೨೦೧೯ ಫೋರ್ಡ್ ಎಂಡೀವರ್ Vs ಟೊಯೋಟಾ ಫಾರ್ಚುನರ್: ವಾರಿಯೆಂಟ್ ಹೋಲಿಕೆಗಳು.
ಫೋರ್ಡ್ ಯಡೋವರ್ 2015-2020 ಗಾಗಿ dinesh ಮೂಲಕ ಮಾರ್ಚ್ 26, 2019 03:50 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಫೋರ್ಡ್ ತನ್ನ ಫ್ಲಾಗ್ ಶಿಪ್ SUV ಯನ್ನು ನವೀಕರಿಸಿದೆ, ಎಂಡೀವರ್ ೨೦೧೯ ಗೆ. ಈ SUV ಸ್ವಲ್ಪ ಮಟ್ಟಿಗೆ ರೀ ವರ್ಕ್ ಮಾಡಲಾಗಿರುವ ಬಾಹ್ಯ ಗಳನ್ನು ಪಡೆದಿದೆ ಮತ್ತು ಕೆಲವು ಹೆಚ್ಚಿನ ಫೀಚರ್ ಗಳನ್ನೂ ಸಹ. ಈ ದಿನ ನಾವು ಇದನ್ನು ಸೆಗ್ಮೆಂಟ್ ನ ಮಾರಾಟದ ಮುಂಚೂಣಿಯಲ್ಲಿರುವ ಫಾರ್ಚುನರ್ ನ ಜೊತೆ ಹೋಲಿಸುತ್ತೇವೆ. ಈ ಎರೆಡು SUV ಗಳಲ್ಲಿ ಫೀಚರ್ ಗಳ ಮಟ್ಟಿಗೆ ಹೆಚ್ಚು ಬೆಲೆ ಬಾಳುವಂತಿದೆ ಮತ್ತು ಕೊಳ್ಳಬಹುದಾದ ಬೆಲೆ ಹೊಂದಿದೆ ನೋಡೋಣ.
ಬೆಲೆಗಳು (ಎಕ್ಸ್ - ಶೋ ರೂಮ್ ಡೆಲ್ಲಿ )ಮತ್ತು ಹೋಲಿಸಬಹುದಾದ ವೇರಿಯೆಂಟ್ ಗಳು
2019 Ford Endeavour |
Toyota Fortuner |
2.2L Titanium MT 4x2 Rs 28.19 lakh |
|
|
2.8L 4X2 MT Rs 29.59 lakh |
2.2L Titanium+ AT 4x2 Rs 30.60 lakh |
2.8L 4X2 AT Rs 31.38 lakh |
|
2.8L 4X4 MT Rs 31.49 lakh |
3.2L Titanium+ AT 4x4 Rs 32.97 lakh |
2.8L 4X4 AT Rs 33.28 lakh |
ಅಳತೆಗಳು
|
2019 Ford Endeavour |
Toyota Fortuner |
Length |
4903mm |
4795mm |
Width |
1869mm |
1855mm |
Height |
1837mm |
1835mm |
Wheelbase |
2850mm |
2745mm |
- ಎಂಡೀವರ್ ಉದ್ದ, ಅಗಲ, ಹಾಗು ಎತ್ತರ ವಾಗಿದೆ. ಫಾರ್ಚುನರ್ ಗಿಂತ.
- ಇದರ ವೀಲ್ ಬೇಸ್ ಸಹ ಉದ್ದವಾಗಿದೆ.
ಎಂಜಿನ್
|
2019 Ford Endeavour |
Toyota Fortuner |
Engine |
2.2-litre/3.2-litre diesel |
2.8-litre diesel |
Power |
160PS/200PS |
177PS |
Torque |
385Nm/470Nm |
420Nm(MT)/450Nm(AT) |
Transmission |
6MT/6AT |
6MT/6AT |
Drive |
2WD/4WD |
2WD/4WD |
- ಎಂಡೀವರ್ ಎರೆಡು ಎಂಜಿನ್ ಆಯ್ಕೆ ಗಳಲ್ಲಿ ಬರುವುದಾದರೆ , ಫಾರ್ಚುನರ್ ಕೇವಲ ಒಂದು ಎಂಜಿನ್ ಆಯ್ಕೆಯಲ್ಲಿ ಮಾತ್ರ ಬರುತ್ತದೆ.
- ಫಾರ್ಚುನರ್ ನ 2.8-ಲೀಟರ್ ಯೂನಿಟ್ 17PS ಪವರ್ ಹೆಚ್ಚು ಕೊಡುತ್ತದೆ, ಎಂಡೀವರ್ ನ 2.2-lಲೀಟರ್ ಎಂಜಿನ್ ಗೆ ಹೋಲಿಸಿದಾಗ, ಆದರೆ 23PS ಪವರ್ ಕಡಿಮೆ ಕೊಡುತ್ತದೆ, 3.2-ಲೀಟರ್ ಎಂಜಿನ್ ಗೆ ಹೋಲಿಸಿದಾಗ.
