• ಹುಂಡೈ ವೆರ್ನಾ ಮುಂಭಾಗ left side image
1/1
  • Hyundai Verna
    + 61ಚಿತ್ರಗಳು
  • Hyundai Verna
  • Hyundai Verna
    + 8ಬಣ್ಣಗಳು
  • Hyundai Verna

ಹುಂಡೈ ವೆರ್ನಾ

. ಹುಂಡೈ ವೆರ್ನಾ Price starts from ₹ 11 ಲಕ್ಷ & top model price goes upto ₹ 17.42 ಲಕ್ಷ. It offers 14 variants in the 1482 cc & 1497 cc engine options. This car is available in ಪೆಟ್ರೋಲ್ option with both ಮ್ಯಾನುಯಲ್‌ & ಆಟೋಮ್ಯಾಟಿಕ್‌ transmission. It's . This model has 6 safety airbags. This model is available in 9 colours.
change car
438 ವಿರ್ಮಶೆಗಳುrate & win ₹ 1000
Rs.11 - 17.42 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ವೀಕ್ಷಿಸಿ Holi ಕೊಡುಗೆಗಳು
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಹುಂಡೈ ವೆರ್ನಾ ನ ಪ್ರಮುಖ ಸ್ಪೆಕ್ಸ್

engine1482 cc - 1497 cc
ಪವರ್113.18 - 157.57 ಬಿಹೆಚ್ ಪಿ
torque253 Nm - 143.8 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage18.6 ಗೆ 20.6 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
wireless android auto/apple carplay
adas
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಟೈರ್ ಪ್ರೆಶರ್ ಮಾನಿಟರ್
wireless charger
ಸನ್ರೂಫ್
powered ಚಾಲಕ seat
ವೆಂಟಿಲೇಟೆಡ್ ಸೀಟ್‌ಗಳು
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ವೆರ್ನಾ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಈ ಫೆಬ್ರವರಿಯಲ್ಲಿ ಹ್ಯುಂಡೈ ವೆರ್ನಾದ ಮೇಲೆ 35,000 ರೂ.ವರೆಗಿನ ರಿಯಾಯಿತಿಗಳನ್ನು ಪಡೆಯಿರಿ. 

ಬೆಲೆ: ದೆಹಲಿಯಲ್ಲಿ ಹ್ಯುಂಡೈ ವೆರ್ನಾದ ಎಕ್ಸ್ ಶೋ ರೂಂ ಬೆಲೆಗಳು 11 ಲಕ್ಷ ರೂ.ನಿಂದ ಪ್ರಾರಂಭವಾಗಿ 17.42 ಲಕ್ಷ ರೂ.ವರೆಗೆ ಇರಲಿದೆ.

ಆವೃತ್ತಿಗಳು: ಈ  ಕಾಂಪ್ಯಾಕ್ಟ್ ಸೆಡಾನ್ ಅನ್ನು 4 ವಿಶಾಲವಾದ ವೇರಿಯೆಂಟ್‌ಗಳಲ್ಲಿ ನಾವು ಖರೀದಿಸಬಹುದು. EX, S, SX ಮತ್ತು SX(O).

ಬೂಟ್ ಸ್ಪೇಸ್: ಇದು 528 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದೆ.

ಬಣ್ಣಗಳು: ನೀವು ಇದರ ಬಣ್ಣಗಳ ಆಯ್ಕೆಯನ್ನು ಗಮನಿಸುವಾಗ, ನಾವು ಇದನ್ನು ಟೈಟಾನ್ ಗ್ರೇ, ಟೆಲ್ಲೂರಿಯನ್ ಬ್ರೌನ್, ಟೈಫೂನ್ ಸಿಲ್ವರ್, ಫಿಯರಿ ರೆಡ್, ಅಟ್ಲಾಸ್ ವೈಟ್, ಅಬಿಸ್ ಬ್ಲ್ಯಾಕ್, ಸ್ಟಾರಿ ನೈಟ್ ಎಂಬ 7 ಮೊನೊಟೋನ್ ಬಣ್ಣಗಳಲ್ಲಿ ಮತ್ತು ಅಟ್ಲಾಸ್ ವೈಟ್ ವಿತ್ ಬ್ಲ್ಯಾಕ್ ರೂಫ್ ಮತ್ತು ಫಿಯರಿ ರೆಡ್ ವಿತ್ ಬ್ಲ್ಯಾಕ್ ರೂಫ್ ಎಂಬ 2 ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. 

 ಎಂಜಿನ್ ಮತ್ತು ಗೇರ್‌ಬಾಕ್ಸ್‌: ಆರನೇ ತಲೆಮಾರಿನ ವೆರ್ನಾವು 2 ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದರಲ್ಲಿ ಮೊದಲನೆಯದು ಹೊಸ 1.5-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ (160 PS/253 Nm) 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ DCT ಯೊಂದಿಗೆ ಜೋಡಿಸಲಾಗಿದೆ. ಹಾಗೆಯೇ ಎರಡನೇಯ ಎಂಜಿನ್‌ ಆಗಿರುವ 1.5-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಯುನಿಟ್‌ (115 PS/144 Nm) ಇದನ್ನು 6-ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ತಂತ್ರಜ್ಞಾನಗಳು: ಇದರ ತಂತ್ರಜ್ಞಾನದ ಪಟ್ಟಿಯು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟೈಸ್ಡ್ ಡ್ರೈವರ್ ಡಿಸ್‌ಪ್ಲೇ ಒಳಗೊಂಡ ಡ್ಯುಯಲ್ ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್ ಅನ್ನು ಒಳಗೊಂಡಿದೆ. 

 ಇದು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್, ಸಿಂಗಲ್-ಪೇನ್ ಸನ್‌ರೂಫ್, ಏರ್ ಪ್ಯೂರಿಫೈಯರ್ ಮತ್ತು  ತಂಪಾಗಿಸುವ ಮತ್ತು ಬಿಸಿಯಾಗಿಸುವ ಸೌಕರ್ಯ ಹೊಂದಿರುವ ಮುಂಭಾಗದ ಸೀಟ್‌ಗಳನ್ನು ಸಹ ಪಡೆಯುತ್ತದೆ.

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು 6 ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು EBD ಜೊತೆಗೆ ABS ಅನ್ನು ಸ್ಟ್ಯಾಂಡರ್ಡ್‌ ಆಗಿ ಪಡೆಯುತ್ತದೆ. ಇದರ ಟಾಪ್‌-ಎಂಡ್‌ ವೇರಿಯೆಂಟ್‌ಗಳು ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ (ESC), ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್‌ನೊಂದಿಗೆ ಬರುತ್ತವೆ. ಮುಂದಕ್ಕೆ-ಘರ್ಷಣೆ ವಾರ್ನಿಂಗ್‌, ಬ್ಲೈಂಡ್-ಸ್ಪಾಟ್ ಎಚ್ಚರಿಕೆ, ಲೇನ್ ಕೀಪ್ ಅಸಿಸ್ಟ್, ಲೇನ್ ನಿರ್ಗಮನ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಹ್ಯುಂಡೈ ನೀಡುತ್ತಿದೆ.

 ಪ್ರತಿಸ್ಪರ್ಧಿಗಳು: ಹೊಸ ವೆರ್ನಾವು ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ.

ಮತ್ತಷ್ಟು ಓದು
ಹುಂಡೈ ವೆರ್ನಾ Brochure

ಡೌನ್ಲೋಡ್ the brochure to view detailed specs and features

download brochure
ಕರಪತ್ರವನ್ನು ಡೌನ್ಲೋಡ್ ಮಾಡಿ
ವೆರ್ನಾ ಇಎಕ್ಸ್(Base Model)1497 cc, ಮ್ಯಾನುಯಲ್‌, ಪೆಟ್ರೋಲ್, 18.6 ಕೆಎಂಪಿಎಲ್2 months waitingRs.11 ಲಕ್ಷ*
ವೆರ್ನಾ ಎಸ್‌1497 cc, ಮ್ಯಾನುಯಲ್‌, ಪೆಟ್ರೋಲ್, 18.6 ಕೆಎಂಪಿಎಲ್2 months waitingRs.11.99 ಲಕ್ಷ*
ವೆರ್ನಾ ಎಸ್‌ಎಕ್ಸ್1497 cc, ಮ್ಯಾನುಯಲ್‌, ಪೆಟ್ರೋಲ್, 18.6 ಕೆಎಂಪಿಎಲ್2 months waitingRs.13.02 ಲಕ್ಷ*
ವೆರ್ನಾ ಎಸ್‌ಎಕ್ಸ್‌ ಐವಿಟಿ1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.6 ಕೆಎಂಪಿಎಲ್2 months waitingRs.14.27 ಲಕ್ಷ*
ವೆರ್ನಾ ಎಸ್‌ಎಕ್ಸ್‌ ಒಪ್ಶನಲ್‌1497 cc, ಮ್ಯಾನುಯಲ್‌, ಪೆಟ್ರೋಲ್, 18.6 ಕೆಎಂಪಿಎಲ್2 months waitingRs.14.70 ಲಕ್ಷ*
ವೆರ್ನಾ ಹ್ಯುಂಡೈ ವೆನ್ಯೂ ಎಸ್‌ಎಕ್ಸ್ ಟರ್ಬೊ1482 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್2 months waitingRs.14.87 ಲಕ್ಷ*
ವೆರ್ನಾ ಎಸ್‌ಎಕ್ಸ್‌ ಟರ್ಬೊ ಡ್ಯುಯಲ್‌ ಟೋನ್‌1482 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್2 months waitingRs.14.87 ಲಕ್ಷ*
ವೆರ್ನಾ ಹ್ಯುಂಡೈ ವೆನ್ಯೂ ಎಸ್‌ಎಕ್ಸ್ ಆಪ್ಟ್ ಟರ್ಬೊ1482 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್2 months waitingRs.16.03 ಲಕ್ಷ*
ವೆರ್ನಾ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡ್ಯುಯಲ್‌ ಟೋನ್‌1482 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್2 months waitingRs.16.03 ಲಕ್ಷ*
ವೆರ್ನಾ ಎಸ್‌ಎಕ್ಸ್‌ ಟರ್ಬೊ ಡಿಸಿಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.6 ಕೆಎಂಪಿಎಲ್2 months waitingRs.16.12 ಲಕ್ಷ*
ವೆರ್ನಾ ಎಸ್‌ಎಕ್ಸ್‌ ಟರ್ಬೊ ಡಿಸಿಟಿ ಡ್ಯುಯಲ್‌ ಟೋನ್‌1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.6 ಕೆಎಂಪಿಎಲ್2 months waitingRs.16.12 ಲಕ್ಷ*
ವೆರ್ನಾ ಎಸ್‌ಎಕ್ಸ್‌ ಒಪ್ಶನಲ್‌ ಐವಿಟಿ1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.6 ಕೆಎಂಪಿಎಲ್2 months waitingRs.16.23 ಲಕ್ಷ*
ವೆರ್ನಾ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡಿಸಿಟಿ1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.6 ಕೆಎಂಪಿಎಲ್2 months waitingRs.17.42 ಲಕ್ಷ*
ವೆರ್ನಾ ಎಸ್‌ಎಕ್ಸ್‌ ಒಪ್ಶನಲ್‌ ಟರ್ಬೊ ಡಿಸಿಟಿ ಡ್ಯುಯಲ್‌ ಟೋನ್‌(Top Model)1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.6 ಕೆಎಂಪಿಎಲ್2 months waitingRs.17.42 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ವೆರ್ನಾ ಇದೇ ಕಾರುಗಳೊಂದಿಗೆ ಹೋಲಿಕೆ

ಹುಂಡೈ ವೆರ್ನಾ ವಿಮರ್ಶೆ

ಹ್ಯುಂಡೈ ವೆರ್ನಾ ಯಾವಾಗಲೂ ಜನಪ್ರಿಯ ಸೆಡಾನ್ ಆಗಿದೆ. ಅದು ತನ್ನ ಸಾಮರ್ಥ್ಯವನ್ನು ಹೊಂದಿದ್ದರೂ, ಅದು ಕೆಲವು ನ್ಯೂನತೆಗಳಿಂದಾಗಿ ಆಲ್ ರೌಂಡರ್ ಆಗಿರಲಾಗಿರಲಿಲ್ಲ.  ಹ್ಯುಂಡೈ ಈ ಹೊಸ  ವೆರ್ನಾದೊಂದಿಗೆ,  ನ್ಯೂನತೆಗಳನ್ನು ನಿವಾರಿಸಲು ಮತ್ತು ಅದನ್ನು ಸಮತೋಲಿತ ಸೆಡಾನ್ ಆಗಿಸಲು ಶ್ರಮಿಸಿದೆ. ಆದರೆ ಮಾರ್ಕ್ ಅದನ್ನು ಹಾಗೆ ನಿರ್ವಹಿಸಿದೆಯೇ? ಮತ್ತು ಹಾಗೆ ಮಾಡುವಾಗ ಅದು ಕೆಲವು ಹೊಂದಾಣಿಕೆಗಳನ್ನು ಮಾಡಿದೆಯೇ?

ಎಕ್ಸ್‌ಟೀರಿಯರ್

ಇದು _______  ಕಾಣುತ್ತದೆ. ನಾನು ಇಲ್ಲಿ ಜಾಗವನ್ನು ಖಾಲಿ ಬಿಡುತ್ತಿದ್ದೇನೆ ಏಕೆಂದರೆ ಇದೀಗ ನನಗೆ ಅದರ ಬಗ್ಗೆ ಯಾವುದೇ ಅಭಿಪ್ರಾಯವಿಲ್ಲ. ಕ್ರೆಟಾ ಮೊದಲು ಬಿಡುಗಡೆಯಾದಾಗ ನನಗೆ ಅದು ಇಷ್ಟವಾಗಿರಲಿಲ್ಲ. ಆದರೆ ನಂತರ ಅದು ಇಷ್ಟವಾಗುತ್ತಾ ಹೋಯಿತು. ಈಗ ವೆರ್ನಾ ಕೂಡ ಅದೇ ರೀತಿ ಆಗಿದೆ. ನಾನು ಹಿಂಭಾಗದಿಂದ ಮತ್ತು ವಿಶೇಷವಾಗಿ ಸೈಡ್‌ನಿಂದ ಹಿಂದಿನ ಭಾಗವವು ಕಾಣುವ ರೀತಿಯನ್ನು ಇಷ್ಟಪಡುತ್ತೇನೆ, ಆದರೆ ಮುಂಭಾಗವು ನನಗೆ ಇನ್ನೂ ಪ್ರಶ್ನಾರ್ಹವಾಗಿ ಉಳಿದಿದೆ.

ನೀವು ಇದನ್ನು ಇಷ್ಟಪಡುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ವೆರ್ನಾ ಉತ್ತಮ ರೋಡ್‌ ಪ್ರೆಸೆನ್ಸ್‌ನ್ನು ಹೊಂದಿದೆ. ಇದರಲ್ಲಿ ಬಳಸಿರುವ ಅಂಶಗಳಾದ ರೋಬೋ-ಕಾಪ್ ಎಲ್‌ಇಡಿ ಸ್ಟ್ರಿಪ್‌ನ ಪೈಲಟ್ ಲ್ಯಾಂಪ್ ಪಾರ್ಟ್‌, ಡಿಆರ್‌ಎಲ್ ನ ಪಾರ್ಟ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಉದ್ದವಾದ ಬಾನೆಟ್ ಈ ಸೆಡಾನ್ ಅನ್ನು ನೋಡುವಂತೆ ಮಾಡುತ್ತದೆ. ಇದರೊಂಂದಿಗೆ ಬದಿಯಲ್ಲಿ, ಬಲವಾದ ಬಾಡಿ ಲೈನ್‌ಗಳು ಮತ್ತು 16-ಇಂಚಿನ ಆಲಾಯ್‌ ವೀಲ್‌ಗಳು ಒಟ್ಟಾರೆ ವಿನ್ಯಾಸದ ಅಂದಕ್ಕೆ ಪೂರಕವಾಗಿವೆ.

ವೆರ್ನಾ ಈಗ ಮೊದಲಿಗಿಂತಲೂ ಉದ್ದವಾಗಿದೆ. ಇದು ಹೆಚ್ಚು ದೊಡ್ಡ ಗಾತ್ರದಲ್ಲಿ ಕಾಣಲು ಸಹಾಯ ಮಾಡುತ್ತದೆ. ವಿಶೇಷವಾಗಿ ಕೂಪ್ ತರಹದ ರೂಫ್‌ಲೈನ್ ಅನ್ನು ನೀಡಲಾಗಿದೆ, ಇದು ಉತ್ತಮವಾಗಿ ಕಾಣಲು ಉದ್ದವಾದ ಫ್ರೇಮ್ ನ ಹೊಂದಿದೆ. ವಿಸ್ತೃತ ವೀಲ್‌ಬೇಸ್ ಇದು ಒಟ್ಟಾರೆಯಾಗಿ ದೊಡ್ಡದಾಗಿ ಕಾಣಲು ಸಹಾಯ ಮಾಡುತ್ತದೆ ಮತ್ತು ಇದರೊಂದಿಗೆ, ಇದು ಮಿನಿ ಸೋನಾಟಾದಂತೆ ಕಾಣುತ್ತದೆ. ಇದು ನಾವೆಲ್ಲರೂ ಮೆಚ್ಚುವ ವಿನ್ಯಾಸದ ಸೆಡಾನ್ ಆಗಿದೆ.. 

