2020 ಹೋಂಡಾ CR-V ಫೇಸ್ ಲಿಫ್ಟ್ ಅನ್ನು ಬಹಿರಂಗಪಡಿಸಲಾಗಿದೆ ; ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆ ನಿರೀಕ್ಷಿಸಲಾಗಿದೆ.
published on sep 24, 2019 04:26 pm by sonny ಹೋಂಡಾ ಸಿಆರ್-ವಿ ಗೆ
- 36 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
CR-V ನಲ್ಲಿ ಚಿಕ್ಕ ಸೌಂದರ್ಯಕಗಳ ನವೀಕರಣಗಳಲ್ಲಿ US ನಲ್ಲಿ ಲಭ್ಯವಿರುವ ಹೈಬ್ರಿಡ್ ಆಯ್ಕೆ ಯನ್ನು ಕೊಡಲಾಗಬಹುದು.
- ಹೋಂಡಾ CR-V ಫೇಸ್ ಲಿಫ್ಟ್ ನಲ್ಲಿ ಹೊಸ ಫ್ರಂಟ್ ಬಂಪರ್ ಮತ್ತು 19-ಇಂಚು ಅಲಾಯ್ ಗಳನ್ನು ಟಾಪ್ ವೇರಿಯೆಂಟ್ ಗಳಲ್ಲಿ ಕೊಡಲಾಗುವುದು
- ಇದನ್ನು US ನಲ್ಲಿ ಅನಾವರಣಗೊಳಿಸಲಾಯಿತು ಅಲ್ಲಿ ಹೈಬ್ರಿಡ್ ಪವರ್ ಟ್ರೈನ್ ಅನ್ನು ಮೊದಲಬಾರಿಗೆ ಕೊಡಲಾಗಿದೆ.
- ಡುಯಲ್ ಮೋಟಾರ್ ಹೈಬ್ರಿಡ್ ಪವರ್ ಟ್ರೈನ್ ಸಹ ದೊರೆಯುತ್ತದೆ ಭಾರತದಲ್ಲಿ ಮಾರಾಟದಲ್ಲಿರುವ ಅಕಾರ್ಡ್ ಹೈಬ್ರಿಡ್ ನಲ್ಲಿ.
- ಆಂತರಿಕಗಳಲ್ಲಿ ಯಾವುದೇ ಬದಲಾವಣೆಗಳನ್ನು ಕೊಡಲಾಗಿಲ್ಲ ಅಥವಾ ಫೀಚರ್ ಗಳ ಬದಲಾವಣೆ ಮಾಡಲಾಗಿಲ್ಲ. ಸದ್ಯದಲ್ಲಿ ಲಭ್ಯವಿರುವ CR-V ಗೆ ಹೋಲಿಸಿದರೆ.
- ಇದನ್ನು ಭಾರತದಲ್ಲಿ 2020 ಕೊನೆ ವೇಳೆಗೆ ತರಲಾಗುವುದು
- CR-V ಯನ್ನು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಅವತರಣಿಕೆಗಳಲ್ಲಿ ಭಾರತದಲ್ಲಿ ಕೊಡಲಾಗುವುದು
- ಹೋಂಡಾ ದವರು CR-V ಹೈಬ್ರಿಡ್ ಅನ್ನು ಭಾರತದಲ್ಲಿ ತರಬಹುದು 2020 CAFE ಗೆ ಅನುಗುಣವಾಗಿ
ಐದನೇ ಪೀಳಿಗೆಯ CR-V ಯಲ್ಲಿ ಮೊದಲ ಫೇಸ್ ಲಿಫ್ಟ್ ಕೊಡಲಾಗಿದೆ ಆರಂಭದ ಮೂರು ವರ್ಷಗಳಲ್ಲೇ. ಫೇಸ್ ಲಿಫ್ಟ್ ಅವತಾರದ ಐದು ಸೀಟೆರ್ SUV ಯನ್ನು US ನಲ್ಲಿ ಮೊದಲಬಾರಿಗೆ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲಾಗುವುದು ಇತರ ಗ್ಲೋಬಲ್ ಮಾರ್ಕೆಟ್ ನಲ್ಲಿ ಬಿಡುಗಡೆಯಾಗುವ ಮುಂಚೆ.