- ಎರೆಡೂ SUV ಗಳು ೬-ಸ್ಪೀಡ್ MT/AT ಹಾಗು 2WD ಮತ್ತು 4WD ಆಯ್ಕೆಗಳಲ್ಲಿ ಬರುತ್ತದೆ. ಎಂಡೀವರ್ ನಲ್ಲಿ ಚಿಕ್ಕ ಎಂಜಿನ್ ಅನ್ನು 4x2 ಆಯ್ಕೆ ಯಲ್ಲಿ ಮಾತ್ರ ಕೊಡಲಾಗುತ್ತದೆ. ಆದರೆ ಮಾನ್ಯುಯಲ್ ಹಾಗು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನಲ್ಲಿ ಲಭ್ಯವಿದೆ. ದೊಡ್ಡದಾದ 3.2-ಲೀಟರ್ ಎಂಜಿನ್ ಅನ್ನು AT ಮತ್ತು 4x4 ನಲ್ಲಿ ಮಾತ್ರ ಪಡೆಯಬಹುದು.
Check out: 2019 Ford Endeavour First Drive Review
ವೇರಿಯೆಂಟ್ ಹೋಲಿಕೆ : ನಾವು ಕೇವಲ ಒಂದೇ ತರಹ ಬೆಲೆ ಹೊಂದಿರುವ SUV ಗಳನ್ನೂ ಹೋಲಿಕೆ ಮಾಡಿದ್ದೇವೆ. ( ಬೆಲೆ ಹೆಚ್ಚು ಅಥವಾ ಕಡಿಮೆ ಎಂದರೆ ರೂ ೮೦,೦೦೦)
೨೦೧೯ ಫೋರ್ಡ್ ಎಂಡೀವರ್ 2.2L Titanium+ AT 4X2 ಅಥವಾ 3.2L Titanium+ AT 4X4 Vs ಟೊಯೋಟಾ ಫಾರ್ಚುನರ್ 2.8L 4X2 AT ಅಥವಾ 2.8L 4X4 A
Ford Endeavour |
Toyota Fortuner |
Price Difference |
2.2L 4X2 Titanium+ AT - Rs 30.60 lakh |
2.8L 4X2 AT - Rs 31.38 lakh |
Rs 78,000 (Fortuner is more expensive) |
3.2L 4X4 Titanium+ AT - Rs 32.97 lakh |
2.8L 4X4 AT - Rs 33.28 lakh |
Rs 31,00 (Fortuner is more expensive) |
ಸಮಾನವಾದ ಫೀಚರ್ ಗಳು
ಸುರಕ್ಷತೆ: ಏಳು ಏರ್ಬ್ಯಾಗ್ ಗಳು, ABS ಮತ್ತು EBD, ESP, ISOFIX ಚೈಲ್ಡ್ ಸೀಟ್ ಆಂಕರ್ ಗಳು, ಟ್ರಾಕ್ಷನ್ ಕಂಟ್ರೋಲ್, ಹಿಲ್ ಲಾಂಚ್ ಅಸಿಸ್ಟ್, ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ( ಎರೆಡು SUV ಗಳ 4WD ನಲ್ಲಿ ಮಾತ್ರ )
ಬಾಹ್ಯ : ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, LED DRLs,LED ಟೈಲ್ ಲ್ಯಾಂಪ್ ಗಳು, ಮುಂಬದಿ ಹಾಗು ಹಿಂಬದಿ ಫಾಗ್ ಲ್ಯಾಂಪ್ ಗಳು ಮತ್ತು ಅಲಾಯ್ ವೀಲ್ ಗಳು.
ಅಂತರಿಕ : ಲೆಥರ್ ಮೇಲ್ಪದರಗಳು ಮತ್ತು ಮಡಚಬಹುದಾದ ಹಿಂಬದಿಯ ಸೀಟ್ ಗಳು.
ಆರಾಮದಾಯಕಗಳು: ವಿದ್ಯುತ್ ಅಳವಡಿಕೆ ಮತ್ತು ಮಾಡಹಬಹುದಾದ ORVM ಗಳು. ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಟಿಲ್ಟ್ ಅಡ್ಜಸ್ಟ್ ಸ್ಟಿಯರಿಂಗ್ ವೀಲ್, ವಿದ್ಯುತ್ ಅಳವಡಿಕೆಯ ಮುಂಬದಿಯ ಸೀಟ್ ಗಳು, ಆಟೋ ದಿಮ್ಮಿನ್ಗ್ IRVM. ರೇರ್ ಪಾರ್ಕಿಂಗ್ ಸೆನ್ಸರ್ ಕ್ಯಾಮೆರಾ ದೊಂದಿಗೆ, ಪುಶ್ ಬಟನ್ ಸ್ಟಾರ್ಟ್, ಎಲ್ಲ ನಾಲ್ಕು ಪವರ್ ವಿಂಡೋ ಗಳು, ಪವರ್ ಹೊಂದಿಕೆಯ ಟೈಲ್ಗೇಟ್ ಮತ್ತು ಕ್ರೂಸ್ ಕಂಟ್ರೋಲ್.
ಇನ್ಫೋಟೈನ್ಮೆಂಟ್: ಫಾರ್ಚುನರ್ ೭-ಇಂಚು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನ ಜೊತೆ ಬಂದಾಗ, ಎಂಡೀವರ್ ೮-ಇಂಚಿನದ್ದನ್ನು ಹೊಂದಿದೆ.
ಫೋರ್ಡ್ ಎಂಡೀವರ್ 4X2 ಮತ್ತು 4X4 ಟೊಯೋಟಾ ಫಾರ್ಚುನರ್ 4X2 and 4X4 ಗೆ ಹೋಲಿಸಿದಾಗ ವಿಶೇಷವಾಗಿ ಏನು ಕೊಡುತ್ತದೆ ಎಂದರೆ:
ವಿಶಾಲವಾದ ಸನ್ ರೂಫ್, ಫ್ರಂಟ್ ಪಾರ್ಕಿಂಗ್ ಸೆನ್ಸರ್, ಹ್ಯಾಂಡ್ಸ್- ಫ್ರೀ ಪಾರೆಲ್ಲ್ಲ್ ಪಾರ್ಕಿಂಗ್ ಅಸ್ಸ್ಸಿಟ್, ಪವರ್ ಫೋಲ್ಡಿಂಗ್ ಸೀಟ್,Apple CarPlay ಮತ್ತು Android Auto ಸಪೋರ್ಟ್ ಕೊಡಬಹುದಾದ ಇನ್ಫೋಟೈನ್ಮೆಂಟ್ ಸಿಸ್ಟಮ್, ಟೆರ್ರಇನ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಕೇವಲ 4WD ವೇರಿಯೆಂಟ್ ), ಆಂಬಿಯೆಂಟ್ ಲೈಟಿಂಗ್, ಆಟೋ ಹೆಡ್ ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್ ಗಳು, ಎಮರ್ಜೆನ್ಸಿ ಅಸಿಸ್ಟ್, ಆಕ್ಟಿವ್ ನೊಯಿಸ್ ಕ್ಯಾನ್ಸಲ್ಲಾಷನ್ ಮತ್ತು ಟೈಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್.
ಟೊಯೋಟಾ ಫಾರ್ಚುನರ್ 4X2 and 4X4 ಫೋರ್ಡ್ ಎಂಡೀವರ್ 4X2 ಮತ್ತು 4X4 ಗೆ ಹೋಲಿಸಿದಾಗ ವಿಶೇಷವಾಗಿ ಏನು ಕೊಡುತ್ತದೆ ಎಂದರೆ:
LED ಹೆಡ್ ಲ್ಯಾಂಪ್ ಗಳು, ( ಎಂಡೇವರ್ ನಲ್ಲಿ bi-xenon HID ಯೂನಿಟ್ ಇದೆ). LED ಮುಂಬದಿಯ ಫಾಗ್ ಲ್ಯಾಂಪ್ ಗಳು ಮತ್ತು ಟೆಲೆಸ್ಕೋಪಿಕ್ ಅಡ್ಜಸ್ಟ್ ಸ್ಟಿಯರಿಂಗ್.
ಕೊನೆಯ ಅನಿಸಿಕೆ:
೨೦೧೯ ಎಂಡೀವರ್ ನಮ್ಮ ಆಯಕೆ. ಕೊಂಡುಕೊಳ್ಳಬಹುದಾದ ಬೆಲೆ ಇರುವುದಲ್ಲದೆ, ಟೊಯೋಟಾ ಗಿಂತಲೂ ಹೆಚ್ಚು ಸಲಕರಣೆಗಳನ್ನೂ ಹೊಂದಿದೆ, ಮಿಸ್ ಆಗಿರುವ ವಿಷಯ ವೆಂದರೆ ಟೆಲೆಸ್ಕೋಪಿಕ್ ಸ್ಟಿಯರಿಂಗ್ ಅಡ್ಜಸ್ಟ್ಮೆಂಟ್.