್ ತರಹ ಕಾಣುವಂತೆ ಮಾಡುತ್ತದೆ. ಅವುಗಳು ಹೆಚ್ಚು ಪ್ರೀಮಿಯಂ ಆಗಿವೆ ಕೂಡ.
ಪ್ರಮುಖ ಭಿನ್ನತೆ ಕೋನ ಗೆ ಹೋಲಿಸಿದರೆ ಎಂದರೆ ಅದು, ಹೆಚ್ಚು ಎತ್ತರವಾಗಿದೆ ಹಾಗು ಡ್ರೈವಿಂಗ್ ಭಂಗಿ ಉತ್ತಮವಾಗಿರುತ್ತದೆ. ZS EV ನಲ್ಲಿ, ನಿಮಗೆ ಅನಿಸುತ್ತದೆ ನೀವು ದೊಡ್ಡ SUV ನಲ್ಲಿರುವಂತೆ ಹಾಗು ಬಾನೆಟ್ ಚೆನ್ನಾಗಿ ಕಾಣುತ್ತದೆ. ಅದು ಹೆಚ್ಚು SUV ತರಹ ಇದೆ ನಿಮಗೆ ಸುಲಭವಾಗಿ ಒಳಗೆ ಬರಲು ಹಾಗೂ ಹೊರಗೆ ಹೋಗಲು ಅನುಕೂಲವಾಗುವಂತೆ, ಏಕೆಂದರೆ ಇದರಲ್ಲಿ ಕೋನದಲ್ಲಿರುವಂತೆ ಸೀಟ್ ನಲ್ಲಿ ಕುಸಿದ ಹಾಗೆ ಅನುಭಾವವಾಗುವುದಿಲ್ಲ.
ಇದು ಕೋನ ಗಿಂತ ಉತ್ತಮವಾಗಿದೆ ಏದೆನಿಸುತ್ತದೆ , ಹಿಂಬದಿ ಸೀಟ್ ವಿಶಾಲತೆ ವಿಚಾರದಲ್ಲಿ. ಹೌದು, ಅದನ್ನು ನಾಲ್ಕು ಸೀಟೆರ್ ಆಗಿ ಬಳಸಿದರೆ ಉತ್ತಮವಾಗಿರುತ್ತದೆ ಐದು ಸೀಟೆರ್ ಆಗಿ ಅಲ್ಲ. ಆದರೆ ಇಬ್ಬರು ಆರು ಅಡಿ ಮನುಷ್ಯರು ಒಬ್ಬರ ಹಿಂದೆ ಒಬ್ಬರು ಕುಳಿತುಕೊಳ್ಳಬಹುದು ಹಾಗು ಹಿಂಬದಿ ಪ್ಯಾಸೆಂಜರ್ ಗೆ ಮೊಣಕಾಲಿಗೆ ಸಹ ಉತ್ತಮ ಅವಕಾಶ ಇರುತ್ತದೆ. ಇದು ಹೇಳಿದ ನಂತರ 6 ಅಡಿ ಗಿಂತಲೂ ಹೆಚ್ಚು ಇದ್ದಾರೆ ನಿಮಗೆ ಹೆಚ್ಚು ಹೆಡ್ ರೂಮ್ ಬೇಕೆನಿಸಬಹುದು (ಮುಂಬದಿ ಅಥವಾ ಹಿಂಬದಿ ಸಾಲು ). ಹಾಗು ಹೆಚ್ಚು ತೊಡೆಗಳಿಗಾಗಿ ಕೊಡಲಾದ ಬೆಂಬಲ ಹಿಂಬದಿ ಸೀಟ್ ಪ್ಯಾಸೆಂಜರ್ ಗೆ ಉತ್ತಮವಾಗಿರುತ್ತಿತ್ತು.
ಕುಟುಂಬ ಬಳಕೆಗಾರರಿಗೆ ಹೆಚ್ಚು ಬೂಟ್ ವಿಶಾಲತೆ ಇದೆ ಎಂದು ತಿಳಿಯಲು ಸಂತೋಷಿಸಬಹುದು. ZS EV ಯಲ್ಲಿ 445 ಲೀಟರ್ ಗಳು ಇದೆ vs 334 ಲೀಟರ್ ಗಳು ಕೋನ ದಲ್ಲಿದೆ. ಎರೆಡು ದೊಡ್ಡ ಸೂಟ್ ಕೇಸ್ ಗಳು ಅಥವಾ ಹಲವು ಟ್ರೋಲಿ ಬ್ಯಾಗ್ ಗಳನ್ನು ಸುಲಭವಾಗಿ ಇಡಬಹುದು. MG ಯವರು ಫ್ಲೋರ್ ಅನ್ನು ಇನ್ನು ಸ್ವಲ್ಪ ಕೆಳಮಟ್ಟಕ್ಕೆ ಇರಿಸಿ ಹೆಚ್ಚು ವಿಶಾಲತೆ ಕೊಡಬಹುದಿತ್ತು, ಏಕೆಂದರೆ ಸ್ಪೇರ್ ಟೈರ್ ಮೇಲೆ ಬಹಳಷ್ಟು ಜಾಗ ಇದ್ದು ಅದು ಉಪಯೋಗಕ್ಕೆ ಬರುವುದಿಲ್ಲ. ಇದ್ರ ಹೊರತಾಗಿ, ಕೋನ EV ಯಂತೆ, ನೀವು ಪಡೆಯುತ್ತೀರಿ 60:40 ಸ್ಪ್ಲಿಟ್ ಫೋಲ್ಡಿಂಗ್ ರೇರ್ ಸೀಟ್ ಅನ್ನು ಹೆಚ್ಚುವರಿ ಕಾರ್ಗೋ ವಿಶಾಲತೆಗಾಗಿ.