ಮೊದಲೇ ಹೇಳಿದಂತೆ, ನಾನು ಇದರ ಹಿಂದಿನ ವಿನ್ಯಾಸವನ್ನು ಇಷ್ಟಪಡುತ್ತೇನೆ. ಟೈಲ್ ಲ್ಯಾಂಪ್‌ಗಾಗಿ ಪಾರದರ್ಶಕ ಕವಚ ಮತ್ತು ವೆರ್ನಾ ಹೆಸರನ್ನು ಬದಿಗಿಟ್ಟು, ಅದು ಕಾರಿನ ಅಗಲವನ್ನು ಒತ್ತಿಹೇಳುತ್ತದೆ ಮತ್ತು ರಾತ್ರಿಯಲ್ಲಿ, ಇದು ತುಂಬಾನೇ ಅಭೂತಪೂರ್ವ ಆಗಿ ಕಾಣುತ್ತದೆ.

ಪೆಟ್ರೋಲ್ ಮತ್ತು ಟರ್ಬೊ-ಪೆಟ್ರೋಲ್ ನಡುವೆ, ಕೆಲವು ವ್ಯತ್ಯಾಸಗಳಿವೆ. ಮುಂಭಾಗದಲ್ಲಿ, ಟರ್ಬೊ ಗ್ರಿಲ್‌ನ ಮೇಲ್ಭಾಗದಲ್ಲಿ ಹೆಚ್ಚುವರಿ ಗಾಳಿಯ ರವಾನೆಗೆ ಜಾಗವನ್ನು ನೀಡಲಾಗಿದೆ. ಅಲಾಯ್‌ ವೀಲ್‌ ಗಳು ಕಪ್ಪು ಬಣ್ಣದಲ್ಲಿ ಮತ್ತು ಮುಂಭಾಗದ ಬ್ರೇಕ್ ಕ್ಯಾಲಿಪರ್‌ಗಳನ್ನು ಕೆಂಪು ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದೆ. ಹಿಂಭಾಗದಲ್ಲಿ '1.5 ಟರ್ಬೊ' ಬ್ಯಾಡ್ಜ್ ಇದೆ ಮತ್ತು ನೀವು ಟರ್ಬೊ-ಡಿಸಿಟಿಯನ್ನು ಆರಿಸಿದರೆ, ನೀವು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಸಹ ಪಡೆಯುತ್ತೀರಿ. ಏಳು ಬಣ್ಣಗಳ ಕಾಂಬಿನೇಷನ್‌ನಲ್ಲಿ ನನ್ನ ಆಯ್ಕೆಯು ಸ್ಟಾರ್ರಿ ನೈಟ್ ಟರ್ಬೊ ಆಗಿದೆ. ಏಕೆಂದರೆ ಇದು ಬಣ್ಣದಲ್ಲಿ ನೀಲಿ ಛಾಯೆಯನ್ನು ಪಡೆಯುತ್ತದೆ ಮತ್ತು ಕೆಂಪು ಕ್ಯಾಲಿಪರ್‌ಗಳು ನಿಜವಾಗಿಯೂ ಕಪ್ಪು ಚಕ್ರಗಳ ಹಿಂದಿನಿಂದ ಎದ್ದು ಕಾಣುತ್ತದೆ.

ಇಂಟೀರಿಯರ್

ಇದು ಕ್ಲಾಸಿಯಾಗಿದೆ. ನೀವು ಸ್ಟ್ಯಾಂಡರ್ಡ್ ಪೆಟ್ರೋಲ್ ವೇರಿಯೆಂಟ್‌ಗಳನ್ನು ಹುಡುಕುತ್ತಿದ್ದರೆ, ಡ್ಯಾಶ್‌ಬೋರ್ಡ್ ಮತ್ತು ಸೀಟ್‌ಗಳಿಗಾಗಿ ನೀವು ಕ್ಲಾಸಿಯಾಗಿರುವ ಬಿಳಿ ಮತ್ತು ಮರಳು ಬಣ್ಣದ ಥೀಮ್ ಅನ್ನು ಪಡೆಯುತ್ತೀರಿ. ಹೋಂಡಾ ಸಿಟಿಯ ಕ್ಯಾಬಿನ್‌ನಲ್ಲಿರುವಂತೆ ಪಾಲಿಶ್ ಮಾಡದಿದ್ದರೂ, ಅದಕ್ಕಿಂತಲೂ ಸೊಗಸಾಗಿ ಕಾಣುತ್ತದೆ. ಹ್ಯುಂಡೈ ಡ್ಯಾಶ್‌ಬೋರ್ಡ್‌ನಲ್ಲಿ ನಿಜವಾಗಿಯೂ ಉತ್ತಮವಾದ ಫಿನಿಶ್‌ಗಳೊಂದಿಗೆ ಪ್ಲಾಸ್ಟಿಕ್‌ಗಳನ್ನು ಬಳಸಿದೆ ಮತ್ತು ಅದು ಉತ್ತಮವಾಗಿದೆ. ಹಾಗೆಯೇ ಹೆಚ್ಚು ಪ್ರೀಮಿಯಂ ಆದ ಅನುಭವವನ್ನು ನೀಡಲು ಬಿಳಿ ಭಾಗದಲ್ಲಿ ಲೆದರ್‌ನ ಕವರ್ ಇದೆ. ಮತ್ತು ಇದರೊಂದಿಗೆ ಡೋರ್‌ನ ನಿಂದ ಪ್ರಾರಂಭವಾಗುವ ಚಲಿಸುವ ಆಂಬಿಯೆಂಟ್ ಲೈಟ್‌ಗಳು, ಕ್ಯಾಬಿನ್‌ನ್ನು ಇನ್ನು ಆಕರ್ಷಕವಾಗಿಸುತ್ತದೆ. ಅಲ್ಲದೆ, ಈ ಕ್ಯಾಬಿನ್ ವಿಶಾಲವಾಗಿದ್ದು, ಇದು ಉತ್ತಮ ಜಾಗವನ್ನು ಹೊಂದಿದೆ ಮತ್ತು ದೊಡ್ಡ ಕಾರಿನಲ್ಲಿ ಕುಳಿತುಕೊಂಡ ಅನುಭವವನ್ನು ನೀಡುತ್ತದೆ.

