2020 ಹೋಂಡಾ ಸಿಟಿ: ಏನು ನಿರೀಕ್ಷಿಸಬಹುದು
ಹೋಂಡಾ ನಗರ 2020-2023 ಗಾಗಿ sonny ಮೂಲಕ ಅಕ್ಟೋಬರ್ 23, 2019 02:49 pm ರಂದು ಪ್ರಕಟಿಸಲಾಗಿದೆ
- 34 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಪೀಳಿಗೆಯ ಸೀಟು ವಿವರಗಳನ್ನು ಮರೆಮಾಚಲಾಗಿತ್ತು ಆದರೆ ನಿಮಗೆ ತಿಳಿಯಬೇಕಾದ ವಿವರಗಳು ಲಭ್ಯವಿದೆ
ಮುಂದಿನ ಪೀಳಿಗೆಯ ಹೋಂಡಾ ಸಿಟಿ ತನ್ನ ಅನಾವರಣವನ್ನು ಥೈಲ್ಯಾಂಡ್ ನಲ್ಲಿ ಈ ನವೆಂಬರ್ ನಲ್ಲಿ ಪಡೆಯಲಿದೆ ಮತ್ತು ಅದು ಭಾರತದಲ್ಲಿ ಸದ್ಯದಲ್ಲೇ ದೊರೆಯಲಿದೆ. ಐದನೇ ಪೀಳಿಗೆಯ ಸಿಟಿ ಅನ್ನು ಬಹಳಷ್ಟು ಬಾರಿ ನೋಡಲಾಗಿದೆ ಈ ವರ್ಷದಲ್ಲಿ, ಭಾರತದಲ್ಲಿಯೂ ಸಹ ಪರೀಕ್ಷಿಸಲಾಗುತ್ತಿದೆ. ಮತ್ತು ಅದು ಭಾರತದಲ್ಲಿಯೂ ಸಹ ಒಂದೇ ಬಾರಿಗೆ ಅನಾವರಣಗೊಳ್ಳುವ ಸಾಧ್ಯತೆ ಇದೆ. ನಾವು ಹೊಸ ಹೋಂಡಾ ಸಿಟಿ ಇಂದ ಏನನ್ನು ನಿರೀಕ್ಷಿಸಬಹುದು ಎಂದು ತಿಳಿಯೋಣ ಮತ್ತು ಅದು ಈಗ ಇರುವ ಮಾಡೆಲ್ ಗಿಂತಲೂ ಹೇಗೆ ಬಿನ್ನವಾಗಿರಬಹುದು ಎಂದು ತಿಳಿಯೋಣ.
ಬಾಹ್ಯ
- ಮೊದಲಿಗೆ ಗಮನಿಸಬೇಕಾದ ವಿಷಯವೆಂದರೆ, ಚಿತ್ರಗಳಿಂದ ತಿಳಿಯುವಂತೆ ಭಾರತ ಸ್ಪೆಕ್ ಹೊಸ ಪೀಳಿಗೆ ಹೋಂಡಾ ಸಿಟಿ ಥಾಯ್ ಸ್ಪೆಕ್ ಮಾಡೆಲ್ ಗಿಂತಲೂ ಸ್ವಲ್ಪ ಭಿನ್ನವಾಗಿರುತ್ತದೆ. ಹೋಂಡಾ ಕಾರ್ ಅನ್ನು ಮರೆಮಾಚುವಿಕೆಗಳಲ್ಲಿ ಇರಿಸಿದೆ ಅಧಿಕೃತ ಬಿಡುಗಡೆಗೂ ಮುನ್ನ ಹೆಚ್ಚಿನ ವಿವರಗಳು ಹೊರಬೀಳದಂತೆ ತಡೆಯಲು.
- ಅದು ನೋಡಲು ಈಗಿರುವ ಮಾಡೆಲ್ ನಂತೆ ಕಾಣುತ್ತದೆ ಹೊರಪದರಗಳಲ್ಲಿ ಆದರೆ ನಿರೀಕ್ಷೆಯಂತೆ ಹೋಂಡಾ ದ ಹೊಸ ಡಿಸೈನ್ ಶೈಲಿಯನ್ನು ಪಡೆಯಬಹುದು ನಿತನ ಪೀಳಿಗೆಯ ಹೋಂಡಾ ಅಕಾರ್ಡ್ , ಅಮೇಜ್, ಮತ್ತು ಸಿವಿಕ್ ನಲ್ಲಿರುವಂತೆ.