ಹೊಸ CR-V ಯಲ್ಲಿ ನವೀಕರಣ ಗೊಂಡ ಫ್ರಂಟ್ ಬಂಪರ್ ಗ್ರಿಲ್ ಕೊಡಲಾಗಿದೆ. ದೊಡ್ಡ ಕ್ರೋಮ್ ಬಾರ್ ನಲ್ಲಿ ದಟ್ಟವಾದ ಮೇಲ್ಪದರ ಕೊಡಲಾಗಿದೆ ಮತ್ತು ಹನಿ ಕೊಂಬ್ ಮೆಶ್ ಅನ್ನು ಕೊಡಲಾಗಿದೆ ಅಡ್ಡ ಸ್ಲಾಟ್ ಬದಲಾಗಿ. ಬಂಪರ್ ಡಿಸೈನ್ ಅನ್ನು ಬಹಳಷ್ಟು ನುಣುಪಾಗಿ ಮಾಡಲಾಗಿದೆ ಮತ್ತು CR-V ಯಲ್ಲಿ ಈಗಿರುವುದಕ್ಕಿಂತ ಸಣ್ಣಗೆ ಇದೆ ಹಾಗು LED ಫಾಗ್ ಲೈಟ್ ಗಳನ್ನು ಡಿಸೈನ್ ಜೊತೆ ಸಂಯೋಜಿಸಲಾಗಿದೆ. ಹೋಂಡಾ ದವರು ಕ್ರೋಮ್ ಅಪ್ಪ್ಲಿಕ್ ಅನ್ನು ಸೇರಿಸಿದ್ದಾರೆ ಹೊರಗಡೆಯ ಏರ್ ಡ್ಯಾಮ್ ಗಳಲ್ಲಿ ಮತ್ತು ಫಾಗ್ ಲ್ಯಾಂಪ್ ಹೌಸಿಂಗ್ ಸಹ ಕೊಡಲಾಗಿದೆ ಸ್ಪರ್ಧಾತ್ಮಕ ನೋಟಕ್ಕಾಗಿ ಮತ್ತು ಅದರ ಮೇಲೆ ಕಪ್ಪು ಕ್ಲಾಡಿಂಗ್ ಅನ್ನು ಕೊಡಲಾಗಿದೆ.
ಹಿಂಬದಿಯ ಡಿಸೈನ್ ನಲ್ಲಿ ಮಾಡಲಾಗಿರುವ ಕೇವಲ ಬದಲಾವಣೆ ಎಂದರೆ ಇದರಲ್ಲಿ ಭಿನ್ನವಾಗಿ ಮಾಡಲಾದ ರೇರ್ ಸ್ಕಿಡ್ ಪ್ಲೇಟ್ ಕಪ್ಪು ಬಣ್ಣದಲ್ಲಿ ಹಾಗು ಸರಳ ಡಿಸೈನ್ ಇರುವ ರೇರ್ ಫಾಗ್ ಲ್ಯಾಂಪ್ ಕೊಡಲಾಗಿದೆ. ಹೋಂಡಾ ಹೇಳುವಂತೆ ಇದರಲ್ಲಿ ಡಾರ್ಕ್ ಆಗಿರುವ ಟಿಂಟ್ ಗಳನ್ನು ರೇರ್ ಲೈಟಿಂಗ್ ನಲ್ಲಿ ಕೊಡಲಾಗಿದೆ. ಇದರಲ್ಲಿ ಹೊಸ 19-ಇಂಚು ಅಲಾಯ್ ಗಳನ್ನು ಅಗ್ರ ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ. ಫೇಸ್ ಲಿಫ್ಟ್ CR-V ಆಂತರಿಕಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಫೀಚರ್ ಗಳ ವಿಚಾರದಲ್ಲಿ CR-V ಫೇಸ್ ಲಿಫ್ಟ್ ನಲ್ಲಿ ಯಾವುದೇ ಹೊಸತುಗಳನ್ನು ಕೊಡಲಾಗಿಲ್ಲ. ಹೈಲೈಟ್ ಗಳೆಂದರೆ 7-ಇಂಚು ಟಚ್ ಸ್ಕ್ರೀನ್ ಡಿಸ್ಪ್ಲೇ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಟ್ರೈ ಸೆಕ್ಷನ್ ಇರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೋಂಡಾ ಸೆನ್ಸ್ ಸೂಟ್ ಡ್ರೈವರ್ ಅಸಿಸ್ಟ್ ತಂತ್ರಜ್ಞಾನ ಮತ್ತು ಡುಯಲ್ ಜೋನ್ ಆಟೋ AC ಕೊಡಲಾಗಿದೆ.