ನಂತರ, ಇದರ ಇಂಟಿರಿಯರ್‌ನ ವಿನ್ಯಾಸ ಕೂಡ ಎಲ್ಲರ ಗಮನ ಸೆಳೆಯುತ್ತದೆ. ಎಂಜಿನ್‌ನ ಸ್ಟಾರ್ಟ್/ಸ್ಟಾಪ್ ಬಟನ್ ಅನ್ನು ಡ್ಯಾಶ್‌ಬೋರ್ಡ್‌ನಲ್ಲಿ ಬಹುತೇಕ ಫ್ಲಾಟ್ ಆಗಿ ಇರಿಸಲಾಗಿದೆ. ಕ್ಯಾಬಿನ್ನ ಗುಣಮಟ್ಟ ಮತ್ತು ಫಿಟ್/ಫಿನಿಶ್ ಅತ್ಯುತ್ತಮವಾಗಿದೆ, ಎಲ್ಲೆಡೆ ಸ್ವಿಚ್‌ಗಳು ಸ್ಪರ್ಶ ಮತ್ತು ಬ್ಯಾಕ್‌ಲಿಟ್ ಆಗಿರುತ್ತವೆ ಮತ್ತು ಎಲ್ಲಾ ಚಾರ್ಜಿಂಗ್ ಆಯ್ಕೆಗಳು ಸಹ ಬ್ಯಾಕ್‌ಲಿಟ್ ಆಗಿರುತ್ತವೆ. ಮತ್ತು ಎಲ್ಲವನ್ನು ಮೀರಿಸುವಂತೆ, ಸೀಟ್ ಅಪ್‌ಹೊಲ್ಸ್‌ಟೆರಿಯು ಪ್ರೀಮಿಯಂ ಆಗಿದೆ ಮತ್ತು ಸೀಟ್‌ಗಳ ಮೇಲಿನ ಏರ್‌ಬ್ಯಾಗ್ ಟ್ಯಾಗ್ ಕೂಡ ಲಕ್ಸುರಿ ಹ್ಯಾಂಡ್‌ಬ್ಯಾಗ್ ಟ್ಯಾಗ್‌ನಂತೆ ಭಾಸವಾಗುತ್ತದೆ. ಈ ಎಲ್ಲಾ ಅಂಶಗಳು ಒಟ್ಟಾಗಿ ಕ್ಯಾಬಿನ್ ಅನುಭವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆದರೆ ಇಲ್ಲಿ ಕೇವಲ ಪ್ರದರ್ಶನದ ಬಗ್ಗೆ ಅಲ್ಲ. ಕ್ಯಾಬಿನ್‌ನ ಪ್ರಾಯೋಗಿಕತೆಯೂ ಉತ್ತಮವಾಗಿದೆ. ದೊಡ್ಡ ಡೋರ್ ಪಾಕೆಟ್‌ಗಳು ಹಲವು ಬಾಟಲಿಗಳಿಗೆ ಬೇಕಾಗುವಷ್ಟು ಸ್ಥಳಾವಕಾಶವನ್ನು ಹೊಂದಿವೆ, ವೈರ್‌ಲೆಸ್ ಚಾರ್ಜರ್ ಸ್ಟೋರೇಜ್‌ನಲ್ಲಿ ರಬ್ಬರ್ ಪ್ಯಾಡಿಂಗ್ ದಪ್ಪವಾಗಿರುತ್ತದೆ ಮತ್ತು ಕೀಗಳು ಅಥವಾ ಫೋನ್ ನ್ನು ಸದ್ದು ಶೇಕ್‌ ಆಗಲು ಬಿಡುವುದಿಲ್ಲ. ಎರಡು ಕಪ್ ಹೋಲ್ಡರ್‌ಗಳು, ಸ್ಲೈಡಿಂಗ್ ಆರ್ಮ್‌ರೆಸ್ಟ್ ಅಡಿಯಲ್ಲಿ ಸ್ಥಳಾವಕಾಶ ವನ್ನು ಹೊಂದಿದ್ದು, ಹಾಗೆಯೇ ಅಂತಿಮವಾಗಿ ದೊಡ್ಡ ಕೂಲ್ಡ್ ಗ್ಲೋವ್‌ಬಾಕ್ಸ್ ನ್ನು ಸಹ ಹೊಂದಿದೆ. ಟರ್ಬೊ-ಡಿಸಿಟಿ ವೆರಿಯೇಂಟ್‌ಗಳು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ಗೆ ಸರಿಹೊಂದಿಸಲು ಒಂದೇ ಕಪ್ ಹೋಲ್ಡರ್ ಅನ್ನು ಪಡೆಯುತ್ತವೆ, ಇದು ಕಪ್ ಅನ್ನು ಸುರಕ್ಷಿತವಾಗಿರಿಸಲು ತುಂಬಾ ದೊಡ್ಡದಾಗಿದೆ.

ಈಗ ವೆರ್ನಾದಲ್ಲಿರುವ ಪ್ರಮುಖ ಅಂಶಗಳ ಕುರಿತು ಮಾತನಾಡೋಣ. ಅದೆಂದರೆ ಅದರ ವೈಶಿಷ್ಟ್ಯಗಳು. ಇದು ಸುಲಭವಾಗಿ ಅತ್ಯುತ್ತಮವಾದ ಗುಣಮಟ್ಟದ ಸೆಟ್‌ನೊಂದಿಗೆ ಬರುತ್ತದೆ. ಚಾಲಕನಿಗೆ, ಡಿಜಿಟಲ್ ಎಮ್‌ಐಡಿ (ಮಲ್ಟಿ ಇಂಫೊರ್ಮೆಶನ್‌ ಡಿಸ್‌ಪ್ಲೇ), ಆಟೋ-ಡಿಮ್ಮಿಂಗ್ ಐಆರ್‌ವಿಎಂ, ಆಟೋ ಹೆಡ್‌ಲ್ಯಾಂಪ್‌ಗಳು (ಸ್ವಯಂ ವೈಪರ್‌ಗಳಿಲ್ಲ), ಪವರ್‌ಡ್‌ ಸೀಟ್ (ಎತ್ತರಕ್ಕೆ ಅಲ್ಲ) ಮತ್ತು ಹಿಡಿದಿಡಲು ಪ್ರೀಮಿಯಂ ಸ್ಟೀರಿಂಗ್‌ನ್ನು ನೀಡಲಾಗಿದೆ.  ಅಲ್ಲದೆ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ನ್ನು ಇದು ಒಳಗೊಂಡಿದೆ. ಆದರೆ 360-ಡಿಗ್ರಿ ಕ್ಯಾಮೆರಾ ನೀಡಲಾಗುತ್ತಿಲ್ಲ. ಇತರ ಕ್ಯಾಬಿನ್ ವೈಶಿಷ್ಟ್ಯಗಳಲ್ಲಿ ಸನ್‌ರೂಫ್, 64 ಬಣ್ಣದ ಆಂಬಿಯೆಂಟ್ ಲೈಟ್‌ಗಳು ಉತ್ತಮ ಮತ್ತು ಪ್ರಕಾಶಮಾನವಾಗಿರುತ್ತವೆ ಮತ್ತು ಬಿಸಿಯಾಗುವ ಸೌಕರ್ಯವನ್ನು ಮತ್ತು  ವೇಂಟಿಲೇಟೆಡ್‌ ಸೀಟ್‌ಗಳನ್ನು ಒಳಗೊಂಡಿವೆ.

10.25-ಇಂಚಿನ ಟಚ್‌ಸ್ಕ್ರೀನ್, ಎಂಟು-ಸ್ಪೀಕರ್‌ನ ಬೋಸ್ ಸೌಂಡ್ ಸಿಸ್ಟಂ ಜೊತೆಗೆ ಉತ್ತಮವಾದ ಸಬ್ ವೂಫರ್ ಒಳಗೊಂಡ ಇಂಫೋಟೈನ್‌ಮೆಂಟ್‌ ತುಂಬಾನೇ ಆಕರ್ಷಕವಾಗಿದೆ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ,  ಹಾಗೆಯೇ ಫಿಸಿಕಲ್ ಟಚ್ ಕಂಟ್ರೋಲ್‌ಗಳು ಹವಾಮಾನ ನಿಯಂತ್ರಣ ಬಟನ್‌ಗಳಂತೆ ದ್ವಿಗುಣಗೊಳಿಸಬಹುದು. ಆದಾಗಿಯೂ, ವೆರ್ನಾದಲ್ಲಿ ಇನ್ನೂ ವೈರ್‌ಲೆಸ್ ಆಟೋ ಮತ್ತು ಕಾರ್‌ಪ್ಲೇ ಲಭ್ಯವಿಲ್ಲ. ಒಟ್ಟಾರೆಯಾಗಿ, ವೈಶಿಷ್ಟ್ಯಗಳ ವಿಭಾಗದಲ್ಲಿ ವರ್ನಾದ ಲೋಪದೋಷವನ್ನು ಹುಡುಕುವುದು ನಿಜವಾಗಿಯೂ ಕಷ್ಟಕರವಾಗಿದೆ. ಏಕೆಂದರೆ ಇದರ ವೈಶಿಷ್ಟ್ಯಗಳ ಪಟ್ಟಿಯು ಪ್ರಭಾವಶಾಲಿಯಾಗಿದೆ. ಹಾಗಾಗಿ ಪ್ರತಿಯೊಂದು ವೈಶಿಷ್ಟ್ಯವು ಉತ್ತಮವಾಗಿ ಕಾರ್ಯಗತಗೊಂಡಿದೆ.

ಹಿಂದಿನ ಸೀಟ್ ನ ಕುರಿತು

ಹಿಂದಿನ ಸೀಟಿನ ಸ್ಥಳವು ವೆರ್ನಾ ಕುಟುಂಬದಲ್ಲಿನ ವೀಕ್‌ ಪಾಯಿಂಟ್‌ ಆಗಿದೆ. ಇದು ಈ ಸೆಗ್ಮೆಂಟ್‌ನಲ್ಲಿ ಅತ್ಯಂತ ಕಡಿಮೆ ಸ್ಥಳಾವಕಾಶವನ್ನು ಹೊಂದಿರುವ ಸೆಡಾನ್ ಆಗಿತ್ತು. ಪ್ರಸ್ತತವು ಈ ಸೆಗ್ಮೆಂಟ್‌ನಲ್ಲಿ ಅತ್ಯಂತ ವಿಶಾಲವಾದ ಸೆಡಾನ್ ಅಲ್ಲದಿದ್ದರೂ, ನೀವು ಇದರಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಬಯಸುವುದಿಲ್ಲ. ಆರು ಅಡಿ ಎತ್ತರದ ಪ್ರಯಾಣಿಕರು ಸಹ ಕುಳಿತುಕೊಳ್ಳುವಷ್ಟು ಸ್ಥಳಾವಕಾಶವಿದೆ ಮತ್ತು ಇಲ್ಲಿನ ಪ್ರಮುಖ ಅಂಶವೆಂದರೆ ಸೀಟ್‌ನ ಸೌಕರ್ಯ. ದೊಡ್ಡ ಸೀಟ್‌ಗಳು, ಉತ್ತಮ ಪ್ಯಾಡಿಂಗ್, ತೊಡೆಯ ಬಳಿ ಸಾಕಷ್ಟು ಬೆಂಬಲ ಮತ್ತು ಶಾಂತವಾದ ಬ್ಯಾಕ್‌ರೆಸ್ಟ್ ಇದು ನಿಮಗೆ ಅತ್ಯಂತ ಆರಾಮದಾಯಕ ಸೀಟ್‌ನಲ್ಲಿ ಕುಳಿತ ಅನುಭವವನ್ನು ನೀಡುತ್ತದೆ. ಹೌದು, ಹಿಂಬದಿಯಲ್ಲಿ ಮೂವರಿಗೆ ಇರುವ ಜಾಗ ಸ್ವಲ್ಪ ಇಕ್ಕಟ್ಟಾಗಿರುತ್ತದೆ, ಆದರೆ ನೀವು ಚಾಲಕರಿಂದ ಕಾರನ್ನು ಡ್ರೈವ್‌ ಮಾಡಿಸುವುದಾದರೆ, ಈ ಹಿಂಬದಿಯ ಸೀಟ್ ತುಂಬಾನೇ ಆಕರ್ಷಕವಾಗಿದೆ.

ಅದರೆ ಇಲ್ಲಿ ಒಂದಷ್ಟು ವೈಶಿಷ್ಟ್ಯಗಳನ್ನು ಇನ್ನೂ ಉತ್ತಮಗೊಳಿಸಬಹುದಿತ್ತು. ಹೌದು, ನೀವು ಎರಡು ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳನ್ನು ಹೊಂದಿದ್ದೀರಿ, ಹಿಂಭಾಗದ ಸನ್‌ಶೇಡ್, ಹಿಂಭಾಗದ AC ವೆಂಟ್‌ಗಳು ಮತ್ತು ಕಪ್‌ಹೋಲ್ಡರ್‌ಗಳೊಂದಿಗೆ ಆರ್ಮ್‌ರೆಸ್ಟ್ ಅನ್ನು ಹೊಂದಿದ್ದೀರಿ, ಆದರೆ ವಿಂಡೋ ಶೇಡ್‌ಗಳು ಮತ್ತು ಡೆಡಿಕೇಟೆಡ್ ಮೊಬೈಲ್ ಪಾಕೆಟ್‌ಗಳಂತಹ ಸೌಕರ್ಯಗಳು ಇರುತ್ತಿದ್ದರೆ ನಿಮ್ಮ ಅನುಭವವನ್ನು ಇನ್ನೂ ಹೆಚ್ಚಿಸಬಹುದು. ಮತ್ತು ಎಲ್ಲಾ ಮೂರು ಪ್ರಯಾಣಿಕರು ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಪಡೆದರೆ, ಮಧ್ಯದ ಪ್ರಯಾಣಿಕರು ಹೆಡ್‌ರೆಸ್ಟ್ ಅನ್ನು ಪಡೆಯುವುದಿಲ್ಲ.

ಸುರಕ್ಷತೆ

ಸುರಕ್ಷತೆಯ ಭಾಗವನ್ನು ಗಮನಿಸುವಾಗ, ವೆರ್ನಾವು ಆತ್ಯಂತ ಪ್ರಭಾವಶಾಲಿ ಸೌಕರ್ಯಗಳ ಪಟ್ಟಿಯನ್ನು ಹೊಂದಿದೆ. ಸ್ಟ್ಯಾಂಡರ್ಡ್ ಸುರಕ್ಷತಾ ಪಟ್ಟಿಯು ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್-ಸೀಟ್ ಮೌಂಟ್‌ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿದೆ. ಟಾಪ್‌ ಎಂಡ್‌ ವೇರಿಯೆಂಟ್‌ಗಳಲ್ಲಿ ನೀವು ESC, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಹೋಲ್ಡ್ ಅಸಿಸ್ಟ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಇದು ಅದರ ಟಾಪ್-ಎಂಡ್ ಟ್ರಿಮ್‌ನಲ್ಲಿ ADAS (ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳು) ಅನ್ನು ಸಹ ಪಡೆಯುತ್ತದೆ, ಅದರಲ್ಲಿ ಈ ಕೆಳಗಿನವುಗಳು ಒಳಗೊಂಡಿದೆ; 

  • ಮುಂಭಾಗದಲ್ಲಿ ಡಿಕ್ಕಿಯ ವಾರ್ನಿಂಗ್‌ ಮತ್ತು ತಪ್ಪಿಸುವ ಸಹಾಯ

  • ಬ್ಲೈಂಡ್ ಸ್ಪಾಟ್ ಮಾನಿಟರಿಂಗ್

  • ಲೇನ್ ಕೀಪ್ ಅಸಿಸ್ಟ್

  • ಮುಂಭಾಗದ ವಾಹನ ಚಲನೆಯ ಮಾಹಿತಿ

  •  ಹೆಚ್ಚಿನ ಲೈಟ್‌ನ ಸಹಾಯ

  •  ಹಿಂದಿನ ಅಡ್ಡ ಸಂಚಾರ ಘರ್ಷಣೆಯ ವಾರ್ನಿಂಗ್‌ ಮತ್ತು ನೆರವು

  • ಅಡಾಪ್ಟಿವ್ ಕ್ರೂಸ್ ನಿಯಂತ್ರಣ (ಟರ್ಬೊ ಡಿಸಿಟಿ)

  • ಲೇನ್ ಫಾಲೋ ಅಸಿಸ್ಟ್

  • ಈ ADAS ವೈಶಿಷ್ಟ್ಯಗಳು ತುಂಬಾ ಸ್ಮೂತ್‌ ಆಗಿರುತ್ತದೆ ಮತ್ತು ಭಾರತೀಯ ಪರಿಸ್ಥಿತಿಗಳಿಗೆ ಉತ್ತಮವಾಗಿ ಟ್ಯೂನ್ ಆಗಿವೆ.

ಬೂಟ್‌ನ ಸಾಮರ್ಥ್ಯ

ಹಿಂದಿನ ತಲೆಮಾರಿನ ವೆರ್ನಾವನ್ನು ಗಮನಿಸಿದಾಗ ಅದರಲ್ಲಿ ನಮಗೆ ಕಂಡು ಬರುತ್ತಿದ್ದ ಮತ್ತೊಂದು ದೊಡ್ಡ ನ್ಯೂನತೆಯೆಂದರೆ ಅದರ ಸೀಮಿತ ಬೂಟ್ ಸ್ಪೇಸ್. ಅದರಲ್ಲಿ ಸ್ಥಳ ಮಾತ್ರವಲ್ಲ, ಆದರೆ ಬೂಟ್‌ನ ಡೋರ್‌ ಕೂಡ ಚಿಕ್ಕದಾಗಿತ್ತು. ದೊಡ್ಡ ಸೂಟ್ಕೇಸ್‌ಗಳನ್ನು ಲೋಡ್ ಮಾಡಲು ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ ಹೊಸದಾಗಿ ಪರಿಚಯಿಸಿದ ಹೊಸ ಪೀಳಿಗೆಯ ಮೊಡೆಲ್‌ನಲ್ಲಿ ಬೂಟ್ ಸ್ಪೇಸ್ ಕೇವಲ ಉತ್ತಮವಾಗಿರದೇ, ಈ ವಿಭಾಗದಲ್ಲಿ ಬೆಸ್ಟ್‌ ಎಂಬಂತೆ 528 ಲೀಟರ್‌ಗೆ ಸಾಕಾಗುವಷ್ಟು ಜಾಗವನ್ನು ನೀಡುತ್ತದೆ. ಹಾಗೆಯೆ ದೊಡ್ಡ ಸೂಟ್‌ಕೇಸ್‌ಗಳನ್ನು ಒಳಗಿಡಲು ಬೇಕಾಗುವಷ್ಟು ವಿಶಾಲವಾದ ಡೋರ್‌ನ್ನು ಹೊಂದಿದೆ.