ಫೀಚರ್ ಗಳು ಹಾಗು ತಂತ್ರಜ್ಞಾನ
ZS EV ಕೊಡುತ್ತದೆ ಬಹಳಷ್ಟು ಉತ್ತಮ ಹಾಗು ಉತ್ಸುಕಭರಿತ ಪಟ್ಟಿ. ಚೆನ್ನಾಗಿದೆ - ನೀವು ಪಡೆಯುತ್ತೀರಿ 6-ವೆ ಪವರ್ ಅಳವಡಿಕೆಯ ಡ್ರೈವರ್ ಸೀಟ್, ಸ್ಮಾರ್ಟ್ ಕೀ ಜೊತೆಗೆ ಪುಶ್ ಬಟನ್ ಸ್ಟಾರ್ಟ್, 6-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಪಾಣಾರಾಮಿಕ್ ಸನ್ ರೂಫ್ ಹಾಗು ಒಂದು PM 2.5 ಏರ್ ಫಿಲ್ಟರ್ ಅನ್ನು ನಿಮಗೆ ಸುಲಭವಾಗಿ ಉಸಿರಾಡಲು ಅನುಕೂಲವಾಗುವಂತೆ.
ಹಾಗು , ಹೌದು, 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಒಂದಿಗೆ ) ಹೆಕ್ಟರ್ ನ (10.4-inch) ಗಿಂತಲೂ ಚಿಕ್ಕದಾಗಿದೆ. ಆದರೆ ಹೊಸ ಸಾಫ್ಟ್ ವೆರ್ ಕೊಡಲಾಗಿದ್ದು ಅದು ಗಮನಾರ್ಹವಾಗಿ ನಯವಾಗಿದೆ ಹಾಗು ಯಾವುದೇ ಹಿನ್ನಡರೆ ಹೊಂದುವುದಿಲ್ಲ (ರೇರ್ ಕ್ಯಾಮೆರಾ ಫೀಡ್ ನಲ್ಲಿ ಸ್ವಲ್ಪ ಎಳೆತ ಇತ್ತು ). ಹೆಕ್ಟರ್ ನಂತೆ, ನಿಮಗೆ iಸ್ಮಾರ್ಟ್ ಇಂಟರ್ನೆಟ್ ಲಿಂಕ್ ಇರುವ ಕನೆಕ್ಟೆಡ್ ಕಾರ್ ಫೀಚರ್ ಗಳು ಹಾಗು ಹೆಚ್ಚುವರಿಯಾಗಿ WiFi ಬೆಂಬಲ ಕೊಡಲಾಗಿದೆ. ಹಾಗಾಗಿ ಇಂಟಿಗ್ರೇಟೆಡ್ eSIM ಕಾರ್ ನಲ್ಲಿ ನೆಟ್ವರ್ಕ್ ಸಮಸ್ಯೆ ಹೊಂದಿದರೆ , ನೀವು ಬಾಹ್ಯ ಸಲಕರಣೆ ಉಪಯೋಗಿಸಬಹುದು (ಉದಾಹರಣೆಗೆ ಫೋನ್ ನ ಹಾಟ್ ಸ್ಪಾಟ್ ) ವೆಬ್ ಲಿಂಕ್ ಇರುವ ಸೇವೆಗಳಾದ ನೇವಿಗೇಶನ್ , ಗಾನ ಮ್ಯೂಸಿಕ್ ಸಂಯೋಜನೆ , ಅಕ್ಕ್ಯು ವೆಥೆರ್ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ.
ನಿಮಗೆ ಎಲ್ಲವು ಚೆನ್ನಾಗಿದೆ ಎನಿಸುವಾಗ ನಿಮಗೆ ಆಟೋ AC ಇಲ್ಲದಿರುವುದು ಕಂಡುಬರುತ್ತದೆ. ಇದರಲ್ಲಿ ರೇರ್ AC ವೆಂಟ್ ಗಳು ಸಹ ಕೊಡಲಾಗಿಲ್ಲ. ಹಾಗು ಸ್ಟಿಯರಿಂಗ್ ವೀಲ್ ಕೇವಲ ಟಿಲ್ಟ್ ಅಳವಡಿಕೆ ಪಡೆಯುತ್ತದೆ, ರೀಚ್ ಅಳವಡಿಕೆ ಮಿಸ್ ಆಗಿದೆ. ಇದರಲ್ಲಿ ಆಟೋ ಡಿಮಿಂಗ್ IRVM ಸಹ ಮಿಸ್ ಆಗಿದೆ, ಹೀಟೆಡ್ ಅಥವಾ ವೆಂಟಿಲೇಟೆಡ್ ಸೀಟ್ ಗಳು ಹಾಗು ರೇರ್ ಆರ್ಮ್ ರೆಸ್ಟ್ ಮಿಸ್ ಆಗಿದೆ, ಅವುಗಳನ್ನು ಕೋನ ಎಲೆಕ್ಟ್ರಿಕ್ ನಲ್ಲಿ ನೋಡಬಹುದು. ಇವುಗಳು ಕೊಂಡುಕೊಳ್ಳಲು ಹಿನ್ನಡತೆ ಮಾಡದಿರಬಹುದು ಆದರೆ ಆಶ್ಚರ್ಯಕರ ಮಿಸ್ ಗಳು ಎನಿಸುತ್ತದೆ ನೀವು ರೂ 20 ಲಕ್ಷ ಕೊಡುತ್ತಿರಬೇಕಾದರೆ.
Unique To MG ZS EV | Unique To Hyundai Kona Electric |
PM 2.5 air filter | Auto AC |
iSmart connected car internet linked features | Telescopic Steering Adjustment |
Panoramic sunroof | Rear Armrest |
Auto Wipers | Auto-Dimming IRVM |
Heated & Ventilated Seats |
ಸುರಕ್ಷತೆ
MG ZS EV ಎರೆಡು ವೇರಿಯೆಂಟ್ ಗಳಲ್ಲಿ ಲಭ್ಯವಿದೆ , ಎಕ್ಸೈಟ್ ಹಾಗು ಎಕ್ಸ್ಕ್ಲೂಸಿವ್ , ಸುರಕ್ಷತೆ ಪ್ಯಾಕೇಜ್ ಬಹಳಷ್ಟು ಒಂದೇ ತರಹ ಇದೆ. ಆರು ಏರ್ಬ್ಯಾಗ್ ಗಳು, ABS ಜೊತೆಗೆ EBD, ISOFIX, ಹಿಲ್ ಅಸಿಸ್ಟ್ , ಹಿಲ್ ಡಿಸೆಂಟ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್ ಗಳು, ಹಾಗು ರೇರ್ ಕ್ಯಾಮೆರಾ ಗಳು ಸ್ಟ್ಯಾಂಡರ್ಡ್ ಆಗಿ ಲಭ್ಯವಿರುತ್ತದೆ. ಇತರ ಸ್ಟ್ಯಾಂಡರ್ಡ್ ವಿಷಯಗಳು ಎಂದರೆ ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರ್ ಹಾಗು ರೇರ್ ಫಾಗ್ ಲ್ಯಾಂಪ್. ಮುಂಬದಿ ಫಾಗ್ ಲ್ಯಾಂಪ್ ಕೊಡಲಾಗಿಲ್ಲ, ಆಶ್ಚರ್ಯಕರವಾಗಿ
ಕೊನೆಯದಾಗಿ ಹಾಗು ಮುಖ್ಯವಾಗಿ , MG ZS EV ಪಡೆದಿದೆ ಔರ್ನ 5- ಸ್ಟಾರ್ ರೇಟಿಂಗ್ ಯುರೋ NCAP ಕ್ರ್ಯಾಶ್ ಟೆಸ್ಟ್ ಗಳಲ್ಲಿ. ಆದರೆ, ಪರೀಕ್ಷಿಸಲ್ಪಟ್ಟ ಕಾರ್ ನಲ್ಲಿ ರೇಡಾರ್ ಗೈಡ್ ಇರುವ ಫೀಚರ್ ಗಳಾದ ಆಟೋ ಎಮೆರ್ಜೆನ್ಸಿ ಬ್ರೇಕಿಂಗ್ ಹಾಗು ಲೇನ್ -ಅಸಿಸ್ಟ್ ಕೊಡಲಾಗಿದೆ ಇಂಡಿಯಾ ಸ್ಪೆಕ್ ಕಾರ್ ಅದನ್ನು ಪಡೆಯುವುದಿಲ್ಲ.
ಕಾರ್ಯಕ್ಷಮತೆ
ARAI ನಿಂದ ದೃಡೀಕರಿಸಲಾದಂತೆ MG ZS EV ಸುಮಾರು 340km ವ್ಯಾಪ್ತಿಯನ್ನು ಕ್ರಮಿಸುತ್ತದೆ ಪೂರ್ಣ ಚಾರ್ಜ್ ಒಂದಿಗೆ. ನಾವು ಅದನ್ನು 250-300km ಗೆ ಇಳಿಸಬಹುದು ನೈಜ ಉಪಯೋಗದಲ್ಲಿ . ಅದು ಈಗಲೂ ಉತ್ತಮವಾಗಿದೆ ವಾರದ ಆಫೀಸ್ ಗೆ ಹೋಗಿ ಬರುತ್ತಿರುವುದಕ್ಕೆ. ಅದು ಸಾಕಾಗದಿದ್ದರೆ ನೀವು ಮನೆಯಲ್ಲಿ ರಾತ್ರಿ ಹೊತ್ತು ಚಾರ್ಜ್ ಮಾಡಿದರೆ ಸಾಕು. ನಿಮಗೆ ಚಾರ್ಜ್ ಮಾಡಲು ಪೂರ್ಣ ರಾತ್ರಿ ವೇಳೆ ಲಭ್ಯವಿರದಿದ್ದರೂ ನಿಮಗೆ ಕೇವಲ 2-3 ಗಂಟೆ ಸಮಯ ಇದ್ದರೂ , ನೀವು ಆ ಚಾರ್ಜ್ ನಲ್ಲಿ 100 ಕಿಲೋಮೀಟರು ವ್ಯಾಪ್ತಿ ಕ್ರಮಿಸಬಹುದು. ಪ್ರತಿ ಬಾರಿ ಇಂಧನ ಭರಿಸುವುದು ಪೂರ್ಣ ಟ್ಯಾಂಕ್ ಆಗಿರಬೇಕಾಗಿಲ್ಲ, ಹಾಗೆಯೆ ಪ್ರತಿ ಬಾರಿ ಚಾರ್ಜ್ ಸಹ ಶೇಕಡಾ 100 ಆಗಬೇಕಾಗಿಲ್ಲ.
EV ಗಳಲ್ಲಿನ ಅನುಕೂಲತೆ ಎಂದರೆ , ನೀವು ಬಳಸುವಾಗ , ಸ್ವಲ್ಪ km ಗಳನ್ನು ಕುಡಿಸಬಹುದು ಚಾರ್ಜ್ ಮಾಡದೇ. ಬ್ರೇಕ್ ಎನೆರ್ಜಿ ರಿಜೆನರೇಷನ್ (ಕೀನೆಟಿಕ್ ಎನರ್ಜಿ ರಿಜೆನೆರೇಷನ್ ಸಿಸ್ಟಮ್ ಅಥವಾ KERS ಗಳು MG ಯಲ್ಲಿ ಹೇಳುವಂತೆ ) ನಿಮಗೆ ಹೆಚ್ಚು ವ್ಯಾಪ್ತಿ ಸೇರಿಸಲು ಅನುಕೂಲವಾಗುತ್ತದೆ ನೀವು ಇಳಿಜಾರು ಇಳಿಯುವಾಗ ಅಥವಾ ಹತ್ತುವಾಗ. ZS EV ನಲ್ಲಿ ಮೂರು ಪದರಗಳು ಇವೆ , ಮೂರನೆಯದು ಹೆಚ್ಚು ಸದೃಢವಾಗಿದೆ. ಮೂರನೇ ಲೆವೆಲ್ ಅನ್ನು ಇಳಿಜಾರಿನಲ್ಲಿ ಇಳಿಯುವಾಗ ಬಳಸಲು ಶಿಫಾರಸು ಮಾಡಲಾಗಿದ್ದರೂ , ನಾವು ಅದನ್ನು ಹೈವೇ ಗಳಲ್ಲಿ ಪರೀಕ್ಷಿಸಿದೆವು ಹಾಗು ಉತ್ತಮ ಉಪಯುಕ್ತತೆ ಹೊಂದಿದೆ ಎಂದು ತೋರಿಬಂತು. ಪ್ರತಿರೋಧಕೊಡಲಾಗಿರುವುದು ನಯವಾಗಿದ್ದಿತು ಹಾಗು ನಿರ್ವಹಿಸಲು ಅನುಕೂಲವಾಗುವಂತೆ ಇತ್ತು, ಕೋನ EV ಗೆ ಹೋಲಿಸಿದರೆ, ಅಲ್ಲಿ ಮೂರನೇ ಲೆವೆಲ್ ಹೆಚ್ಚು ಅನುಕೂಲವಾಗಿರುತ್ತದೆ. ಹಾಗು ಕೋನ EV ಯಲ್ಲಿ ಸ್ಟಿಯರಿಂಗ್ ಪಡ್ಡೆಲ್ ಅನ್ನು ರೆಜೆನೆರೇಷನ್ ಲೆವೆಲ್ ನಿಯಂತ್ರಣ ಮಾಡಲು ಅನುಕೂಲವಾಗುವಂತೆ ಕೊಡಲಾಗಿದೆ, ಅದರಂತೆ ZS EV ಯಲ್ಲಿ ಟ್ಯಾಗ್ಗಲ್ ಸ್ವಿಚ್ ಕೊಡಲಾಗಿದೆ.
ನಿಮಗೆ ಡ್ರೈವ್ ಮೋಡ್ ಗಳು ಸಹ ದೊರೆಯುತ್ತದೆ MG ZS EV (ಎಕೋ , ನಾರ್ಮಲ್, ಹಾಗು ಸ್ಪೋರ್ಟ್ ) ಗಳು ಹಾಗು ಮೋಡ್ ಗಳು ಆಕ್ಸಿಲರೇಟರ್ ಪ್ರತಿಕ್ರಿಯೆ ಮೇಲೆ ಪರಿಣಾಮ ಬೀರಿದರೂ , ಎಕೋ ಮೋಡ್ ಸ್ವಲ್ಪ ಬಹುಮುಖ ಉಪಯುಕ್ತತೆ ಪಡೆದಿದೆ. ನೀವು 60-80kmph ವೇಗದಲ್ಲಿ ಹೈವೇ ಗಳಲ್ಲಿ ಹೋಗುತ್ತಿದ್ದರೂ ಎಕೋ ಮೋಡ್ ನಿಮಗೆ ಹೆಚ್ಚು ಶಕ್ತಿ ಕೊಡುತ್ತದೆ ಹಾಗು ಎಳೆಯುವಂತೆ ಭಾಸವಾಗುವುದಿಲ್ಲ.
Kona EV | ZS EV | |
Battery | 39.2kWh | 44.5kWh |
Range (ARAI) | 452km | 340km |
Power | 136PS | 143PS |
Torque | 395Nm | 353Nm |
0-100kmph | 9.7s | 8.5s |
ನಗರಗಳಲ್ಲಿ, ZS EV ಬಳಸಲು ಸುಲಭವಾಗಿದೆ. ನಯವಾದ ವೇಗಗತಿ ಹೆಚ್ಚಿಸುವಿಕೆ ನಿಮಗೆ ಟ್ರಾಫಿಕ್ ನಲ್ಲಿ ನಿಭಾಯಿಸಲು ಸಹಕಾರಿಯಾಗಿದೆ ಆದರೆ ಒಮ್ಮೆ ಪೆಡಲ್ ಒತ್ತಿದರೆ ನೀವು ಶೀಘ್ರವಾಗಿ ಅಂತರಗಳನ್ನು ಕಡಿಮೆ ಗೊಳಿಸಬಹುದು. ವೇಗಗತಿಗಳ ಹೊರತಾಗಿ, ZS EV ಇಂದ ಓವರ್ಟೇಕ್ ಮಾಡಲಿ ನೀವು ಯಾವುದೇ ಯೋಜನೆ ಮಾಡುವ ಅವಶ್ಯಕತೆ ಇರುವುದಿಲ್ಲ . ಅದು ಎಲೆಕ್ಟ್ರಿಕ್ ಕಾರ್ ಗಳ ಮೆಚ್ಚುಗೆ ಪಡೆಯುವಂತಹ ವಿಚಾರವಾಗಿದೆ. ಏಕೆಂದರೆ 353Nm ಟಾರ್ಕ್ ಸುಲಭವಾಗಿ ಉಪಯೋಗಕ್ಕೆ ಲಭ್ಯವಿರುತ್ತದೆ.
ಸ್ಪೋರ್ಟ್ಸ್ ಮೋಡ್ ಗೆ ಬನ್ನಿರಿ ಅದು ನಗರದಲ್ಲಿನ ಉಪಯೋಗಕ್ಕೆ ಉತ್ಸುಕವಾಗಿರುತ್ತದೆ. ವಾಸ್ತವದಲ್ಲಿ, ಸ್ಪೋರ್ಟ್ ಮೋಡ್ ನಲ್ಲಿ, ತ್ರೋಟಲ್ ಪೆಡಲ್ ಅನ್ನು ಹೆಚ್ಚು ಒತ್ತುವುದು ಹೆಚ್ಚು ಟಾರ್ಕ್ ಭರಿತ ಸ್ಟಿಯರಿಂಗ್ ಅನ್ನು 70kmph ನಲ್ಲೂ ಕೊಡುತ್ತದೆ. ಉತ್ತಮ ಭಾಗವೆಂದರೆ ಟಾರ್ಕ್ ಹೊರಸೂಸುವಿಕೆ ನಾಲ್ಕು ಜನ ಕುಳಿತಿರುವಾಗಲು ಸಹ ಉತ್ಸುಕವಾಗಿರುತ್ತದೆ. ಕಾರ್ಯದಕ್ಷತೆ ವಿಚಾರದಲ್ಲಿ, ZS EV ಬಳಸಲು ಸುಲಭವಾಗಿದೆ ಹಾಗು ನಿಮಗೆ ಬೇಕಾದಾಗ ಉತ್ಸಾಹಭರಿತವಾಗಿದೆ ಸಹ.
ಇದು ಬಳಸಲು ಸಹ ಹೆಚ್ಚು ಶಬ್ದ ಹೊರಸೂಸುವುದಿಲ್ಲ ಹಾಗು ಕ್ರೂಸ್ ಮಾಡುವಾಗ ಶಾಂತವಾಗಿರುತ್ತದೆ ಕೂಡ. ಇದು ಹೇಳಿದ ನಂತರ ಎಂಜಿನ್ ಶಬ್ದ ಕೇಳಿಬರುವುದಿಲ್ಲ, ಕ್ಯಾಬಿನ್ ಒಳಗೆ ಬರುವ ಹೊರಗಿನ ಶಬ್ದವನ್ನು ಸುಲಭವಾಗಿ ಗ್ರಹಿಸಬಹುದು. ಆದರೂ, ನಿವು ಅದನ್ನು ಮ್ಯೂಸಿಕ್ ಪ್ಲೇಯರ್ ಉಪಯೋಗಿಸುವುದರಿಂದ ಸರಿಪಡಿಸಬಹುದು.
ರೈಡ್ ಹಾಗು ಹ್ಯಾಂಡಲಿಂಗ್
ZS EV ನ ರೈಡ್ ಹಾಗು ಹ್ಯಾಂಡಲಿಂಗ್ ಪ್ಯಾಕೇಜ್ ಬಹಳಷ್ಟು ಮಟ್ಟಿಗೆ ಸ್ಕೊಡಾ ಕೊಡಿಯಾಕ್ ಅನ್ನು ಹೋಲುತ್ತದೆ. ಅದು ಚಿಕ್ಕ ಪಾಟ್ ಹೋಲ್ ಮೇಲೆ ಕ್ರ್ಯಾಶ್ ಆಗದಿದ್ದರೂ , ನೀವು ಅದನ್ನು ಕ್ಯಾಬಿನ್ ನಲ್ಲಿ ಕೇಳಬಹುದು ಹಾಗು ಅನುಭವಿಸಬಹುದು. ನೀವು ಹಾಳಾದ ರಸ್ತೆಯಲ್ಲಿ ಫೋರ್ಡ್ ಎಂಡೇವರ್ ನಂತೆ ನುಗ್ಗಲು ಆಗುವುದಿಲ್ಲ ಏಕೆಂದರೆ ಅದು ಕಾಠಿಣ್ಯಕ್ಕೆ ಸೂಕ್ತವಾಗಿಲ್ಲ. ಹೈವೇ ಗಳಲ್ಲಿನ ಜೋಡಿಮಾಡುವಿಕೆಗಳ ಮೇಲೆ ಹೋಗುವಾಗಿನ ಶಬ್ದ ಸಹ ಕ್ಯಾಬಿನ್ ನಲ್ಲಿ ಕೇಳಿಬರುವುದು ಹಾಗು ಸ್ವಲ್ಪ ಬಾಡಿ ರೋಲ್ ಸಹ ಇರುತ್ತದೆ.
ಆದರೆ, ನೀವು ಅದನ್ನು ಸೂಕ್ಷ್ಮವಾಗಿ ಉಪಯೋಗಿಸುವ ಹಾಗೆ ಇರುವುದಿಲ್ಲ, ನಯವಾಗಿ ಇದ್ದಾರೆ ಸಾಕು. ಸರಿಯಿಲ್ಲದ ರಸ್ತೆಗಳಲ್ಲಿ ಮಧ್ಯಮ ವೇಗದಲ್ಲಿ ಚಲಿಸಿದರೆ ಸಾಕು. ಹಾಗು ಒಂದು ಎತ್ತರದ SUV ನಲ್ಲಿರುವಂತೆ ಬಾಡಿ ರೋಲ್ ನಿರೀಕ್ಷಿಸಬಹುದು. 161mm (ಎನ್ ಲಾಡೆನ್ ) ಗ್ರೌಂಡ್ ಕ್ಲಿಯರೆನ್ಸ್ ನಲ್ಲಿ, ಇದು ಒಂದು ಆಫ್ ರೋಡರ್ ಆಗಿಲ್ಲ ಹಾಗು ಅದು ಹುಂಡೈ ಕೋನ ಗಿಂತಲೂ 9mm ಕಡಿಮೆ ಇದೆ. ಅದು ಬಹಳಷ್ಟು ಅರ್ಬನ್ ಉಪಯೋಗಕ್ಕೆ ಲಭ್ಯವಿರುತ್ತದೆ ಹೆಚ್ಚು ತಡವರಿಕೆ ಇಲ್ಲದೆ. ನಾವು ಬಹಳಷ್ಟು ದೊಡ್ಡ ಸ್ಪೀಡ್ ಬ್ರೇಕರ್ ಗಳ ಮೇಲೆ ಡ್ರೈವ್ ಮಾಡಿದೆವು ಪೂರ್ಣ ಪ್ಯಾಸೆಂಜರ್ ಹಾಗು ಲಗೇಜ್ ಗಳೊಂದಿಗೆ ಹಾಗು ಅವುಗಳನ್ನು ಸುಲಭವಾಗಿ ಹಾದು ಹೋಗಲು ಅನುಕೂಲವಾಯಿತು.
ನಾವು ZS EV ವೇಗವನ್ನು ಪರೀಕ್ಷಿಸಿದರೂ ಸಹ ಅವುಗಳು ಬಹಳಷ್ಟು ನೇರವಾದ ರಸ್ತೆಯಲ್ಲಿ ಆಗಿದ್ದವು. ಹಾಗಾಗಿ ನಮ್ಮ ಹ್ಯಾಂಡಲಿಂಗ್ ನಲ್ಲಿ ಗಮನಿಸಲಾದ ಅಂಶಗಳನ್ನು ಮುಂದಿನ ದಿನಗಳಿಗೆ ಕಾದಿರಿಸಿದ್ದೇವೆ. ನಿಮಗೆ ಈಗ ತಿಳಿಯಬೇಕಾದ ವಿಷಯಗಳೆಂದರೆ ಅದು ತುಂಬಾ ನಯವಾಗಿದೆ ಹಾಗು ನಗರದ ವೇಗಗಳಲ್ಲಿ ಸುಲಭವಾಗಿದೆ ಮತ್ತು ಸ್ಟಿಯರಿಂಗ್ ಸಹ ಹೆಚ್ಚು ವೇಗಗಳಲ್ಲಿ ಸಹಕಾರಿಯಾಗಿದೆ.
ಚಾರ್ಜಿನ್ಗ್
MG ZS EV ಯ ಚಾರ್ಜಿನ್ಗ್ ಆಯ್ಕೆಗಳು vs ಕೋನ ಎಲೆಕ್ಟ್ರಿಕ್ ನ ಆಯ್ಕೆಗಳ ಹೋಲಿಕೆ ಕೊಡಲಾಗಿದೆ.
Kona EV | ZS EV | |
Charge Option 1 | DC fast charger - 57 minutes for 80% | DC fast charger - 50 minutes for 80% |
Charge Option 2 | Home AC charger - 6hr 10mins for 100 per cent | Home AC charger - 6-8 hours for 100 per cent |
Charge Option 3 | Portable charger - Approximately 19 hours for 100 per cent | Portable charger - Approximately 19 hours for 100 per cent |
ಗಮನಿಸಬಹುದಾದ ಕೆಲವು ವಿಷಯಗಳು
MG ನವರು DC ಫಾಸ್ಟ್ ಚಾರ್ಜ್ ಗಳನ್ನು ಭಾರತಾದ್ಯಂತ ಡೀಲೇರ್ಶಿಪ್ ಗಳಲ್ಲಿ ಕೊಡುತ್ತಾರೆ. ಈ ಚಾರ್ಜ್ ಪಾಯಿಂಟ್ ಗಳು ಒಂದು ಫೋರ್ಟಮ್ ಗೆ ಹೊಂದಿಕೊಂಡಿರುತ್ತದೆ ಹಾಗು ಯಾವುದೇ ಎಲೆಕ್ಟ್ರಿಕ್ ವಾಹನಗಳಿಗೆ ಅದನ್ನು ಬಳಸಬಹುದು (MG ಕಾರ್ ಗಳಿಗೆ ಸೀಮಿತವಾಗಿಲ್ಲ). ಅದನ್ನು ಬಳಸಲು ನೀವು ಆ ಫೋರ್ಟಮ್ ಅಪ್ ನಲ್ಲಿ ಧಾಖಲೆ ಮಾಡಿಕೊಳ್ಳಬೇಕು ಹಾಗು ಎಲ್ಲ ಪೇಮೆಂಟ್ ಗಳನ್ನು ನೇರವಾಗಿ ಅಪ್ ಮೂಲಕ ಮಾಡಲಾಗುವುದು. MG ಆಲೋಚನೆಯಂತೆ ಶೇಕಡಾ 80 ಚಾರ್ಜ್ ಮಾಡಲು ನಿಮಗೆ ರೂ 250-300! ಗಿಂತಲೂ ಹೆಚ್ಚು ಆಗುವುದಿಲ್ಲ.
ಒಂದು ಮನೆಯಲ್ಲಿನ ಬಳಕೆಯ AC ಚಾರ್ಜರ್ (7.4kW) ಅನ್ನು ನಿಮ್ಮ ಮನೆಯಲ್ಲಿ / ಕಚೇರಿಯಲ್ಲಿ MG ಇಂದ ಅಳವಡಿಸಲಾಗುವುದು, ಅದರ ಬೆಲೆ ಕಾರ್ ನ ಬೆಲೆಯಲ್ಲಿ ಸೇರಿಸಲಾಗಿರುತ್ತದೆ. ಈ ಚಾರ್ಜರ್ ಕಿ ಕಾರ್ಡ್ ಒಂದಿಗೆ ಬರುತ್ತದೆ ಚಾರ್ಜರ್ ಆಕ್ಟಿವೇಟ್ ಮಾಡಲು ಇತರರು ಅದನ್ನು ಬಳಸಲಾಗದಿರುವಂತೆ. ಹುಂಡೈ ನವರು ಸಹ ಹೀಗೆ 7.2kW ಚಾರ್ಜರ್ ಒಂದಿಗೆ ಮಾಡುತ್ತಾರೆ , ಎರೆಡರಲ್ಲೂ ಸಹ ಚಾರ್ಜ್ ಪಾಯಿಂಟ್ ಅನ್ನು ಸರಿಸಲು ಆಗುವುದಿಲ್ಲ. ಅದನ್ನು ನಿಮ್ಮ ಮನೆ / ಕಟ್ಟಡಕ್ಕೆ ವೈರಿಂಗ್ ಮಾಡಲಾಗಿರುತ್ತದೆ.
ಚಾರ್ಜಿನ್ಗ್ ಕಾರ್ ಗೆ ಲಾಕ್ ಆಗುತ್ತದೆ. ಅಂದರೆ ನೀವು ಚಾರ್ಜರ್ ಅನ್ನು ಪ್ಲಗ್ ಮಾಡಿದಾಗ , ನೀವು ಕಾರ್ ಅನ್ನು ಲಾಕ್ ಮಾಡಬೇಕಾಗುತ್ತದೆ ಚಾರ್ಜರ್ ಕೆಲಸ ಮಾಡಲು. ಒಮ್ಮೆ ಲಾಕ್ ಮಾಡಿದ ನಂತರ ಕಾರ್ ಅನ್ಲಾಕ್ ಆಗುವವರೆಗೂ ಗನ್ ಅನ್ನು ತೆಗೆಯಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಕಾರ್ ನ ಸುರಕ್ಷತೆ ಬಗ್ಗೆ ಚಿಂತಿಸಬೇಕಾಗಿಲ್ಲ.
DC ಫಾಸ್ಟ್ ಚಾರ್ಜಿನ್ಗ್ ಅನ್ನು ಪ್ರತಿ 4-5 AC ಚಾರ್ಜ್ ಸೈಕಲ್ ಗಳಿಗೆ ಒಮ್ಮೆ ಶಿಫಾರಸು ಮಾಡಲಾಗುತ್ತದೆ. ಹೆಚ್ಚು DC ಫಾಸ್ಟ್ ಚಾರ್ಜರ್ ಬಳಕೆ ಬ್ಯಾಟರಿ ಲೈಫ್ ಅನ್ನು ಕಡಿಮೆ ಗೊಳಿಸುತ್ತದೆ ದೂರದ ಉಪಯೋಗದಲ್ಲಿ.
ಪೋರ್ಟಬಲ್ ಚಾರ್ಜರ್ ಅನ್ನು ಯಾವುದೇ 15A ಪ್ಲಗ್ ಪಾಯಿಂಟ್ ಗೆ ಅಳವಡಿಸಬಹುದು.:
ಎಂಜಿ ಜೆಡ್‌ಎಸ್ ಇವಿ 2020-2022 car news
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್
ಮೊಡೆಲ್ ಇಯರ್ನ ಆಪ್ಡೇಟ್ ಕಾಮೆಟ್ ಇವಿಯಲ್ಲಿನ ವೇರಿಯೆಂಟ್-ವಾರು ಫೀಚರ್ಗಳನ್ನು ಮರುರೂಪಿಸುತ್ತದೆ, ಕೆಲವು ವೇರಿಯೆಂಟ್ಗಳಿಗೆ ಬೆಲೆಗಳನ್ನು 27,000 ರೂ.ಗಳವರೆಗೆ ಹೆಚ್ಚಿಸಲಾಗಿದೆ
By dipanMar 20, 2025ಜನವರಿ 17 ರ ಮೊದಲು ಎಸ್ಯುವಿ ಕಾಯ್ದಿರಿಸಿದ ಗ್ರಾಹಕರಿಗೆ ಇದು ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿರುತ್ತದೆ
By rohitJan 24, 2020ಎಂಜಿ ಮೋಟಾರ್ ಝಡ್ಎಸ್ ಇವಿ ಬ್ಯಾಟರಿ ಪ್ಯಾಕ್ನಲ್ಲಿ 8 ವರ್ಷ / 1.50 ಲಕ್ಷ ಕಿಲೋಮೀಟರ್ ಖಾತರಿಯನ್ನು ಸಹ ನೀಡುತ್ತದೆ
By dhruv attriJan 04, 2020ಪೂರ್ಣ ಅಂಕಗಳನ್ನು ಗಳಿಸಿದ ಯುರೋ-ಸ್ಪೆಕ್ ಝಡ್ಎಸ್ ಇವಿ ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುತ್ತದೆ
By rohitJan 02, 2020ಕಾರ್ ಮೇಕರ್ ಬ್ಯಾಟರಿ ಜೋಡಿಸುವ ಕಾರ್ಯಗಾರಗಳನ್ನು ಮುಂದಿನ ಎರೆಡು ವರ್ಷದಲ್ಲಿ ಸಂಯೋಜಿಸಬಹುದು
By dhruv attriNov 22, 2019