- ಹೊಸ ಪೀಳಿಗೆಯ ಸಿಟಿ ಯಲ್ಲಿ ಹೊಸ ಪೂರ್ಣ LED ಹೆಡ್ ಲ್ಯಾಂಪ್ ಗಳು ಮತ್ತು ಟೈಲ್ ಲ್ಯಾಂಪ್ ಗಳು ಇರಲಿದೆ.
- ಅದು ನೋಡಲು ಈಗ ಇರುವ ಮಾಡೆಲ್ ಗಿಂತಲು ದೊಡ್ಡದಾಗಿರುತ್ತದೆ ಜೊತೆಗೆ ಆಂತರಿಕಗಳಲ್ಲಿ ವಿಶಾಲವಾಗಿಯೂ ಇರುತ್ತದೆ.
- ಒಟ್ಟಾರೆ, ಹೊಸ ಸಿಟಿ ಮಾರುಕಟ್ಟೆಗೆ ಅನುಕೂಲವಾಗುವಂತೆ ನವೀನ ಸ್ಟೈಲಿಂಗ್ ಅನ್ನು ಪಡೆಯಲಿದೆ
ಆಂತರಿಕಗಳು
- ಹೋಂಡಾ ಹೊಸ ಪೀಳಿಗೆಯ ಸಿಟಿ ಯಲ್ಲಿ ಕ್ಯಾಬಿನ್ ನಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಲಿದೆ
- ಇದರಲ್ಲಿ ಹೊಸ ಡ್ಯಾಶ್ ಬೋರ್ಡ್ ಜೊತೆಗೆ ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತದೆ ಮುಂದಿನ ಪೀಳಿಗೆಯ ಜಾಜ್ ನಲ್ಲಿ ನೋಡಲಾದಂತೆ
- ಸಿಟಿ ಯಲ್ಲಿ ದೊಡ್ಡದಾದ ಸೆಂಟ್ರಲ್ ಟಚ್ ಸ್ಕ್ರೀನ್ ಡಿಸ್ಪ್ಲೇ ಮತ್ತು ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇರುತ್ತದೆ ಸಿವಿಕ್ ಅಥವಾ CR-V ಯಲ್ಲಿರುವಂತೆ.
- ಇದರಲ್ಲಿ ಹೊಸ ಲೆಥರ್ ಹೊರಪದರಗಳು ಇರಲಿದೆ, ಆಟೋ AC, ರೇರ್ AC ವೆಂಟ್ ಗಳು, ಸನ್ ರೂಫ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಾಣಿಕೆ ಇನ್ಫೋಟೈನ್ಮೆಂಟ್ ಸಿಸ್ಟಮ್ ಗಾಗಿ ಈ ಹಿಂದಿನಂತೆ. ಆದರೆ, ಹೋಂಡಾ ನವರು ಮುಂದಿನ ಮಾರುಕಟ್ಟೆಗೆ ಹೊಂದುವಂತಹ ಫೀಚರ್ ಗಳಾದ ವಯರ್ಲೆಸ್ ಚಾರ್ಜಿನ್ಗ್, ಕನೆಕ್ಟೆಡ್ ಕಾರ್ ಟೆಕ್ನಲಾಜಿ ಮತ್ತು ವೆಂಟಿಲೇಟೆಡ್ ಮುಂದಿನ ಸೀಟ್ ಗಳು ಇರಲಿದೆ ಫೀಚರ್ ಗಳ ಪಟ್ಟಿಯಲ್ಲಿ.
ಪವರ್ ಟ್ರೈನ್
- ಹೋಂಡಾ ಹೊಸ ಸಿಟಿ ಯಲ್ಲಿ BS6 ಕಂಪ್ಲೇಂಟ್ ಆವೃತ್ತಿಯ ಸದ್ಯದಲ್ಲಿ ಉಪಯೋಗಿಸಲಾಗುತ್ತಿರುವ ಅದೇ 1.5-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳನ್ನು ಉಪಯೋಗಿಸಲಾಗುತ್ತದೆ.
- 1.5- ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನವೀಕರಣ ಗೊಳಿಸಲಾಗುವುದು ಡೈರೆಕ್ಟ್ ಇಂಜೆಕ್ಷನ್ ಅನ್ನು ಅಳವಡಿಸಲಾಗುವುದು ಅದರ ಕಾರ್ಯದಕ್ಷತೆ ಹಾಗು ಮೈಲೇಜ್ ಅನ್ನು ಹೆಚ್ಚಿಸಲು. ಅದರಲ್ಲಿ ಹೊಸ 6-ಸ್ಪೀಡ್ ಮಾನ್ಯುಯಲ್ ಜೊತೆಗೆ ಬಹಳಷ್ಟು ಬಾರಿ ಪರೀಕ್ಷಿಸಲಾದಂತಹ CVT-ಆಟೋಮ್ಯಾಟಿಕ್ ಅನ್ನು ಸಹ ನಿರೀಕ್ಷಿಸಬಹುದು.
- ಡೀಸೆಲ್ ಎಂಜಿನ್ ಸದ್ಯದಲ್ಲಿ ಕೇವಲ 6-ಸ್ಪೀಡ್ ಮಾನ್ಯುಯಲ್ ಒಂದಿಗೆ ಲಭ್ಯವಿದೆ ಆದರೆ CVT-ಆಟೋ ಅನ್ನು ಹೊಸ ಪೀಳಿಗೆಯ ಮಾಡೆಲ್ ನಲ್ಲಿ ಅನಾವರಣಗೊಳಿಸಲಾಗುವುದು
- ಹೋಂಡಾ ಘೋಷಿಸಿರುವಂತೆ i-MMD(intelligent Multi-Mode Drive) ಪೆಟ್ರೋಲ್ -ಹೈಬ್ರಿಡ್ ಡ್ರೈವ್ ಟ್ರೈನ್ ಅನ್ನು ಹೊಸ ಜಾಜ್ ನಲ್ಲಿ ಕೊಡಲಾಗುವುದು, ಹಾಗಾಗಿ, ಅದನ್ನು ಹೊಸ ಸಿಟಿ ಯಲ್ಲೂ ಸಹ ನಿರೀಕ್ಷಿಸಬಹುದು. ಆದರೆ, ಅದನ್ನು ಭಾರತದಲ್ಲಿ ಪರಿಚಿಸಯಲಾಗದಿರಬಹುದು ಏಕೆಂದರೆ ಅದಕ್ಕೆ ಹೆಚ್ಚು ಬೆಲೆ ಪಟ್ಟಿ ಕೊಡಬೇಕಾಗಬಹುದು. ಆದರೆ, ಹೋಂಡಾ ದವರು ಸೂಕ್ಷ್ಮ ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಅನ್ನು ಸಿಟಿ ಯಲ್ಲಿ ಕೊಡಬಹುದು.
ಬೆಲೆ ಪಟ್ಟಿ
ಈಗ ಇರುವ ಹೋಂಡಾ ಸಿಟಿ ಬೆಲೆ ವ್ಯಾಪ್ತಿ ರೂ 9.81 ಲಕ್ಷ ದಿಂದ ರೂ 14.16 ಲಕ್ಷ ವರೆಗೆ (ಎಕ್ಸ್ ಶೋ ರೂಮ್, ದೆಹಲಿ ) . ಅದರ ಹೊಸ ಅವತಾರದಲ್ಲಿ, ಜೊತೆಗೆ ನವೀಕರಣಗೊಂಡ ಪವರ್ ಟ್ರೈನ್ ಒಂದಿಗೆ, ಸಿಟಿ ಬೆಲೆ ವ್ಯಾಪ್ತಿ ರೂ 10 ಲಕ್ಷ ದಿಂದ ರೂ 15 ಲಕ್ಷ ವರೆಗೆ ಇರಬಹುದು. ಇದರ ಪ್ರತಿಸ್ಪರ್ಧೆ ಹುಂಡೈ ವೆರ್ನಾ, ಮಾರುತಿ ಸಿಯಾಜ್, ವೋಕ್ಸ್ವ್ಯಾಗನ್ ವೆಂಟೋ ಮತ್ತು ಸ್ಕೊದ ರಾಪಿಡ್ ಒಂದಿಗೆ ಮುಂದುವರೆಯಲಿದೆ. ವೆರ್ನಾ ದಲ್ಲಿ ಮೈಲ್ಡ್ ಹೈಬ್ರಿಡ್ ನವೀಕರಣ ಇನ್ನೂ ಆಗಿಲ್ಲ, ಮತ್ತು ಅದು 2019 ಕೊನೆಗೆ ಅಥವಾ 2020 ಪ್ರಾರಂಭದಲ್ಲಿ ಬರಲಿದೆ.
0 out of 0 found this helpful