ಕಾರ್ಯಕ್ಷಮತೆ

ಡೀಸೆಲ್ ಎಂಜಿನ್ ಆಯ್ಕೆಯನ್ನು ಇದರಲ್ಲಿ ಕೈಬಿಡಲಾಗಿದೆ. ಅದರ ಹೊರತಾಗಿ, ಹ್ಯುಂಡೈ ಶಕ್ತಿಯುತ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ್ನು ಇದರಲ್ಲಿ ನೀಡಲಾಗುತ್ತಿದೆ. ಆದ್ದರಿಂದ ನೀವು ನಗರದ ಟ್ರಾಫಿಕ್‌ನಲ್ಲಿ ಡ್ರೈವ್‌ ಮಾಡುವಾಗ ಕಷ್ಷವನ್ನು ಎದುರಿಸುವುದು ಸಾಮಾನ್ಯವಾಗಿರುತ್ತದೆ. ಇದಲ್ಲದೆ, ಶಾಂತವಾದ 1.5-ಲೀಟರ್ ಪೆಟ್ರೋಲ್ ಎಂಜಿನ್‌ ಕೂಡ ಇದೆ. ಬನ್ನಿ, ಅದರ ವಿವರಣೆಯೊಂದಿಗೆ ಪ್ರಾರಂಭಿಸೋಣ.

ಶಾಂತವಾಗಿರುವ  1.5-ಲೀಟರ್ ಪೆಟ್ರೋಲ್ ತುಂಬಾ ಸಂಸ್ಕರಿಸಿದ ಎಂಜಿನ್ ಆಗಿದೆ. ಇದು ನಯವಾದ ಮತ್ತು ಲೀನಿಯರ್ ಪವರ್ ಡೆಲಿವರಿಯನ್ನು ಹೊಂದಿದ್ದು, ಇದು ಆಟೋಮ್ಯಾಟಿಕ್‌ CVT ಗೇರ್‌ಬಾಕ್ಸ್ ಗೆ ಚೆನ್ನಾಗಿ ಪೂರೈಸುತ್ತದೆ. ನಗರದ ಒಳಗಿನ ರಸ್ತೆಯಲ್ಲಿ, ಕಾರು ತಡೆರಹಿತ ಮತ್ತು ಪ್ರಯತ್ನವಿಲ್ಲದ ಡ್ರೈವ್ ಅನ್ನು ನೀಡುತ್ತದೆ. ವೇಗವರ್ಧನೆಯು ಅತ್ಯುತ್ತಮವಾಗಿದೆ ಮತ್ತು ಓವರ್‌ಟೇಕ್‌ಗಳಿಗೆ ಸಹ ಹೆಚ್ಚು ಎಕ್ಸಿಲರೆಟರ್‌ನ್ನು ಒತ್ತುವ ಅಗತ್ಯವನ್ನು ನೀವು ಅನುಭವಿಸುವುದಿಲ್ಲ. ಮತ್ತು CVT ಯ ಕಾರಣದಿಂದಾಗಿ, ಯಾವುದೇ ಶಿಫ್ಟ್ ಲ್ಯಾಗ್ ಅಥವಾ ವಿಳಂಬವಿಲ್ಲ. ಇದು ಡ್ರೈವ್ ಅನುಭವವನ್ನು ತುಂಬಾ ಸುಗಮಗೊಳಿಸುತ್ತದೆ. ನೀವು ನಗರದೊಳಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರೆ, CVT ನಿಮಗೆ ಅತ್ಯುತ್ತಮ ಆಯ್ಕೆಯಾಗಲಿದೆ. ಜೊತೆಗೆ, ಈ ರಸ್ತೆಗಳಲ್ಲಿ ಮೈಲೇಜ್ ಸಹ  ಅತ್ಯುತ್ತಮವಾಗಿರುತ್ತದೆ. ಹೆದ್ದಾರಿಗಳಲ್ಲಿಯೂ ಸಹ, CVT ಯನ್ನು  ಸಲೀಸಾಗಿ ಡ್ರೈವ್‌ ಮಾಡಬಹುದು. CVT ಯ ಕಾರಣದಿಂದಾಗಿ ಓವರ್‌ಟೇಕ್‌ಗಳ ಸಮಯದಲ್ಲಿ ಇದು ಹೆಚ್ಚಿನ ಆರ್‌ಪಿಎಮ್‌ನ್ನು ಬಳಸುತ್ತದೆ, ಆದರೆ ವೇಗವರ್ಧನೆಯು ಉತ್ತಮವಾಗಿಯೇ ಉಳಿಯುತ್ತದೆ ಮತ್ತು ಹೆಚ್ಚಿನ ಎಕ್ಸಿಲರೇಟರ್‌ನ ಮೇಲೆ ಹೆಚ್ಚಿನ ಒತ್ತಡ ಹಾಕುವ ಅಗತ್ಯವನ್ನು ನೀವು ಅನುಭವಿಸುವುದಿಲ್ಲ. 

ನೀವು ಟರ್ಬೊವನ್ನು ಬಯಸುವ ಏಕೈಕ ಕಾರಣವೆಂದರೆ ಶ್ರಮರಹಿತವಾದ ಪರ್ಫೊರ್ಮೆನ್ಸ್‌. ಈ 160PS ಮೋಟಾರ್‌ನ್ನು ಸಮಾನವಾಗಿ ಪರಿಷ್ಕರಿಸಲಾಗಿದೆ ಮತ್ತು ಡ್ರೈವ್‌ ಮಾಡಲು ಹೆಚ್ಚು ಆನಂದದಾಯಕವಾಗಿದೆ. ನಗರದಲ್ಲಿ ಓಡಿಸಲು ಉತ್ತಮ ಪ್ರಮಾಣದ ಟಾರ್ಕ್ ನ್ನು ಹೊಂದಿದೆ ಮತ್ತು ನೀವು ಅದಕ್ಕಿಂತ ಹೆಚ್ಚಿನ ವೇಗದಲ್ಲಿ ತೆರಳಿದಾಗ ಟರ್ಬೊ 1800rpm ಗಿಂತ ಮೇಲೆ ಹೋಗುತ್ತದೆ ಮತ್ತು ವೇಗವರ್ಧನೆಯು ಭರವಸೆ ನೀಡುತ್ತದೆ. ವೆರ್ನಾ ತ್ವರಿತವಾಗಿ ಸಾಗುತ್ತದೆ ಮತ್ತು ಈ ಸೆಗ್ಮೆಂಟ್‌ನಲ್ಲಿ ವೇಗವಾದ ಸೆಡಾನ್ ಆಗುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ಈ ಎಕ್ಸಿಲರೇಶನ್‌ ಮತ್ತು ಕಾರ್ಯಕ್ಷಮತೆಯೊಂದಿಗೆ, ಎಂಜಿನ್ ಅಥವಾ ಎಕ್ಸಾಸ್ಟ್ ನಿಂದ ಯಾವುದೇ ರೀತಿಯ ಕಿರಿಕಿರಿಯಿಲ್ಲ. ಆದ್ದರಿಂದ, ಡ್ರೈವ್ ವೇಗವಾಗಿದ್ದರೂ, ರೋಮಾಂಚನಕಾರಿ ಅನಿಸುವುದಿಲ್ಲ. ಮತ್ತು N ಲೈನ್ ವೇರಿಯೆಂಟ್‌ನ ಅಗತ್ಯವು ಇಲ್ಲಿಂದ ಹುಟ್ಟಿಕೊಂಡಿದೆ.

ರೈಡ್ ಅಂಡ್ ಹ್ಯಾಂಡಲಿಂಗ್

ವೆರ್ನಾ ಹಳೆಯ ಆವೃತ್ತಿಯಿಂದ ತನ್ನ ಆರಾಮದಾಯಕ ಗುಣಲಕ್ಷಣಗಳನ್ನು ಹೊಸ ಆವೃತ್ತಿಯಲ್ಲಿಯೂ ಉಳಿಸಿಕೊಂಡಿದೆ. ಹೀಗೆ ಹೇಳಲು, ಇದು ನಗರದಲ್ಲಿ ಸರಿಯಾಗಿ ಆರಾಮದಾಯಕವಾಗಿಯೇ ಇದೆ. ಸ್ಪೀಡ್‌ ಬ್ರೇಕರ್‌ ಮತ್ತು ಕಳಪೆ ರಸ್ತೆಗಳಲ್ಲಿ, ಇದು ಆರಾಮದಾಯಕ, ಚೆನ್ನಾಗಿ ಕುಶನ್‌ ಅನುಭವ ನೀಡುವ ಮತ್ತು ಶಾಂತವಾಗಿರುತ್ತದೆ. ವೇಗವು ಹೆಚ್ಚಾದಂತೆ, ಉಬ್ಬುಗಳು ಹೆಚ್ಚು ಸ್ಪಷ್ಟವಾಗಲು ಪ್ರಾರಂಭಿಸುತ್ತವೆ ಮತ್ತು ಉತ್ತಮವಾದ ಡ್ಯಾಂಪಿಂಗ್ ಅಗತ್ಯವನ್ನು ನೀವು ನೀಡುತ್ತೀರಿ. ಹೆದ್ದಾರಿಗಳಲ್ಲಿಯೂ, ಈ ಸೆಡಾನ್ ಹೆಚ್ಚು ಕಮ್ಮಿ ಸ್ಥಿರವಾಗಿರುತ್ತದೆ, ಕೆಲವೊಮ್ಮೆ ಹಿಂದಿನ ಸೀಟಿನ ಪ್ರಯಾಣಿಕರು ಆಚೀಚೆ ಚಲನೆಯಾಗುವ ಅನುಭವವನ್ನು ಪಡೆಯಬಹುದು.

ಇದು ನಾಲ್ಕು ಬದಿಯಲ್ಲೂ ದೊಡ್ಡದಾದ ಗಾಜಿನ ಪ್ರದೇಶವಿರುವುದರಿಂದ, ವೆರ್ನಾ ಓಡಿಸಲು ಸಾಕಷ್ಟು ಸುಲಭವಾದ ಸೆಡಾನ್ ಆಗಿದೆ. ನಗರದಲ್ಲಿ ಸ್ಟೀರಿಂಗ್ ಹಗುರ ಮತ್ತು ಶ್ರಮರಹಿತವಾಗಿರುತ್ತದೆ ಮತ್ತು ಎಲ್ಲಾ ಡ್ರೈವ್ ಮೋಡ್‌ಗಳಲ್ಲಿ (ಇಕೋ, ನಾರ್ಮಲ್ ಮತ್ತು ಸ್ಪೋರ್ಟ್) ವೇಗವರ್ಧನೆಯು ಊಹಿಸಬಹುದಾದಂತಿದೆ.

ವರ್ಡಿಕ್ಟ್

ಈ ಪೀಳಿಗೆಯಲ್ಲಿ ಹುಂಡೈ ವೆರ್ನಾ ಬೆಳೆದಿದೆ. ಆಯಾಮಗಳಲ್ಲಿ ಮಾತ್ರವಲ್ಲ, ಕಾರ್ಯಕ್ಷಮತೆಯಲ್ಲಿಯೂ ಕೂಡಾ. ಇದು ಇಕ್ಕಟ್ಟಾದ ಹಿಂಬದಿ ಸೀಟ್ ಮತ್ತು ಸರಾಸರಿ ಸ್ಟೋರೇಜ್ ಏರಿಯಾದಂತಹ  ತನ್ನ ಎಲ್ಲಾ ಮಿತಿಗಳನ್ನು ಯಶಸ್ವಿಯಾಗಿ ತೊಡೆದು ಹಾಕಿದೆಯಲ್ಲದೇ ಅದರ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯಂತಹ ಸಾಮರ್ಥ್ಯದಲ್ಲಿ ಸಹ ಸುಧಾರಿಸಿದೆ. ಇದರೊಂದಿಗೆ, ಈ ಸೆಗ್ಮೆಂಟ್ ನಲ್ಲಿ ಅತ್ಯುತ್ತಮ ಆಲ್ ರೌಂಡರ್ ಎನಿಸಿಕೊಂಡಿದೆ

ಆದ್ದರಿಂದ ನೀವು  ಕಾರ್ಯಕ್ಷಮತೆಯಲ್ಲಾಗಲೀ ವೈಶಿಷ್ಟ್ಯಗಳು ಅಥವಾ ಸೌಲಭ್ಯದಂತಹ ಯಾವುದನ್ನಾದರೂ ಹುಡುಕುತ್ತಿದ್ದೀರಂತಾದರೆ ಅಥವಾ ಕುಟುಂಬಕ್ಕೆ ಸಮತೋಲಿತ ಸೆಡಾನ್ ಅನ್ನು ಹುಡುಕುತ್ತಿರಲಿ, ವೆರ್ನಾ ಈಗ ಮುಂಚೂಣಿಯಲ್ಲಿದೆ.

ಹುಂಡೈ ವೆರ್ನಾ

ನಾವು ಇಷ್ಟಪಡುವ ವಿಷಯಗಳು

  • ಸಂಪೂರ್ಣವಾದ ಪರಿಶೀಲನೆ, ವಿಶೇಷವಾಗಿ ಒಳಗಿನ ವಿನ್ಯಾಸ.
  • ಎಂಟು ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, 64 ಬಣ್ಣದ ಸುತ್ತುವರಿದ ದೀಪಗಳು ಮತ್ತು ಪವರ್ ಡ್ರೈವರ್
  • ಸೀಟ್‌ನಂತಹ ಪರಿಣಾಮಕಾರಿ ವೈಶಿಷ್ಟ್ಯಗಳು.
  • 160 ಪಿಎಸ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಶ್ರಮರಹಿತ ಕಾರ್ಯಕ್ಷಮತೆ.
  • ದೊಡ್ಡ ಸ್ಟೋರೇಜ್ ಏರಿಯಾ.

ನಾವು ಇಷ್ಟಪಡದ ವಿಷಯಗಳು

  • ಲುಕ್ ಇಷ್ಟವಾಗದೇ ಇರಬಹುದು
  • ಕಾರ್ಯಕ್ಷಮತೆ ತ್ವರಿತವಾಗಿದ್ದರೂ ಸಹ ಉತ್ತೆಜಕವಾಗಿಲ್ಲ.

ಎಆರ್‌ಎಐ mileage20.6 ಕೆಎಂಪಿಎಲ್
ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1482 cc
no. of cylinders4
ಮ್ಯಾಕ್ಸ್ ಪವರ್157.57bhp@5500rpm
ಗರಿಷ್ಠ ಟಾರ್ಕ್253nm@1500-3500rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಬೂಟ್‌ನ ಸಾಮರ್ಥ್ಯ528 litres
ಇಂಧನ ಟ್ಯಾಂಕ್ ಸಾಮರ್ಥ್ಯ45 litres
ಬಾಡಿ ಟೈಪ್ಸೆಡಾನ್
ಸರ್ವಿಸ್ ವೆಚ್ಚrs.3312, avg. of 5 years

ಒಂದೇ ರೀತಿಯ ಕಾರುಗಳೊಂದಿಗೆ ವೆರ್ನಾ ಅನ್ನು ಹೋಲಿಕೆ ಮಾಡಿ

Car Name
ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌
Rating
438 ವಿರ್ಮಶೆಗಳು
160 ವಿರ್ಮಶೆಗಳು
289 ವಿರ್ಮಶೆಗಳು
261 ವಿರ್ಮಶೆಗಳು
204 ವಿರ್ಮಶೆಗಳು
705 ವಿರ್ಮಶೆಗಳು
444 ವಿರ್ಮಶೆಗಳು
66 ವಿರ್ಮಶೆಗಳು
148 ವಿರ್ಮಶೆಗಳು
1019 ವಿರ್ಮಶೆಗಳು
ಇಂಜಿನ್1482 cc - 1497 cc 1498 cc999 cc - 1498 cc999 cc - 1498 cc1482 cc - 1497 cc 1462 cc1199 cc - 1497 cc 1197 cc 1197 cc 1497 cc - 2184 cc
ಇಂಧನಪೆಟ್ರೋಲ್ಪೆಟ್ರೋಲ್ಪೆಟ್ರೋಲ್ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್
ಹಳೆಯ ಶೋರೂಮ್ ಬೆಲೆ11 - 17.42 ಲಕ್ಷ11.71 - 16.19 ಲಕ್ಷ11.56 - 19.41 ಲಕ್ಷ11.53 - 19.13 ಲಕ್ಷ11 - 20.15 ಲಕ್ಷ9.40 - 12.29 ಲಕ್ಷ8.15 - 15.80 ಲಕ್ಷ7.04 - 11.21 ಲಕ್ಷ6.49 - 9.05 ಲಕ್ಷ11.25 - 17.60 ಲಕ್ಷ
ಗಾಳಿಚೀಲಗಳು64-662-6626662
Power113.18 - 157.57 ಬಿಹೆಚ್ ಪಿ119.35 ಬಿಹೆಚ್ ಪಿ113.98 - 147.51 ಬಿಹೆಚ್ ಪಿ113.98 - 147.52 ಬಿಹೆಚ್ ಪಿ113.18 - 157.57 ಬಿಹೆಚ್ ಪಿ103.25 ಬಿಹೆಚ್ ಪಿ113.31 - 118.27 ಬಿಹೆಚ್ ಪಿ81.8 - 86.76 ಬಿಹೆಚ್ ಪಿ67.72 - 81.8 ಬಿಹೆಚ್ ಪಿ116.93 - 150.19 ಬಿಹೆಚ್ ಪಿ
ಮೈಲೇಜ್18.6 ಗೆ 20.6 ಕೆಎಂಪಿಎಲ್17.8 ಗೆ 18.4 ಕೆಎಂಪಿಎಲ್18.12 ಗೆ 20.8 ಕೆಎಂಪಿಎಲ್18.07 ಗೆ 20.32 ಕೆಎಂಪಿಎಲ್17.4 ಗೆ 21.8 ಕೆಎಂಪಿಎಲ್20.04 ಗೆ 20.65 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್16 ಗೆ 20 ಕೆಎಂಪಿಎಲ್17 ಕೆಎಂಪಿಎಲ್15.2 ಕೆಎಂಪಿಎಲ್