2019 CR-V ನಲ್ಲಿ ಅದೇ ಪವರ್ ಟ್ರೈನ್ ಆಯ್ಕೆ ಕೊಡಲಾಗಿದೆ ಆದರೆ ಮೊದಲಬಾರಿಗೆ US ನಲ್ಲಿ ಹೈಬ್ರಿಡ್ ಕೊಡಲಾಗುತ್ತಿದೆ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ. ಹೋಂಡಾ ದವರು ಮೊದಲಬಾರಿಗೆ ಹೈಬ್ರಿಡ್ SUV ಯನ್ನು 2017 ನಲ್ಲಿ ಅನಾವರಣಗೊಳಿಸಿದ್ದರು ಮತ್ತು ಅದು ಈಗಾಗಲೇ ಯೂರೋಪ್ ನ ಆಯ್ದ ಮಾರ್ಕೆಟ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದನ್ನು US ನಲ್ಲಿ 2020 ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಇದರಲ್ಲಿರುವ ಹೈಬ್ರಿಡ್ ಪವರ್ ಟ್ರೈನ್ ಅಕಾರ್ಡ್ ಹೈಬ್ರಿಡ್ ನಲ್ಲಿರುವತಹುದೇ ಆಗಿದೆ. ಇದರಲ್ಲಿ ಎಲೆಕ್ಟ್ರಿಕ್ ಮೋಟಾರ್ ಕೊಡಲಾಗಿದೆ ಮತ್ತು 2.0- ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ e-CVT ಯನ್ನು ಸಂಯೋಜಿಸಲಾಗಿದೆ. ಇದನ್ನು ಮೂರು ಮೋಡ್ ಗಳಲ್ಲಿ ,- ಎಂಜಿನ್, ಹೈಬ್ರಿಡ್ ಮತ್ತು ಪೂರ್ಣ ಎಲೆಕ್ಟ್ರಿಕ್ ಮೋಡ್ ಗಳಲ್ಲಿ ಡ್ರೈವ್ ಮಾಡಬಹುದು.
ಐದನೇ ಪೀಳಿಗೆಯ CR-V ಯನ್ನು ಭಾರತದಲ್ಲಿ 2018 ಕೊನೆಯಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಅದನ್ನು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಜೊತೆಗೆ ಡೀಸೆಲ್ ನಲ್ಲಿ ಏಳು ಸೀಟೆರ್ ಲೇ ಔಟ್ ಸಹ ಕೊಡಲಾಗಿತ್ತು. ಹೋಂಡಾ ದವರು ಈಗಾಗಲೇ ಖಚಿತಪಡಿಸಿರುವಂತೆ ಡೀಸೆಲ್ ಎಂಜಿನ್ ಅನ್ನು BS6 ಕಂಪ್ಲೇಂಟ್ ಗೆ ಅನುಗುಣವಾಗಿ ನವೀಕರಿಸಲಾಗುವುದು. ಹೋಂಡಾ ದವರು CR-V ಫೇಸ್ ಲಿಫ್ಟ್ ಅನ್ನು ಹೈಬ್ರಿಡ್ ಪವರ್ ಟ್ರೈನ್ ಒಂದಿಗೆ ಭಾರತದಲ್ಲಿ ಬಿಡುಗಡೆ ಮಾಡಬಹುದು ಮುಂಬರುವ 2022 CAFE ( ಕಾರ್ಪೊರೇಟ್ ಒಟ್ಟಾರೆ ಮೈಲೇಜ್ ) ನಾರ್ಮ್ಸ್ ಗೆ ಅನುಗುಣವಾಗಿ.
ಹೋಂಡಾ CR-V ಫೇಸ್ ಲಿಫ್ಟ್ ಅನ್ನು 2020 ಕೊನೆಯಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ CR-V ಬೆಲೆ ಪಟ್ಟಿ ರೂ 28.27 ಲಕ್ಷ ದಿಂದ ರೂ 32.77 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ) ಮತ್ತು ಪ್ರತಿಸ್ಪರ್ದಿಗಳಾದ ಸ್ಕೊಡಾ ಕೊಡಿಯಾಕ್ , ವೋಕ್ಸ್ವ್ಯಾಗನ್ ತಿಯಾಗುನ್ , ಫೋರ್ಡ್ ಎಂಡೇವರ್ ಮತ್ತು ಟೊಯೋಟಾ ಫಾರ್ಚುನರ್ ಗಳ ಜೊತೆಗೆ.
- Renew Honda CR-V Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful