2024 ಭಾರತ್ ಮೊಬಿಲಿಟಿ ಎಕ್ಸ್‌ಪೋ: Skoda Enyaq iV ಎಲೆಕ್ಟ್ರಿಕ್ SUVಯ ಪ್ರದರ್ಶನ
ಸ್ಕೋಡಾ enyaq ಗಾಗಿ ansh ಮೂಲಕ ಫೆಬ್ರವಾರಿ 02, 2024 01:39 pm ರಂದು ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಸ್ಕೋಡಾ ಎನ್ಯಾಕ್ iV ಈ ಹಿಂದೆ ಭಾರತದಲ್ಲಿ ಟೆಸ್ಟಿಂಗ್ ಮಾಡುವಾಗ ಸ್ಪಾಟ್ ಮಾಡಲಾಗಿತ್ತು, ಆ ಮೂಲಕ ಶೀಘ್ರದಲ್ಲೇ ಅದರ ಲಾಂಚ್ ಬಗ್ಗೆ ಸುಳಿವು ನೀಡಲಾಗಿತ್ತು
- ಎನ್ಯಾಕ್ iV ಜಾಗತಿಕವಾಗಿ ಮೂರು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ: 52 kWh, 58 kWh ಮತ್ತು 77 kWh, 510 ಕಿಮೀವರೆಗಿನ ಕ್ಲೇಮ್ ಮಾಡಿರುವ ರೇಂಜ್ ನೊಂದಿಗೆ.
- ಮೊದಲ ಎರಡು ಆಯ್ಕೆಯು ರಿಯರ್-ವೀಲ್-ಡ್ರೈವ್‌ಟ್ರೇನ್‌ನೊಂದಿಗೆ ಬರುತ್ತದೆ ಮತ್ತು ಮೂರನೆಯದು ರಿಯರ್-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಸೆಟಪ್‌ಗಳೊಂದಿಗೆ ಬರುತ್ತದೆ.
- ಇದು 125 kW ವರೆಗಿನ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ, ಇದನ್ನು ಬಳಸಿಕೊಂಡು ಕೇವಲ 38 ನಿಮಿಷಗಳಲ್ಲಿ 5 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
- ನೀಡಿರುವ ಫೀಚರ್ ಗಳಲ್ಲಿ 13-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಥ್ರೀ-ಝೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಒಂಬತ್ತು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಸೇರಿವೆ.
- ರೂ. 60 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯೊಂದಿಗೆ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಸ್ಕೋಡಾ ಎನ್ಯಾಕ್ iV, 2024 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡಲಿರುವ ಮತ್ತೊಂದು EV ಆಗಲಿದೆ. ನಾವು ಈಗಾಗಲೇ ಟೆಸ್ಟ್ ಮಾಡಲಾಗುತ್ತಿರುವ ಕೆಲವು ಯೂನಿಟ್ ಗಳನ್ನು ಸ್ಪೈ ಮಾಡಿದ್ದೇವೆ, ಮತ್ತು ಇದು ಎಲೆಕ್ಟ್ರಿಕ್ SUV ಗೆ ಭಾರತದಲ್ಲಿ ಸ್ಕೋಡಾದ ಅಧಿಕೃತ ಪರಿಚಯವಾಗಿದೆ. ಸ್ಕೋಡಾ ಈ ವರ್ಷ ಭಾರತದಲ್ಲಿ ಈ ಎಲೆಕ್ಟ್ರಿಕ್ SUV ಅನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡುತ್ತಿದೆ ಮತ್ತು ಬಿಡುಗಡೆಯಾದಾಗ, ಇದು ದೇಶದಲ್ಲಿ ಸ್ಕೋಡಾದ ಮೊದಲ EV ಆಗಲಿದೆ. ಸ್ಕೋಡಾದ ಎಲೆಕ್ಟ್ರಿಕ್ ಕಾರಿನ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು ಇಲ್ಲಿವೆ.
ಹೊರಭಾಗ
ಮುಂಭಾಗದಲ್ಲಿ, ಎನ್ಯಾಕ್ ಸ್ಕೋಡಾದ ಐಕಾನಿಕ್ ಗ್ರಿಲ್ ವಿನ್ಯಾಸದೊಂದಿಗೆ ಬರುತ್ತದೆ ಆದರೆ 130 LEDಗಳನ್ನು ಒಳಗೊಂಡಿರುವ ಫೇಸಿಯಾದ ಇಲ್ಯೂಮಿನೇಟಿಂಗ್ ಸೆಕ್ಷನ್ ಆಗಿ ಕೆಲಸಮಾಡುತ್ತದೆ. ಹೆಡ್‌ಲೈಟ್‌ಗಳು ಸ್ಲೀಕ್ ಆಗಿವೆ ಮತ್ತು ಕೆಳಭಾಗದ ತುದಿಯಲ್ಲಿ ಸ್ಲಿಮ್ ಆಗಿರುವ LED DRL ನೊಂದಿಗೆ ಬರುತ್ತವೆ. ಇದು ಬಾನೆಟ್ ಮತ್ತು ಬಂಪರ್‌ಗಳ ಮೇಲೆ ಶಾರ್ಪ್ ಆಗಿರುವ ಲೈನ್ ಗಳನ್ನು ಪಡೆಯುತ್ತದೆ, ಇದು ಇದಕ್ಕೆ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ.
ಪ್ರೊಫೈಲ್‌ನಲ್ಲಿ ಅದನ್ನು ನೋಡಿದಾಗ, ಎಲೆಕ್ಟ್ರಿಕ್ ಕ್ರಾಸ್‌ಒವರ್‌ನ ಸ್ಲೋಪ್ ಆಗಿರುವ ರೂಫ್‌ಲೈನ್ ಅನ್ನು ನೀವು ಗಮನಿಸಬಹುದು, ಇದು ಅದರ ಏರೋಡೈನಾಮಿಕ್ಸ್ ದಕ್ಷತೆ ಮತ್ತು 21-ಇಂಚಿನ ಏರೋಡೈನಾಮಿಕ್ ಅಲಾಯ್ ವೀಲ್ಸ್ ಗೆ ಸಹಾಯ ಮಾಡುತ್ತದೆ. ಹಿಂಭಾಗದ ಡಿಸೈನ್ ಹೆಚ್ಚು ಶಾಂತವಾಗಿದೆ ಆದರೆ ಇದು ಸ್ಪೋರ್ಟಿಯಾಗಿ ಕಾಣುತ್ತದೆ. ಇದು ಇಂಟೆಗ್ರೇಟ್ ಆಗಿರುವ ಸ್ಪಾಯ್ಲರ್, ಮಧ್ಯದಲ್ಲಿ ಸ್ಕೋಡಾ ಬ್ರ್ಯಾಂಡಿಂಗ್‌ನೊಂದಿಗೆ ಸ್ಲೀಕ್ ಆಗಿರುವ ಟೈಲ್ ಲೈಟ್‌ಗಳು ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್‌ನೊಂದಿಗೆ ದಪ್ಪ ಕಪ್ಪು ಬಂಪರ್ ಅನ್ನು ಪಡೆಯುತ್ತದೆ.
ಕ್ಯಾಬಿನ್
ಒಳಭಾಗದಲ್ಲಿ, ಗ್ಲೋಬಲ್-ಸ್ಪೆಕ್ ಎನ್ಯಾಕ್ iV ಆಯ್ಕೆ ಮಾಡಿದ ವೇರಿಯಂಟ್ ಗಳ ಆಧಾರದ ಮೇಲೆ ವಿಭಿನ್ನ ಥೀಮ್‌ಗಳೊಂದಿಗೆ ಮಿನಿಮಲಿಸ್ಟ್ ಆದರೆ ಪ್ರೀಮಿಯಂ ಆಗಿರುವ ಕ್ಯಾಬಿನ್ ಅನ್ನು ಪಡೆಯುತ್ತದೆ. ಡ್ಯಾಶ್‌ಬೋರ್ಡ್ ಅನೇಕ ಲೇಯರ್‌ಗಳನ್ನು ಒಳಗೊಂಡಿರುತ್ತದೆ, ಮತ್ತು ಅದರ ಮೇಲೆ ದೊಡ್ಡ ಟಚ್‌ಸ್ಕ್ರೀನ್‌ಗೆ ಜಾಗವನ್ನು ಮಾಡಲು ಮಧ್ಯದಲ್ಲಿ ಉಬ್ಬುತ್ತದೆ.
ಇದನ್ನು ಕೂಡ ಓದಿ: ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ರಲ್ಲಿ ಟಾಟಾ ಕರ್ವ್ ಅನ್ನು ಪ್ರೊಡಕ್ಷನ್ ಗೆ ಹತ್ತಿರವಿರುವ ಅವತಾರ್‌ನಲ್ಲಿ ಪ್ರದರ್ಶಿಸಲಾಗಿದೆ
ಸ್ಕೋಡಾ ಎಲೆಕ್ಟ್ರಿಕ್ SUV ಲೆಥೆರೆಟ್ ಅಪ್ಹೋಲ್ಸ್ಟರಿ, ಡ್ಯಾಶ್‌ಬೋರ್ಡ್‌ನ ಅಗಲದ ಉದ್ದಕ್ಕೂ ಚಲಿಸುವ ಆಂಬಿಯೆಂಟ್ ಲೈಟಿಂಗ್ ಸ್ಟ್ರಿಪ್ ಮತ್ತು ಮುಂಭಾಗದ ಸೆಂಟರ್ ಆರ್ಮ್‌ರೆಸ್ಟ್‌ಗೆ ಕನೆಕ್ಟ್ ಆಗಿರುವ ಸೆಂಟರ್ ಕನ್ಸೋಲ್ ಅನ್ನು ಪಡೆಯುತ್ತದೆ.
ಬ್ಯಾಟರಿ ಪ್ಯಾಕ್ ಆಯ್ಕೆಗಳು
ಬ್ಯಾಟರಿ ಪ್ಯಾಕ್ (ನೆಟ್ ಕೆಪ್ಯಾಸಿಟಿ) |
52 kWh |
58 kWh |
77 kWh |
ಪವರ್ |
148 PS |
179 PS |
360 PS ವರೆಗೆ |
ಟಾರ್ಕ್ |
220 Nm |
310 Nm |
460 Nm ವರೆಗೆ |
ಡ್ರೈವ್ ಟ್ರೈನ್ |
RWD |
RWD |
RWD/ AWD |
ಕ್ಲೇಮ್ ಮಾಡಲಾಗಿರುವ ರೇಂಜ್ (WLTP) |
340 ಕಿ.ಮೀ |
390 ಕಿ.ಮೀ |
510 ಕಿಮೀ ವರೆಗೆ |
ಅಂತರಾಷ್ಟ್ರೀಯವಾಗಿ, ಸ್ಕೋಡಾ ಎನ್ಯಾಕ್ iV ಮೂರು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ: 52 kWh, 58 kWh, ಮತ್ತು 77 kWh (ನೆಟ್ ಕೆಪ್ಯಾಸಿಟಿ ಅಂಕಿಅಂಶಗಳು). ಮೊದಲ ಎರಡು ಆಯ್ಕೆಗಳು ರಿಯರ್-ವೀಲ್ ಡ್ರೈವ್ ಕಾನ್ಫಿಗರೇಶನ್‌ನಲ್ಲಿ ಬರುತ್ತವೆ ಮತ್ತು ದೊಡ್ಡದಾದ ಆಯ್ಕೆಯು ಡ್ಯುಯಲ್-ಮೋಟರ್ ಆಲ್-ವೀಲ್-ಡ್ರೈವ್ ಸೆಟಪ್ ಆಯ್ಕೆಯೊಂದಿಗೆ ಬರುತ್ತದೆ.
ಇದನ್ನು ಕೂಡ ಓದಿ: 2024 ಭಾರತ್ ಮೊಬಿಲಿಟಿ ಎಕ್ಸ್‌ಪೋ: ಟಾಟಾ ನೆಕ್ಸಾನ್ EV ಡಾರ್ಕ್ ಎಡಿಷನ್ ಅನಾವರಣಗೊಳಿಸಲಾಗಿದೆ
ಚಾರ್ಜಿಂಗ್‌ಗಾಗಿ, ಎನ್ಯಾಕ್ iV 125 kW ವರೆಗಿನ DC ಸ್ಪೀಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ, ಇದನ್ನು ಉಪಯೋಗಿಸಿ ಅದರ ಬ್ಯಾಟರಿ ಪ್ಯಾಕ್ ಅನ್ನು ಕೇವಲ 38 ನಿಮಿಷಗಳಲ್ಲಿ 5 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
ಫೀಚರ್ ಗಳು ಮತ್ತು ಸುರಕ್ಷತೆ
ಎನ್ಯಾಕ್ iV ಸ್ಕೋಡಾದಿಂದ ಬಂದಿರುವ ಅತ್ಯಂತ ಹೆಚ್ಚು ಸುಸಜ್ಜಿತವಾದ ಎಲೆಕ್ಟ್ರಿಕ್ SUV ಆಗಿದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 13-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, ಮಸಾಜ್ ಫಂಕ್ಷನ್ ನೊಂದಿಗೆ ಪವರ್ ಆಗಿರುವ ಡ್ರೈವರ್ ಸೀಟ್, ಹೀಟೆಡ್ ಫ್ರಂಟ್ ಮತ್ತು ರಿಯರ್ ಸೀಟ್ ಗಳು, ಥ್ರೀ-ಲೆವೆಲ್ ಕ್ಲೈಮೇಟ್ ಕಂಟ್ರೋಲ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.
ಇದನ್ನು ಕೂಡ ಓದಿ: 2024 ಭಾರತ್ ಮೊಬಿಲಿಟಿ ಎಕ್ಸ್‌ಪೋ: ಮರ್ಸಿಡೀಸ್-ಬೆಂಜ್ EQG ಕಾನ್ಸೆಪ್ಟ್ ಭಾರತಕ್ಕೆ ಪಾದಾರ್ಪಣೆ ಮಾಡುತ್ತಿದೆ
ಸುರಕ್ಷತೆಯ ದೃಷ್ಟಿಯಿಂದ, ಇದು ಒಂಬತ್ತು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಗಳಂತಹ ADAS (ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್) ಟೆಕ್ ಅನ್ನು ಹೊಂದಿದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಭಾರತದಲ್ಲಿ CBU (ಕಂಪ್ಲೀಟ್ಲಿ ಬಿಲ್ಟ್ ಅಪ್ ಇಂಪೋರ್ಟ್) ಮಾಡೆಲ್ ಆಗಿ ಬಿಡುಗಡೆಯಾದಾಗ, ಸ್ಕೋಡಾ ಎನ್ಯಾಕ್ iV ಬೆಲೆಯು ರೂ. 60 ಲಕ್ಷದಿಂದ (ಎಕ್ಸ್-ಶೋರೂಂ) ಶುರುವಾಗಬಹುದು. ಇದು ಕಿಯಾ EV6, ಹುಂಡೈ IONIQ 5 ಮತ್ತು ವೋಲ್ವೋ XC40 ರೀಚಾರ್ಜ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.