ಹುಂಡೈ ವೆರ್ನಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು

ಹುಂಡೈ ವೆರ್ನಾ ಬಳಕೆದಾರರ ವಿಮರ್ಶೆಗಳು

4.6/5
ಆಧಾರಿತ438 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (438)
  • Looks (150)
  • Comfort (183)
  • Mileage (66)
  • Engine (70)
  • Interior (100)
  • Space (36)
  • Price (68)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Verna Is Amazing

    Verna is an amazing title that perfectly captures the elegance, performance, and style of this excep...ಮತ್ತಷ್ಟು ಓದು

    ಇವರಿಂದ utkarsh kumar
    On: Mar 09, 2024 | 247 Views
  • Great Car

    The Verna stands out as the best among all models, particularly the top variant, which is exceptiona...ಮತ್ತಷ್ಟು ಓದು

    ಇವರಿಂದ iklakh
    On: Feb 23, 2024 | 526 Views
  • for SX Opt Turbo DCT DT

    Best Sedan In This Segment

    The Hyundai Verna showcases awesome looks and comfort. Its mileage is notably impressive, and the he...ಮತ್ತಷ್ಟು ಓದು

    ಇವರಿಂದ bishal das
    On: Feb 23, 2024 | 153 Views
  • This Car Was Really Amazing

    This car was amazing and its future can also very best this is the world's best car for me.

    ಇವರಿಂದ nikhil
    On: Feb 18, 2024 | 78 Views
  • Best Car

    The Verna stands as the finest sedan in India, boasting exceptional aesthetics and impressive fuel e...ಮತ್ತಷ್ಟು ಓದು

    ಇವರಿಂದ vaibhav
    On: Feb 08, 2024 | 239 Views
  • ಎಲ್ಲಾ ವೆರ್ನಾ ವಿರ್ಮಶೆಗಳು ವೀಕ್ಷಿಸಿ

ಹುಂಡೈ ವೆರ್ನಾ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: ಹುಂಡೈ ವೆರ್ನಾ petrolis 20 ಕೆಎಂಪಿಎಲ್.ಸ್ವಯಂಚಾಲಿತ ರೂಪಾಂತರಗಳಿಗೆ ಹಕ್ಕು ಪಡೆದ ARAI ಮೈಲೇಜ್: .

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಆಟೋಮ್ಯಾಟಿಕ್‌20.6 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌20 ಕೆಎಂಪಿಎಲ್

ಹುಂಡೈ ವೆರ್ನಾ ವೀಡಿಯೊಗಳು

  • Hyundai Verna 2023 Variants Explained: EX vs S vs SX vs SX (O) | सबसे BEST तो यही है!
    10:57
    Hyundai Verna 2023 Variants Explained: EX vs S vs SX vs SX (O) | सबसे BEST तो यही है!
    ಜೂನ್ 19, 2023 | 664 Views
  • Hyundai Verna 2023 Review | Pros And Cons Explained | CarDekho
    4:28
    Hyundai Verna 2023 Review | Pros And Cons Explained | CarDekho
    ಜೂನ್ 19, 2023 | 9111 Views
  • Hyundai Verna vs Honda City vs Skoda Slavia vs VW Virtus: Detailed Comparison
    28:17
    Hyundai Verna vs Honda City vs Skoda Slavia vs VW Virtus: Detailed ಹೋಲಿಕೆ
    ಜುಲೈ 12, 2023 | 41099 Views
  • 2023 Hyundai Verna Drive Impressions, Review & ADAS Deep Dive | It Just Makes Sense!
    17:30
    2023 Hyundai Verna Drive Impressions, Review & ADAS Deep Dive | It Just Makes Sense!
    ಜೂನ್ 19, 2023 | 24020 Views
  • 2023 Hyundai Verna Walkaround Video | Exterior, Interior, Engines & Features
    15:34
    2023 Hyundai Verna Walkaround Video | Exterior, Interior, Engines & Features
    ಜೂನ್ 19, 2023 | 25853 Views

ಹುಂಡೈ ವೆರ್ನಾ ಬಣ್ಣಗಳು

  • ಫಿಯರಿ ರೆಡ್ ಡ್ಯುಯಲ್ ಟೋನ್
    ಫಿಯರಿ ರೆಡ್ ಡ್ಯುಯಲ್ ಟೋನ್
  • ಉರಿಯುತ್ತಿರುವ ಕೆಂಪು
    ಉರಿಯುತ್ತಿರುವ ಕೆಂಪು
  • ಟೈಫೂನ್ ಸಿಲ್ವರ್
    ಟೈಫೂನ್ ಸಿಲ್ವರ್
  • ಸ್ಟಾರಿ ನೈಟ್
    ಸ್ಟಾರಿ ನೈಟ್
  • atlas ಬಿಳಿ
    atlas ಬಿಳಿ
  • titan ಬೂದು
    titan ಬೂದು
  • tellurian ಬ್ರೌನ್
    tellurian ಬ್ರೌನ್
  • abyss ಕಪ್ಪು
    abyss ಕಪ್ಪು

ಹುಂಡೈ ವೆರ್ನಾ ಚಿತ್ರಗಳು

  • Hyundai Verna Front Left Side Image
  • Hyundai Verna Front View Image
  • Hyundai Verna Rear view Image
  • Hyundai Verna Taillight Image
  • Hyundai Verna Wheel Image
  • Hyundai Verna Antenna Image
  • Hyundai Verna Hill Assist Image
  • Hyundai Verna Exterior Image Image
space Image
Found what ನೀವು were looking for?

ಹುಂಡೈ ವೆರ್ನಾ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

Who are the competitors of Hyundai Verna?

Abhi asked on 6 Nov 2023

The new Verna competes with the Honda City, Maruti Suzuki Ciaz, Skoda Slavia, an...

ಮತ್ತಷ್ಟು ಓದು
By CarDekho Experts on 6 Nov 2023

Who are the competitors of Hyundai Verna?

Abhi asked on 21 Oct 2023

The new Verna competes with the Honda City, Maruti Suzuki Ciaz, Skoda Slavia, an...

ಮತ್ತಷ್ಟು ಓದು
By CarDekho Experts on 21 Oct 2023

What is the service cost of Verna?

Shyam asked on 9 Oct 2023

For this, we'd suggest you please visit the nearest authorized service centr...

ಮತ್ತಷ್ಟು ಓದು
By CarDekho Experts on 9 Oct 2023

What is the minimum down payment for the Hyundai Verna?

Devyani asked on 9 Oct 2023

In general, the down payment remains in between 20-30% of the on-road price of t...

ಮತ್ತಷ್ಟು ಓದು
By CarDekho Experts on 9 Oct 2023

What is the mileage of the Hyundai Verna?

Devyani asked on 24 Sep 2023

The Verna mileage is 18.6 to 20.6 kmpl. The Automatic Petrol variant has a milea...

ಮತ್ತಷ್ಟು ಓದು
By CarDekho Experts on 24 Sep 2023
space Image

ಭಾರತ ರಲ್ಲಿ ವೆರ್ನಾ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 13.76 - 21.69 ಲಕ್ಷ
ಮುಂಬೈRs. 13 - 20.47 ಲಕ್ಷ
ತಳ್ಳುRs. 13.10 - 20.79 ಲಕ್ಷ
ಹೈದರಾಬಾದ್Rs. 13.59 - 21.42 ಲಕ್ಷ
ಚೆನ್ನೈRs. 13.61 - 21.44 ಲಕ್ಷ
ಅಹ್ಮದಾಬಾದ್Rs. 12.48 - 19.65 ಲಕ್ಷ
ಲಕ್ನೋRs. 12.84 - 20.20 ಲಕ್ಷ
ಜೈಪುರRs. 13.05 - 20.54 ಲಕ್ಷ
ಪಾಟ್ನಾRs. 12.96 - 20.77 ಲಕ್ಷ
ಚಂಡೀಗಡ್Rs. 12.30 - 19.39 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಸೆಡಾನ್ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ವೀಕ್ಷಿಸಿ Holi ಕೊಡುಗೆಗಳು

Similar Electric ಕಾರುಗಳು

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience